Site icon Vistara News

Tech Layoffs: 453 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ಗೂಗಲ್ ಇಂಡಿಯಾ! ಇನ್ನಷ್ಟು ಜಾಬ್ ಕಡಿತ?

Tech Layoffs, Google india fires 453 employees

ನವದೆಹಲಿ: ಆರ್ಥಿಕ ಹಿಂಜರಿತ ಭೀತಿಯಲ್ಲಿ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸುತ್ತಿವೆ(Tech Layoffs). ಈಗ ಗೂಗಲ್ (Google India) ತನ್ನ ಭಾರತೀಯ ಕಚೇರಿಯಲ್ಲಿರುವ ಉದ್ಯೋಗಿಗಳ ಕಡಿತ ಪ್ರಕ್ರಿಯೆಯನ್ನು ಆರಂಭಿಸಿದ್ದು, ಒಟ್ಟು 453 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ. ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿರುವ ಕುರಿತು ಗುರುವಾರ ರಾತ್ರಿ ಮಾಹಿತಿಯನ್ನು ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಬಿಸಿನೆಸ್ ಲೈನ್ ವರದಿಯ ಪ್ರಕಾರ, ಗೂಗಲ್ ಇಂಡಿಯಾ ಉಪಾಧ್ಯಕ್ಷ ಹಾಗೂ ಕಂಟ್ರಿ ಹೆಡ್ ಆಗಿರುವ ಸಂಜಯ್ ಗುಪ್ತಾ ಅವರು ಈ ಜಾಬ್ ಟರ್ಮಿನೇಷನ್ ಲೆಟರ್‌ ಮೇಲ್ ಮಾಡಿದ್ದಾರೆ. ಗೂಗಲ್ ಮಾತೃಸಂಸ್ಥೆಯಾಗಿರುವ ಆಲ್ಫಾಬೆಟ್ ಇಂಕ್, ಒಟ್ಟು ಉದ್ಯೋಗಿಗಳ ಪೈಕಿ ಶೇ.6 ಅಥವಾ 12000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗುವುದು ಎಂದು ಹೇಳಿತ್ತು. ಈಗ ಭಾರತದಲ್ಲಿ ಕಡಿತ ಮಾಡಲಾಗಿರುವ 453 ಉದ್ಯೋಗಿಗಳು ಈ ಶೇ.6 ಭಾಗದಲಿದ್ದಾರೆಯೇ ಅಥವಾ ಇದು ಹೊಸ ಕಡಿತ ಪ್ರಕ್ರಿಯೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಇದನ್ನೂ ಓದಿ: Tech Layoffs : ಗೂಗಲ್‌ನಲ್ಲಿ ನಿರುದ್ಯೋಗ ತಾಂಡವ, 1.5 ಲಕ್ಷ ಸಿಬ್ಬಂದಿ ವಜಾಗೊಳಿಸಲು ಸಿಇಒ ಸುಂದರ್‌ ಪಿಚೈಗೆ ಒತ್ತಡ

ಕೆಲಸವನ್ನು ಕಳೆದುಕೊಂಡಿರುವ ಉದ್ಯೋಗಿಗಳಿಗೆ ಕಳುಹಿಸಲಾದ ಮೇಲ್‌ನಲ್ಲಿ ಆಲ್ಫಾಬೆಟ್ ಸಿಇಒ ಸುಂದರ್ ಪಿಚ್ಚೈ ಅವರ ಹೇಳಿಕೆಯೂ ಇದೆ. ಕಂಪನಿಯಿಂದ ವಜಾ ಮಾಡಲು ಕೈಗೊಳ್ಳಲಾದ ನಿರ್ಧಾರದ ಸಂಪೂರ್ಣ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಜತೆಗೆ, ಅಮೆರಿಕದ ಹೊರಗೆ ಗೂಗಲ್‌ ಕಚೇರಿಗಳಿಂದ ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳಿಗೆ ಸ್ಥಳೀಯ ವ್ಯಾಪಾರಗಳಿಂದ ಬೆಂಬಲ ದೊರೆಯಲಿದೆ ಎಂದು ಈ ಹಿಂದೆ ಸುಂದರ್ ಪಿಚ್ಚೈ ಕಳುಹಿಸಿದ್ದ ಮೇಲ್‌ನಲ್ಲಿ ತಿಳಿಸಲಾಗಿತ್ತು.

Exit mobile version