ಬೆಂಗಳೂರು: ಬಹು ಬೇಡಿಕೆಯ ಬ್ರ್ಯಾಂಡ್ ವಿವೋ (Vivo) ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಿದೆ. ವಿವೋ ವೈ56 5ಜಿ (Vivo Y56 5G) ಬಿಡುಗಡೆಯಾಗಿದ್ದು, ಸಾಕಷ್ಟು ಗಮನ ಸೆಳೆಯುತ್ತಿದೆ. ಮೀಡಿಯಾಟೆಕ್ ಡಿಮೆನ್ಸಿಟಿ 700 ಪ್ರೊಸೆಸರ್, 8 ಜಿಬಿ RAM ಮತ್ತು 129 ಜಿಬಿ ಸ್ಟೋರೇಜ್, 50 ಮೆಗಾ ಪಿಕ್ಸೆಲ್ ಕ್ಯಾಮೆರಾ, 5,000mAh ಬ್ಯಾಟರಿ ಸೇರಿದಂತೆ ಅನೇಕ ಫೀಚರ್‌ಗಳನ್ನು ಈ ಹೊಸ ಫೋನ್ ಒಳಗೊಂಡಿದೆ.
ಭಾರತೀಯ ಮಾರುಕಟ್ಟೆಯಲ್ಲಿ ವಿವೋ ವೈ56 5ಜಿ ಸ್ಮಾರ್ಟ್‌ಫೋನನ್ನು ಗ್ರಾಹಕರು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಖರೀದಿಸಬಹುದು. 8ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ವೆರಯೆಂಟ್ ಫೋನ್ ಬೆಲೆ ಅಂದಾಜು 19,999 ರೂ. ಇದೆ. ಈ ಫೋನ್, ಗ್ರಾಹಕರಿಗೆ ಈ ಫೋನ್ ಬ್ಲ್ಯಾಂಕ್ ಎಂಜಿನ್ ಮತ್ತು ಆರೇಂಜ್ ಶಿಮ್ಮರ್ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ.
ವಿವೋ ವೈ56 5ಜಿ ವಿಶೇಷತೆಗಳೇನು?
ಡುಯಲ್ ಸಿಮ್‌ಗೆ ಅವಕಾಶವಿರುವ ವಿವೋ ವೈ56 5ಜಿ ಸ್ಮಾರ್ಟ್‌ಫೋನ್, ಆಂಡ್ರಾಯ್ಡ್ 13 ಬೇಸ್ಡ್ ಫನ್ ಟಚ್ ಒಎಸ್ 13 ಆಧರಿತವಾಗಿದೆ ಮತ್ತು ಇದು 6.58 ಇಂಚ್ ಫುಲ್ ಎಚ್‌ಪ್ಲಸ್ ಎಲ್‌ಸಿಡಿ ಸ್ಕ್ರೀನ್ ಇದೆ. ಮೀಡಿಯಾ ಟೆಕ್ ಡಿಮೆನ್ಸಿಟಿ 700ಚಿಪ್‌ಸೆಟ್ ಇದ್ದು, 8 ಜಿಬಿ RAM ಜತೆ ಸಂಯೋಜಿಸಲಾಗಿದೆ. ಹಾಗೆಯೇ, RAM ಅನ್ನು 16 ಜಿಬಿವರೆಗೂ ವಿಸ್ತರಿಸಬಹುದಾಗಿದೆ. 128 ಜಿಬಿ ಸ್ಟೋರೇಜ್ ನೀಡಲಾಗಿದೆ.
ವಿವೋ ವೈ56 5ಜಿ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಡುಯಲ್ ಕ್ಯಾಮೆರಾ ಸೆಟ್ ಅಪ್ ಇದೆ. ಈ ಪೈಕಿ ಮೊದಲನೆಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದ್ದರೆ, ಎರಡನೆಯದು 2 ಮೆಗಾ ಪಿಕ್ಸೆಲ್ ಕ್ಯಾಮೆರಾವಿದೆ. ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಾಗಿ ಫೋನ್ ಮುಂಬದಿಯಲ್ಲಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ.
ಇದನ್ನೂ ಓದಿ: Xiaomi Car | ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಇಳಿಸಲಿದೆ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ರೆಡ್ಮಿ!
5000mAh ಬ್ಯಾಟರಿ, ಹಲವು ಸೌಲಭ್ಯ
ವೈ-ಫೈ, ಬ್ಲೂಟೂತ್ 5.1, ಜಿಪಿಎಸ್, ಒಟಿಜಿ, ಎಫ್‌ಎಂ ರೇಡಿಯೋ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ವಿವೋ ವೈ 56 5 ಜಿ ಯೊಂದಿಗೆ ನೀಡಲಾಗುವ ಸಂಪರ್ಕ ಆಯ್ಕೆಗಳು ಸೇರಿದಂತೆ ಅನೇಕ ಸೌಲಭ್ಯಗಳಿವೆ. ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಇ-ಕಂಪಾಸ್, ಗೈರೊಸ್ಕೋಪ್ ಮತ್ತು ಪ್ರಾಕ್ಸಿಮಿಟಿ ಸೆನ್ಸರ್ ಕೂಡ ಇದೆ. ಇದು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಫೋನ್ ಬದಿಯಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್ ನೀಡಲಾಗಿದೆ. ಕಂಪನಿಯು ಈ ಫೋನ್‌ನಗೆ 5000mAh ಬ್ಯಾಟರಿಯನ್ನು ಒದಗಿಸಿದೆ.