ನವ ದೆಹಲಿ: ಹಬ್ಬದ ಸೀಸನ್ ಶುರುವಾಗುತ್ತಿದ್ದಂತೆ ಭಾರತೀಯ ಮಾರುಕಟ್ಟೆಗೆ ಅನೇಕ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿವೆ. ಚೀನಾ ಮೂಲದ ವಿವೋ (Vivo) ಕಂಪನಿಯು ಗುರುವಾರ ವಿವೋ ವಿ25 5ಜಿ (Vivo V25 5G) ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ವಿವೋ ವಿ25 ಸಿರೀಸ್‌ನಲ್ಲಿ ಬಿಡುಗಡೆಯಾಗುತ್ತಿರುವ ಮತ್ತೊಂದು ಫೋನ್ ಇದು. 64 ಮೆಗಾ ಪಿಕ್ಸೆಲ್ ಐಒಎಸ್ ನೈಟ್ ಕ್ಯಾಮೆರಾ, 50 ಮೆಗಾ ಪಿಕ್ಸೆಲ್ ಐ ಎಎಫ್ ಸೆಲ್ಫಿ ಕ್ಯಾಮೆರಾ ಸೇರಿದಂತೆ ಅನೇಕ ಹುಬ್ಬೇರಿಸುವ ಫೀಚರ್ಸ್‌ಗಳಿವೆ. ಉತ್ತಮ ಫೋಟೊ ಸೆರೆ ಹಿಡಿಯಲು ಮೊಬೈಲ್ ಬೇಕು ಎನ್ನುವವರಿಗೆ ಈ ಫೋನ್ ಅತ್ಯುತ್ತಮ ಆಯ್ಕೆಯಾಗಬಹುದು.
ವಿವೋ ವಿ25 5ಜಿ ಸ್ಮಾರ್ಟ್‌ಫೋನ್, ಆಂಡ್ರಾಯ್ಡ್ 12 ಆಧರಿತ ಫನ್‌ಟಚ್ ಒಎಸ್ 12 ಮೂಲಕ ರನ್ ಆಗುತ್ತದೆ. 90Hz ರಿಫ್ರೆಶ್ ದರದೊಂದಿಗೆ 6.44 ಇಂಚಿನ ಫುಲ್ HD+ (1080 x 2404 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇ ಇದೆ. 12 ಜಿಬಿ RAMನೊಂದಿಗೆ ಸಂಯೋಜಿತವಾಗಿರುವ ಮೀಡಿಯಾಯೆಕ್ ಡಿಮೆನ್ಸಿಟಿ 900 ಪ್ರೊಸೆಸರ್ ನೀಡಲಾಗಿದೆ. ಸ್ಮಾರ್ಟ್‌ಫೋನ್ ಹೆಚ್ಚುವರಿಯಾಗಿ RAM 3.0 ಫೀಚರ್ ಹೊಂದಿದೆ. ಇದು ಸುಗಮ ಕಾರ್ಯಾಚರಣೆಗಾಗಿ ಬಳಕೆದಾರರಿಗೆ ವಾಸ್ತವಿಕವಾಗಿ RAM ಅನ್ನು 8 GB ವರೆಗೆ ಹೆಚ್ಚಿಸಲು ಅನುವು ಮಾಡಿಕೊಡುತ್ತದೆ.
ಗೇಮ್ ಬೂಸ್ಟ್ ಮೋಡ್, ಲಿಕ್ವಿಡ್ ಕೂಲಿಂಗ್ ಸಿಸ್ಟಮ್, 4ಡಿ ಗೇಮ್ ವೈಬ್ರೇಷನ್ ಸೇರಿದಂತೆ ಇನ್ನಿತರ ಫೀಚರ್‌ಗಳನ್ನು ಈ ವಿವೋ ವಿ25 5ಜಿ ಸ್ಮಾರ್ಟ್‌ಫೋನ್‌ನಲ್ಲಿ ನೋಡಬಹುದು. ಕಂಪನಿಯು ಫೋನ್ ಹಿಂಬದಿಯಲ್ಲಿ ಆಪ್ಟಿಕಲ್ ಇಮೇಜ್ ಸ್ಥಿರೀಕರಣ ಮತ್ತು f/1.79 ಅಪರ್ಚರ್ ಲೆನ್ಸ್ ಹೊಂದಿರುವ 64 ಕ್ಯಾಮೆರಾ ಸೇರಿದಂತೆ ಒಟ್ಟು ಮೂರು ಕ್ಯಾಮೆರಾಗಳನ್ನು ನೀಡಿದೆ. ವೈಡ್ ಆ್ಯಂಗಲ್ ಲೆನ್ಸ್ ಇರುವ 8 ಮೆಗಾ ಪಿಕ್ಸೆಲ್, ಮ್ಯಾಕ್ರೋ ಲೆನ್ಸ್ 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳಿವೆ.
