Site icon Vistara News

Tulu Translate Google: ಗೂಗಲ್ ಟ್ರಾನ್ಸ್‌ಲೇಟ್‌ನಲ್ಲಿ ತುಳು ಭಾಷೆ ಸೇರ್ಪಡೆ

Tulu language

ಲಕ್ಷಾಂತರ ಜನರ ಸಂವಹನಕ್ಕೆ (communication) ಸಹಾಯ ಮಾಡುತ್ತಿರುವ ಗೂಗಲ್‌ನಲ್ಲಿ ಈಗ ತುಳು ಭಾಷೆ (Tulu language) ಸೇರಿ 110 ಹೊಸ ಭಾಷೆಗಳನ್ನು (new languages) ಅನುವಾದಕ್ಕೆ ಲಭ್ಯವಾಗಿದೆ. ಅನುವಾದದಲ್ಲಿ ಹೊಸ ನವೀಕರಣವನ್ನು ಗೂಗಲ್ (google) ಪ್ರಕಟಿಸಿದ್ದು, ಅಪ್ಲಿಕೇಶನ್ ಮೂಲಕ ವಿವಿಧ ಭಾಷೆಗಳನ್ನು ಅನುವಾದಗೊಳಿಸಲು ಆರ್ಟಿಫಿಷಿಯಲ್ ತಂತ್ರಜ್ಞಾನವನ್ನು ಬಳಸುತ್ತಿರುವುದಾಗಿ ಗೂಗಲ್ ಹೇಳಿದೆ.

PaLM 2 ಭಾಷೆಯ ಮಾದರಿಯ ಬೆಂಬಲದೊಂದಿಗೆ ಗೂಗಲ್ ಈಗ 110 ಹೊಸ ಭಾಷೆಗಳನ್ನು ಅನುವಾದಗೊಳಿಸುತ್ತಿದೆ. ಆಲ್ಫಾಬೆಟ್ ಇಂಕ್ ಕಂಪೆನಿಯು ಇದು ತನ್ನ ಅತಿದೊಡ್ಡ ವಿಸ್ತರಣೆಯಾಗಿದೆ ಎಂದು ಹೇಳಿಕೊಂಡಿದೆ. ಗೂಗಲ್‌ನಲ್ಲಿ ಅನುವಾದವನ್ನು 2006ರಲ್ಲಿ ಪರಿಚಯಿಸಲಾಯಿತು. 2024ರ ಜೂನ್ ವೇಳೆಗೆ ಈ ವೈಶಿಷ್ಟ್ಯವು 243 ಭಾಷೆಗಳನ್ನು ಬೆಂಬಲಿಸುತ್ತದೆ. ಹೆಚ್ಚು ಜನರಿಗೆ ಅನುಕೂಲವಾಗುವಂತೆ ಮಾಡಲು ಈ ವೈಶಿಷ್ಟ್ಯಕ್ಕೆ ಇತ್ತೀಚಿನ ತಂತ್ರಜ್ಞಾನಗಳನ್ನು ಸತತವಾಗಿ ಅನ್ವಯಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.

2022ರಲ್ಲಿ ಕಂಪನಿಯು ಝೀರೋ- ಶಾಟ್ ಮೆಷಿನ್ ಅನುವಾದವನ್ನು ಬಳಸಿಕೊಂಡು 24 ಹೊಸ ಭಾಷೆಗಳನ್ನು ಸೇರಿಸಿತು. ಈ ತಂತ್ರದ ಮೂಲಕ ಯಂತ್ರ ಕಲಿಕೆಯ ಮಾದರಿಗಳು ಹೇಗೆ ಅನುವಾದಿಸಬೇಕೆಂದು ಕಲಿಯಬಹುದು. ಆಗ ಕಂಪೆನಿಯು ತನ್ನ 1,000 ಭಾಷೆಯ ಉಪಕ್ರಮವನ್ನು ಘೋಷಿಸಿತ್ತು. ಉಪಕ್ರಮದ ಭಾಗವಾಗಿ ಕಂಪೆನಿಯು ಪ್ರಪಂಚದಾದ್ಯಂತ ಹೆಚ್ಚು ಮಾತನಾಡುವ 1,000 ಭಾಷೆಗಳನ್ನು ಬೆಂಬಲಿಸುವ ಎಐ ಮಾದರಿಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

