Site icon Vistara News

Best Camera Smartphone: ಫ್ಲಿಪ್‌ಕಾರ್ಟ್‌ನಲ್ಲಿ 35 ಸಾವಿರ ರೂ.ಗೆ ಟಾಪ್ 5 ಬೆಸ್ಟ್ ಪ್ರೀಮಿಯಂ ಕ್ಯಾಮೆರಾ ಸ್ಮಾರ್ಟ್‌ಫೋನ್ಸ್

Best Camera Smartphones

ಬೆಂಗಳೂರು: ಉತ್ತಮ ಗುಣಮಟ್ಟದ ಫೋಟೋಗಳನ್ನು ಕ್ಲಿಕ್ಕಿಸುವುದು ಸ್ಮಾರ್ಟ್ ಫೋನ್ (Best Camera Smartphone) ಬಳಕೆಯ ಒಂದು ಅತ್ಯಗತ್ಯವಾದ ಅಂಶವಾಗಿದೆ. ನೀವು ಉತ್ಸಾಹಿ ಛಾಯಾಗ್ರಾಹಕರು ಅಂದರೆ ಫೋಟೋಗ್ರಾಫರ್ (Photographer) ಆಗಿದ್ದರೆ ಅಥವಾ ಸುಂದರವಾದ ಕ್ಷಣಗಳನ್ನು ಸೆರೆಹಿಡಿಯಲು ಇಚ್ಛಿಸುತ್ತಿದ್ದರೆ ಅಸಾಧಾರಣವಾದ ಕ್ಯಾಮೆರಾ (Camera) ತಂತ್ರಜ್ಞಾನದೊಂದಿಗೆ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚು ಖರ್ಚು ಮಾಡಬೇಕಿಲ್ಲ. ನಾವು ನಿಮಗೆ ರಕ್ಷಣೆಯೊಂದಿಗೆ ಕೈಗೆಟುಕುವ ದರದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ! ಅಂದರೆ ಫ್ಲಿಪ್‌ಕಾರ್ಟ್‌ನಲ್ಲಿ (Flipkart) 35,000 ರೂಪಾಯಿಗಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ಕೃಷ್ಠವಾದ ಕ್ಯಾಮೆರಾ ತಂತ್ರಜ್ಞಾನವನ್ನು ಹೊಂದಿರುವ ಐದು ಸ್ಮಾರ್ಟ್‌ಫೋನ್‌ಗಳನ್ನು ಅತಿ ಹೆಚ್ಚು ಗ್ರಾಹಕರು ಆಯ್ಕೆ ಮಾಡಿಕೊಂಡಿರುವ ಪಟ್ಟಿ ಇಲ್ಲಿದೆ. ಕ್ರಾಂತಿಕಾರಕ ರಾತ್ರಿ ವೇಳೆಯ ಫೋಟೋಗಳಿಂದ ಹಿಡಿದು ಸುಧಾರಿತ ಝೂಂ ವೈಶಿಷ್ಟ್ಯತೆಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ಗಳು ಆರ್ಥಿಕವಾಗಿ ಯಾವುದೇ ಹೆಚ್ಚುವರಿ ಹೊರೆ ಇಲ್ಲದೇ ಗಮನಾರ್ಹವಾದ ಅನುಭವವನ್ನು ನೀಡುತ್ತವೆ.

1.ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್54 5ಜಿ (SAMSUNG Galaxy F54 5G)

