ನವದೆಹಲಿ: ಮೆಟಾ(Meta) ಒಡೆತನದ ಜನಪ್ರಿಯ ಮೆಸೇಜಿಂಗ್ ಆ್ಯಪ್ ಆಗಿರುವ ವಾಟ್ಸಾಪ್ ಮತ್ತೊಂದು ಹೊಸ ಫೀಚರ್ (WhatsApp New Feature) ಲಾಂಚ್ ಮಾಡಲು ಹೊರಟಿದೆ. ವಾಟ್ಸಾಪ್ ಚಾಟ್ ಮತ್ತು ಗ್ರೂಪ್‌ಗಳಲ್ಲಿ ಬಳಕೆದಾರರಿಗೆ ಸಂದೇಶಗಳನ್ನು ಪಿನ್ ಮಾಡಲು ಈ ಹೊಸ ಫೀಚರ್ ಅವಕಾಶ ಮಾಡಿ ಕೊಡಲಿದೆ ಎಂದು ಹೇಳಲಾಗುತ್ತಿದೆ. ಅಂದರೆ, ವಾಟ್ಸಾಪ್ ಗ್ರೂಪ್‌ನಲ್ಲಿ ಮಹತ್ವದ ಸಂದೇಶಗಳನ್ನು ಮೇಲ್ಗಡೆ ಭಾಗಕ್ಕೆ ಪಿನ್ ಮಾಡಬಹುದು. ಇದರಿಂದ ಮಹತ್ವದ ಸಂದೇಶವು ಕಳೆದು ಹೋಗುವುದು ತಪ್ಪಲಿದೆ.
ವಾಟ್ಸಾಪ್‌ನ ಈ ಹೊಸ ಫೀಚರ್ ಕುರಿತು WABetaInfo ವರದಿ ಮಾಡಿದ್ದು, ಒಂದು ವೇಳೆ, ಈ ಫೀಚರ್ ಅನ್ವಯ ಮೆಸೇಜ್ ಅನ್ನು ಪಿನ್ ಮಾಡಿದ್ದರೆ ಮತ್ತು ಅದನ್ನು ಸ್ವೀಕರಿಸುವ ಬಳಕೆದಾರ ಹಳೆಯ ಆವೃತ್ತಿಯ ವಾಟ್ಸಾಪ್ ಬಳಸುತ್ತಿದ್ದರೆ, ಆಗ ಹೊಸ ಆವೃತ್ತಿಗೆ ಅಪ್‌ಗ್ರೇಡ್ ಮಾಡಲು ಕೇಳುವ ಸಂದೇಶವನ್ನು ತೋರಿಸುತ್ತದೆ. ಆಗ ಬಳಕೆದಾರರು ವಾಟ್ಸಾಪ್ ಅಪ್‌ಡೇಟ್ ಮಾಡಿದರೆ, ಪಿನ್ ಮಾಡಿದ ಸಂದೇಶವು ಅವರಿಗೆ ಗೋಚರಿಸುತ್ತದೆ.
ಮೆಸೇಜ್‌ಗಳನ್ನು ಪಿನ್ ಮಾಡುವ ಫೀಚರ್ ಮಾತ್ರವಲ್ಲದೇ, ವಾಟ್ಸಾಪ್ ಕಾಲಿಂಗ್ ಶಾರ್ಟ್‌ಕಟ್ ರಚಿಸಲು ಅನುಕೂಲವಾಗುವ ಸೌಲಭ್ಯವನ್ನು ಕಲ್ಪಿಸುವತ್ತ ಗಮನ ಹರಿಸಿದೆ ಎಂದು ತಿಳಿದು ಬಂದಿದೆ. ಒಂದೇ ವ್ಯಕ್ತಿಗೆ ಪದೇ ಪದೇ ಕರೆ ಮಾಡುವ ಮತ್ತು ಅದೇ ಪ್ರಕ್ರಿಯೆಯ ಮೂಲಕ ಮತ್ತೆ ಮತ್ತೆ ಹೋಗಲು ಬಯಸದ ಬಳಕೆದಾರರಿಗೆ ಈ ಫೀಚರ್ ಹೆಚ್ಚು ಲಾಭವಾಗುತ್ತದೆ.