Site icon Vistara News

Vivo Y02s | ವಿವೋ ಮತ್ತೊಂದು ಫೋನ್ ಲಾಂಚ್, ಭಾರತದಲ್ಲಿ ಯಾವಾಗ ಬಿಡುಗಡೆ?

Vivo Y02s

ಬೆಂಗಳೂರು: ಚೀನಾ ಮೂಲದ ವಿವೋ ಜಾಗತಿಕ ಮಾರುಕಟ್ಟೆಗೆ ವಿವೋ ವೈ02ಎಸ್ (Vivo Y02s) ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ತನ್ನ ವಿಶಿಷ್ಟ ಫೀಚರ್ಸ್ ಮೂಲಕ ಹೆಚ್ಚು ಗಮನ ಸೆಳೆಯುತ್ತಿದೆ. ಸದ್ಯಕ್ಕೆ ಫಿಲಿಪ್ಪಿನ್ಸ್‌ನ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಈ ಫೋನ್ ಭಾರತೀಯ ಮಾರುಕಟ್ಟೆಗೆ ಯಾವಾಗ ಲಗ್ಗೆ ಹಾಕಲಿದೆ ಎಂಬ ಬಗ್ಗೆ ಕಂಪನಿಯು ಮಾಹಿತಿ ನೀಡಿಲ್ಲ. 6.51 ಇಂಚ್ ಹ್ಯಾಲೋ ಫುಲ್‌ ವ್ಯೂ ಡಿಸ್‌ಪ್ಲೇ ಹೊಂದಿದ್ದು, 5,00mAh ಬ್ಯಾಟರಿ ಇದೆ. ಈಗ ಬಿಡುಗಡೆಯಾಗಿರುವ ವಿವೋ ವೈ02ಎಸ್ ಫೋನ್ ಮೇ ತಿಂಗಳಲ್ಲಿ ಲಾಂಚ್ ಆಗಿದ್ದ ವಿವೋ ವೈ01 ಫೋನಿನ ಮುಂದುವರಿದ ಆವೃತ್ತಿಯಾಗಿದೆ.

Vivo Y02s ಸ್ಮಾರ್ಟ್‌ಫೋನ್ ಬೆಲೆಯನ್ನು ಗಮನಿಸಿದರೆ ಇದು ಬಜೆಟ್ ಸ್ಮಾರ್ಟ್‌ಫೋನ್ ಎಂದು ಹೇಳಬಹುದು. ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ, 3ಜಿಬಿ RAM ಮತ್ತು 32 ಜಿಬಿ ಸ್ಟೋರೇಜ್ ವೆರಿಯಂಟ್ ಬೆಲೆ ಅಂದಾಜು 9,250 ರೂ. ಇರಲಿದೆ. ಫ್ಲೂರೈಟ್ ಬ್ಲ್ಯಾಕ್ ಮತ್ತು ವೈಬ್ರೆಂಟ್ ಬ್ಲ್ಯೂ ಬಣ್ಣಗಳಲ್ಲಿ ಮಾರಾಟಕ್ಕೆ ಸಿಗಲಿದೆ.

ವಿವೋ ವೈ01 ರೀತಿಯಲ್ಲೇ ವಿವೋ ವೈ02ಎಸ್ ಫೋನ್ ಕೂಡ ಡ್ಯುಯಲ್ ಸಿಮ್ ಸ್ಲಾಟ್ ಹೊಂದಿದೆ. ಆಂಡ್ರಾಯ್ಡ್ 12 ಆಧರಿತ ಫನ್‌ಟಚ್ ಒಎಸ್ 12 ಆಪರೇಟಿಂಗ್ ಸಾಫ್ಟ್‌ವೇರ್ ಮೂಲಕ ಈ ಫೋನ್ ರನ್ ಆಗುತ್ತದೆ. 6.51 ಇಂಚ್ ಎಚ್‌ಡಿ ಪ್ಲಸ್ ಹ್ಯಾಲೋ ಫುಲ್ ವ್ಯೂ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಇದರಲ್ಲಿ ಕಣ್ಣಿನ ರಕ್ಷಣೆ ಮಾಡುವ ಐ ಪ್ರೋಟೆಕ್ಷನ್ ಮೋಡ್ ಇದೆ. ಇನ್ನು ಪ್ರೊಸೆಸರ್ ಬಗ್ಗೆ ಹೇಳುವುದಾದರೆ ವಿವೋ ಕಂಪನಿಯು ಈ ಫೋನಿನಲ್ಲಿ 3ಜಿಬಿ RAMನೊಂದಿಗೆ ಮೀಡಿಯಾಟೆಕ್ ಹೆಲಿಯೋ ಪಿ35 ಎಸ್ಒಸಿ ಅಳವಡಿಸಿದೆ.

