ನವ ದೆಹಲಿ: ವಾಟ್ಸ್ಆ್ಯಪ್ ಜಗತ್ತಿನ ಅತ್ಯಂತ ಜನಪ್ರಿಯ ಮೆಸೇಜಿಂಗ್ ವೇದಿಕೆ ಎಂಬುದರಲ್ಲಿ ಅನುಮಾನವೇ ಇಲ್ಲ. ಕೆಲವು ಮಿತಿಗಳ ನಡುವೆಯೂ ಅದು ಬಹುಜನರ ಬಳಕೆಯ ಪ್ರಥಮ ಆದ್ಯತೆಯ ಆ್ಯಪ್ ಆಗಿದೆ. ಹಾಗೆಯೇ, ವಾಟ್ಸ್ಆ್ಯಪ್ ಒಡೆತನ ಹೊಂದಿರುವ ಮೆಟಾ ಕೂಡ ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಹೊಸ ಹೊಸ ಫೀಚರ್(WhatsApp New Feature)ಗಳನ್ನು ಸೇರಿಸುತ್ತಲೇ ಇರುತ್ತದೆ. ನಿಯಮಿತವಾಗಿ ಹೊಸ ವೈಶಿಷ್ಟ್ಯಗಳನ್ನು ನಾವು ಕಾಣುತ್ತಿವೆ. ಈಗ ಗೊತ್ತಾಗಿರುವ ಮಾಹಿತಿಯ ಪ್ರಕಾರ, ವಾಟ್ಸ್‌ಆ್ಯಪ್ ಮತ್ತೆ ಒಂದಿಷ್ಟು ಇಂಟರೆಸ್ಟಿಂಗ್ ಫೀಚರ್ಸ್ ಆ್ಯಡ್ ಮಾಡುತ್ತಿದೆ!
ಈಗ ವರದಿಯಾಗಿರುವ ಪ್ರಕಾರ ವಾಟ್ಸ್ಆ್ಯಪ್ ಸ್ಕ್ರೀನ್ ಶಾಟ್ ತೆಗೆಯುವುದನ್ನು ನಿರ್ಬಂಧಿಸುವ ಸಾಧ್ಯತೆ ಇದೆ. ಈ ಹೊಸ ಫೀಚರ್‌ಗೆ ಸಂಬಂಧಿಸಿದಂತೆ ವಾಟ್ಸ್‌ಆ್ಯಪ್ ಕೆಲಸ ಮಾಡುತ್ತಿದೆ ಎಂದು ತಿಳಿದು ಬಂದಿದೆ. ಸದ್ಯ ಈ ಫೀಚರ್ ಬೀಟಾ ವರ್ಷನ್‌ನಲ್ಲಿದ್ದು, ಶೀಘ್ರವೇ ಎಲ್ಲ ಬಳಕೆದಾರರಿಗೂ ಲಭ್ಯವಾಗುವ ಸಾಧ್ಯತೆ ಇದೆ. ಸೆಟ್ಟಿಂಗ್ಸ್‌ನಲ್ಲಿ ಕಂಪನಿಯು ಸ್ಕ್ರೀನ್‌ಶಾಟ್ ಬ್ಲಾಕ್ ಮತ್ತು ಸ್ಕ್ರೀನ್ ರೆಕಾರ್ಡಿಂಗ್ ಬ್ಲಾಕ್ ಆಯ್ಕೆಗಳನ್ನು ಒದಗಿಸಲಿದೆ. ಬಳಕೆದಾರರು ಈ ಆಪ್ಷನ್‌ಗಳನ್ನು ಸಕ್ರಿಯಗೊಳಿಸಿದರೆ, ಯಾವುದೇ ಮೀಡಿಯಾ ಫೈಲ್‌ನ ಸ್ಕ್ರೀನ್ ಶಾಟ್ ಆಗಲಿ, ಸ್ಕ್ರೀನ್ ರೆಕಾರ್ಡಿಂಗ್ ಆಗಲೀ ಸಾಧ್ಯವಾಗುವುದಿಲ್ಲ.
ವ್ಯೂ ಒನ್ಸ್ ಸೇರಿದಂತೆ ಇನ್ನಿತರ ನಿಮ್ಮ ಖಾಸಗಿ ಮಾಹಿತಿಯನ್ನು ಬೇರೆಯವರು ರೆಕಾರ್ಡ್ ಮಾಡಿಕೊಳ್ಳಲು ಈ ಫೀಚರ್ ನಿರ್ಬಂಧಿಸಲಿದೆ. ಖಾಸಗಿ ಮಾಹಿತಿಯ ರಕ್ಷಣೆಯಲ್ಲಿ ಈ ಹೊಸ ಫೀಚರ್ ಹೆಚ್ಚು ಪರಿಣಾಮಕಾರಿಯಾಗಬಲ್ಲದು ಎನ್ನಲಾಗುತ್ತಿದೆ. ಈ ಹಿಂದೆ, ವಾಟ್ಸ್ಆ್ಯಪ್ ಚಾಟ್ ಡೈನಾಮಿಕ್ಸ್, ಹೊಸ ಎಮೋಜಿಗಳು, ಪ್ರೈವೇಸಿ ಮತ್ತು ಫನ್ ಫೀಚರ್ಸ್ ಆ್ಯಡ್ ಮಾಡಿದೆ.
ಸ್ಕ್ರೀನ್ ಶಾಟ್ ನಿರ್ಬಂಧ ಮಾತ್ರವಲ್ಲದೇ ಇನ್ನೂ ಕೆಲವು ಹೊಸ ಫೀಚರ್‌ಗಳ ಕುರಿತು ವಾಟ್ಸ್ಆ್ಯಪ್ ಕೆಲಸ ಮಾಡುತ್ತಿದೆ ಎಂದು ತಿಳಿದು ಬಂದಿದೆ. ವಾಟ್ಸ್ಆ್ಯಪ್ ಸ್ಟೇಟಸ್ ಮತ್ತು ಲಿಂಕ್‌ಗೆ ಸಂಬಂಧಿಸಿದಂತೆ ಹೊಸ ಫೀಚರ್‌ವೊಂದರ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ವಾಟ್ಸ್ಆ್ಯಪ್ ಬಿಸಿನೆಸ್‌ಗೂ ಹೊಸ ಬಿಸಿನೆಸ್ ಟೂಲ್ ಟ್ಯಾಬ್ ದೊರೆಯಲಿದೆ. ವಾಟ್ಸ್ಆ್ಯಪ್ ಡೆಸ್ಕ್‌ಟಾಪ್ ವರ್ಷನ್‌ಗೆ ಸೈಡ್‌ಬಾರ್ ಮತ್ತು ಸ್ಟೇಟಸ್ ರಿಪ್ಲೈಸ್ ಫೀಚರ್ ಕೂಡ ಅಪ್‌ಡೇಟ್ ಆಗಲಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ | WhatsApp Edit | ಇನ್ನು ಮುಂದೆ ವಾಟ್ಸ್ಆ್ಯಪ್ ಮೆಸೇಜ್ ಎಡಿಟ್ ಮಾಡಬಹುದು! ಆದರೆ..,