Site icon Vistara News

WhatsApp: ಇನ್ನು ಮುಂದೆ ಈ ಫೋನ್‌ಗಳಲ್ಲಿ ವಾಟ್ಸ್ಯಾಪ್‌ ಸಿಗೋಲ್ಲ! ನಿಮ್ಮ ಫೋನೂ ಇದೆಯಾ ನೋಡಿ

WhatsApp color

ಬೆಂಗಳೂರು: ಸ್ಯಾಮ್‌ಸಂಗ್ (Samsung), ಮೊಟೊರೊಲಾ (Motorola), ಸೋನಿ (Sony) ಮತ್ತು ಆಪಲ್ (Apple) ಸೇರಿದಂತೆ ಜನಪ್ರಿಯ ಬ್ರಾಂಡ್‌ಗಳ ಮೂವತ್ತೈದು ಮೊಬೈಲ್ ಫೋನ್‌ಗಳು (Mobile phones) ಇನ್ನು ಮುಂದೆ ವಾಟ್ಸ್ಯಾಪ್ ಅಪ್‌ಡೇಟ್‌ (WhatsApp Updates) ಅಥವಾ ಭದ್ರತಾ ಸಂದೇಶಗಳನ್ನು (Security features) ಸ್ವೀಕರಿಸುವುದಿಲ್ಲ ಎಂದು ಹೊಸ ವರದಿಯೊಂದು ಬಹಿರಂಗಪಡಿಸಿದೆ.

ಮೆಟಾ (Meta) ಮಾಲೀಕತ್ವದ ಪ್ಲಾಟ್‌ಫಾರ್ಮ್ ವಾಟ್ಸ್ಯಾಪ್‌ ತನ್ನ ಇತ್ತೀಚಿನ ಅಪ್‌ಡೇಟ್‌ನಲ್ಲಿ, ತನ್ನ ಕನಿಷ್ಟ ಸಿಸ್ಟಮ್ ಅವಶ್ಯಕತೆಗಳನ್ನು ಬದಲಾಯಿಸಿದೆ. ಇದು ಹಳೆಯ ಆವೃತ್ತಿಯ ಆಂಡ್ರಾಯ್ಡ್‌ (Android) ಹಾಗೂ ಐಫೋನ್‌ಗಳನ್ನು (iPhone) ಹೊಂದಿರುವ ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ.

ಯಾವ ಸಾಧನಗಳಿಗೆ ಎಫೆಕ್ಟ್?

ಸ್ಯಾಮ್‌ಸಂಗ್:‌ Galaxy Note 3, Galaxy S3 Mini, Galaxy S4 Mini, Galaxy Ace Plus, Galaxy Core, Galaxy Express 2, Galaxy Grand, Galaxy Note 3, Galaxy S4 Zoom
ಆಪಲ್:‌ iPhone 5, iPhone 6, iPhone SE, iPhone 6S, iPhone 6S Plus
ಮೋಟರೋಲಾ: Moto G, Moto X
ಹ್ಯುವೈ: Ascend P6 S, Ascend G525, Huawei C199, Huawei GX1s, Huawei Y625
ಲೆನೊವೊ: Lenovo 46600, Lenovo A858T, Lenovo P70, Lenovo S890
ಸೋನಿ: Xperia Z1, Xperia E3
ಎಲ್‌ಜಿ: Optimus 4X HD, Optimus G, Optimus G Pro, Optimus L7