SAMSUNG Galaxy F54 5G ಅನ್ನು ನಿಮ್ಮ ರಾತ್ರಿ ವೇಳೆಯ ಛಾಯಾಗ್ರಹಣದಲ್ಲಿ ಕ್ರಾಂತಿಯನ್ನು ತರುವುದಕ್ಕೆ ಪೂರಕವಾಗಿ ವಿನ್ಯಾಸಗೊಳಿಸಲಾಗಿದೆ. ಇದರ ವಿಶೇಷತೆಯೆಂದರೆ ಆಸ್ಟ್ರೋಲ್ಯಾಪ್ಸ್ ವೈಶಿಷ್ಟ್ಯತೆಯನ್ನು ಹೊಂದಿದೆ. ಅಂದರೆ, ಈ ಹಿಂದೆಂದೂ ಫೋಟೋಗಳನ್ನು ತೆಗೆಯದ ರೀತಿಯಲ್ಲಿ ರಾತ್ರಿ ವೇಳೆಯಲ್ಲಿ ಆಗಸದ ಸೌಂದರ್ಯವನ್ನು ಮತ್ತು ರಾತ್ರಿಯ ಸುಂದರವಾದ ವಾತಾವರಣವನ್ನು ಇದರಲ್ಲಿ ಸೆರೆ ಹಿಡಿಯಬಹುದಾಗಿದೆ. ಕಡಿಮೆ ಬೆಳಕಿನಲ್ಲಿಯೂ ಪ್ರಖರವಾದ ರೀತಿಯಲ್ಲಿ ಫೋಟೋಗಳನ್ನು ಕ್ಲಿಕ್ಕಿಸಬಹುದಾದ `ನೈಟೋಗ್ರಫಿ’ ವೈಶಿಷ್ಟ್ಯತೆ ಇದರಲ್ಲಿದೆ. ಈ ಮೂಲಕ ನೀವು ತೆಗೆಯುವ ಫೋಟೋಗಳು ಗಮನಾರ್ಹವಾಗಿರುವುದನ್ನು ಖಚಿತಪಡಿಸುತ್ತವೆ. ಇದಲ್ಲದೇ, ಈ ಗ್ಯಾಲಕ್ಸಿ ಎಫ್54 5ಜಿ 108MP (OIS)ನೊಂದಿಗೆ ನೋ ಶೇಕ್ ಕ್ಯಾಮೆರಾ ಸೆಟ್ಟಿಂಗ್ ನೊಂದಿಗೆ ಹೈ ರೆಸಲೂಶನ್ ನಲ್ಲಿ ಶೂಟ್ ಮಾಡಬಹುದಾಗಿದೆ. ಇದರೊಂದಿಗೆ ಶೇಕ್ ಫ್ರೀ ಫೋಟೋಗಳಿ ಮತ್ತು ವಿಡಿಯೋಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

Galaxy F54 5G ಸಿಂಗಲ್ ಟೇಕ್ ವೈಶಿಷ್ಟ್ಯತೆಯನ್ನು ಒಳಗೊಂಡಿದ್ದು, ಕ್ಯಾಮೆರಾ ಹಿಂದೆ ಎಐ ಇಂಜಿನ್ ಗಳಿಗೆ ಶಕ್ತಿಯನ್ನು ತುಂಬುತ್ತದೆ. ಇದರಿಂದ ಗ್ರಾಹಕರು ಒಂದೇ ಶಾಟ್ ನಲ್ಲಿ 4 ವಿಡಿಯೋಗಳು ಮತ್ತು 4 ಫೋಟೋಗಳನ್ನು ಸೆರೆಹಿಡಿಯಲು ಸಾಧ್ಯವಾಗುತ್ತದೆ. ಇದರಲ್ಲಿನ ಫನ್ ಮೋಡ್ 16 ವಿಭಿನ್ನವಾದ ಅಂತರ್ಗತ ಲೆನ್ಸ್ ಗಳ ಪರಿಣಾಮವನ್ನು ನೀಡುತ್ತದೆ. ಇದು ಯಂಗ್ ಮಿಲೇನಿಯಲ್ ಮತ್ತು Gen Z ಗ್ರಾಹಕರು ತಮ್ಮ ಸ್ಮಾರ್ಟ್ ಫೋನ್ ಕ್ಯಾಮೆರಾ ಮೂಲಕ ಅಸಾಧಾರಣವಾದ ಅನುಭವವನ್ನು ಪಡೆಯಲು ಅನುವು ಮಾಡಿಕೊಡುತ್ತದೆ.

2. Google Pixel 6a: ಗೂಗಲ್ ಪಿಕ್ಸೆಲ್ 6ಎ

Google Pixel 6aಯನ್ನು ಹೊಂದುವುದು ಯಾವುದೇ ಛಾಯಾಗ್ರಾಹಕನಿಗೆ ಒಂದು ಹೆಮ್ಮೆಯ ವಿಚಾರ. ಫೇಸ್ ಅನ್ ಬ್ಲರ್ ನೊಂದಿಗೆ ಲಭ್ಯವಿದ್ದು, ಇದು ಬ್ಲರ್ ಆಗಿರುವ ಮುಖಗಳನ್ನು ಶಾರ್ಪರ್ ಆಗಿ ಕಾಣುವಂತೆ ಮಾಡುತ್ತದೆ. ಇದಲ್ಲದೇ, ರಿಯಲ್ ಟೋನ್ ಇದರಲ್ಲಿದ್ದು, ವಿವಿಧ ಚರ್ಮದ ಬಣ್ಣದವರ ನಿಖರವಾದ ಸುಂದರ ಫೋಟೋಗಳನ್ನು ತೆಗೆಯಲು ಸಹಕಾರಿಯಾಗಿದೆ. ಕ್ಯಾಮೆರಾದಲ್ಲಿರುವ ಮ್ಯಾಜಿಕ್ ಎರೇಸರ್ ಸಾಧನವು ಅಡೆತಡೆಗಳನ್ನು ಸುಲಭವಾಗಿ ನಿವಾರಿಸುತ್ತದೆ. ಈ ಮೂಲಕ ಸ್ವಚ್ಛ ಮತ್ತು ಕೇಂದ್ರೀಕೃತ ಸಂಯೋಜನೆಗಳ ಫೋಟೋಗಳನ್ನು ತೆಗೆಯಲು ನಿಮಗೆ ಸಹಾಯ ಮಾಡುತ್ತದೆ.

