ನವದೆಹಲಿ: ಮೈಕ್ರೋಸಾಫ್ಟ್ (Microsoft) ಬೆಂಬಲಿತ ಚಾಟ್‌ಜಿಪಿಟಿ (ChatGPT) ಸದ್ಯ ಜಗತ್ತಿನಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾಗುತ್ತಿಆದೆ. ಬಹುತೇಕ ಟೆಕ್ ಕಂಪನಿಗಳು AI ಆಧರಿತ ಚಾಟ್‌ಬಾಟ್‌ಗಳ ಅಭಿವೃದ್ಧಿಗೆ ಮುಂದಾಗಿವೆ. ಈಗಾಗಲೇ, ಗೂಗಲ್ (Google) ಕೂಡ ತನ್ನದೇ ಆದ ಬಾರ್ಡ್ (BARD) ಬೀಟಾ ವರ್ಷನ್‌ನಲ್ಲಿ ಲಾಂಚ್ ಮಾಡಿದೆ. ಈಗ ಟ್ವಿಟರ್ (Twitter) ಕೂಡ ಎಐ ಆಧರಿತ ಚಾಟ್‌ಬಾಟ್ ಅಭಿವೃದ್ಧಿಗೆ ಮುಂದಾಗಿದ್ದು, ಎಐ ಸಂಶೋಧಕರನ್ನು ನೇಮಕ ಮಾಡಿಕೊಂಡಿದೆ(Elon Musk).
ಟೆಸ್ಲಾ ಮತ್ತು ಟ್ವಿಟರ್ ಮುಖ್ಯಸ್ಥರಾಗಿರುವ ಎಲಾನ್ ಮಸ್ಕ್ ಅವರು, ಇತ್ತೀಚೆಗೆ ಆಲ್ಫಾಬೆಟ್‌ನ ಡೀಪ್‌ಮೈಂಡ್ ಎಐ ಘಟಕವನ್ನು ತೊರೆದ ಸಂಶೋಧಕ ಇಗೊರ್ ಬಾಬುಶ್ಕಿನ್ ಅವರನ್ನು ನೇಮಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಓಪನ್‌ಎಐ ಅಭಿವೃದ್ಧಿಪಡಿಸಿದ ಪಠ್ಯ-ಆಧಾರಿತ ಜಾಟ್‌ಜಿಪಿಟಿ ಚಾಟ್‌ಬಾಟ್, ಗದ್ಯ, ಕವನ ಅಥವಾ ಕಮಾಂಡ್‌ನಲ್ಲಿ ಕಂಪ್ಯೂಟರ್ ಕೋಡ್ ಅನ್ನು ರಚಿಸಬಹುದು. ಸದ್ಯ ಈ ಚಾಟ್‌ಬಾಟ್ ಬಳಕೆಯ ಆಯಾಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟ್ವಿಟರ್ ಕೂಡ ಎಐ ಚಾಟ್‌ಬಾಟ್ ಅಭಿವೃದ್ಧಿಗೆ ಮುಂದಾಗಿರುವುದು ಕುತೂಹಲಕಾರಿಯಾಗಿದೆ.
ಇದನ್ನೂ ಓದಿ: ChatGPT: ನಟ ಶಿವಣ್ಣನಿಗೆ ‘ದಿ ಲೆಗಸಿ’ ಚಿತ್ರಕತೆ ಬರೆದ ಚಾಟ್‌ಜಿಪಿಟಿ! ಹೇಗಿದೆ ಈ ಸಿನಿಮಾ ಕತೆ?
ವಿಶೇಷ ಎಂದರೆ ಚಾಟ್‌ಜಿಪಿಟಿಯನ್ನು ಅಭಿವೃದ್ಧಿಪಡಿಸಿದ ಓಪನ್‌ಎಐ ಸಾರ್ಟ್‌ಅಪ್‌ನಲ್ಲಿ ಎಲಾನ್ ಮಸ್ಕ್ ಕೂಡ ಹೂಡಿಕೆ ಮಾಡಿದ್ದರು. ಇವರೊಂದಿಗೆ ಸಿಲಿಕಾನ್ ವ್ಯಾಲಿ ಹೂಡಿಕೆದಾರ ಸ್ಯಾಮ್ ಅಲ್ಟಮನ್ ಹೂಡಿದ್ದರು. ಆದರೆ, 2018ರಲ್ಲಿ ಅವರು ಬೋರ್ಡ್ ತೊರೆದಿದ್ದರು. ಹೀಗಿದ್ದೂ, ಈ ಚಾಟ್‌ಬಾಟ್ ಅನ್ನು ಎಲಾನ್ ಮಸ್ಕ್ ಸ್ಕೇರಿ ಗೂಡ್ ಎಂದು ಕರೆದಿದ್ದಾರೆ.