ನವದೆಹಲಿ: 2023ರ ನವೆಂಬರ್ ತಿಂಗಳಲ್ಲಿ ಭಾರತದಲ್ಲಿನ 71 ಲಕ್ಷ ಖಾತೆಗಳನ್ನು (Indian Accounts) ನಿಷೇಧಿಸಲಾಗಿದೆ ಎಂದು ವಾಟ್ಸಾಪ್ ಹೇಳಿದೆ(WhatsApp). ವಾಟ್ಸಾಪ್ ಮೂಲಕ ಹೆಚ್ಚುತ್ತಿರುವ ಆನ್‌ಲೈನ್ ಹಗರಣಗಳ (Online Scams) ಹಿನ್ನೆಲೆಯಲ್ಲಿ ಸ್ಪ್ಯಾಮ್ ಖಾತೆಗಳನ್ನು ಡಿಲೀಟ್ (Account Deletes) ಮಾಡುವುದರ ಹಿಂದಿನ ಬಹುದೊಡ್ಡ ಕಾರಣವಾಗಿದೆ ಎನ್ನಬಹುದು.
2021ರ ಹೊಸ ಐಟಿ ನಿಯಮಗಳ ಅನುಸಾರವಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಯಾವುದೇ ಬಳಕೆದಾರರ ವರದಿಗಳನ್ನು ಸ್ವೀಕರಿಸುವ ಮೊದಲೇ ಕಂಪನಿಯು ನವೆಂಬರ್ 1 ರಿಂದ 30 ರವರೆಗೆ 19,54,000 ಖಾತೆಗಳನ್ನು ಪೂರ್ವಭಾವಿಯಾಗಿ ನಿಷೇಧಿಸಿದೆ. 500 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಭಾರತದ ಅತಿದೊಡ್ಡ ಸಂದೇಶ ಕಳುಹಿಸುವ ವೇದಿಕೆಯಾಗಿದ್ದು, ನವೆಂಬರ್‌ನಲ್ಲಿ ವಾಟ್ಸಾಪ್ 8,841 ದೂರು ವರದಿಗಳನ್ನು ಸ್ವೀಕರಿಸಿದೆ.
ವಾಟ್ಸಾಪ್ ‘ಅಕೌಂಟ್ಸ್ ಆಕ್ಷನ್ಡ್’ ಎಂಬ ಪದ ಬಳಸಿದ್ದು, ಅದು ಸರಿಪಡಿಸುವ ಕ್ರಮಗಳನ್ನು ಸೂಚಿಸುತ್ತದೆ. ಇದರಲ್ಲಿ ಇದು ಖಾತೆಗಳನ್ನು ನಿಷೇಧಿಸುವುದು ಅಥವಾ ಮರುಸ್ಥಾಪಿಸುವುದು ಒಳಗೊಂಡಿರುತ್ತದೆ. ಇದರ ಜೊತೆಗೆ, ಲಕ್ಷಾಂತರ ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರು ವ್ಯಕ್ತಪಡಿಸಿರುವ ಆತಂಕಗಳನ್ನು ಪರಿಹರಿಸಲು ಕೇಂದ್ರವು ಕುಂದುಕೊರತೆ ಮೇಲ್ಮನವಿ ಸಮಿತಿಯನ್ನು (ಜಿಎಸಿ) ಪರಿಚಯಿಸಿದೆ.