ಈ ಬದಲಾವಣೆಯು ಭಾರತದಲ್ಲಿರುವ ಬಳಕೆದಾರರ ಮೇಲೆ ಗಮನಾರ್ಹ ಪರಿಣಾಮಗಳನ್ನು ಬೀರಲಿದೆ. ವಿಶೇಷವಾಗಿ Huawei ಮತ್ತು LGಯಂತಹ ಬ್ರಾಂಡ್‌ಗಳ ಫೋನ್‌ಗಳನ್ನು ಹೊಂದಿರುವವರು ಇನ್ನು ಮುಂದೆ ದೇಶದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲ. ಮಾರಾಟವನ್ನು ಸ್ಥಗಿತಗೊಳಿಸಿದ ಹೊರತಾಗಿಯೂ ಅನೇಕರು ಇನ್ನೂ ಈ ಫೋನ್‌ಗಳನ್ನು ಬಳಸುತ್ತಿದ್ದಾರೆ. ಆದರೆ WhatsApp ಬಳಸುವುದನ್ನು ಮುಂದುವರಿಸಲು ಹೊಸ ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್ ಮಾಡಬೇಕಾಗುತ್ತದೆ.

ನವೀಕರಣಕ್ಕೆ ಕಾರಣ

ಸ್ಮಾರ್ಟ್‌ಫೋನ್ ತಯಾರಕರು ಸಾಮಾನ್ಯವಾಗಿ ಕೆಲವೇ ವರ್ಷಗಳವರೆಗೆ ಸಾಧನಗಳನ್ನು ಬೆಂಬಲಿಸುತ್ತಾರೆ. ಆದ್ದರಿಂದ WhatsAppನಂತಹ ಅಪ್ಲಿಕೇಶನ್‌ಗಳು ಹೊಸ ಸಾಫ್ಟ್‌ವೇರ್ ಆವೃತ್ತಿಗಳಿಗೆ ಆಪ್ಟಿಮೈಜ್ ಮಾಡುತ್ತವೆ. ಇತ್ತೀಚಿನ ಭದ್ರತಾ ವೈಶಿಷ್ಟ್ಯಗಳು ಮತ್ತು ಕಾರ್ಯಚಟುವಟಿಕೆಗಳಿಂದ ಬಳಕೆದಾರರು ಪ್ರಯೋಜನ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಅಪ್ಲಿಕೇಶನ್ ಈ ಹೊಸ ಅವಶ್ಯಕತೆಗಳನ್ನು ತಂದಿದೆ. ವಾಟ್ಸ್ಯಾಪ್‌ ಈಗ Android 5.0 ಅಥವಾ ನಂತರದ ಸಾಧನಗಳನ್ನು ಮತ್ತು iOS 12 ಅಥವಾ ನಂತರದ ಐಫೋನ್‌ಗಳನ್ನು ಮಾತ್ರ ಬೆಂಬಲಿಸುತ್ತದೆ.

ನಿಮ್ಮ ಸಾಫ್ಟ್‌ವೇರ್/ಆಂಡ್ರಾಯ್ಡ್ ಆವೃತ್ತಿಯನ್ನು ಹೇಗೆ ಪರಿಶೀಲಿಸುವುದು?

ಈ ಸರಳ ಹಂತಗಳನ್ನು ಅನುಸರಿಸಿ:
ಐಫೋನ್:‌ Generak> Settings> About iPhone
ಆಂಡ್ರಾಯ್ಡ್:‌ Settings > About phone > Software version

ನಿಮ್ಮ ಫೋನ್ ಪಟ್ಟಿಯಲ್ಲಿದ್ದರೆ, ಭದ್ರತೆ ಮತ್ತು ಹೊಸ ವೈಶಿಷ್ಟ್ಯಗಳಿಗೆ ಪ್ರವೇಶವನ್ನು ಕಾಪಾಡಿಕೊಳ್ಳಲು ಹೊಸ ಮಾದರಿಗೆ ಅಪ್‌ಗ್ರೇಡ್ ಮಾಡುವುದನ್ನು ಪರಿಗಣಿಸಿ.

ಇದನ್ನೂ ಓದಿ: WhatsApp Features: ವಾಟ್ಸ್ ಆ್ಯಪ್ ನಲ್ಲಿರುವ ಈ 7 ವಿಶೇಷ ಫೀಚರ್ ಗಳ ಬಗ್ಗೆ ಗೊತ್ತೇ? ನೀವೂ ಬಳಸಿ

Exit mobile version