Site icon Vistara News

WhatsApp: ಆ್ಯಂಡ್ರಾಯ್ಡ್ ಸ್ಮಾರ್ಟ್‌ವಾಚ್‌ಗಳಿಗಾಗಿ ವಾಟ್ಸಾಪ್! ಹೇಗಿದೆ ಈ ಆ್ಯಪ್?

WhatsApp on SmartWatch

ನವದೆಹಲಿ: ಆ್ಯಂಡ್ರಾಯ್ಡ್ ಸ್ಮಾರ್ಟ್‌ವಾಚ್ ಬಳಕೆದಾರರು ಇನ್ನು ತಮ್ಮ ವಾಚುಗಳಲ್ಲಿ ವಾಟ್ಸಾಪ್ ಆ್ಯಪ್ ಬಳಸಬಹುದಾಗಿದೆ. ಇತ್ತೀಚೆಗೆ ವಾಟ್ಸಾಪ್(WhatsApp), ಗೂಗಲ್‌ನ (Google) ವೀಯರ್ ಒಎಸ್‌ (Wear OS) ಸ್ಮಾರ್ಟ್‌ವಾಚ್‌ಗಳಿಗಾಗಿ (Smart Watch) ತನ್ನದೇ ಸ್ವತಂತ್ರ ಆ್ಯಪ್ ಆರಂಭಿಸಿದೆ. ಗೂಗಲ್ ಐ/ಒ (Google I/O) ವೇಳೆ ವಾಟ್ಸಾಪ್ ಈ ಘೋಷಣೆಯನ್ನು ಮಾಡಿತ್ತು. ಅಲ್ಲಿಂದಲೂ ಈ ಆ್ಯಪ್ ಬೀಟಾ ವರ್ಷನ್‌ನಲ್ಲಿದೆ. ವೀಯರ್ ಒಎಸ್‌ಗಾಗಿ ಅಭಿವೃದ್ಧಿ ಮಾಡಲಾಗಿರುವ ಈ ವಾಟ್ಸಾಪ್ ಆ್ಯಪ್ ಲಾಂಚ್ ಬಗ್ಗೆ ಫೇಸ್‌ಬುಕ್ (Facebook) ಮಾಲೀಕತ್ವದ ಮೆಟಾ (Meta) ಕಂಪನಿಯ ಸಿಇಒ ಮಾರ್ಕ್ ಜುಕರ್‌ಬರ್ಗ್ (CEO Mark Zukerburg) ಅವರು ಘೋಷಣೆಯನ್ನು ಮಾಡಿದ್ದರು. ಆ್ಯಂಡ್ರಾಯ್ಡ್ ವಾಚ್‌ಗಳಿಗಾಗಿ ರೂಪಿಸಲಾಗಿರುವ ಈ ವಾಟ್ಸಾಪ್‌ನಲ್ಲಿ ಬಳಕೆದಾರರು ಮೆಸೇಜ್‌ಗಳನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು. ಅಂದ ಹಾಗೆ, ಈ ಆ್ಯಪ್ ವೀಯರ್ ಒಎಸ್ 3‌ಗೆ ಸಪೋರ್ಟ್ ಮಾಡಲಿದೆ. ಆದರೆ, ಆ್ಯಪಲ್‌ನ ವಾಚ್‌ಒಎಸ್‌ಗೆ ವಾಟ್ಸಾಪ್ ಆ್ಯಪ್ ಲಾಂಚ್ ಮಾಡಿಲ್ಲ.