3.realme 11 Pro + 5G: ರಿಯಲ್ ಮಿ 11 ಪ್ರೊ + 5ಜಿ

realme 11 Pro + 5G ಸರಣಿಯ ಫೋನ್ ಗಳು 200ಎಂಪಿ ಸೂಪರ್ ಝೂಂ ಕ್ಯಾಮೆರಾದೊಂದಿಗೆ ಕ್ಯಾಮೆರಾ ತಂತ್ರಜ್ಞಾನವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತವೆ. ಇದರಲ್ಲಿ OIS ಮತ್ತು 4X ಇನ್ –ಸೆನ್ಸಾರ್ ಝೂಂ ಸಾಮರ್ಥ್ಯಗಳನ್ನು ಅಳವಡಿಸಲಾಗಿದೆ. ಸ್ಮಾರ್ಟ್ ಫೋನ್ ಗಳ ಸಾಲಿನಲ್ಲಿ ರಿಯಲ್ ಮಿ 11 ಪ್ರೊ+ 5ಜಿ ಅತ್ಯಮೂಲ್ಯವಾದ ಕ್ಯಾಮೆರಾ ಸಾಮರ್ಥ್ಯವನ್ನು ಒಳಗೊಂಡಿದೆ. ಉದ್ಯಮದ ಮೊಟ್ಟ ಮೊದಲ 4X ಲಾಸ್ ಲೆಸ್ ಝೂಂ, 2X ಪೋಟ್ರೇಟ್ ಮೋಡ್ ಮತ್ತು ಆಟೋ ಝೂಂ ತಂತ್ರಜ್ಞಾನದಂತಹ ಅತ್ಯುತ್ಕೃಷ್ಠವಾದ ವೈಶಿಷ್ಟ್ಯತೆಗಳನ್ನು ಹೊಂದಿದೆ. ಇದಲ್ಲದೇ, ಸೂಪರ್OIS, ಸ್ಟ್ರೀಟ್ ಫೋಟೋಗ್ರಾಫಿ ಮೋಡ್, ನೈಟ್ ಮೋಡ್ ನಂತಹ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಇದರ ನೈಟ್ ಮೋಡ್ ನಲ್ಲಿ ಮೂನ್ ಮೋಡ್ ಮತ್ತು ಸ್ಟಾರ್ರಿ ಸ್ಕೈ ಮೋಡ್ ಹಾಗೂ ಸೂಪರ್ ನೈಟ್ ಸ್ಕೇಪ್ ವೈಶಿಷ್ಟ್ಯತೆಗಳು ಸಹ ಇವೆ. ಈ ಎಲ್ಲಾ ವೈಶಿಷ್ಟ್ಯತೆಗಳನ್ನು ಬಳಸಿಕೊಂಡು ಬಳಕೆದಾರರು ತಮ್ಮ ಸೃಜನಶೀಲತೆಯ ಸುಂದರ ಕ್ಷಣಗಳನ್ನು ಕ್ಲಿಕ್ಕಿಸಬಹುದಾಗಿದೆ.

