Site icon Vistara News

Direct Message ಆಯ್ಕೆ ತೆಗೆದು ಹಾಕಿದ ಟ್ವಿಟರ್!

Twitter Removed option to send direct message Says some reports

ನವದೆಹಲಿ: ಮೈಕ್ರೋ ಬ್ಲಾಗಿಂಗ್ ವೇದಿಕೆಯಾಗಿರುವ ಟ್ವಿಟರ್ (Twitter) ಮತ್ತೊಂದು ಬದಲಾವಣೆಯನ್ನು ಮಾಡಿದೆ. ಆಂಡ್ರಾಯ್ಡ್(Android) ಮತ್ತು ಐಒಎಸ್(iOS) ಅಪ್ಲಿಕೇಷನ್‌ಗಳಲ್ಲಿನ ಪ್ರೊಫೈಲ್ ಪುಟದಿಂದ ನೇರವಾಗಿ ಮತ್ತೊಂದು ಖಾತೆಗೆ ಸಂದೇಶವನ್ನು ಕಳುಹಿಸುವ ಆಯ್ಕೆಯನ್ನು (Direct Message) ಟ್ವಿಟರ್ ತೆಗೆದು ಹಾಕಿದೆ ಎಂದು ಹೇಳಲಾಗುತ್ತಿದೆ.

ಸಾಮಾನ್ಯವಾಗಿ ನೋಟಿಫಿಕೇಷನ್ ಬಟನ್ಸ್‌ ಮುಂದೆ ಕಾಣುತ್ತಿದ್ದ ಡಿಎಂ ಬಟನ್ ಕಣ್ಮರೆಯಾಗಿದೆ ಎಂದು 9To5Google ವರದಿ ಮಾಡಿದೆ. ಬಹುಶಃ ಇದೊಂದು ತಾಂತ್ರಿಕ ದೋಷವೂ ಆಗಿರಬಹುದು ಎಂದೂ ಹೇಳಲಾಗುತ್ತಿದೆ. ಈಗಾಗಲೇ ಸೇವಯಲ್ಲಿದ್ದ ನೇರ ಸಂದೇಶ ಆಯ್ಕೆಯನ್ನು ಉದ್ದೇಶಪೂರ್ವಕವಾಗಿಯೇ ಕಂಪನಿ ಹಿಂಪಡೆದಿದೆಯೇ ಎಂಬುದನ್ನು ಈಗಲೇ ಹೇಳುವುದು ಕಷ್ಟ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Tweaks In Twitter | ಫೆಬ್ರವರಿಯಿಂದ ಟ್ವಿಟರ್‌ನಲ್ಲಿ 280 ಪದಗಳ ಮಿತಿ ರದ್ದು, ದೀರ್ಘ ಟ್ವೀಟ್‌ಗಳಿಗೆ ಅವಕಾಶ: ಮಸ್ಕ್‌

ಏತನ್ಮಧ್ಯೆ, ಬಳಕೆದಾರರು ಸಂದೇಶಗಳ ಟ್ಯಾಬ್‌ನಲ್ಲಿ ಬಯಸಿದ ಖಾತೆಯನ್ನು ನೋಡುವ ಮೂಲಕ ನೇರ ಸಂದೇಶವನ್ನು ಕಳುಹಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಕಳೆದ ವಾರ, ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಅವರು ಮುಂದಿನ ದಿನಗಳಲ್ಲಿ ಜಾಹೀರಾತು ರಹಿತ ಮತ್ತು ಹೆಚ್ಚಿನ ಮೊತ್ತ ಚಂದಾದಾರಿಕೆ ದೊರೆಯಲಿದೆ ಎಂದು ಘೋಷಣೆ ಮಾಡಿದ್ದರು.

Exit mobile version