Site icon Vistara News

Truecaller App: ಕರೆಗಳಿಗೆ ಉತ್ತರಿಸುವ ಎಐ ಆಧರಿತ ಹೊಸ ಫೀಚರ್ ಲಾಂಚ್ ಮಾಡಿದ ಟ್ರೂಕಾಲರ್!

Truecaller

ನವದೆಹಲಿ: ಕಾಲರ್ ಐಡೆಂಟಿಟಿ ಅಪ್ಲಿಕೇಷನ್ ಟ್ರೂಕಾಲರ್(Truecaller App) ಹೊಸ ಕೃತಕ ಬುದ್ಧಿಮತ್ತೆ(Artificial Intelligence) ಫೀಚರ್ ಟ್ರೂಕಾಲರ್ ಅಸಿಸ್ಟೆಂಟ್ (Truecaller Assistant) ಲಾಂಚ್ ಮಾಡಿದೆ. ಈ ಫೀಚರ್, ಬಳಕೆದಾರರ ಪರವಾಗಿ ಕರೆಗಳಿಗೆ ಉತ್ತರಿಸಲಿದೆ ಎಂದು ಕಂಪನಿ ಹೇಳಿದೆ. ಈ ಹೊಸ ಫೀಚರ್, ವರ್ಚುವಲ್ ಅಸಿಸ್ಟೆಂಟ್ ಕ್ಲೌಡ್ ಅನ್ನು ಆಧರಿಸಿದೆ ಮತ್ತು ಪ್ರಸ್ತುತ ಹಿಂದಿ, ಇಂಗ್ಲಿಷ್ ಮತ್ತು ಭಾರತೀಕರಿಸಿದ ‘ಹಿಂಗ್ಲಿಷ್’ ಭಾಷೆಗಳಲ್ಲಿ ಸಂಭಾಷಣೆಯ ಸಾಮರ್ಥ್ಯವನ್ನು ಹೊಂದಿದೆ ಎಂದು ಟ್ರೂಕಾಲರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಿಷಿತ್ ಜುಂಜುನ್ವಾಲಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಟ್ರೂಕಾಲರ್ ಕಾಲ್ ಹೀರೋ ಕಂಪನಿ ಸ್ವಾಧೀನಪಡಿಸಿಕೊಂಡಿತ್ತು. ಕಂಪನಿಯು ಈ ಫೀಚರ್ ಮೊದಲು ಕಾಲ್ ಹೀರೋ ಎಂದು ಹೆಸರಿಸಿತ್ತು. ಸ್ವಾಧೀನದ ನಂತರ, ಕಾಲ್ ಹೀರೋ ಕಾರ್ಯವನ್ನು ಟ್ರೂಕಾಲರ್‌ಗೆ ಸಂಯೋಜಿಸಲಾಗಿದೆ ಮತ್ತು ಈಗ ಇದನ್ನು ಟ್ರೂಕಾಲರ್ ಸಹಾಯಕ ಎಂದು ಕರೆಯಲಾಗುತ್ತದೆ. ಕೃತಕಬುದ್ಧಿಮತ್ತೆ ಅಸಿಸ್ಟೆಂಟ್ ಕಾರ್ಯಾಚರಣೆಯನ್ನು ಮೊದಲಿಗೆ ಅಮೆರಿದಲ್ಲಿ ಆರಂಭಿಸಲಾಯಿತು. ಕಾಲ್ ಹೀರೋ ಫೀಚರ್‌ ಅಲ್ಲಿ ಅಸ್ತಿತ್ವದಲ್ಲಿತ್ತು ಮತ್ತು ವಿವಿಧ ಮಾರುಕಟ್ಟೆಗಳಲ್ಲಿ ಈ ಚಾಲನೆಯಲ್ಲಿತ್ತು.

“ಟ್ರೂಕಾಲರ್ ಸ್ಪ್ಯಾಮ್ ಕರೆಗಳನ್ನು ಗುರುತಿಸಲು (ಗ್ರಾಹಕರಿಗೆ) ಸಹಾಯ ಮಾಡಲು ಸಾಧ್ಯವಾಗಿದ್ದರೂ, ಬಳಕೆದಾರರು ಇನ್ನೂ ಕೆಲವು ಸಂದರ್ಭಗಳಲ್ಲಿ ಈ ಕರೆಗಳಿಗೆ ಉತ್ತರಿಸುವ ಅನುಭವವನ್ನು ಅನುಭವಿಸಬೇಕಾಗುತ್ತದೆ. ಈ ಪರಿಹಾರವು ಶಂಕಿತ ತೊಂದರೆ ಕರೆಗಳಿಗೆ ಉತ್ತರಿಸುವ ಕಾರ್ಯವನ್ನು ನಿಯೋಜಿಸುವ ಮೂಲಕ ಅಂತಹ ಅನುಭವಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಎಂದು ಕಂಪನಿ ಹೇಳಿದೆ.

ಈ ಸುದ್ದಿಯನ್ನೂ ಓದಿ: TRAI Rules | ಮೊಬೈಲ್‌ನಲ್ಲಿನ್ನು ಕಾಣಿಸಲಿದೆ ಕರೆ ಮಾಡಿದ ಅಪರಿಚಿತರ ಹೆಸರು! ಟ್ರೂ ಕಾಲರ್ ಅಂತ್ಯ ಸಮೀಪಿಸಿತೇ?

ಈ ವೈಶಿಷ್ಟ್ಯವು ಬಳಕೆದಾರರಿಗೆ ಪ್ರಮುಖ ಕರೆಯಾಗಿದ್ದರೆ ಅಥವಾ ವೈಯಕ್ತಿಕವಾಗಿ ಉತ್ತರಿಸುವ ಅಗತ್ಯವಿದ್ದರೆ ಅಂಥ ಕರೆಯನ್ನು ಮಧ್ಯದಲ್ಲಿಯೇ ನಿಯಂತ್ರಿಸಲು ಅನುಮತಿಸುತ್ತದೆ. ವರ್ಚುವಲ್ ಅಸಿಸ್ಟೆಂಟ್ ಪ್ರಸ್ತುತ ದೇಶದಲ್ಲಿ ಆಂಡ್ರಾಯ್ಡ್‌ನಲ್ಲಿ ಲಭ್ಯವಿದೆ ಮತ್ತು ಮುಂಬರುವ ತಿಂಗಳುಗಳಲ್ಲಿ ಐಒಎಸ್ ಸಾಧಗಳಿಗೂ ದೊರೆಯಲಿದೆ.

ಟ್ರೂಕಾಲರ್ ಪಾಲಿಗೆ ಭಾರತವು ಅತಿದೊಡ್ಡ ಮಾರುಕಟ್ಟೆಯಾಗಿದೆ. ಟ್ರೂಕಾಲರ್‌ನಲ್ಲಿ ತಿಂಗಳಿಗೆ 25.54 ಕೋಟಿ ಸಕ್ರಿಯ ಬಳಕೆದಾರರಿದ್ದಾರೆ. ಜಾಗತಿಕವಾಗಿ ಈ ಪ್ರಮಾಣವು 35.56 ಕೋಟಿ ಇದೆ.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version