ನೀವು ಏನಾದರೂ ಸ್ಮಾರ್ಟ್‌ಫೋನಿನಲ್ಲಿ ಗೇಮ್ಸ್ ಆಡುವ ಹ್ಯಾಬಿಟ್ ಹೊಂದಿದ್ದರೆ ಈ ಫೋನ್ ಹೆಚ್ಚು ಉಪಯುಕ್ತವಾಗಿರಲಿದೆ. ಯಾಕೆಂದರೆ, ಕಂಪನಿಯು ಇದರಲ್ಲಿ ಮಲ್ಟಿ ಟರ್ಬೊ 5.5 ಫೀಚರ್ ಅಳವಡಿಸಿದೆ. ಗೇಮ್ಸ್‌ನಲ್ಲಿ ಉಂಟಾಗುವ ಲ್ಯಾಗ್ ಮತ್ತು ಕಾರ್ಯನಿರ್ವಹಣೆಯಲ್ಲಿ ವೇಳೆ ಎದುರಾಗುವ ಅಡೆತಡೆಗಳನ್ನು ಈ ಫೀಚರ್ಸ್ ಕಡಿಮೆಗೊಳಿಸುತ್ತದೆ. ಡು ನಾಟ್ ಡಿಸ್ಟರ್ಬ್ ಮತ್ತು ಇ-ಸ್ಪೋರ್ಟ್ಸ್‌ ಮೋಡ್‌ ಸೇರಿದಂತೆ ಅಲ್ಟ್ರಾ ಗೇಮ್ ಮೋಡ್‌ಗಳಿವೆ. ಈ ಕಾರಣಗಳಿಂದಾಗಿಯೇ ಈ ಸೆಗ್ಮೆಂಟ್‌ನಲ್ಲಿ ಇತರ ಎಲ್ಲ ಫೋನುಗಳಿಗಿಂತಲೂ ಈ ಫೋನ್ ಭಿನ್ನವಾಗಿದೆ.

ಕ್ಯಾಮೆರಾ ಬಗ್ಗೆ ಹೇಳುವುದಾದರೆ ಕಂಪನಿಯು ಫೋನಿನ ಹಿಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಿದೆ. ಇನ್ನು ಸೆಲ್ಫಿ ಮತ್ತು ಚಾಟ್‌ಗಾಗಿ ಕಂಪನಿಯು 5 ಮೆಗಾಪಿಕ್ಸೆಲ್ ಕ್ಯಾಮೆರಾವಿದೆ. ವಿವೋ ವೈ02 ಸ್ಮಾರ್ಟ್‌ಫೋನಿಗೆ ಕಂಪನಿಯು 32 ಜಿಬಿ ಆಂತರಿಕ ಸ್ಟೋರೇಜ್ ಒದಗಿಸಿದೆ. ಹಾಗೆಯೇ, ಸ್ಟೋರೇಜ್ ಅನ್ನು ಬಳಕೆದಾರರು ಮೈಕ್ರೊಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಿಕೊಳ್ಳಬಹುದಾಗಿದೆ. 4ಜಿ ಎಲ್‌ಟಿಇ, ವೈಫೈ, ಬ್ಲೂಟೂಥ್ ವಿ5.0, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಇನ್ನಿತರ ಕನೆಕ್ಟಿವಿಟಿ ಸೌಲಭ್ಯಗಳನ್ನು ಹೊಂದಿದೆ.

ವಿವೋ ವೈ02ಎಸ್ (Vivo Y02s) ಫೋನ್‌ನಲ್ಲಿ 5,00mAh ಸಾಮರ್ಥ್ಯದ ಬ್ಯಾಟರಿ ಇದ್ದು, 10 ವ್ಯಾಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. ಫೀಚರ್ಸ್ ಮತ್ತು ಬೆಲೆಯನ್ನು ಗಮನಿಸಿದರೆ ಈ ಸೆಗ್ಮೆಂಟ್‌ನ ಇತರ ಎಲ್ಲ ಫೋನುಗಳಿಗಿಂತ ಭಿನ್ನವಾಗಿದೆ. ಇದೇ ವೇಳೆ, ಈ ಫೋನು ಭಾರತೀಯ ಮಾರುಕಟ್ಟೆಗೆ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಮಾಹಿತಿಗಳಿಲ್ಲ.

ಇದನ್ನು ಓದಿ | nokia 8210 | ಒಂದು ಬಾರಿ ಚಾರ್ಜ್‌ ಮಾಡಿದರೆ 27 ದಿನ ನೋ ಟೆನ್ಷನ್‌!

Exit mobile version