Site icon Vistara News

Twitter | ಟ್ವಿಟರ್‌ಗೆ ಮತ್ತೊಬ್ಬ ಭಾರತೀಯ ಸಿಇಒ? ಮಸ್ಕ್‌ಗೆ ಶ್ರೀರಾಮ್ ಕೃಷ್ಣನ್ ಹೆಲ್ಪ್

Sriram Krishnan

ನವ ದೆಹಲಿ: ಎಲಾನ್ ಮಸ್ಕ್ ಮಾಲೀಕತ್ವವನ್ನು ಪಡೆಯುವ ಮುಂಚೆ ಟ್ವಿಟರ್‌ (Twitter) ಕಂಪನಿಗೆ ಭಾರತೀಯ ಪರಾಗ್ ಅಗ್ರವಾಲ್ ಸಿಇಒ ಆಗಿದ್ದರು. ಆದರೆ, ಮಸ್ಕ್ ಅವರನ್ನು ಮನೆಗೆ ಕಳುಹಿಸಿದ್ದಾರೆ. ಈಗ ಅವರೇ ಸಿಇಒ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಆದರೆ, ಶೀಘ್ರವೇ ಮತ್ತೊಬ್ಬ ಭಾರತೀಯನೇ ಸಿಇಒ ಸ್ಥಾನವನ್ನು ಅಲಂಕರಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಯಾಕೆಂದರೆ, ಟ್ವಿಟರ್ ಖರೀದಿಯಲ್ಲಿ ಎಲಾನ್ ಮಸ್ಕ್‌ಗೆ ಹೆಲ್ಪ್ ಮಾಡುತ್ತಿರುವುದು ಶ್ರೀರಾಮ್ ಕೃಷ್ಣನ್ (Sriram krishnan). ಇವರೂ ಭಾರತದವರೇ!

16z ಕ್ರಿಪ್ಟೋ ಜನರಲ್ ಪಾರ್ಟನರ್ ಆಗಿರುವ ಶ್ರೀರಾಮ್ ಕೃಷ್ಣನ್ ಅವರು ತಾತ್ಕಾಲಿಕವಾಗಿ ಎಲಾನ್ ಮಸ್ಕ್‌ಗೆ ಹೆಲ್ಪ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಅವರೇ ಟ್ವಿಟರ್ ಸಿಇಒ ಆಗುವುದನ್ನು ಅಲ್ಲಗಳೆಯುವಂತಿಲ್ಲ ಎಂಬ ಚರ್ಚೆಗಳು ಶುರುವಾಗಿವೆ.

ಟ್ವಿಟರ್ ಮಾಲೀಕತ್ವವನ್ನು ಪಡೆಯುತ್ತಿದ್ದಂತೆ ಎಲಾನ್ ಮಸ್ಕ್ ಭಾರೀ ಬದಲಾವಣೆಗಳನ್ನು ಮಾಡಿದ್ದಾರೆ. ಈ ಯೋಜನೆಯ ಹಿಂದೆ ಕೆಲಸ ಮಾಡಿದ್ದು ಇದೇ ಶ್ರೀರಾಮ್ ಕೃಷ್ಣನ್ ಮತ್ತು ಅವರ ತಂಡ. ಹಾಗಾಗಿ, ಮುಂಬರುವ ದಿನಗಳಲ್ಲೂ ಇವರೇ ಅದರ ನೇತೃತ್ವವನ್ನು ವಹಿಸಿಕೊಳ್ಳಬಹುದು ಚರ್ಚೆಗಳು ಕಾರ್ಪೊರೇಟ್ ವಲಯದಲ್ಲಿ ಜೋರಾಗಿದೆ.

ಕೃಷ್ಣನ್ ಅವರು ಟೆಕ್ನಾಲಿಜಿಸ್ಟ್ ಎಂಜಿನಿಯರ್ ಆಗಿದ್ದು, ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. ಇಲ್ಲಿವರೆಗೆ 23 ಹೂಡಿಕೆಗಳನ್ನು ಮಾಡಿದ್ದಾರೆ. ಲಾಸ್ಸೋ ಲ್ಯಾಬ್ಸ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಇದು ಅವರು ಇತ್ತೀಚಿನ ಹೂಡಿಕೆಯಾಗಿದೆ. ಅಸಲಿಗೆ ಈ ಮೊದಲು ಟ್ವಿಟರ್‌ನಲ್ಲಿ ಕೆಲಸ ಕೂಡ ಮಾಡಿದ್ದಾರೆ. ಟ್ವಿಟರ್‌ ಮಾತ್ರವಲ್ಲದೇ, ಮೆಟಾ, ಮೈಕ್ರೋಸಾಫ್ಟ್‌ನಲ್ಲಿ ಪ್ರಾಡಕ್ಟ್ ಮತ್ತು ಎಂಜಿನಯಿರಿಂಗ್ ಟೀಮ್ ಲೀಡ್ ಮಾಡಿದ್ದರು.

ಇದನ್ನೂ ಓದಿ | Twitter | ಆಡಳಿತ ಮಂಡಳಿ ವಜಾ, ಟ್ವಿಟರ್‌ಗೆ ಮಸ್ಕ್ ಓನರ್, ಡೈರೆಕ್ಟರ್, ಸಿಇಒ!

Exit mobile version