Site icon Vistara News

UDGAM Portal: ಕ್ಲೈಮ್‌ ಮಾಡದ ಠೇವಣಿ ಮಾಹಿತಿಗೆ ವೆಬ್ಸೈಟ್ ಆರಂಭಿಸಿದ ಆರ್‌ಬಿಐ! ನೀವು ಚೆಕ್ ಮಾಡ್ಕೊಬಹುದು

UDGAM Portal

ನವದೆಹಲಿ: ಹಲವು ಬ್ಯಾಂಕುಗಳಲ್ಲಿ (Indian Banks) ಕ್ಲೈಮ್ ಮಾಡದೇ ಇರುವ ಠೇವಣಿಗಳಿವೆ(Unclaimed Deposits). ಈ ಠೇವಣಿಗಳನ್ನು ಸರಿಯಾಗಿ ಟ್ರ್ಯಾಕ್ ಮಾಡಲು ಮತ್ತು ಅವುಗಳ ಬಗ್ಗೆ ಮಾಹಿತಿಯನ್ನು ಒದಗಿಸಲು ಭಾರತೀಯ ರಿಸರ್ವ್ ಬ್ಯಾಂಕ್(Reserve Bank of India) ಕೇಂದ್ರೀಕೃತ ಅನ್ ಕ್ಲೈಮ್ಡ್ ಡೆಪಾಸಿಟ್ಸ್ – ಗೇಟ್ ವೇ ಟು ಆಕ್ಸೆಸ್ ಇನ್ಫರ್ಮೇಷನ್ (UDGAM Portal- ಉದ್ಗಮ್) ಪೋರ್ಟಲ್ (Web Portal) ಆರಂಭಿಸಿದೆ.ಈ ಪೋರ್ಟಲ್ ಮೂಲಕ ಗ್ರಾಹಕರಿಗೆ ಕ್ಲೈಮ್ ಮಾಡದ ಠೇವಣಿಗಳ ಬಗ್ಗೆ ಸಂಪೂರ್ಣ ಮಾಹಿತಿ ಒಂದೆಡೆ ದೊರೆಯಲಿದೆ. ಯುಡಿಜಿಎಎಂ ಜಾಲತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.

ಕ್ಲೈಮ್ ಮಾಡದ ಠೇವಣಿ ಮೊತ್ತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಕಾಲ ಕಾಲಕ್ಕೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳನ್ನು ಆರ್‌ಬಿಐ ಮಾಡುತ್ತಾ ಬಂದಿದೆ. ಕ್ಲೈಮ್ ಮಾಡದ ಠೇವಣಿಗಳನ್ನು ಕ್ಲೈಮ್ ಮಾಡಲು ಆಯಾ ಬ್ಯಾಂಕ್‌ಗಳನ್ನು ಗುರುತಿಸಲು ಮತ್ತು ಸಂಪರ್ಕಿಸಲು ಜನರನ್ನು ಆರ್‌ಬಿಐ ಪ್ರೋತ್ಸಾಹಿಸುತ್ತದೆ ಎಂದು ದೇಶದ ಕೇಂದ್ರ ಬ್ಯಾಂಕ್ ಹೇಳಿದೆ.

ವೆಬ್ ಪೋರ್ಟಲ್‌ ಆರಂಭವು, ಬಳಕೆದಾರರಿಗೆ ತಮ್ಮ ಕ್ಲೈಮ್ ಮಾಡದ ಠೇವಣಿ / ಖಾತೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಠೇವಣಿ ಮೊತ್ತವನ್ನು ಕ್ಲೈಮ್ ಮಾಡಲು ಅಥವಾ ಅವರ ಠೇವಣಿ ಖಾತೆಗಳನ್ನು ಆಯಾ ಬ್ಯಾಂಕ್‌ಗಳಲ್ಲಿ ಕಾರ್ಯಗತಗೊಳಿಸಲು ಅನುವು ಮಾಡಿಕೊಡುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಯುಡಿಜಿಎಎಂ ಜಾಲತಾಣವನ್ನು ರಿಸರ್ವ್ ಬ್ಯಾಂಕ್ ಇನ್ಫಾರ್ಮೇಷನ್ ಟೆಕ್ನಾಲಜಿ ಪ್ರೈ ಲಿ.(ReBIT), ಇಂಡಿಯನ್ ಫೈನಾನ್ಷಿಯಲ್ ಟೆಕ್ನಾಲಜಿ ಆ್ಯಂಡ್ ಅಲೈಡ್ ಸರ್ವೀಸಸ್(IFTAS) ಮತ್ತು ಭಾಗಿದಾರ ಬ್ಯಾಂಕುಗಳ ನೆರವಿನೊಂದಿಗೆ ರೂಪಿಸಲಾಗಿದೆ.

