ನವದೆಹಲಿ: ವಾಟ್ಸಾಪ್ ಬಳಕೆದಾರರಿಗೆ (WhatsApp Users) ಮೆಟಾ ಕಂಪನಿ (Meta Company) ದೊಡ್ಡ ಅಪ್‌ಡೇಟ್ ನೀಡಿದೆ. ವಾಟ್ಸಾಪ್‌ನ ಆಂಡ್ರಾಯ್ಡ್ ಬಳಕೆದಾರರಿಗೆ ಶೀಘ್ರವೇ ಉಚಿತ ಗೂಗಲ್ ಡ್ರೈವ್ (Google Drive storage) ಸಂಗ್ರಹಣಾ ಜಾಗ ಸೌಲಭ್ಯ ಸ್ಥಗಿತಗೊಳ್ಳಲಿದೆ. ವಾಟ್ಸಾಪ್‌ನ ಬಳಕೆದಾರರಿಗೆ ತಮ್ಮ ವಿಡಿಯೋ, ಫೋಟೋಗಳು ಸೇರಿದಂತೆ ಚಾಟ್ ಹಿಸ್ಟರಿಯನ್ನು (Chat History) ಗೂಗಲ್ ಡ್ರೈವ್‌ನಲ್ಲಿ ಸಂಗ್ರಹ ಮಾಡಲು ಅವಕಾಶ ನೀಲಾಗುತ್ತಿತ್ತು. ಈ ಹೊಸ ಬದಲಾವಣೆಯಿಂದಾಗಿ ಬಳಕೆದಾರರಿಗೆ ಉಚಿತವಾಗಿ 15ಜಿಬಿವರೆಗೆ ಮಾತ್ರವೇ ಗೂಗಲ್ ಡ್ರೈವ್‌ನಲ್ಲಿ ಸೇವ್ ಅವಕಾಶ ನೀಡಲಾಗುತ್ತದೆ ಅಥವಾ ಬಳಕೆದಾರರು ಗೂಗಲ್ ಒನ್‌ಗೆ ಚಂದಾದಾರರಾಗುವ ಮೂಲಕ ಸ್ಪೇಸ್ ಪಡೆದುಕೊಳ್ಳಬೇಕಾಗುತ್ತದೆ.
ಈ ಬದಲಾವಣೆಗಳ ಕುರಿತು ನವೆಂಬರ್‌ನಲ್ಲಿ ಮಾಡಲಾಗಿದ್ದ ಪೋಸ್ಟ್‌ನಲ್ಲಿ ಗೂಗಲ್ ತಿಳಿಸಿತ್ತು. ಮುಖ್ಯವಾಗಿ, ಆಂಡ್ರಾಯ್ಡ್‌ನಲ್ಲಿನ ವಾಟ್ಸಾಪ್ ಬ್ಯಾಕಪ್‌ಗಳು ಶೀಘ್ರದಲ್ಲೇ ನಿಮ್ಮ ಗೂಗಲ್ ಡ್ರೈವ್ ಖಾತೆ ಕ್ಲೌಡ್ ಸಂಗ್ರಹಣೆಯ ಮಿತಿಯನ್ನು ಅಂತ್ಯಗೊಳಿಸಲಿದೆ. ಇತರ ಮೊಬೈಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ವಾಟ್ಸಾಪ್ ಬ್ಯಾಕಪ್‌ಗಳನ್ನು ಹೇಗೆ ನಿರ್ವಹಿಸುವ ರೀತಿಯಲ್ಲೇ ಇದು ಕೂಡ ಇರಲಿದೆ.ಈ ಬದಲಾವಣೆಯು ಮೊದಲು ವಾಟ್ಸಾಪ್ ಬೀಟಾ ಬಳಕೆದಾರರಿಗೆ 2023ರ ಡಿಸೆಂಬರ್‌ರಿಂದ ಪ್ರಾರಂಭವಾಗಲಿದೆ, ನಂತರ ಕ್ರಮೇಣ ಮುಂದಿನ ವರ್ಷದ ಆರಂಭದಲ್ಲಿ ಆಂಡ್ರಾಯ್ಡ್‌ನಲ್ಲಿರುವ ಎಲ್ಲಾ ವಾಟ್ಸಾಪ್ ಬಳಕೆದಾರರಿಗೆ ಲಭ್ಯವಾಗುತ್ತದೆ.
