Site icon Vistara News

ChatGPT: ಏನಿದು ಚಾಟ್‌ಬಾಟ್? ಮನುಷ್ಯರ ಕೆಲಸ ಕಿತ್ತುಕೊಳ್ಳುತ್ತಾ?

openai chatgpt

openai chatgpt

ಇತ್ತೀಚೆಗೆ ಕೆಲವು ದಿನಗಳಿಂದ ಮಾಹಿತಿ ತಂತ್ರಜ್ಞಾನ ಹಾಗೂ ಸೋಶಿಯಲ್‌ ಮೀಡಿಯಾ ಫ್ಲಾಟ್‌ಫಾರಂಗಳಲ್ಲಿ ChatGPT ಕುರಿತು ತುಂಬಾ ಮಾತುಕತೆಗಳು ಕೇಳಿಬರುತ್ತಿವೆ. ಇದು ನೀಡುವ ಮಾಹಿತಿ, ನಿಖರತೆ, ಚಾಟ್‌ ಮಾಡುವ ಸಾಮರ್ಥ್ಯ, ಇತ್ಯಾದಿಗಳ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಜತೆಜತೆಗೇ, ಮುಂದಿನ ದಿನಗಳಲ್ಲಿ ಇದು ಲಕ್ಷಾಂತರ ಮನುಷ್ಯರ ಉದ್ಯೋಗವನ್ನೂ ಕಿತ್ತುಕೊಳ್ಳಬಹುದು ಎಂಬ ಆತಂಕವೂ ವ್ಯಕ್ತವಾಗುತ್ತಿದೆ. ಏನಿದು ChatGPT? ಏನಿದರ ಕೆಲಸ, ಪ್ರಯೋಜನ? ಇದರ ಸಾಮರ್ಥ್ಯ, ಮಿತಿಯೇನು? ನಿಜಕ್ಕೂ ಆತಂಕವಿದೆಯಾ? ನೋಡೋಣ ಬನ್ನಿ.

ಏನಿದು ChatGPT?

ಇದೊಂದು ಯಂತ್ರ ಕಲಿಕೆ ಆಧರಿಸಿ ತಯಾರಿಸಲಾದ ಭಾಷಾ ಮಾಡೆಲ್.‌ OpenAI ಎಂಬ ಕೃತಕ ಬುದ್ಧಿಮತ್ತೆ ಅಭಿವೃದ್ಧಿ ಸಂಸ್ಥೆ ಸಿದ್ಧಪಡಿಸಿರುವ ಈ ಮಾದರಿ, ಸರಳವಾಗಿ ಹೇಳಬೇಕೆಂದರೆ ಉತ್ತರಿಸುವ ರೋಬಾಟ್.‌ GPT-3.5 ಎಂಬುದು ಇದು ಬಳಸುವ ಕಂಪ್ಯೂಟರ್‌ ಭಾಷೆ. ಕೇಳುಗನ ಪ್ರಶ್ನೆಗಳಿಗೆ ಇದು ನಿಖರವಾಗಿ ಉತ್ತರಿಸುತ್ತದೆ. ʼʼಬಾಳಿನ ಅರ್ಥವೇನು?ʼʼ ʼʼಚಾಟ್‌ಜಿಪಿಟಿಯಿಂದ ಮನುಷ್ಯರ ಉದ್ಯೋಗ ಹೋಗುತ್ತದೆಯಾ?ʼʼ ”ಭಾರತದ ಶ್ರೇಷ್ಠ ಕಾದಂಬರಿಕಾರರು ಯಾರು?ʼʼ ಎಂಬಂಥ ಪ್ರಶ್ನೆಗಳಿಗೂ ಇದು ಉತ್ತರಿಸುತ್ತದೆ. ಚಾಟ್‌ಬಾಟ್‌ಗಳು ಹೊಸತಲ್ಲ. ಆದರೆ ಇದು ಹೆಚ್ಚು ವಿಸ್ತೃತವಾಗಿ, ಸಂತುಲಿತವಾಗಿ ಇದನ್ನು ಮಾಡುತ್ತದೆ.

