ನವದೆಹಲಿ: ಚೀನಾದ ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ವಿವೋ, ತನ್ನ ಬಹು ನಿರೀಕ್ಷೆಯ ವಿವೋ ಎಕ್ಸ್ 90 ಸ್ಮಾರ್ಟ್‌ಫೋನ್ ಅನ್ನು ಚೀನಾದಲ್ಲಿ ನವೆಂಬರ್ 22ರಂದು ಲಾಂಚ್ ಮಾಡಲಿದೆ. ಸೋಷಿಯಲ್ ಮೀಡಿಯಾ Weibo ಮೂಲಕ ವಿವೋ ಈ ವಿಷಯವನ್ನು ಖಚಿತಪಡಿಸಿದೆ. ಎಕ್ಸ್90 ಸರಣಿಯಲ್ಲಿ ವಿವೋ ಎಕ್ಸ್90 (Vivo X90), ವಿವೋ ಎಕ್ಸ್90 ಪ್ರೋ ( Vivo X90 Pro), ಎಕ್ಸ್90 ಪ್ರೋಪ್ಲಸ್ (Vivo Pro+) ಒಟ್ಟು ಮೂರು ಫೋನ್‌ಗಳನ್ನು ಕಂಪನಿಯು ಲಾಂಚ್ (Vivo X90 Series) ಮಾಡಲಿದೆ.
ಎಕ್ಸ್90 ಸೀರೀಸ್ ಫೋನುಗಳ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. ಚೀನಾದ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿರುವ ವಿಡಯೋ ಈ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ವಿವೋ ಎಕ್ಸ್90 ಪ್ರೋ ಪ್ಲಸ್ ಸ್ಮಾರ್ಟ್‌ಫೋನಿನ ವಿನ್ಯಾಸವನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಇದರಲ್ಲಿ ನಾಲ್ಕು ಕ್ಯಾಮೆರಾಗಳ ಸೆಟ್‌ಅಪ್ ಕಾಣಬಹುದು ಮತ್ತು ಇದು ಝೈಸ್ (Zeiss) ಎಂಜನಿಯರ್ಡ್ ಸೆಟ್ ಆಗಿದೆ. ಈ ಹಿಂದೆ ಮಾರುಕ್ಟಟೆಯಲ್ಲಿದ್ದ ಎಕ್ಸ್80 ಸೀರೀಸ್ ಫೋನುಗಳನ್ನು ಈ ಎಕ್ಸ್90 ಸೀರೀಸ್ ಫೋನುಗಳು ಬದಲಿಸಲಿವೆ.
ಇತ್ತೀಚೆಗಷ್ಟೇ ವಿವೋ ಎಕ್ಸ್90 ಪ್ರೋ ಪ್ಲಸ್ ಸ್ಮಾರ್ಟ್‌ಫೋನ್ ಬಗ್ಗೆ ಮಾಹಿತಿ ಹೊರ ಬಿದ್ದಿತ್ತು. ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್, 12 ಜಿಬಿ RAM ಮತ್ತು ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 2 ಎಸ್ಒಸಿ ಸೇರಿದಂತೆ ಇನ್ನಿತರ ತಾಂತ್ರಿಕ ಮಾಹಿತಿ ಸೋರಿಕೆಯಾಗಿತ್ತು. ಈ ಫೋನಿನಲ್ಲಿ ಕಂಪನಿಯು 6.78 ಇಂಚ್ ಸ್ಯಾಮ್ಸಂಗ್ ಇ6 ಅಮೋಎಲ್ಇಡಿ ಡಿಸ್‌ಪ್ಲೇ ಬಳಸಿದ್ದು ಮತ್ತು ಅದು ಕರ್ವ್ಡ್ ಎಡ್ಜ್ ಹೊಂದಿದೆ. 4,700mAh ಬ್ಯಾಟರಿ ಇರಲಿದ್ದು, 80ವ್ಯಾಟ್ ಫಾಸ್ಟ್ ಚಾರ್ಚಿಂಗ್ ಮತ್ತು ವೈರ್ ಲೆಸ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡಲಿದೆ. ಫೋನ್ ಬಿಡುಗಡೆಯಾದ ಬಳಿಕ ಸ್ಪಷ್ಟವಾದ ಮಾಹಿತಿಗಳು ಲಭ್ಯವಾಗಲಿವೆ. ಈ ಫೋನುಗಳ ಬೆಲೆ ಎಷ್ಟಿರಬಹುದು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಇದನ್ನೂ ಓದಿ | Moto G42 ಸ್ಮಾರ್ಟ್‌ಫೋನ್ ಬಿಡುಗಡೆ, ಬೆಲೆ ಎಷ್ಟು?