ಬೆಂಗಳೂರು: ಭಾರತದ ಮುಂಚೂಣಿಯ ಆಟೋಮೊಬೈಲ್ ತಯಾರಕರಾದ ಟಾಟಾ ಮೋಟಾರ್ಸ್ (TATA Motors) ಸಂಸ್ಥೆ ಸಿಎನ್‌ಜಿ ವಾಹನಗಳನ್ನು (CNG Vehicle) ಅಪೇಕ್ಷಣೀಯ ಮತ್ತು ಪ್ರಾಕ್ಟಿಕಲ್ ಮಾಡುವ ಮೂಲಕ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಟಾಟಾ ಮೋಟಾರ್ಸ್ ಅದರ ಟ್ವಿನ್-ಸಿಲಿಂಡರ್ ತಂತ್ರಜ್ಞಾನದೊಂದಿಗೆ (Twin Cylinder Technology) ಸಿಎನ್‌ಜಿ ಆಧರಿತ ವಾಹನಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಖಚಿತಪಡಿಸಿದೆ. ಈ ಕಾರ್ಯತಂತ್ರದ ನಿರ್ಧಾರದಿಂದಾಗಿ ಸುಸ್ಥಿರತೆಯೆಡೆಗಿನ ಟಾಟಾ ಮೋಟರ್ಸ್‌ನ ಬದ್ಧತೆ ಪ್ರತಿಬಿಂಬಿತವಾಗಿದೆ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಸಿಎನ್‌ಜಿ ವಾಹನಗಳ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತದೆ.
ಕಳೆದ ಮೂರರಿಂದ ನಾಲ್ಕು ವರ್ಷಗಳಲ್ಲಿ, ಸಿಎನ್‌ಜಿ ಕಾರುಗಳು, ಅದರಲ್ಲೂ ವಿಶೇಷವಾಗಿ ವೈಯಕ್ತಿಕ ವಾಹನ ಸೆಗ್‌ಮೆಂಟಿನಲ್ಲಿ ಗಮನಾರ್ಹ ಸೆಳೆತವನ್ನು ಸಾಧಿಸಿವೆ. ಈ ಗಮನಾರ್ಹ ಏರಿಕೆಗೆ ಕಾರಣವಾಗಿರುವ ಎರಡು ಪ್ರಮುಖ ಅಂಶಗಳೆಂದರೆ- ವೈವಿಧ್ಯಮಯವಾದ ಮಾಡೆಲ್ ಒದಗಿಸುವಿಕೆ ಮತ್ತು ಮೂಲಭೂತ ಸೌಕರ್ಯಗಳ ವಿಸ್ತರಣೆ.
ಭಾರತೀಯ ಮಾರುಕಟ್ಟೆ ಪ್ರಸ್ತುತ ವಿವಿಧ ಶ್ರೇಣಿಯ ಸಿಎನ್‌ಜಿ ಮಾಡೆಲ್‌ಗಳನ್ನು ಹೊಂದಿವೆ. ವಿವಿಧ ರೀತಿಯ ಬೆಲೆ, ದೇಹಾಕಾರಗಳನ್ನು ಹೊಂದಿರುವ, ಹಲವು ಒರಿಜಿನಲ್ ಈಕ್ವಿಪ್‌ಮೆಂಟ್ ತಯಾರಕರು (ಓಇಎಂ) ಒದಗಿಸುವ ಸುಮಾರು 17-18 ವೇರಿಯೆಂಟ್‌ಗಳು ಲಭ್ಯವಿವೆ. ಬೆಲೆಗಳಿಗೆ ಹೋಲಿಸಿದರೆ ಮಾಲೀಕರಿಗೆ ಕಡಿಮೆ ನಿರ್ವಹಣಾ ವೆಚ್ಚವನ್ನು ನೀಡುವ ಸಿಎನ್ ಜಿ ವಾಹನಗಳು ಪೆಟ್ರೋಲ್‌ನಲ್ಲಿ ಗಮನಾರ್ಹ ವ್ಯತ್ಯಾಸವಿದೆ. ದೇಶದಾದ್ಯಂತ ಸಿಎನ್‌ಜಿ ರಿಫ್ಯುಯಲ್ ಮಾಡುವ ಸ್ಟೇಷನ್‌ಗಳ ವಿಸ್ತರಣೆಯು ಈ ಸೆಗ್‌ಮೆಂಟಿನ ಗೇಮ್ ಚೇಂಜರ್ ಆಗಲಿದೆ. ಮೂರು ವರ್ಷದ ಹಿಂದೆ ಸುಮಾರು 1500 ಸ್ಟೇಷನ್‌ಗಳು ಇದ್ದುವು. ಈಗ ಆ ಸಂಖ್ಯೆಯು ಅಂದಾಜು 5,500ವರೆಗೆ ಏರಿಕೆ ಕಂಡಿದೆ. ಗಮನಾರ್ಹವಾಗಿ, ಹರಿಯಾಣ, ದೆಹಲಿ, ಗುಜರಾತ್ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳು ಸಿಎನ್‌ಜಿ ವಾಹನಗಳನ್ನು ಹೆಚ್ಚು ಅಳವಡಿಸಿಕೊಂಡಿವೆ, ಅದರಿಂದಾಗಿ ಈ ಪ್ರದೇಶಗಳಲ್ಲಿ ವಿಸ್ತಾರವಾದ ಮಾರುಕಟ್ಟೆ ಬೆಳವಣಿಗೆ ಸಾಧ್ಯವಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಕಾಂಪೌಂಡ್ ಆ್ಯನ್ಯುವಲ್ ಗ್ರೋತ್ ರೇಟ್ (ಸಿಎಜಿಆರ್) 35%ನಷ್ಟು, ವೈಓವೈ ಗ್ರೋತ್ ರೇಟ್ 52%ನಷ್ಟು ಹೆಚ್ಚಿಸುವ ಮೂಲಕ ಈ ಎರಡು ಅಂಶಗಳು ಸಿಎನ್‌ಜಿ ಸೆಗ್‌ಮೆಂಟಿನ ಪರಿಣಾಮಕಾರಿ ಬೆಳವಣಿಗೆಗೆ ಕೊಡುಗೆಯವನ್ನು ನೀಡಿವೆ. ಕಳೆದ ವರ್ಷವೊಂದರಲ್ಲೇ, ಮಾರುಕಟ್ಟೆಯು 4 ಲಕ್ಷ ಸಿಎನ್‌ಜಿ ಕಾರುಗಳ ಮಾರಾಟಕ್ಕೆ ಸಾಕ್ಷಿಯಾಗಿವೆ. ಅದರಲ್ಲಿ ಸುಮಾರು 50000ದಷ್ಟು ಯುನಿಟ್‌ಗಳು ಟಾಟಾ ಮೋಟಾರ್ಸ್‌ನದ್ದಾಗಿವೆ.
ಸಿಎಎಫ್ಇ(CAFE) ಮಾನದಂಡಗಳನ್ನು ಮತ್ತು ಕಟ್ಟುನಿಟ್ಟಾಗಿ ಎಮಿಷನ್ ಅವಶ್ಯಕತೆಗಳನ್ನು ಪಾಲಿಸುವ ಮೂಲಕ ಟಾಟಾ ಮೋಟಾರ್ಸ್ ಮಲ್ಟಿ-ಪವರ್ ಟ್ರೇನ್ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ. ಕಂಪನಿಯು ಈಗಾಗಲೇ ತನ್ನ ಟಿಗೋರ್ ಮತ್ತು ಟಿಯಾಗೋ ಮಾಡೆಲ್‌ಗಳಲ್ಲಿ ಸಿಎನ್‌ಜಿ ಆಯ್ಕೆಗಳನ್ನು ಪರಿಚಯಿಸಿದೆ, ಇದು ಆಯಾ ಕುಟುಂಬಗಳಲ್ಲಿ ಶೇ.40ರಷ್ಟು ಮಾರಾಟವನ್ನು ದಾಖಲಿಸಿದೆ. ಪ್ರೀಮಿಯಂ ಹ್ಯಾಚ್ ಬ್ಯಾಕ್ ಸೆಗ್‌ಮೆಂಟಿನಲ್ಲಿನ ಶೂನ್ಯವನ್ನು ಅಲ್ಟ್ರೋಜ್ ಐಸಿಎನ್‌ಜಿ ಪರಿಚಯಿಸುವ ಮೂಲಕ ತುಂಬಲಾಗಿದೆ.