ತನ್ನ ವೇದಿಕೆಯಲ್ಲಿ ನಿಂದನಾತ್ಮಕ ಪೋಸ್ಟ್‌ಗಳನ್ನ ತಡೆಯಲು ವಾಟ್ಸಾಪ್ ಪ್ರತ್ಯೇಕವಾದ ವೃತ್ತಿಪರರ ತಂಡವನ್ನು ಹೊಂದಿದೆ. ಮತ್ತೊಂದು ಬೆಳವಣಿಗೆಯಲ್ಲಿ, ವಾಟ್ಸಾಪ್‌ನ ಆ್ಯಂಡ್ರಾಯ್ಡ್ ಬಳಕೆದಾರರು ಇನ್ನು ಮುಂದೆ ತಮ್ಮ ಚಾಟ್‌ಗಳನ್ನು ಉಚಿತವಾಗಿ ಬ್ಯಾಕಪ್ ಮಾಡಲು ಸಾಧ್ಯವಾಗುವುದಿಲ್ಲ. ಇಲ್ಲಿಯವರೆಗೂ ಇದು ಗೂಗಲ್ ಡ್ರೈವ್‌ನಲ್ಲಿ ಸೇವ್ ಮಾಡಲು ಅವಕಾಶ ಕಲ್ಪಿಸುತ್ತಿತ್ತು. ಆದರೆ, ಈ ವರ್ಷದಿಂದ ಗೂಗಲ್ ಡ್ರೈವ್ ಮಿತಿ ಹೇರಲಿದ್ದು, ಚಂದಾದಾರಿಕೆ ಮಾಡಿಕೊಳ್ಳಬೇಕಾಗುತ್ತದೆ. ಗೂಗಲ್ ಒನ್ ಜತೆಗೆ ವಾಟ್ಸಾಪ್ ಮೂಲಕ ಹೆಚ್ಚುವರಿ ಸಂಗ್ರಹಣೆಯಲ್ಲಿ ಹೂಡಿಕೆ ಮಾಡುವುದನ್ನು ಪರಿಗಣಿಸುವ ಅಗತ್ಯವಿದೆ.
ವಾಟ್ಸಾಪ್ ಬಳಕೆದಾರರಿಗೆ (WhatsApp Users) ಮೆಟಾ ಕಂಪನಿ (Meta Company) ದೊಡ್ಡ ಅಪ್‌ಡೇಟ್ ನೀಡಿದೆ. ವಾಟ್ಸಾಪ್‌ನ ಆಂಡ್ರಾಯ್ಡ್ ಬಳಕೆದಾರರಿಗೆ ಶೀಘ್ರವೇ ಉಚಿತ ಗೂಗಲ್ ಡ್ರೈವ್ (Google Drive storage) ಸಂಗ್ರಹಣಾ ಜಾಗ ಸೌಲಭ್ಯ ಸ್ಥಗಿತಗೊಳ್ಳಲಿದೆ. ವಾಟ್ಸಾಪ್‌ನ ಬಳಕೆದಾರರಿಗೆ ತಮ್ಮ ವಿಡಿಯೋ, ಫೋಟೋಗಳು ಸೇರಿದಂತೆ ಚಾಟ್ ಹಿಸ್ಟರಿಯನ್ನು (Chat History) ಗೂಗಲ್ ಡ್ರೈವ್‌ನಲ್ಲಿ ಸಂಗ್ರಹ ಮಾಡಲು ಅವಕಾಶ ನೀಲಾಗುತ್ತಿತ್ತು. ಈ ಹೊಸ ಬದಲಾವಣೆಯಿಂದಾಗಿ ಬಳಕೆದಾರರಿಗೆ ಉಚಿತವಾಗಿ 15ಜಿಬಿವರೆಗೆ ಮಾತ್ರವೇ ಗೂಗಲ್ ಡ್ರೈವ್‌ನಲ್ಲಿ ಸೇವ್ ಅವಕಾಶ ನೀಡಲಾಗುತ್ತದೆ ಅಥವಾ ಬಳಕೆದಾರರು ಗೂಗಲ್ ಒನ್‌ಗೆ ಚಂದಾದಾರರಾಗುವ ಮೂಲಕ ಸ್ಪೇಸ್ ಪಡೆದುಕೊಳ್ಳಬೇಕಾಗುತ್ತದೆ.
ಈ ಸುದ್ದಿಯನ್ನೂ ಓದಿ: IPL Betting : ಐಪಿಎಲ್ ಬೆಟ್ಟಿಂಗ್ ಕೇಸ್ ತನಿಖೆ ಕೈಬಿಟ್ಟ ಸಿಬಿಐ!