Site icon Vistara News

Tech Tips: ನಿಮ್ಮ ಸ್ಮಾರ್ಟ್‌ಫೋನನ್ನೇ ಟಿವಿ ರಿಮೋಟ್ ಮಾಡಿ! ಈ ಸ್ಟೆಪ್ಸ್ ಫಾಲೋ ಮಾಡಿ…

Smartphone TV Remote

ಬೆಂಗಳೂರು, ಕರ್ನಾಟಕ: ಟಿವಿ ನೋಡುವಾಗ ಬಹಳ ತೊಂದರೆ ಕೊಡೋದು ರಿಮೋಟ್ ಕಂಟ್ರೋಲ್ (TV remote) ಕೈ ಕೊಡುವುದು ಜಾಸ್ತಿ. ಬೇಕು ಎಂದಾಗ ಕೈಗೆ ಸಿಗುವುದಿಲ್ಲ. ಒಮ್ಮೆ ಸಿಕ್ಕರೂ ಬ್ಯಾಟರಿ ಡೌನ್ ಆಗಿರುತ್ತದೆ. ಅದನ್ನು ಟೇಬಲ್‌ಗೋ, ಸೋಫಾಗೋ ಕುಟ್ಟಿ ಸಕ್ರಿಯ ಮಾಡುವುದು ಮಾಮೂಲಿ. ಇಲ್ಲವೇ ಮಕ್ಕಳು ಅದನ್ನು ಆಟಿಕೆಯನ್ನಾಗಿ ಮಾಡಿಕೊಂಡು ಆಟ ಆಡೋದು ಕಾಮನ್. ಅಂಥ ಸಂದರ್ಭದಲ್ಲಿ ಟಿವಿ ನೋಡುವಾಗ ಇರಿಟೇಟ್ ಆಗುವುದು ಸಹಜ. ಆದರೆ, ಈ ರಿಮೋಟ್ ಕಂಟ್ರೋಲ್ ಸಮಸ್ಯೆಗೆ ಒಂದು ಪರಿಹಾರವಿದೆ. ನಿಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್ (Smartphone) ಅನ್ನೇ ನೀವು ರಿಮೋಟ್ ತರಹ ಬಳಸಬಹುದು. ಹೌದು.. ನಿಜ. ಸ್ಮಾರ್ಟ್‌ಫೋನ್ ಅನ್ನು ರಿಮೋಟ್ ಕಂಟ್ರೋಲ್ ತರಹ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ನಾವು ಇಲ್ಲಿ ತಿಳಿಸಿದ್ದೇವೆ. ಓದಿ(Tech Tips).

Tech Tips: ಆಂಡ್ರಾಯ್ಡ್ ಫೋನ್ ಅನ್ನು ಟಿವಿ ರಿಮೋಟ್ ಮಾಡುವುದು ಹೇಗೆ?

ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್ ತೆರೆಯಿರಿ. ಅದರಲ್ಲಿರುವ ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಮತ್ತು ಗೂಗಲ್ ಟಿವಿ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಿ. ಇದಕ್ಕೂ ಮೊದಲು ಟಿವಿ ಮತ್ತು ನೀವು ಬಳಸುತ್ತಿರುವ ಸ್ಮಾರ್ಟ್‌ಫೋನ್ ಒಂದೇ ವೈಫೈ ಕನೆಕ್ಟ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಒಂದೊಮ್ಮೆ ನಿಮ್ಮ ಟಿವಿಗೆ ವೈಫೈ ಇರರಿದ್ದರೆ ಬ್ಲೂಟೂತ್ ಮೂಲಕ ಟಿವಿ ಮತ್ತು ಫೋನ್ ಸಂಪರ್ಕಿಸಬಹುದು. ಬಳಿಕ ಇನ್‌ಸ್ಟಾಲ್ ಆಗಿರುವ ಆಗಿರು ಗೂಗಲ್ ಟಿವಿ ಆ್ಯಪ್ ಓಪನ್ ಮಾಡಿ. ಆ್ಯಪ್‌ನ ಕೆಳಗಡೆ ಬಲ ತುದಿಯಲ್ಲಿರುವ ರಿಮೋಟ್ ಬಟನ್ ಮೇಲೆ ಟ್ಯಾಪ್ ಮಾಡಿ. ಆಗ, ಆ್ಯಪ್ ಸ್ಕ್ಯಾನಿಂಗ್ ಮಾಡುತ್ತಿದೆ ಮತ್ತು ನಿಮ್ಮ ಟಿವಿಯನ್ನು ಶೋಧಿಸುತ್ತದೆ. ಈ ಸ್ಕ್ಯಾನಿಂಗ್ ವೇಳೆ ನಿಮ್ಮ ಟಿವಿ ಪತ್ತೆಯಾದ ಕೂಡಲೇ ಪಟ್ಟಿಯಿಂದ ಅದನ್ನು ಆಯ್ಕೆ ಮಾಡಿಕೊಳ್ಳಿ. ಆಗ ಟಿವಿ ಸ್ಕ್ರೀನ್ ಮೇಲೆ ಕೋಡ್ ಕಾಣಿಸಿಕೊಳ್ಳುತ್ತದೆ. ಆ ಕೋಡ್ ಅನ್ನು ನಿಮ್ಮ ಆ್ಯಪ್‌ನಲ್ಲಿ ನಮೂದಿಸಿ. ಪೇರ್‌ ಮಾಡಲು ಟ್ಯಾಪ್ ಮಾಡಿ. ನಿಮ್ಮ ಪೋನ್ ಟಿವಿಯೊಂದಿಗೆ ಪೇರ್ ಆದ ಮೇಲೆ, ಸ್ಮಾರ್ಟ್‌ಫೋನ್ ನೀವು ರಿಮೋಟ್ ರೀತಿಯಲ್ಲೇ ಬಳಸಬಹುದು.

