Site icon Vistara News

ಥಂಡಾ ಹೊಡೆದ Twitter, ʻಮಸ್ಕ್‌ ಕೈವಾಡʼ ಎಂದ Twitterati!

twitter

ಸಾಮಾಜಿಕ ಜಾಲತಾಣ ಟ್ವಿಟರ್‌ ಗುರುವಾರ ಮುಂಜಾನೆ ದೊಡ್ಡ ಪ್ರಮಾಣದ ಸ್ಥಗಿತತೆಯನ್ನು ಅನುಭವಿಸಿತು. ಗುರುವಾರ ಬೆಳಗ್ಗೆ 8:05ರ ಹೊತ್ತಿಗೆ ಟ್ವಿಟರ್‌ ಸೇವೆಯಲ್ಲಿ ಸಮಸ್ಯೆ ಶುರುವಾಯಿತು. ಸಾವಿರಾರು ಬಳಕೆದಾರರು ʻಒವರ್‌ ಕೆಪಾಸಿಟಿʼ ದೋಷ ಸಂದೇಶ ಬರುತ್ತಿದೆ ಎಂದು ರಿಪೋರ್ಟ್‌ ಮಾಡಿದರು. ʻದಿಸ್‌ ಪೇಜ್‌ ಈಸ್‌ ಡೌನ್‌ʼ ಎಂಬ ಸಂದೇಶಗಳೂ ಕಾಣಿಸಿಕೊಂಡವು.

ಆದರೆ ಟ್ವಿಟರ್‌ನ ಹೋಮ್‌ ಪುಟ ತೆರೆದುಕೊಳ್ಳುತ್ತಿತ್ತು ಹಾಗೂ ʻಎಲ್ಲಾ ಸಿಸ್ಟಮ್‌ಗಳು ಕಾರ್ಯನಿರ್ವಹಿಸುತ್ತಿದೆ’ ಎಂಬ ಮಾಹಿತಿ ಬರುತ್ತಿತ್ತು. ಮುಖ್ಯಪುಟ ಲೋಡ್ ಆಗುತ್ತಿದ್ದರೂ ಟ್ವೀಟ್‌ಗಳನ್ನು ತೆರೆಯಲು ಆಗಲಿಲ್ಲ. ಸುಮಾರು 8.40ರ ನಂತರ ಟ್ವಿಟರ್‌ ಮೊದಲಿನ ಸ್ಥಿತಿಗೆ ಬರಲು ಆರಂಭಿಸಿತು. ಅಮೆರಿಕ ಸೇರಿದಂತೆ ಜಗತ್ತಿನಾದ್ಯಂತ ಸುಮಾರು 50,000 ಬಳಕೆದಾರರು ಈ ಸಮಸ್ಯೆ ಅನುಭವಿಸಿದರು ಎಂದು ತಿಳಿದುಬಂದಿದೆ.

ಫೆಬ್ರವರಿಯಲ್ಲಿ ಒಮ್ಮೆ ದೊಡ್ಡ ತಾಂತ್ರಿಕ ಸಮಸ್ಯೆ ಅನುಭವಿಸಿದ ಬಳಿಕ ಇದೇ ಮೊದಲ ಬಾರಿಗೆ ಪ್ರಮುಖ ತೊಂದರೆಯನ್ನು ಟ್ವಿಟರ್‌ ಎದುರಿಸಿದೆ. ಫೆಬ್ರವರಿಯ ಒಂದೇ ವಾರದಲ್ಲಿ ಎರಡು ಬಾರಿ ಟ್ವಟರ್‌ ಡೌನ್‌ ಆಗಿತ್ತು. ಅಮೆರಿಕದ ಹಲವು ಭಾಗಗಳಲ್ಲಿ ಬಳಕೆದಾರರು ತಮ್ಮ ಖಾತೆಗಳನ್ನು ತೆರೆಯಲು ಆಗಲಿಲ್ಲ.

ಎಲಾನ್‌ ಮಸ್ಕ್‌ ಅವರ ಮೇಲೆ ಕಾನೂನು ಕ್ರಮಕ್ಕಾಗಿ ಕೇಸು ದಾಖಲಿಸಿದ ಕೆಲವೇ ದಿನಗಳ ಬಳಿಕ ಟ್ವಿಟರ್‌ ಈ ಸಮಸ್ಯೆ ಎದುರಿಸಿದೆ. ಬಾಟ್‌ಗಳ ಬಗ್ಗೆ ಮಾಹಿತಿ ನೀಡಲು, ಸ್ಪ್ಯಾಮ್‌ ಚಟುವಟಿಕೆ ನಿಯಂತ್ರಿಸಲು ಟ್ವಿಟರ್‌ ವಿಫಲವಾಗಿದೆ ಎಂದು ಮಸ್ಕ್‌ ಆರೋಪಿಸಿದ್ದಲ್ಲದೆ, 44 ಶತಕೋಟಿ ಡಾಲರ್‌ ಮೊತ್ತದ ಖರೀದಿ ವ್ಯವಹಾರದಿಂದ ಹಿಂದೆ ಸರಿದಿದ್ದರು.

ಈ ಕುರಿತ ವಿನೋದದ ಟ್ವೀಟ್‌ಗಳೂ ಬಳಿಕೆ ಕಾಣಿಸಿಕೊಂಡಿವೆ. ʼʼಈ ತೊಂದರೆಗೆ ಎಲಾನ್‌ ಮಸ್ಕ್‌ ಕಾರಣʼ ಎಂದು ಹಲವರು ವಿನೋದವಾಡಿದರು.

ಇದನ್ನೂ ಓದಿ: ಎಲಾನ್‌ ಮಸ್ಕ್‌ ವಿರುದ್ಧ ಕೇಸ್‌ ದಾಖಲಿಸಿದ ಟ್ವಿಟರ್, ಕಾನೂನು ಸಂಘರ್ಷ ಆರಂಭ

Exit mobile version