4. vivo V27 5G: ವಿವೋ ವಿ27 5 ಜಿ

vivo V27 5G ರಾತ್ರಿ ವೇಳೆಯಲ್ಲಿ ಫೋಟೋಗಳನ್ನು ಉನ್ನತ ಮಟ್ಟದಲ್ಲಿ ತೆಗೆದುಕೊಳ್ಳುವಂತಹ ವೈಶಿಷ್ಟ್ಯತೆಗಳನ್ನು ಹೊಂದಿದೆ. ಔರಾ ಲೈಟ್ ನಿಂದ ಮೇಲ್ದರ್ಜೆಗೇರಿಸಲ್ಪಟ್ಟಿರುವ ನೈಟ್ ಪೋಟ್ರೇಟ್ ವೈಶಿಷ್ಟ್ಯತೆಯೊಂದಿಗೆ ನಿಮ್ಮ ಫೋಟೋಗಳನ್ನು ಹಗಲಿನ ವೇಳೆಯಲ್ಲಿ ತೆಗೆದ ರೀತಿಯಲ್ಲಿಯೇ ಪ್ರಖರವಾಗಿ ಮತ್ತು ಸ್ಪಷ್ಟವಾಗಿ ಕಾಣಿಸುವಂತೆ ಮಾಡುತ್ತದೆ. ಸೋನಿ ಐಎಂಎಕ್ಸ್766ವಿ ಸೆನ್ಸಾರ್ ನಿಂದ ಇದು ಸಾಧ್ಯವಾಗಲಿದೆ. ಶಾಂಪೇನ್ ರೀತಿಯ ಟೋನ್ ನಿಮ್ಮ ಫೋಟೋಗಳಿಗೆ ವಿಶಿಷ್ಟವಾದ ಭಾವನೆಯನ್ನು ತಂದುಕೊಡಲಿದೆ. ಇದಲ್ಲದೇ, ವೆಡ್ಡಿಂಗ್ ಸ್ಟೈಲ್ ಪೋಟ್ರೇಟ್ ವೈಶಿಷ್ಟ್ಯತೆಯು ವಾರ್ಮ್, ಪಾಸ್ಟೆಲ್ ಟೋನ್ಸ್ ಅನ್ನು ಒಳಗೊಂಡಿದ್ದು, ಇದರಲ್ಲಿ ಸಾಫ್ಟ್ ಕಾಂಟ್ರಾಸ್ಟ್ ಗೋಲ್ಡ್ ಮತ್ತು ಪಿಂಕ್ ಟೋನ್ ಗಳು ಇರಲಿವೆ. ಇವು ಭಾರತೀಯ ಮದುವೆಗಳ ಬಣ್ಣದ ಪ್ಯಾಲೆಟ್ ಅನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುತ್ತವೆ. ಇದರಲ್ಲಿರುವ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ದೀರ್ಘವಾದ ಎಕ್ಸ್ ಪೋಸರ್ ಶಾಟ್ ಗಳನ್ನು ಸೆರೆ ಹಿಡಿಯುವ ಸಂದರ್ಭದಲ್ಲಿ ಫೋನ್ ಅನ್ನು ಸ್ಥಿರಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.

