ನವದೆಹಲಿ: ಬಳಕೆದಾರರ ಅನುಭವವನ್ನು ಹೆಚ್ಚಿಸುವ ಮತ್ತು ಸುರಕ್ಷತೆಯನ್ನು ಖಾತ್ರಿ ಪಡಿಸುವ ಬಗ್ಗೆ ಮೆಟಾ (Meta) ಒಡೆತನದ ವಾಟ್ಸ್ಆ್ಯಪ್ ಹೊಸ ಫೀಚರ್ಸ್ ಬಗ್ಗೆ ಕೆಲಸ ಮಾಡುತ್ತಿದೆ. ಇದೀಗ ವಾಟ್ಸ್ಆ್ಯಪ್ ಕಾಲ್ಸ್ ಟ್ಯಾಬ್ (WhatsApp Calls Tab) ಎಂಬ ಹೊಸ ಫೀಚರ್ ಅಭಿವೃದ್ಧಿಪಡಿಸುತ್ತಿದೆ. ಈ ಫೀಚರ್ ವಿಶೇಷವಾಗಿ ಡೆಸ್ಕ್‌ಟಾಪ್ ಬಳಕೆದಾರರಿಗೆ ಹೆಚ್ಚು ನೆರವು ಒದಗಿಸಲಿದೆ. ಡೆಸ್ಕ್‌ಟಾಪ್ ಬಳಕೆದಾರರು ಕಾಲ್ ಲಿಸ್ಟ್ ಮತ್ತು ಕಾಲ್ ಮಾಡಿದವರ ವಿವರವನ್ನು ಪಡೆದುಕೊಳ್ಳಬಹುದಾಗಿದೆ. ಈಗಾಗಲೇ ಆಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್ ಬಳಕೆದಾರರಲ್ಲಿ ಈ ವೈಶಿಷ್ಟ್ಯ ಲಭ್ಯವಿದೆ.
ವಾಟ್ಸ್ಆ್ಯಪ್ ಬೀಟಾ ವಿಂಡೋಸ್ ಬಳಕೆದಾರರಿಗೆ ವಾಟ್ಸ್ಆ್ಯಪ್ ಸೈಡ್ ಬಾರ್ ಆರಂಭಿಸಿದೆ. ಇದರಿಂದಾಗಿ ಬಳಕೆದಾರರು ಚಾಟ್ ಲಿಸ್ಟ್, ಸ್ಟೇಟಸ್ ಅಪ್‌ಡೇಟ್, ಸೆಟ್ಟಿಂಗ್ಸ್ ಆಯ್ಕೆಗಳ ಟ್ಯಾಬ್ ಅನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಈಗ ವಾಟ್ಸ್ಆ್ಯಪ್ ಸೈಡ್‌ಬಾರ್‌ನಲ್ಲಿ ಮತ್ತೊಂದು ಟ್ಯಾಬ್ ರಿಲೀಸ್ ಮಾಡಲಿದೆ. ಈ ಟ್ಯಾಬ್‌ಗೆ ಕಾಲ್ಸ್ ಟ್ಯಾಬ್ ಎಂದು ಕರೆಯಲಾಗುತ್ತಿದೆ. ಬಳಕೆದಾರರು ಈ ಟ್ಯಾಬ್‌ನಲ್ಲಿ ವಾಯ್ಸ್ ಮ್ತುತ ವಿಡಿಯೋ ಕಾಲ್‌ಗಳ ಕಾಲ್ ಹಿಸ್ಟರಿಯನ್ನು ಚೆಕ್ ಮಾಡಬಹುದು. ಸದ್ಯದಲ್ಲೇ ಫೀಚರ್ ಎಲ್ಲರಿಗೂ ದೊರೆಯಲಿದೆ.