15GB ಸಂಗ್ರಹದ ಮಿತಿಯನ್ನು ಮೀರಿದ ವಾಟ್ಸಾಪ್ ಬಳಕೆದಾರರಿಗೆ ಗೂಗಲ್ ಒನ್‍ಗೆ ಚಂದಾದಾರರಾಗುವುದು ಸ್ಪಷ್ಟವಾದ ಆಯ್ಕೆಯಾಗಿದೆ. ಹಾಗಿದ್ದೂ, ಕಂಪನಿಯು ತನ್ನ ಗ್ರಾಹಕರಿಗೆ ಈ ಫೈಲ್‌ಗಳನ್ನು ಆಂಡ್ರಾಯ್ಡ್ ಸಾಧನಗಳ ನಡುವೆ ವರ್ಗಾಯಿಸುವ ಸಾಮರ್ಥ್ಯವನ್ನು ಇನ್ನೂ ನೀಡುತ್ತಿದೆ. ಉದಾಹರಣೆಗೆ, ಗೂಗಲ್ ಖಾತೆಯಲ್ಲಿ ತಮ್ಮ ವಾಟ್ಸಾಪ್ ಚಾಟ್ ಸ್ಟೋರ್ ಮಾಡಲು ಇಷ್ಟಪಡದ ಗ್ರಾಹಕರು, ಹೊಸ ಆಂಡ್ರಾಯ್ಡ್ ಸಾಧನಕ್ಕೆ ಬದಲಾದಾಗ ವಾಟ್ಸಾಪ್ ಚಾಟ್ ಟ್ರಾನ್ಸ್‌ಫರ್ ಮಾಡಿಕೊಳ್ಳಬಹುದು.
ಈ ಬದಲಾವಣೆಗಳು ಆಂಡ್ರಾಯ್ಡ್ ಬಳಕೆದಾರರ ಮೇಲೆ ಮಾತ್ರ ಪರಿಣಾಮ ಬೀರುತ್ತವೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಏಕೆಂದರೆ ವಾಟ್ಸಾಪ್ ಐಒಎಸ್‌ನಲ್ಲಿ ಉಚಿತ ಸಂಗ್ರಹಣೆಯನ್ನು ನೀಡುವುದಿಲ್ಲ. ಇದಲ್ಲದೆ, ಗೂಗಲ್ ನೀಡುವ 15GBಗೆ ಹೋಲಿಸಿದರೆ ಆ್ಯಪಲ್ ತನ್ನ ಪಾವತಿಸದ ಬಳಕೆದಾರರಿಗೆ 5GB ಉಚಿತ ಸಂಗ್ರಹಣೆಯನ್ನು ಮಾತ್ರ ನೀಡುತ್ತದೆ.
WhatsApp: ಇನ್ನು ವಾಟ್ಸಾಪ್ ಚಾಟ್‌ನಲ್ಲಿ ಮೆಸೇಜ್ ಪಿನ್ ಮಾಡಬಹುದು!
ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp) ತನ್ನ ಬಳಕೆದಾರರಿಗೆ ಅನುಕೂಲ ಕಲ್ಪಿಸುವ ಅನೇಕ ಹೊಸ ಹೊಸ ಫೀಚರ್‌ಗಳನ್ನು (WhatsApp New Feature) ಆಗಾಗ ಬಿಡುಗಡೆ ಮಾಡುತ್ತದೆ. ಈಗ ಅಂಥದ್ದೇ ಮತ್ತೊಂದು ವೈಶಿಷ್ಟ್ಯವನ್ನು ರಿಲೀಸ್ ಮಾಡಲಿದೆ. ಬಳಕೆದಾರರು ಚಾಟ್‌ನಲ್ಲಿ ತಮಗೆ ಬೇಕಾದ ಸಂದೇಶವನ್ನು ಪಿನ್ ಮಾಡಲು ಅವಕಾಶವ ಕಲ್ಪಿಸುವ ಫೀಚರ್ ಲಾಂಚ್ ಮಾಡಲಿದೆ(pin a message in chat). ಇದರಿಂದಾಗಿ ಮಹತ್ವದ ಸಂದೇಶವನ್ನು ಚಾಟ್ ಬಾಕ್ಸ್‌ನಲ್ಲಿ ಹುಡುಕುವುದು ತಪ್ಪಲಿದೆ. ಮೆಸೇಜ್ ಮಾತ್ರವಲ್ಲದೇ, ಟೆಕ್ಸ್ಟ್, ಪೋಲ್ಸ್, ಇಮೋಜಿಗಳು, ಲೊಕೇಷನ್ ಮತ್ತು ಫೋಟೋಗಳನ್ನೂ ಕೂಡ ಪಿನ್ ಮಾಡಬಹುದು.
