ನವದೆಹಲಿ: ನವೆಂಬರ್ ತಿಂಗಳಲ್ಲಿ ವಾಟ್ಸ್ಆ್ಯಪ್ ಸುಮಾರು 37.16 ಲಕ್ಷ ಭಾರತೀಯರ ಖಾತೆಗಳನ್ನು ಬ್ಯಾನ್ ಮಾಡಿರುವುದಾಗಿ (WhatsApp Bans Accounts) ಹೇಳಿದೆ. ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ, ಖಾತೆ ನಿಷೇಧವು ಶೇ.60ರಷ್ಟು ಹೆಚ್ಚಳವಾಗಿದೆ. ಈ ಪೈಕಿ, ಬಳಕೆದಾರರು ರಿಪೋರ್ಟ್ ಮಾಡುವ ಮೋದಲೇ 9.9 ಲಕ್ಷ ಖಾತೆಗಳು ರದ್ದು ಮಾಡಲಾಗಿದೆ ಎಂದು ವಾಟ್ಸ್ಆ್ಯಪ್ ತಿಳಿಸಿದೆ.
ಅಕ್ಟೋಬರ್ ತಿಂಗಳಲ್ಲಿ ವಾಟ್ಸ್ಆ್ಯಪ್ 23.24 ಲಕ್ಷ ಖಾತೆಗಳನ್ನು ನಿಷೇಧಿಸಿದ್ದು. ಇದರಲ್ಲಿ 8.11 ಲಕ್ಷ ಖಾತೆಗಳನ್ನು ಯಾರೂ ರಿಪೋರ್ಟ್ ಮಾಡದಿದ್ದರೂ ತೆಗೆದು ಹಾಕಲಾಗಿತ್ತು. ಹಾಗಾಗಿ, ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ, ನವೆಂಬರ್‌ನಲ್ಲಿ ನಿಷೇಧಿಸಲಾದ ಖಾತೆಗಳ ಸಂಖ್ಯೆಯಲ್ಲಿ ಶೇ.60ರಷ್ಟು ಹೆಚ್ಚಳವಾಗಿದೆ.
ಭಾರತದವು ಕಠಿಣ ಐಟಿ ಕಾನೂನು ಜಾರಿಗೆ ತಂದಿದ್ದು, ಅದರನ್ವಯ ಎಲ್ಲ ಟೆಕ್ ಕಂಪನಿಗಳು, ಸೋಷಿಯಲ್ ಮೀಡಿಯಾ ಕಂಪನಿಗಳು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ನಿಯಮಗಳ ವಿರುದ್ಧ ಬಳಕೆಯಾಗುವ ಖಾತೆಗಳನ್ನು ವಾಟ್ಸ್ಆ್ಯಪ್ ರದ್ದು ಮಾಡುತ್ತದೆ ಹಾಗೂ ತಿಂಗಳ ವರದಿಯನ್ನು ಬಹಿರಂಗಪಡಿಸುತ್ತದೆ.
ಇದನ್ನೂ ಓದಿ | WhatsApp New Feature | ಆ್ಯಕ್ಸಿಡೆಂಟಲ್ ಡಿಲೀಟ್ ಹೊಸ ಫೀಚರ್ ಪರಿಚಯಿಸಿದ ವಾಟ್ಸ್ಆ್ಯಪ್!