ಸನ್ ರೂಫ್ ಮತ್ತು ವೈರ್‌ಲೆಸ್ ಚಾರ್ಜರ್‌ನಂತಹ ಮಹತ್ವಾಕಾಂಕ್ಷಿ ಫೀಚರ್‌ಗಳು ಮತ್ತು ಹೆಚ್ಚುವರಿ ಬೂಟ್ ಸ್ಪೇಸ್‌ಗಾಗಿ ಟ್ವಿನ್-ಸಿಲಿಂಡರ್ ತಂತ್ರಜ್ಞಾನ ಹೊಂದುವ ಮೂಲಕ ಈ ಉತ್ಪನ್ನಗಳು ಟಾಟಾ ಮೋಟಾರ್ಸ್‌ನ ರಾಜಿಯಾಗದೆ ಗುಣಮಟ್ಟ ಕಾಪಾಡುವ ಬದ್ಧತೆಗೆ ಸಾಕ್ಷಿಯಾಗಿವೆ.
ಭಾರತೀಯ ಆಟೋಮೋಟಿವ್ ಉದ್ಯಮದಲ್ಲಿ ಸಿಎನ್‌ಜಿ ಹರಡುವಿಕೆ ಶೇ.15ರಷ್ಟಿದೆ. ಉದ್ಯಮ ಪರಿಣತರು ಊಹಿಸಿರುವ ಪ್ರಕಾರ ಅದರ ಪರಿಸರ ಸ್ನೇಹಿ ಸ್ವಭಾವದಿಂದಾಗಿ ದಶಕದ ಅಂತ್ಯಕ್ಕೆ ಈ ಪರ್ಸೆಂಟೇಜ್ ಶೇ.20-25ರವರೆಗೆ ತಲುಪಲಿದೆ. ಎಲ್ಲಾ ಒರಿಜಿನಲ್ ಈಕ್ವಿಪ್‌ಮೆಂಟ್ ಮ್ಯಾನುಫ್ಯಾಕ್ಚರ್ (ಓಇಎಂ)ಗಳು ಸಿಎಎಫ್‌ಇ ಮಾನದಂಡಗಳನ್ನು ಪೂರೈಸುವ ಒತ್ತಡದಲ್ಲಿವೆ, ಇದು ಸಿಎನ್‌ಜಿಯ ಅಳವಡಿಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ.
ಟಾಟಾ ಮೋಟಾರ್ಸ್‌ನ ಮಲ್ಟಿ-ಪವರ್‌ಟ್ರೇನ್ ಕಾರ್ಯತಂತ್ರ, ವೈವಿಧ್ಯಮಯ ಸಿಎನ್‌ಜಿ ಮಾಡೆಲ್‌ಗಳ ಲಭ್ಯತೆ ಮತ್ತು ಸಿಎನ್‌ಜಿ ಫಿಲ್ಲಿಂಗ್ ಸ್ಟೇಷನ್‌ಗಳ ನೆಟ್‌ವರ್ಕ್ ವಿಸ್ತರಣೆ ಇವೆಲ್ಲವೂ ಸಿಎನ್‌ಜಿ ಸೆಗ್‌ಮೆಂಟಿನ ಬೆಳವಣಿಗೆಗೆ ಕಾರಣವಾಗಿದೆ.
ಪ್ರಸ್ತುತ, ಮಾಸಿಕವಾಗಿ ಸರಿಸುಮಾರು 52,000 ಸಿಎನ್‌ಜಿ ವಾಹನಗಳನ್ನು ಮಾರಾಟ ಮಾಡಲಾಗುತ್ತದೆ, ಈ ಮಾರಾಟದಲ್ಲಿನ ಗಮನಾರ್ಹ ಭಾಗವನ್ನು ಖಾಸಗಿ ಕಾರು ಖರೀದಿದಾರರು ಹೊಂದಿದ್ದಾರೆ. ಟಾಟಾ ಮೋಟಾರ್ಸ್ ಭಾರತೀಯ ಗ್ರಾಹಕರ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ನವೀನ, ಪರಿಸರ ಸ್ನೇಹಿ ಮತ್ತು ಮಹತ್ವಾಕಾಂಕ್ಷೆಯ ವಾಹನಗಳನ್ನು ಒದಗಿಸುವ ಮೂಲಕ ತನ್ನ ಬದ್ಧತೆಯನ್ನು ಸಾರುತ್ತಾ ಅಚಲ ಹೆಜ್ಜೆಯನ್ನಿರಿಸಿಕೊಂಡು ಮುನ್ನಡೆಯುತ್ತಿದೆ.
ಈ ಸುದ್ದಿಯನ್ನೂ ಓದಿ: Tata Motors : ಇವಿ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಟಾಟಾ ಮೋಟಾರ್ಸ್