ಚಾನಲ್ ಅನ್ನು ಬದಲಾಯಿಸಲು, ವಾಲ್ಯೂಮ್ ಅನ್ನು ಸರಿಹೊಂದಿಸಲು, ಪ್ಲೇಬ್ಯಾಕ್ ಅನ್ನು ನಿಯಂತ್ರಿಸಲು ಮತ್ತು ಹೆಚ್ಚಿನದನ್ನು ಮಾಡಲು ನೀವು ಅಪ್ಲಿಕೇಶನ್ ಅನ್ನು ಬಳಸಬಹುದು.

ಈ ಸುದ್ದಿಯನ್ನೂ ಓದಿ: YouTube: ಯುಟ್ಯೂಬ್‌ ಕಂಟೆಂಟ್ ಕ್ರಿಯೇಟರ್ಸ್‌ಗೆ ಗುಡ್ ನ್ಯೂಸ್! ಉಚಿತವಾಗಿ ವಿಡಿಯೋ ಡಬ್ ಮಾಡಬಹುದು

ಐಫೋನ್ ಅನ್ನು ಟಿವಿ ರಿಮೋಟ್ ಮಾಡುವುದು ಹೇಗೆ?

ಟಿವಿ ಮತ್ತು ನಿಮ್ಮ ಐಫೋನ್ ಎರಡೂ ಒಂದೇ ವೈಫೈಗೆ ಕನೆಕ್ಟ್ ಆಗಿರುವುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು. ಆಪ್ ಸ್ಟೋರ್‌ನಿಂದ ಗೂಗಲ್ ಟಿವಿ ಆ್ಯಪ್ ಅನ್ನು ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ. ಡೌನ್‌ಲೋಡ್ ಮಾಡಿಕೊಂಡ ಬಳಿಕ ಗೂಗಲ್ ಟಿವಿ ಆ್ಯಪ್ ತೆರೆಯಿರಿ. ಆ್ಯಪ್‌ ರೈಟ್ ಕಾರ್ನರ್‌ನಲ್ಲಿರುವ ಟಿವಿ ರಿಮೋಟ್ ಮೇಲೆ ಟ್ಯಾಪ್ ಮಾಡಿ. ಆಗ ಆ್ಯಪ್ ಟಿವಿ ಸಾಧನ ಸ್ಕ್ಯಾನಿಂಗ್ ಮಾಡುತ್ತದೆ. ಒಂದು ವೇಳೆ, ನಿಮ್ಮ ಟಿವಿ ಕಾಣಿಸದಿದ್ದರೆ ಸ್ಕ್ಯಾನ್ ಫಾರ್ ಡಿವೈಸಸ್ ಬಟನ್ ಮೇಲೆ ಮತ್ತೆ ಟ್ಯಾಪ್ ಮಾಡಿ. ನಿಮ್ಮ ಟಿವಿ ಶೋಧಿಸಿದಾಗ ಅದನ್ನು ಸೆಲೆಕಟ್ ಮಾಡಿ ಮತ್ತು ಟಿವಿ ಸ್ಕ್ರೀನ್ ಮೇಲೆ ಕಾಣುವ 6 ಅಂಕಿಗಳ ಕೋಡ್ ಅನ್ನು ನಮೂದಿಸಿ. ಬಳಿಕ ಪೇರ್ ಮೇಲೆ ಟ್ಯಾಪ್ ಮಾಡಿ. ಆಗ ನಿಮ್ಮ ಐಫೋನ್ ಮತ್ತು ಟಿವಿ ಪೇರ್ ಆಗುತ್ತದೆ. ಆಗ ನೀವು ನಿಮ್ಮ ಐಫೋನ್ ಅನ್ನು ಟಿವಿ ರಿಮೋಟ್ ತರಹ ಬಳಸಬಹುದು.

Exit mobile version