5. OPPO Reno 8T 5G: ಓಪ್ಪೊ ರೆನೋ 8ಟಿ 5ಜಿ

ಓಪ್ಪೊ ರೆನೋ 8ಟಿ 5ಜಿ (OPPO Reno 8T 5G) ತನ್ನ ಅತ್ಯಾಧುನಿಕ 108ಎಂಪಿ ಪೋಟ್ರೇಟ್ ಕ್ಯಾಮೆರಾ, ಪ್ರೀಮಿಯಂ ಮೈಕ್ರೋಲೆನ್ಸ್, 2ಎಂಪಿ ಡೆಪ್ತ್ ಕ್ಯಾಮೆರಾ ಮತ್ತು 32 ಎಂಪಿ ಸೆಲ್ಫಿ ಕ್ಯಾಮೆರಾದೊಂದಿಗೆ ನಿಮ್ಮ ಸೃಜನಶೀಲತೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಪರಿಪೂರ್ಣವಾದ ಅಡಿಪಾಯವನ್ನು ಒದಗಿಸುತ್ತದೆ. 108 ಎಂಪಿ ಅಲ್ಟ್ರಾ-ಹೈ ರೆಸಲೂಶನ್ ಮತ್ತು ನೊನಾಪಿಕ್ಸೆಲ್ ಪ್ಲಸ್ ತಂತ್ರಜ್ಞಾನವು ಫೋಟೋವನ್ನು ಪ್ರತಿ ಕ್ಷಣವನ್ನು ಸರಿಸಾಟಿಯಿಲ್ಲದ ರೀತಿಯಲ್ಲಿ ಸ್ಪಷ್ಟತೆ ಮತ್ತು ಆಳವಾಗಿ ಸೆರೆಹಿಡಿಯುತ್ತದೆ. 9 ಪಿಕ್ಸೆಲ್ ಗಳನ್ನು ಒಂದು ದೊಡ್ಡ ಪಿಕ್ಸೆಲ್ ಗೆ ಸಂಯೋಜಿಸುವುದರೊಂದಿಗೆ ಫೋನ್ ಬೆಳಕನ್ನು ಹೀರಿಕೊಳ್ಳುವ ಅಥವಾ ಪ್ರಖರತೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಪರಿಣಾಮವಾಗಿ ಬೆರಗಾಗುವಂತಹ ಫೋಟೋಗಳ ಗುಣಮಟ್ಟವನ್ನು ನೀಡುತ್ತದೆ, ಮೈಕ್ರೋಲೆನ್ಸ್ ನಿಮ್ಮನ್ನು ಒಂದು ಅತ್ಯಾಕರ್ಷಕವಾದ ಜಗತ್ತಿಗೆ ಕೊಂಡೊಯ್ಯುವಂತೆ ಮಾಡುತ್ತದೆ. ಇದಲ್ಲದೇ, ಇದರಲ್ಲಿನ 40X ವರೆಗಿನ ಮ್ಯಾಗ್ನಿಫಿಕೇಶನ್ ನೊಂದಿಗೆ ಸಂಕೀರ್ಣವಾದ ವಿವರಗಳನ್ನು ಅನ್ವೇಷಣೆ ಮಾಡಲು ನಿಮಗೆ ಅನುಮತಿ ನೀಡುತ್ತದೆ. ಇದಿಷ್ಟೇ ಅಲ್ಲದೇ, ಬೊಕ್ಹೆ ಫ್ಲೇರ್ ಪೋಟ್ರೇಟ್ ವೈಶಿಷ್ಟ್ಯತೆಯು ಡಿಎಸ್ಎಲ್ಆರ್ ರೀತಿಯ ಬ್ಯಾಕ್ ಗ್ರೌಂಡ್ ಬ್ಲರ್ ಅನ್ನು ಒದಗಿಸುವ ಮೂಲಕ ನಿಮ್ಮನ್ನು ಫೋಟೋಗಳಲ್ಲಿ ಅತ್ಯುತ್ತಮವಾಗಿ ಕಾಣುವಂತೆ ಮಾಡುತ್ತದೆ. ಈ OPPO Reno 8T 5G ನಿಮ್ಮ ಫೋಟೋಗ್ರಾಫಿಯನ್ನು ಅವಿಸ್ಮರಣೀಯಗೊಳಿಸುತ್ತದೆ.

ಈ ಸುದ್ದಿಯನ್ನೂ ಓದಿ: Best Phones Under Rs 15000: ತುಟ್ಟಿ ಕಾಲದಲ್ಲಿ 15 ಸಾವಿರ ರೂ.ನಲ್ಲಿ ಭರ್ಜರಿ ಸ್ಮಾರ್ಟ್‌ಫೋನ್ಸ್! 5G ಫೋನ್ ಕೂಡ ಇವೆ…

ನೀವು ಅತ್ಯಾಕರ್ಷಕ ರಾತ್ರಿ ದೃಶ್ಯಗಳನ್ನು ಸೆರೆ ಹಿಡಿಯುತ್ತಿರಲಿ, ಅಮೂಲ್ಯ ಕ್ಷಣಗಳನ್ನು ಅಥವಾ ನಿಮ್ಮ ಫೋಟೋಗಳಿಗೆ ಸೃಜನಶೀಲತೆಯ ಸ್ಪರ್ಶವನ್ನು ಸೇರಿಸುವ ವಿಚಾರದಲ್ಲಿ ಈ ಡಿವೈಸ್ ಗಳು ನಿಮಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿವೆ. ಇವುಗಳಲ್ಲಿರುವ ಅತ್ಯಂತ ಸುಧಾರಿತ ಕ್ಯಾಮೆರಾ ತಂತ್ರಜ್ಞಾನದಿಂದ ನಿಮ್ಮ ಫೋಟೋ/ವಿಡಿಯೋಗಳನ್ನು ಕ್ಲಿಕ್ಕಿಸುವ ಕ್ಷಣಗಳನ್ನು ಅವಿಸ್ಮರಣೀಯಗೊಳಿಸಲಿವೆ. ಈ ಮೂಲಕ ಫೋಟೋಗ್ರಾಫಿ ಶೈಲಿಯೊಂದಿಗೆ ಅನುರಣಿಸುವ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ಸುಲಭವಾಗಿ ಮತ್ತು ನಿಮ್ಮ ಚಾಕಚಕ್ಯತೆಯಿಂದ ಬೆರಗುಗೊಳಿಸುವಂತ ಫೋಟೋಗಳನ್ನು ಕ್ಲಿಕ್ಕಿಸುವ ಪ್ರಯಾಣವನ್ನು ಆರಂಭಿಸಿ.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version