ಆಂಡ್ರಾಯ್ಡ್ ವಾಚ್‌ಗಳಲ್ಲಿ ಈಗ ನೀವು ವಾಟ್ಸಾಪ್ ಬಳಸಬಹುದು. ಅದಕ್ಕಾಗಿ ವಾಟ್ಸಾಪ್‌ ಆ್ಯಪ್ ಅಭಿವೃದ್ಧಿಪಡಿಸಿದೆ. ಬಳಕೆದಾರರು ಈ ವಾಟ್ಸಾಪ್ ಮೂಲಕ ರೆಕಾರ್ಡ್ ಮಾಡಬಹುದು. ಸ್ಮಾರ್ಟ್‌ವಾಚ್‌ಗಳಲ್ಲಿ ಧ್ವನಿ ಕರೆಗಳನ್ನು ರೆಕಾರ್ಡ್ ಮಾಡಬಹುದು, ಷೇರ್ ಮಾಡಬಹುದು. ಒಂದೊಮ್ಮೆ ವಾಚ್ ಏನಾದರೂ ಸೆಲ್ಯುಲಾರ್ ಸಂಪರ್ಕವನ್ನು ಹೊಂದಿದ್ದರೆ, ಇಂಟರ್ನೆಟ್ ಕನೆಕ್ಟ್ ಇರದಿದ್ದರೂ ವಾಟ್ಸಾಪ್ ಕಾರ್ಯನಿರ್ವಹಿಸಬಲ್ಲದು. ಅಂದರೆ, ಇಂಟರ್ನೆಟ್ ಇರದಿದ್ದರೂ ವಾಟ್ಸಾಪ್ ಮೂಲಕ ಬಳಕೆದಾರರು ಸಂದೇಶಗಳನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು.

ಸ್ಮಾರ್ಟ್‌ ವಾಚ್‌ಗಳಲ್ಲಿ ಟೈಪ್ ಮಾಡುವುದು ಅಷ್ಟು ಸರಳವಲ್ಲ. ಹಾಗಾಗಿ, ಈ ಕೆಲಸವನ್ನು ಸುಲಭ ಮಾಡುವುದಕ್ಕಾಗಿ ಬಳಕೆದಾರರು ತ್ವರಿತ ಪ್ರಕ್ರಿಯೆಗಳನ್ನು ಬಳಸಿಕೊಳ್ಳಬಹುದಾಗಿದೆ. ಓಕೆ, ಫೈನ್, ಥ್ಯಾಂಕ್ಸ್ ಇತ್ಯಾದಿ ಕೆಲವು ಪದಗಳನ್ನು ಪ್ರಿಸೆಟ್ ಮಾಡಲಾಗಿದೆ. ಸಂದೇಶಕ್ಕೆ ರಿಪ್ಲೈ ಮಾಡುವಾಗ ಬಳಸಿಕೊಳ್ಳಬಹುದು.

ಈ ಸುದ್ದಿಯನ್ನೂ ಓದಿ: WhatsApp New Feature: ಇನ್ನು ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಫೋನ್ ನಂಬರ್ ಯಾರಿಗೂ ಕಾಣಿಸದಂತೆ ಮಾಡಬಹುದು!

ಒಂದೊಮ್ಮೆ ಚಾಟ್ ನೋಟಿಫಿಕೇಷನ್ ಕಿರಿಕಿರಿ ಎನಿಸಿದರೂ ಅವುಗಳನ್ನು ಮ್ಯೂಟ್ ಆಯ್ಕೆಯನ್ನು ಸ್ಮಾರ್ಟ್‌ವಾಚ್‌ಗಳಿಗಾಗಿಯೇ ರೂಪಿಸಲಾಗಿರುವ ವಾಟ್ಸಾಪ್‌ನಲ್ಲಿ ನೀಡಲಾಗಿದೆ. ಯಾವುದೇ ನಿರ್ದಿಷ್ಟ ಗ್ರೂಪ್ ಅಥವಾ ನಿರ್ದಿಷ್ಟ ಚಾಟ್ ಅನ್ನು ಮ್ಯೂಟ್ ಮಾಡಬಹುದಾಗಿದೆ. ಸದ್ಯ ವಾಟ್ಸಾಪ್ ಆಂಡ್ರಾಯ್ಡ್ ಸ್ಮಾರ್ಟ್‌ವಾಚ್‌ಗಳಲ್ಲಿ ಮಾತ್ರವೇ ಬಳಕೆಯಾಗುತ್ತಿದೆ. ಕಂಪನಿಯು ಇನ್ನೂ ಆ್ಯಪಲ್ ಸ್ಮಾರ್ಟ್‌ವಾಚ್‌ಗಳಿಗಾಗಿ ವಾಟ್ಸಾಪ್ ಆ್ಯಪ್ ಅಭಿವೃದ್ಧಿಪಡಿಸಿಲ್ಲ.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version