ಬೆಂಗಳೂರು: ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp), ಮತ್ತೊಂದು ಹೊಸ ಫೀಚರ್ (New Feature) ಲಾಂಚ್ ಮಾಡಲಿದೆ. ಸಾಮಾನ್ಯವಾಗಿ ವಾಟ್ಸಾಪ್‌ನಲ್ಲಿ ಯಾವುದೇ ಇಮೇಜ್ ಕಳುಹಿಸಿದಾಗ, ಅದು ತನ್ನ ಮೂಲ ಸೈಜಿನಲ್ಲಿ ಸೆಂಡ್ ಆಗುವುದಿಲ್ಲ. ಆಗ, ಆ ಇಮೇಜ್‌ನ ಕ್ವಾಲಿಟಿ ಹೊರಟು ಹೋಗುತ್ತದೆ. ಹಾಗಾಗಿ, ಬಳಕೆದಾರರು, ಯಾವುದೇ ಚಿತ್ರವನ್ನು ಡಾಕ್ಯುಮೆಂಟ್‌ನಲ್ಲಿ ಕಳುಹಿಸುತ್ತಿದ್ದರು. ಆದರೆ ಇದು ಸರಿಯಾದ ಕ್ರಮವಲ್ಲ. ಬಳಕೆದಾರರು ಎದುರಿಸುತ್ತಿದ್ದ ಸಮಸ್ಯೆಗೆ ವಾಟ್ಸಾಪ್ ಶೀಘ್ರವೇ ಮುಕ್ತಿ ಹಾಡಲಿದೆ. ಒರಿಜಿನಲ್ ಸೈಜಿನಲ್ಲಿ ಅಥವಾ ಹೈ ಕ್ವಾಲಿಟಿ ಚಿತ್ರಗಳನ್ನು ಕಳುಹಿಸಲು ಸಾಧ್ಯವಾಗುವ ಫೀಚರ್ ಅನ್ನು ವಾಟ್ಸಾಪ್ ಶೀಘ್ರವೇ ಬಿಡುಗಡೆ ಮಾಡಲಿದೆ. ಈ ಹೊಸ ಫೀಚರ್‌ನಿಂದ ಬಳಕೆದಾರರಿಗೆ ಸಾಕಷ್ಟು ಅನುಕೂಲವಾಗಲಿದೆ. ಬಳಕೆದಾರರ ಹಿತದೃಷ್ಟಿಯಿಂದ ವಾಟ್ಸಾಪ್ ಅನೇಕ ಹೊಸ ಹೊಸ ಫೀಚರ್‌ಗಳನ್ನು ಆಗಾಗ ಬಿಡುಗಡೆ ಮಾಡುತ್ತಲೇ ಇರುತ್ತದೆ.
WABetaInfo ವರದಿಯ ಪ್ರಕಾರ, ಬೀಟಾ ಟೆಸ್ಟಿಂಗ್ ಆವೃತ್ತಿ 2.23.2.11 ನವೀಕರಣವನ್ನು ಪ್ರಾರಂಭಿಸಿದೆ. ಇದು ವಾಟ್ಸಾಪ್‌ನಲ್ಲಿ ಯಾರಿಗಾದರೂ ಫೋಟೋಗಳನ್ನು ಅವುಗಳ ಮೂಲ ಗುಣಮಟ್ಟದಲ್ಲಿ ಕಳುಹಿಸಲು ಹೊಸ ಮಾರ್ಗವನ್ನು ತರುತ್ತದೆ. ಎಲ್ಲಾ ಬಳಕೆದಾರರಿಗೆ ಭವಿಷ್ಯದ ನವೀಕರಣದಲ್ಲಿ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲಾಗುವುದು ಮತ್ತು ಸದ್ಯಕ್ಕೆ, ಬಳಕೆದಾರರು ಪರಿಹಾರಗಳನ್ನು ಬಳಸುವುದನ್ನು ಮುಂದುವರಿಸಬೇಕಾಗುತ್ತದೆ ಎನ್ನಲಾಗಿದೆ.
ವರದಿಗಳ ಪ್ರಕಾರ, ವಾಟ್ಸಾಪ್, ಇಮೇಜ್ ಪ್ರಿವ್ಯೂ(image preview) ಹೊಸ ಸೆಕ್ಷನ್ ಅನ್ನು ಆರಂಭಿಸಲಿದೆ. ಈ ಆಪ್ಷನ್ ಬಳಸಿಕೊಂಡು ಬಳಕೆದಾರರು ಫೋಟೋವನ್ನು ಕಳುಹಿಸವಾಗ, ಯಾವ ಕ್ವಾಲಿಟಿಯಲ್ಲಿ ಫೋಟೋವನ್ನು ಕಳುಹಿಸಬೇಕು ಎಂಬುದನ್ನು ನಿರ್ಧರಿಸಲು ಸುಲಭವಾಗಲಿದೆ. ಫೋಟೋಗಳನ್ನು ಕಳುಹಿಸುವಾಗ ಅವುಗಳ ಕ್ವಾಲಿಟಿಯ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಲು ಈ ಹೊಸ ಫೀಚರ್ ಬಳಕೆದಾರರಿಗೆ ಅವಕಾಶವನ್ನು ಕಲ್ಪಿಸಲಿದೆ. ಓರಿಜಿನಲ್ ಸೈಜಿನಲ್ಲಿ ಫೋಟೋ ಕಳುಹಿಸುವ ಈ ಹೊಸ ಫೀಚರ್ ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ.
ಇದನ್ನೂ ಓದಿ WhatsApp New Feature | ಆ್ಯಕ್ಸಿಡೆಂಟಲ್ ಡಿಲೀಟ್ ಹೊಸ ಫೀಚರ್ ಪರಿಚಯಿಸಿದ ವಾಟ್ಸ್ಆ್ಯಪ್!
ಈ ಹೊಸ ಫೀಚರ್ ಎಲ್ಲ ಬಳಕೆದಾರರಿಗೂ ಲಭ್ಯವಾಗಲಿದೆ. ವಾಟ್ಸಾಪ್ ಇದೇ ವೇಳೆ, ಹೊಸ ವಾಯ್ಸ್ ಸ್ಟೇಟಸ್ ಅಪ್‌ಡೇಟ್ ಫೀಚರ್ ಬಗ್ಗೆಯೂ ಕೆಲಸ ಮಾಡುತ್ತಿದೆ. ಈ ಫೀಚರ್ ಮೂಲಕ ಬಳಕೆದಾರರು, ವಾಯ್ಸ್ ನೋಟ್‌ಗಳನ್ನು ಸ್ಟೇಟಸ್ ಆಗಿ ಬಳಸಬಹುದು. ರೆಕಾರ್ಡಿಂಗ್ ಅನ್ನು ಹಂಚಿಕೊಳ್ಳುವ ಮೊದಲು ಅದನ್ನು ತಿರಸ್ಕರಿಸುವ ಸಾಮರ್ಥ್ಯವನ್ನು ನೀಡುವ ಮೂಲಕ ಕಂಪನಿಯು ಬಳಕೆದಾರರಿಗೆ ಅವರ ಧ್ವನಿ ರೆಕಾರ್ಡಿಂಗ್‌ಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ಒದಗಿಸುವ ಫೀಚರ್ ಬಗ್ಗೆ ಕೆಲಸ ಮಾಡುತ್ತಿದೆ ಎನ್ನಲಾಗುತ್ತಿದೆ.