ಶೀಘ್ರ ಸ್ಕ್ರೀನ್ ಲಾಕ್ ಫೀಚರ್
ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮೆಟಾ(Meta) ಒಡೆತನದ ವಾಟ್ಸ್ಆ್ಯಪ್ ಅನೇಕ ಸೆಕ್ಯುರಿಟಿ ಫೀಚರ್ಸ್ ಅಳವಡಿಸಿದೆ. ಇದೀಗ ಮತ್ತೊಂದು ಸ್ತರದ ಸುರಕ್ಷತೆಯನ್ನು (WhatsApp New Feature) ಒದಗಿಸಲು ಮುಂದಾಗಿದೆ. ವಾಟ್ಸ್‌ಆ್ಯಪ್ ಇನ್ನೂ ಹೆಚ್ಚಿನ ಸುರಕ್ಷತೆಗಾಗಿ ಸ್ಕ್ರೀನ್ ಲಾಕ್ ಎಂಬ ಹೊಸ ಫೀಚರ್ ಕುರಿತು ಕೆಲಸ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಅನಧಿಕೃತ ಬಳಕೆದಾರರಿಗೆ ವಾಟ್ಸ್ಆ್ಯಪ್ ಮಾಹಿತಿಯನ್ನು ನೋಡಲು ಸಾಧ್ಯವಾಗುವುದಿಲ್ಲ. ವಿಬೀಟಾಇನ್ಫೋ ಪ್ರಕಾರ, ಈ ಫೀಚರ್ ಇನ್ನೂ ಅಭಿವೃದ್ಧಿಯ ಹಂತದಲ್ಲಿದ್ದು, ಯಾವಾಗ ಬಳಕೆದಾರರಿಗೆ ದೊರೆಯಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿಯೂ ಇಲ್ಲ. ಈ ಫೀಚರ್ ವೆಬ್/ಡೆಸ್ಕ್‌ಟಾಪ್ ಬಳಕೆದಾರರಿಗೆ ಹೆಚ್ಚು ನೆರವು ನೀಡಲಿದೆ.
ಸ್ಕ್ರೀನ್ ಲಾಕ್ ಫೀಚರ್ ಸದ್ಯಕ್ಕೆ ವೆಬ್/ಡೆಸ್ಕ್‌ಟಾಪ್ ಬಳಕೆದಾರರಿಗೆ ಇಲ್ಲ. ಈ ಬಳಕೆದಾರರಿಗೂ ಸುರಕ್ಷತೆಯನ್ನು ಹೆಚ್ಚಿಸುವುದಕ್ಕಾಗಿ ವಾಟ್ಸ್ಆ್ಯಪ್ ಈ ಫೀಚರ್ ಅನ್ನು ಅಭಿವೃದ್ಧಿ ಮಾಡುತ್ತಿದೆ. ಈಗ ಗೊತ್ತಾಗಿರುವ ಮಾಹಿತಿಯ ಪ್ರಕಾರ, ಡೆಸ್ಕ್‌ಟಾಪ್/ವೆಬ್‌ನಲ್ಲಿ ಪ್ರತಿಬಾರಿಯೂ ವಾಟ್ಸ್ಆ್ಯಪ್ ಅಕ್ಸೆಸ್ ಮಾಡುವಾಗ ಪಾಸ್‌ವರ್ಡ್ ನಮೂದಿಸುವುದು ಕಡ್ಡಾಯವಾಗಲಿದೆ. ವಿಶೇಷವಾಗಿ ನಿಮ್ಮ ಪರ್ಸನಲ್ ಕಂಪ್ಯೂಟರ್ ಅನ್ನು ಮತ್ತೊಬ್ಬರು ಬಳಸುತ್ತಿದ್ದರೆ ಅಂಥ ಸಂದರ್ಭದಲ್ಲಿ ಈ ಫೀಚರ್ ಹೆಚ್ಚು ಉಪಯೋಗಕ್ಕೆ ಬರಲಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ | Whatsapp New Feature | ವಾಟ್ಸ್ಆ್ಯಪ್‌ಗೆ ಮತ್ತೊಂದು ಸ್ತರದ ಸುರಕ್ಷತೆ! ಈ ಹೊಸ ಫೀಚರ್ ಯಾವಾಗ ಸಿಗಲಿದೆ?