ಯಾರು ತಯಾರಿಸಿದವರು?

ಸ್ಯಾನ್‌ ಫ್ರಾನ್ಸಿಸ್ಕೋ ಮೂಲದ OpenAI ಎಂಬ ಕೃತಕ ಬುದ್ಧಿಮತ್ತೆ ಕಂಪನಿಯು ಈ ಬಾಟ್‌ ಅನ್ನು ಸಿದ್ಧಪಡಿಸಿದೆ. ಈ ಕಂಪನಿಯಲ್ಲಿ ಇದೀಗ ಮೈಕ್ರೋಸಾಫ್ಟ್‌ ಕೂಡ 100 ಕೋಟಿ ಡಾಲರ್‌ಗಳ ಹೂಡಿಕೆ ಮಾಡಿದ್ದು, ಈ ದೈತ್ಯ ಕಂಪನಿ ಕೂಡ ಈ ಚಾಟ್‌ಬಾಟ್‌ ತಂತ್ರಜ್ಞಾನದ ಅಗಾಧ ಸಾಧ್ಯತೆಗಳನ್ನು ಗುರುತಿಸಿದೆ ಎಂದಾಯಿತು.

ಏನು ಮಾಡಬಲ್ಲದು?

ಹೇಗೆ ಕೆಲಸ ಮಾಡುತ್ತದೆ?

ಲಕ್ಷಾಂತರ ಡೇಟಾವನ್ನು ಮನುಷ್ಯರ ಮೂಲಕ ಫೀಡ್‌ ಮಾಡಿಸಿ ಈ ಭಾಷಾ ಮಾಡೆಲ್‌ ರೂಪಿಸಲಾಗಿದೆ. ಈ ಹಿಂದೆ ಮಾಡಲಾದ InstructGPTಯಂತೆಯೇ ಇದನ್ನೂ ಸಿದ್ಧಪಡಿಸಲಾಗಿದೆ. ಆದರೆ ತುಸು ವ್ಯತ್ಯಾಸವಿದೆ. ಫೀಡ್‌ಬ್ಯಾಕ್‌ ನೀಡಿದ ಮನುಷ್ಯರು ಫೀಡ್‌ ಮಾಡುವವರಾಗಿಯೂ, ಯಂತ್ರದ ಕಡೆಯಿಂದಲೂ ಉಭಯ ರೀತಿಯಲ್ಲಿ ಸಂವಾದ ನಡೆಸಿ ಇದಕ್ಕೆ ಮಾಹಿತಿ- ಜ್ಞಾನವನ್ನು ತುಂಬಿಸಿದ್ದಾರೆ. ಪರಿಣಿತ ಎಐ ಟ್ರೈನರ್‌ಗಳು ಇದಕ್ಕೆ ಸಂವಾದ ರೂಪದಲ್ಲಿ, ಸಾಧ್ಯವಿರಬಹುದಾದ ಎಲ್ಲ ಸಂವಾದ ಪ್ರಶ್ನೆಗಳನ್ನೂ ಪರಿಗಣಿಸಿ ಫೀಡ್‌ ಮಾಡಿದ್ದಾರೆ.