UDGAM Portal: ಯಾವೆಲ್ಲ ಬ್ಯಾಂಕುಗಳಿವೆ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಪಂಜಾಬ್ ನ್ಯಾಷನಲ್ ಬ್ಯಾಂಕ್(PNB), ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ(Central Bank of India), ಧನಲಕ್ಷ್ಮೀ ಬ್ಯಾಂಕ್ ಲಿ.(Dhanlaxmi Bank ltd), ಸೌತ್ ಇಂಡಿಯನ್ ಬ್ಯಾಂಕ್ ಲಿ.(South Indian Bank Ltd) ಮತ್ತು ಸಿಟಿ ಬ್ಯಾಂಕ್ ಇಂಡಿಯಾ ಲಿ.(City Bank India ltd) ಬ್ಯಾಂಕುಗಳ ಕ್ಲೈಮ್ ಮಾಡಿರದ ಠೇವಣಿಗಳ ಮಾಹಿತಿ ಈ ಯುಡಿಜಿಎಎಂ ಜಾಲತಾಣದಲ್ಲಿ ದೊರೆಯಲಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಬ್ಯಾಂಕುಗಳು ಈ ಜಾಲತಾಣವನ್ನು ಸೇರ್ಪಡೆಯಾಗಲಿವೆ.

ಈ ಸುದ್ದಿಯನ್ನೂ ಓದಿ: Unclaimed deposits : ಬ್ಯಾಂಕ್‌ಗಳಲ್ಲಿ ವಾರಸುದಾರಿಕೆ ಇಲ್ಲದ ಹಣ 35,000 ಕೋಟಿ ರೂ.ಗೆ ಇಳಿಕೆ

ಅನ್‌ಕ್ಲೈಮ್ ಠೇವಣಿ ಚೆಕ್ ಮಾಡುವುದು ಹೇಗೆ?

-ಮೊದಲಿಗೆ ಉದ್ಗಮ್ ಪೋರ್ಟ್‌ಲ್ ತೆರೆಯಿರಿ. ನೋಂದಣಿ ಮಾಡಿಕೊಳ್ಳಿ
-ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿ ನಿಮ್ಮ ಖಾತೆಗೆ ಲಾಗಿನ್ ಮಾಡಿ.
-ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
-OTP ನಮೋದಿಸಿದ ಬಳಿಕ ಹೊಸದೊಂದು ಪುಟ ತೆರೆದುಕೊಳ್ಳುತ್ತದೆ.
-ಈ ಪುಟದಲ್ಲಿ ನೀವು ಖಾತೆದಾರರ ಹೆಸರು ಮತ್ತು ಬ್ಯಾಂಕ್ ಹೆಸರು ನಮೂದಿಸಬೇಕು
-ನೀವು ಪ್ಯಾನ್ ಸಂಖ್ಯೆ, ವೋಟೆರ್ ಐಡಿ ಸಂಖ್ಯೆ, ಡ್ರೈವಿಂಗ್ ಲೈಸೆನ್ಸ್ ಸಂಖ್ಯೆ ಮತ್ತು ಜನ್ಮ ದಿನಾಂಕದಂತಹ ಐದು ಮಾಹಿತಿಗಳ ಒಂದನ್ನು ನಮೂದಿಸ ಬೇಕಾಗುತ್ತದೆ.
-ಅನ್‌ಕ್ಲೈಮ್ ಠೇವಣಿ ಇದ್ದರೆ ಸರ್ಚ್ ಮಾಡಿದಾಗ ತೋರಿಸುತ್ತದೆ. ಇಲ್ಲದಿದ್ದರೆ ಇಲ್ಲ ಎಂಬ ಮಾಹಿತಿ ನೀಡಲಾಗುತ್ತದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version