ಕಳೆದ ಕೆಲವು ವರ್ಷಗಳಲ್ಲಿ ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್‌ಗಳ ಹೆಚ್ಚುತ್ತಿರುವ ಜನಪ್ರಿಯತೆಯೊಂದಿಗೆ, ವಾಟ್ಸಾಪ್ ಬಳಕೆದಾರರು ಟೆಲಿಗ್ರಾಮ್ ತರಹದ ಕಾರ್ಯವನ್ನು ಸೇರಿಸಲು ಕೇಳುತ್ತಲೇ ಇದ್ದಾರೆ. ಟೆಲಿಗ್ರಾಮ್‌ಗಿಂತ ಭಿನ್ನವಾಗಿ, ಸಂಭಾಷಣೆಯಲ್ಲಿ ಬಹು ಸಂದೇಶಗಳನ್ನು ಪಿನ್ ಮಾಡಲು ನಿಮಗೆ ಅನುಮತಿಸುತ್ತದೆ. ಆದರೆ, ವಾಟ್ಸಾಪ್ ನಿಮಗೆ ಒಂದು ಸಮಯದಲ್ಲಿ ಒಂದು ಸಂದೇಶವನ್ನು ಮಾತ್ರ ಪಿನ್ ಮಾಡಲು ಅವಕಾಶ ಕಲ್ಪಿಸುತ್ತದೆ.
ಆಂಡ್ರಾಯ್ಡ್‌ನಲ್ಲಿ ಚಾಟ್ ಅನ್ನು ಪಿನ್ ಮಾಡಲು ಹೀಗೆ ಮಾಡಿ; ಚಾಟ್‌ನಲ್ಲಿರುವ ನಿಮಗೆ ಬೇಕಾಗಿರುವ ಸಂದೇಶವನ್ನು ದೀರ್ಘಾವಾಗಿ ಒತ್ತಿ ಹಿಡಿಯಿರಿ. ಬಳಿಕ ಪರದೆಯ ಮೇಲಿನ ಬಲಭಾಗದಲ್ಲಿ ಗೋಚರಿಸುವ ಮೂರು-ಡಾಟ್ ಮೆನುವನ್ನು ಟ್ಯಾಪ್ ಮಾಡಿ. ಈಗ, ‘ಪಿನ್’ ಮೇಲೆ ಕ್ಲಿಕ್ ಮಾಡಿ ಮತ್ತು ಸಂದೇಶವು ಈಗ ವ್ಯಕ್ತಿಯ ಹೆಸರಿನ ಕೆಳಗೆ ಕಾಣಿಸಿಕೊಳ್ಳುತ್ತದೆ. ಆ್ಯಪಲ್ ಸಾಧನಗಳಲ್ಲಿ ಸಂದೇಶದ ಮೇಲೆ ಬಲಕ್ಕೆ ಸ್ವೈಪ್ ಮಾಡಿ ಮತ್ತು ನೀವು ಪಿನ್ ಆಯ್ಕೆಯನ್ನು ನೋಡಲು ಸಾಧ್ಯವಾಗುತ್ತದೆ.
ನೀವು ಸಂದೇಶವನ್ನು 24 ಗಂಟೆಗಳು, 7 ದಿನಗಳು ಅಥವಾ 30 ದಿನಗಳವರೆಗೆ ಪಿನ್ ಮಾಡಲು ಬಯಸುತ್ತೀರಾ ಎಂಬುದನ್ನು ಆಯ್ಕೆ ಮಾಡಲು ವಾಟ್ಸಾಪ್ ನಿಮಗೆ ಅನುಮತಿಸುತ್ತದೆ. ನೀವು ಸಂದೇಶವನ್ನು ಅನ್‌ಪಿನ್ ಮಾಡಲು ಬಯಸಿದರೆ, ಅದೇ ಪ್ರಕ್ರಿಯೆಯನ್ನು ಅನುಸರಿಸಿ. ಪೂರ್ವನಿಯೋಜಿತವಾಗಿ, ಅಪ್ಲಿಕೇಶನ್ 7 ದಿನದ ಆಯ್ಕೆಯನ್ನು ಆಯ್ಕೆ ಮಾಡುತ್ತದೆ. ಸಂದೇಶವನ್ನು ಯಾರು ಪಿನ್ ಮಾಡಬಹುದು ಎಂಬುದನ್ನು ಗ್ರೂಪ್ ಅಡ್ಮಿನ್‌ಗಳು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ವಾಟ್ಸಾಪ್ ಹೇಳಿದೆ.
ಈ ಸುದ್ದಿಯನ್ನೂ ಓದಿ: ವಾಟ್ಸಾಪ್ ಗ್ರೂಪಿನಿಂದ ತೆಗೆದಿದ್ದಕ್ಕೆ ಬಾಸ್ ಮೇಲೆ ಹಲ್ಲೆ ಮಾಡಿ, ಐಫೋನ್ ಒಡೆದ ನೌಕರ!