ನವದೆಹಲಿ: ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮೆಟಾ(Meta) ಒಡೆತನದ ವಾಟ್ಸ್ಆ್ಯಪ್ ಅನೇಕ ಸೆಕ್ಯುರಿಟಿ ಫೀಚರ್ಸ್ ಅಳವಡಿಸಿದೆ. ಇದೀಗ ಮತ್ತೊಂದು ಸ್ತರದ ಸುರಕ್ಷತೆಯನ್ನು (WhatsApp New Feature) ಒದಗಿಸಲು ಮುಂದಾಗಿದೆ. ವಾಟ್ಸ್‌ಆ್ಯಪ್ ಇನ್ನೂ ಹೆಚ್ಚಿನ ಸುರಕ್ಷತೆಗಾಗಿ ಸ್ಕ್ರೀನ್ ಲಾಕ್ ಎಂಬ ಹೊಸ ಫೀಚರ್ ಕುರಿತು ಕೆಲಸ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಅನಧಿಕೃತ ಬಳಕೆದಾರರಿಗೆ ವಾಟ್ಸ್ಆ್ಯಪ್ ಮಾಹಿತಿಯನ್ನು ನೋಡಲು ಸಾಧ್ಯವಾಗುವುದಿಲ್ಲ. ವಿಬೀಟಾಇನ್ಫೋ ಪ್ರಕಾರ, ಈ ಫೀಚರ್ ಇನ್ನೂ ಅಭಿವೃದ್ಧಿಯ ಹಂತದಲ್ಲಿದ್ದು, ಯಾವಾಗ ಬಳಕೆದಾರರಿಗೆ ದೊರೆಯಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿಯೂ ಇಲ್ಲ. ಈ ಫೀಚರ್ ವೆಬ್/ಡೆಸ್ಕ್‌ಟಾಪ್ ಬಳಕೆದಾರರಿಗೆ ಹೆಚ್ಚು ನೆರವು ನೀಡಲಿದೆ.
ಸ್ಕ್ರೀನ್ ಲಾಕ್ ಫೀಚರ್ ಸದ್ಯಕ್ಕೆ ವೆಬ್/ಡೆಸ್ಕ್‌ಟಾಪ್ ಬಳಕೆದಾರರಿಗೆ ಇಲ್ಲ. ಈ ಬಳಕೆದಾರರಿಗೂ ಸುರಕ್ಷತೆಯನ್ನು ಹೆಚ್ಚಿಸುವುದಕ್ಕಾಗಿ ವಾಟ್ಸ್ಆ್ಯಪ್ ಈ ಫೀಚರ್ ಅನ್ನು ಅಭಿವೃದ್ಧಿ ಮಾಡುತ್ತಿದೆ. ಈಗ ಗೊತ್ತಾಗಿರುವ ಮಾಹಿತಿಯ ಪ್ರಕಾರ, ಡೆಸ್ಕ್‌ಟಾಪ್/ವೆಬ್‌ನಲ್ಲಿ ಪ್ರತಿಬಾರಿಯೂ ವಾಟ್ಸ್ಆ್ಯಪ್ ಅಕ್ಸೆಸ್ ಮಾಡುವಾಗ ಪಾಸ್‌ವರ್ಡ್ ನಮೂದಿಸುವುದು ಕಡ್ಡಾಯವಾಗಲಿದೆ. ವಿಶೇಷವಾಗಿ ನಿಮ್ಮ ಪರ್ಸನಲ್ ಕಂಪ್ಯೂಟರ್ ಅನ್ನು ಮತ್ತೊಬ್ಬರು ಬಳಸುತ್ತಿದ್ದರೆ ಅಂಥ ಸಂದರ್ಭದಲ್ಲಿ ಈ ಫೀಚರ್ ಹೆಚ್ಚು ಉಪಯೋಗಕ್ಕೆ ಬರಲಿದೆ ಎಂದು ತಿಳಿದು ಬಂದಿದೆ.
ನೆನಪಿನಲ್ಲಿರಲಿ. ಈ ಫೀಚರ್ ಆಪ್ಷನಲ್ ಆಗಿದೆ. ಬೇಕಿದ್ದರೆ ಮಾತ್ರ ಎನೇಬಲ್ ಮಾಡಿಕೊಳ್ಳಬಹುದು. ಹಾಗೆಯೇ ಆ್ಯಪ್‌ಗೆ ಪಾಸ್ವರ್ಡ್ ಹಾಕುವಾಗ ಬಳಕೆದಾರರಿಗೆ ಹೆಚ್ಚು ಆಯ್ಕೆಗಳು ದೊರೆಯಲಿವೆ ಎಂದು ಹೇಳಬಹುದು. ಅಂದ ಹಾಗೆ, ನೀವು ನೀಡುವ ಪಾಸ್ವ್‌ವರ್ಡ್ ವಾಟ್ಸ್ಆ್ಯಪ್ ತನ್ನೊಂದಿಗೆ ಷೇರ್ ಮಾಡಿಕೊಳ್ಳುವುದಿಲ್ಲ. ಅದು ಸ್ಥಳೀಯವಾಗಿಯೇ ಸೇವ್ ಆಗಿರಲಿದೆ. ಒಂದು ವೇಳೆ, ನೀವು ವಾಸ್‌ವರ್ಡ್ ಕಳೆದುಕೊಂಡರೆ, ನೀವು ಆಗ ಆ್ಯಪ್‌ನಿಂದ ಲಾಗ್‌ಔಟ್ ಆಗಬೇಕಾಗುತ್ತದೆ. ಬಳಿಕ ಮತ್ತೆ ಕ್ಯೂರ್ ಕೋಡ್ ಬಳಸಿಕೊಂಡು ಮತ್ತೆ ವಾಟ್ಸ್ಆ್ಯಪ್ ಲಾಗ್ ಇನ್ ಆಗಬಹುದು. ಈ ಫೀಚರ್ ಅನ್ನು ಅಭಿವೃದ್ಧಿಯ ಹಂತದಲ್ಲಿ ಇರುವುದರಿಂದ ಇನ್ನ ಬಹಳಷ್ಟು ಮಾಹಿತಿಗಳು ಲಭ್ಯವಿಲ್ಲ.
ಇದನ್ನೂ ಓದಿ | WhatsApp New Feature | ವಾಟ್ಸ್ಆ್ಯಪ್‌ನಿಂದ ಶೀಘ್ರ ಡು ನಾಟ್ ಡಿಸ್ಟರ್ಬ್ ಫೀಚರ್!