ಸುಮಾರು ಅರ್ಧ ಬಿಲಿಯನ್ ಅನುವಾದಿಸಲು ಸಹಾಯ

ಗೂಗಲ್ ತನ್ನ ಅಧಿಕೃತ ಬಿಡುಗಡೆಯಲ್ಲಿ ಹೊಸ ಭಾಷೆಗಳು 614 ಮಿಲಿಯನ್‌ಗಿಂತಲೂ ಹೆಚ್ಚು ಮಾತನಾಡುವವರನ್ನು ಪ್ರತಿನಿಧಿಸುತ್ತವೆ. ಇದರಿಂದಾಗಿ ಪ್ರಪಂಚದ ಜನಸಂಖ್ಯೆಯ ಸುಮಾರು ಎಂಟು ಪ್ರತಿಶತದಷ್ಟು ಜನರ ಭಾಷೆಗಳನ್ನು ಅನುವಾದ ಮಾಡಬಹುದು. ಇವುಗಳಲ್ಲಿ ಕೆಲವು 100 ಮಿಲಿಯನ್‌ಗಿಂತಲೂ ಹೆಚ್ಚು ಮಾತನಾಡುವ ಪ್ರಮುಖ ಭಾಷೆಗಳಾಗಿವೆ. ಆದರೆ ಇತರವು ಸ್ಥಳೀಯ ಜನರ ಸಣ್ಣ ಸಮುದಾಯಗಳಿಂದ ಮಾತನಾಡುತ್ತವೆ.


ಏಳು ಭಾರತೀಯ ಭಾಷೆಗಳು

ಇತ್ತೀಚಿನ ವಿಸ್ತರಣೆಯು ಫೋನ್, ಲುವೊ, ಗಾ, ಕಿಕೊಂಗೊ, ಸ್ವಾತಿ, ವೆಂಡಾ ಮತ್ತು ವುಲ್ಫ್‌ನಂತಹ ಹೆಚ್ಚಿನ ಆಫ್ರಿಕನ್ ಭಾಷೆಗಳನ್ನು ಅಪ್ಲಿಕೇಶನ್‌ಗೆ ಸೇರಿಸಿದೆ. ಹೊಸ ಸೇರ್ಪಡೆಯು ಏಳು ಭಾರತೀಯ ಭಾಷೆಗಳಾದ ಅವಧಿ, ಬೋಡೋ, ಖಾಸಿ, ಕೊಕ್ಬೊರೊಕ್, ಮಾರ್ವಾಡಿ, ಸಂತಾಲಿ ಮತ್ತು ತುಳುವನ್ನು ಒಳಗೊಂಡಿದೆ.

ಹೇಗೆ ಅನ್ವಯ?

ಅನುವಾದಕ್ಕೆ ಹೊಸ ಭಾಷೆಗಳನ್ನು ಹೇಗೆ ಸೇರಿಸುತ್ತದೆ ಎಂಬುದನ್ನು ಗೂಗಲ್ ಉಲ್ಲೇಖಿಸಿದೆ. ಟೆಕ್ ದೈತ್ಯ ಪ್ರಾದೇಶಿಕ ಪ್ರಭೇದಗಳು, ಉಪಭಾಷೆಗಳು ಮತ್ತು ಕಾಗುಣಿತ ಮಾನದಂಡಗಳಂತಹ ಹಲವಾರು ಅಂಶಗಳನ್ನು ಇದಕ್ಕಾಗಿ ಪರಿಗಣಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Tata Motors: ನೆಕ್ಸಾನ್, ಪಂಚ್‌ ಮೂಲಕ ಎಸ್‌ಯುವಿ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದ ಟಾಟಾ ಮೋಟಾರ್ಸ್

ಅನೇಕ ಭಾಷೆಗಳು ಒಂದೇ ಪ್ರಮಾಣಿತ ರೂಪವನ್ನು ಹೊಂದಿರದ ಕಾರಣ ಸಾಮಾನ್ಯವಾಗಿ ಬಳಸುವ ಪ್ರಭೇದಗಳಿಗೆ ಆದ್ಯತೆ ನೀಡುವುದಾಗಿ ಗೂಗಲ್ ಹೇಳಿದೆ. ಪಾಲ್ಎಮ್ 2 ತಂತ್ರಜ್ಞಾನವು ಹಿಂದಿ ಮತ್ತು ಫ್ರೆಂಚ್ ಕ್ರಿಯೋಲ್‌ಗಳಂತಹ ಪರಸ್ಪರ ನಿಕಟ ಸಂಬಂಧ ಹೊಂದಿರುವ ಭಾಷೆಗಳನ್ನು ಕಲಿಯಲು ಸಹಾಯ ಮಾಡುತ್ತದೆ ಎಂದು ಕಂಪೆನಿ ಹೇಳಿದೆ.

ಭಾಷಾಶಾಸ್ತ್ರಜ್ಞರು ಮತ್ತು ಸ್ಥಳೀಯ ಭಾಷಿಕರೊಂದಿಗೆ ಸಹಯೋಗ ಮಾಡುವ ಮೂಲಕ ಕಾಲಾನಂತರದಲ್ಲಿ ಹೆಚ್ಚಿನ ಭಾಷಾ ಪ್ರಭೇದಗಳು ಮತ್ತು ಕಾಗುಣಿತ ಸಂಪ್ರದಾಯಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ ಎಂದು ಗೂಗಲ್ ಹೇಳಿದೆ.

Exit mobile version