ಸೆಲ್ಫಿ ಪ್ರಿಯರಿಗೆ ಈ ಸ್ಮಾರ್ಟ್‌ಫೋನ್ ಹೆಚ್ಚು ಇಷ್ಟವಾಗಬಹುದು. ಯಾಕೆಂದರೆ, ಸೆಲ್ಫಿ ಫೋಟೋ ತೆಗೆಯುವುದನ್ನು ಇದು ಇನ್ನಷ್ಟು ಸುಲಭಗೊಳಿಸಿದೆ. ಫೋನ್ ಮುಂಬದಿಯಲ್ಲಿ 50 ಮೆಗಾ ಪಿಕ್ಸೆಲ್ ಒದಗಿಸಲಾಗಿದೆ. ಐ ಫೋಕಸ್, f/2.0 ಅಪರ್ಚರ್ ಲೆನ್ಸ್, ವಿಡಿಯೋ ಟೆಂಪ್ಲೆಟ್ಸ್‌ಗಳೊಂದಿಗೆ ಬರುವ ವ್ಲೋಗ್ ಮೋಡ್ ಸೇರಿದಂತೆ ಇನ್ನಿತರ ಫೀಚರ್ಸ್ ಈ ಕ್ಯಾಮೆರಾದಲ್ಲಿ ಕಾಣಬಹುದು.
ಈ ಮೊದಲೇ ಹೇಳಿದಂತೆ ಈ ಫೋನ್ 5ಜಿ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡಲಿದೆ. 256 ಜಿಬಿ ವರೆಗೂ ಇನ್‌ಬಿಲ್ಟ್ ಮೆಮೋರಿ ಇದೆ. ಡ್ಯೂಯಲ್ ಬ್ಯಾಂಡ್ ವೈ ಫೈ, ಬ್ಲೂಟೂತ್ ವಿ5.2, ಜಿಪಿಎಸ್ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಕನೆಕ್ಟಿವಿಟಿಯಿದೆ. 44 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುವ 4,500mAh ಬ್ಯಾಟರಿ ನೀಡಲಾಗಿದೆ. ಈ ಫೋನ್‌ನ ಬ್ಯಾಕ್ ಪ್ಯಾನೆಲ್, ಸೂರ್ಯನ ಬೆಳಕು ಅಥವಾ ಯುವಿ ಕಿರಣಗಳಿಗೆ ಸಂಪರ್ಕಿತವಾಗುತ್ತಿದ್ದಂತೆ ಬಣ್ಣ ಬದಲಾಯಿಸುತ್ತದೆ.
ಬೆಲೆ ಎಷ್ಟು?
8GB RAM + 128GB ಸ್ಟೋರೇಜ್ ವೆರಿಯೆಂಟ್ ವಿವೋ ವಿ25 5ಜಿ ಫೋನ್ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ 27,999 ರೂ. ಇದೆ. ಅದೇ ವೇಳೆ, 12 GB RAM + 256 GB ವೆರಿಯೆಂಟ್ ಬೆಲೆ 31,999 ರೂ. ಇದೆ. ಸೆಪ್ಟೆಂಬರ್ 20ರಿಂದ ಈ ಫೋನ್ ಮಾರಾಟಕ್ಕೆ ಸಿಗಲಿದೆ. ಎಲೆಗಂಟ್ ಬ್ಲ್ಯಾಕ್ ಮತ್ತು ಸರ್ಫಿಂಗ್ ಬ್ಲ್ಯೂ ಬಣ್ಣಗಳಲ್ಲಿ ಗ್ರಾಹಕರು ಫೋನ್ ಖರೀದಿಸಬಹುದು. ಈಗಾಗಲೇ ಫ್ರಿ ಬುಕಿಂಗ್ ಆರಂಭವಾಗಿದೆ.
ಇದನ್ನೂ ಓದಿ | Google Pixel 7 | ಅಕ್ಟೋಬರ್ 6ಕ್ಕೆ ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್ ಫೋನ್, ವಾಚ್ ಲಾಂಚ್!