Site icon Vistara News

WhatsApp Self Chat | ವಾಟ್ಸ್ಆ್ಯಪ್ ಸೆಲ್ಫ್ ಚಾಟ್ ಫೀಚರ್ ಶುರು, ಶೀಘ್ರ ಎಲ್ಲರಿಗೂ ಲಭ್ಯ

Whatsapp is introducing new feature

ನವದೆಹಲಿ: ಜನಪ್ರಿಯ ಆ್ಯಪ್ ವಾಟ್ಸ್ಆ್ಯಪ್ ಬಳಕೆದಾರರಿಗೆ ಅನುಕೂಲವಾಗುವ ಫೀಚರ್‌ಗಳನ್ನು ಜಾರಿಗೊಳಿಸುತ್ತಿದೆ. ಈ ಹಿಂದೆ ಘೋಷಣೆ ಮಾಡಿದಂತೆ ವಾಟ್ಸ್ಆ್ಯಪ್ ಸೆಲ್ಫ್ ಚಾಟ್ (WhatsApp Self Chat) ಫೀಚರ್ ಪರಿಚಯಿಸಿದ್ದು, ಸದ್ಯಕ್ಕೆ ಬೀಟಾ ವರ್ಷನ್‌ನಲ್ಲಿ ಮಾತ್ರ ದೊರೆಯುತ್ತಿದೆ. ಪರೀಕ್ಷೆ ಮುಗಿದ ಬಳಿಕ ಸೆಲ್ಫ್ ಚಾಟ್ ಫೀಚರ್ ಎಲ್ಲ ಬಳಕೆದಾರರಿಗೂ ಶೀಘ್ರವೇ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ನಾಲ್ಕೈದು ಫೀಚರ್‌ಗಳನ್ನು ಆ್ಯಡ್ ಮಾಡಿತ್ತು.

ಸೆಲ್ಫ್ ಚಾಟ್ ಫೀಚರ್ ಮೂಲಕ ಬಳಕೆದಾರರು ತಮ್ಮ ನಂಬರ್‌ಗೆ ತಾವೇ ವಾಟ್ಸ್ಆ್ಯಪ್ ಮಾಡಿಕೊಳ್ಳಬಹುದಾಗಿದೆ. ಸದ್ಯಕ್ಕೆ ಈ ರೀತಿಯ ವಾಟ್ಸ್ಆ್ಯಪ್ ಮಾಡಲು ಅವಕಾಶವಿಲ್ಲ. ಈ ಫೀಚರ್ ಬಳಸಿಕೊಂಡು ಬಳಕೆದಾರರು ಸಿಂಗಲ್ ಚಾಟ್ ವಿಂಡೋ ಕ್ರಿಯೇಟ್ ಮಾಡಿಕೊಂಡು, ತಮಗೆ ಬೇಕಾದ ಮೆಸೇಜ್‌ಗಳು, ಫೈಲ್ಸ್‌ಗಳನ್ನು ಸೇವ್ ಮಾಡಿಕೊಳ್ಳಬಹುದು. ಇದರಿಂದ ಚಾಟ್‌ಗಳಲ್ಲಿ ಹುದುಗಿ ಹೋಗಿರುವ ಮಹತ್ವದ ಸಂದೇಶಗಳನ್ನು ಹುಡುಕುವುದು ತಪ್ಪಲಿದೆ.

ಇಷ್ಟೇ ಅಲ್ಲದೇ, ಈ ಹಿಂದೆ ಘೋಷಣೆ ಮಾಡಿದಂತೆ ವಾಟ್ಸ್ಆ್ಯಪ್ ಹೊಸ ಫೀಚರ್‌ಗಳನ್ನು ಕಳೆದ ಗುರುವಾರ ಲಾಂಚ್ ಮಾಡಿದೆ. ಕಮ್ಯುನಿಟಿ (Community), ಇನ್-ಚಾಟ್ ಪೋಲ್ಸ್ (in-Chat polls), 32 ಜನರ ಗ್ರೂಪ್ ವಿಡಿಯೋ ಕಾಲಿಂಗ್, ಗ್ರೂಪ್ ಸದಸ್ಯರ ಸಂಖ್ಯೆ ಹೆಚ್ಚಳ ಸೇರಿ ಕೆಲವು ಹೊಸ ಫೀಚರ್‌ಗಳನ್ನು (WhatsApp New Feature) ವಾಟ್ಸ್ಆ್ಯಪ್ ಪರಿಚಯಿಸಿದೆ. ಈ ವರ್ಷದ ಆರಂಭದಲ್ಲಿ ವಾಟ್ಸ್ಆ್ಯಪ್ ಒಡೆತನ ಹೊಂದಿರುವ ಮೆಟಾ ಕಂಪನಿಯ ಸಿಇಒ ಮಾರ್ಕ್ ಜುಕರ್‌ಬರ್ಗ್ (Mark Zuckerberg) ಅವರು, ಈ ಎಲ್ಲ ಫೀಚರ್‌ಗಳನ್ನು ಶೀಘ್ರವೇ ಪರಿಚಯಿಸಲಾಗುವುದು ಎಂದು ಘೋಷಿಸಿದ್ದರು. ಅದರಂತೆ, ವಾಟ್ಸ್ಆ್ಯಪ್ ಈ ಎಲ್ಲ ಫೀಚರ್‌ಗಳನ್ನು ಜಾರಿಗೆ ತಂದಿದ್ದು ಶೀಘ್ರವೇ ಎಲ್ಲರಿಗೂ ಸೆಲ್ಫ್ ಚಾಟ್ ಜಾರಿಗೆ ಬರಲಿದೆ.

ಇದನ್ನೂ ಓದಿ | WhatsApp | ವಾಟ್ಸ್ಆ್ಯಪ್‌ನಿಂದ ಸೆಪ್ಟೆಂಬರ್‌ನಲ್ಲಿ 26 ಲಕ್ಷ ಖಾತೆಗಳಿಗೆ ನಿಷೇಧ

Exit mobile version