ಓಪನ್‌ಎಐ ಕೂಡ ಒಪ್ಪಿಕೊಂಡಿರುವ ವಿಚಾರ ಎಂದರೆ, ಕೆಲವೊಮ್ಮೆ ಈ ಚಾಟ್‌ಬಾಟ್‌ ಕೂಡ ಪೂರ್ವಗ್ರಹ ಪೀಡಿತವಾಗಿ ವರ್ತಿಸಬಹುದು. ಸರಿಯಲ್ಲದ, ಹಾನಿಕರ, ಅಸುರಕ್ಷಿತ ಪ್ರಶ್ನೆಗಳನ್ನು ಉತ್ತರಿಸದಂತೆ ಫೀಡ್‌ ಮಾಡಲಾಗಿದೆಯಾದರೂ, ಕೆಲವೊಮ್ಮೆ ಅವುಗಳನ್ನೂ ಉತ್ತರಿಸಬಹುದು. ಯಾವುದೇ ಜನಾಂಗೀಯದ್ವೇಷ, ಮತದ್ವೇಷ, ಲಿಂಗಭೇದಕ್ಕೆ ಎಡೆಮಾಡಿಕೊಡದಂತೆ ಮಾಹಿತಿಗಳನ್ನು ಇದಕ್ಕೆ ಫೀಡ್‌ ಮಾಡಲಾಗಿದೆ. ಬಳಸುವಿಕೆ ಹೆಚ್ಚಾದಂತೆ ಇದರ ನಿಖರತೆ ಹೆಚ್ಚಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ : MBA ಪರೀಕ್ಷೆಯ ಪ್ರಶ್ನೆಗಳಿಗೆ ಉತ್ತರಿಸಿದ AI ಆಧರಿತ ಚಾಟ್‌ಬಾಟ್ ChatGPT

ಸರ್ಚ್‌ ಎಂಜಿನ್‌ಗೂ ಚಾಟ್‌ಬಾಟ್‌ಗೂ ವ್ಯತ್ಯಾಸವೇನು?

ಇದು ಕೆಲಸಗಳನ್ನು ಕಸಿಯಬಲ್ಲುದೇ?

ಕೆಲವು ಕೆಲಸಗಳನ್ನು ಚಾಟ್‌ಜಿಪಿಟಿ ಇಲ್ಲದಂತೆ ಮಾಡಬಲ್ಲುದು. ಯಾಂತ್ರಿಕವಾಗಿ ಮಾಹಿತಿಗಳನ್ನು ಅಕ್ಷರಕ್ಕೆ ಇಳಿಸುವ ಕೆಲಸಗಳು ಇದರಿಂದಾಗಿ ಇಲ್ಲವಾಗಬಹುದು. ಆದರೆ ಸೃಜನಶೀಲತೆಯನ್ನು ಬೇಡುವ, ಪ್ರಸಂಗಾವಧಾನತೆ- ಸಮಯಸ್ಫೂರ್ತಿಯನ್ನು ನಿರೀಕ್ಷಿಸುವ, ಟೀಮ್‌ವರ್ಕ್‌ ಅಗತ್ಯವಾದ ಕೆಲಸಗಳು ಇಲ್ಲವಾಗುವುದಿಲ್ಲ. ಹಾಗೆಯೇ ಈ ಚಾಟ್‌ಜಿಪಿಟಿಯಂಥ ಬಾಟ್‌ಗಳನ್ನು ಅಭಿವೃದ್ಧಿಪಡಿಸುವುದಕ್ಕೂ ಅದಕ್ಕೆ ಮಾಹಿತಿ ಫೀಡ್‌ ಮಾಡುವುದಕ್ಕೂ ದೊಡ್ಡ ಪ್ರಮಾಣದ ಉದ್ಯೋಗಿಗಳು ಬೇಕಾಗುತ್ತಾರೆ. ಹೀಗಾಗಿ, ಒಂದು ವಲಯದಲ್ಲಿ ಕೆಲಸ ಇಲ್ಲವಾದರೆ ಇನ್ನೊಂದು ಕಡೆಯಲ್ಲಿ ಕೆಲಸಗಳು ಸೃಷ್ಟಿಯಾಗುತ್ತಿರುತ್ತವೆ.

ಇದನ್ನೂ ಓದಿ : Mass layoff | ತಂತ್ರಜ್ಞಾನ ವಲಯದ ಬಳಿಕ ಮಾಧ್ಯಮ ಮತ್ತು ಮನರಂಜನೆ ಕ್ಷೇತ್ರದಲ್ಲೂ ಉದ್ಯೋಗ ಕಡಿತ

Exit mobile version