ನವದೆಹಲಿ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಸೋಮವಾರ ಗೂಗಲ್ ಕ್ಲೌಡ್‌ನೊಂದಿಗೆ (Google Cloud) ವಿಸ್ತೃತ ಪಾಲುದಾರಿಕೆಯನ್ನು ಘೋಷಿಸಿದ್ದು, ಟಿಸಿಎಸ್ ಜನರೇಟಿವ್ ಎಐ (Generative AI) ಆರಂಭಿಸಿದೆ. ಇದು ಗೂಗಲ್ ಕ್ಲೌಡ್‌ನ ಉತ್ಪಾದಕ ಎಐ ಸೇವೆಗಳನ್ನು ನಿಯಂತ್ರಿಸಲಿದೆ ಮತ್ತು ಕಸ್ಟಮ್-ಟೈಲರ್ಡ್ ವ್ಯಾಪಾರ ಪರಿಹಾರಗಳನ್ನು ಒದಗಿಸಲಿದೆ. ಅನೇಕ ಕ್ಷೇತ್ರ ಮತ್ತು ಹೂಡಿಕೆಗಳಲ್ಲಿ ತನ್ನ ಡೊಮೇನ್ ನಾಲ್ಡೆಜ್ ನಿರ್ಮಿಸುವ ಮೂಲಕ ಟಿಸಿಎಸ್, ಕೃತಕ ಬುದ್ಧಿಮತ್ತೆ ಚಾಲಿತ ಪರಿಹಾರಗಳು ಮತ್ತು ಎಐಒಪಿಎಸ್, ಆಲ್ಗೋ ರಿಟೇಲ್, ಸ್ಮಾರ್ಟ್ ಉತ್ಪಾದನೆ, ಡಿಜಿಟಲ್ ಟ್ವಿನ್ಸ್ ಮತ್ತು ರೊಬೊಟಿಕ್ಸ್ ಕ್ಷೇತ್ರಗಳಲ್ಲಿ ಬೌದ್ಧಿಕ ಆಸ್ತಿಯ ದೊಡ್ಡ ಪೋರ್ಟ್ಫೋಲಿಯೊವನ್ನು ಅಭಿವೃದ್ಧಿಪಡಿಸಿದೆ.
ಸೋಮವಾರ ಷೇರು ವಿನಿಮಯ ಕೇಂದ್ರಗಳೊಂದಿಗೆ ಹಂಚಿಕೊಂಡ ಕಂಪನಿಯ ಹೇಳಿಕೆಯ ಪ್ರಕಾರ, ಟಿಸಿಎಸ್ ಪ್ರಸ್ತುತ ಅನೇಕ ಕೈಗಾರಿಕೆಗಳಲ್ಲಿ ಗ್ರಾಹಕರೊಂದಿಗೆ ಕೆಲಸ ಮಾಡುತ್ತಿದೆ. ಅವರ ನಿರ್ದಿಷ್ಟ ವ್ಯವಹಾರ ಸಂದರ್ಭಗಳಲ್ಲಿ ಮೌಲ್ಯವನ್ನು ತಲುಪಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂದು ಬಗ್ಗೆ ಅನ್ವೇಷಿಸುತ್ತಿದೆ.
ಎಐಒಪಿಎಸ್ ಎಂಬುದು ಮಾಹಿತಿ ತಂತ್ರಜ್ಞಾನ ಕಾರ್ಯಾಚರಣೆಗಳ ಡೇಟಾ ದೊಡ್ಡ ಡೇಟಾ ವಿಶ್ಲೇಷಣೆ ಮತ್ತು ಯಂತ್ರ ಕಲಿಕೆಯ ಬಹು-ಪದರದ ಅಪ್ಲಿಕೇಶನ್ ಆಗಿದೆ. ಹೇಳಿಕೆಯ ಪ್ರಕಾರ, ಗೂಗಲ್ ಕ್ಲೌಡ್‌ನ ಜನರೇಟಿವ್ ಕೃತಕ ಬುದ್ಧಿಮತ್ತೆ ಪರಿಕರಗಳಿಂದ ನಡೆಸಲ್ಪಡುತ್ತದೆ. ವರ್ಟೆಕ್ಸ್ ಎಐ, ಜನರೇಟಿವ್ ಎಐ ಅಪ್ಲಿಕೇಶನ್ ಬಿಲ್ಡರ್ ಮತ್ತು ಮಾಡೆಲ್ ಗಾರ್ಡನ್‌ಗಳು ಟಿಸಿಎಸ್‌ನ ಸ್ವಂತ ಪರಿಹಾರಗಳಾಗಿವೆ. ಇವರು ಕೈಗಾರಿಕೋದ್ಯಮದಲ್ಲಿ ಅನೇಕ ಪರಿಹಾರಗಳನ್ನು ಒದಗಿಸಲಿವೆ.
ಇದನ್ನೂ ಓದಿ: TCS World 10K : ನೂತನ ದಾಖಲೆ ನಿರ್ಮಿಸಲಿದೆ ಟಿಸಿಎಸ್ 10ಕೆ ಬೆಂಗಳೂರು
ಕ್ಲೌಡ್ ತಂತ್ರಜ್ಞಾನದಲ್ಲಿ ಟಿಸಿಎಸ್ ಸಾಕಷ್ಟು ಹೂಡಿಕೆ ಮಾಡುತ್ತಿದ್ದು, ತಜ್ಞತೆಯನ್ನು ಹೆಚ್ಚಿಸುತ್ತಿದೆ. ಟಿಸಿಎಸ್ ಈಗಾಗಲೇ ಸುಮಾರು 25 ಸಾವಿರ ಎಂಜಿನಿಯರರನ್ನು ಹೊಂದಿದ್ದು, ಅವರೆಲ್ಲರೂ ಗೂಗಲ್ ಕ್ಲೌಡ್ ಸರ್ಟಿಫೈಡ್ ಎಂಜಿನಿಯರ್ಸ್ ಆಗಿದ್ದಾರೆ. ಇದಕ್ಕೆ ಹೆಚ್ಚುವರಿಯಾಗಿ ಟಿಸಿಎಸ್ ಎಐನಲ್ಲಿ 50 ಸಾವಿರ ಆಸೋಸಿಯೇಟೆಡ್ ಟ್ರೈನ್ಡ್ ಎಂಜಿನಿಯರ್ಸ್ ಹೊಂದಿದೆ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.