ನವದೆಹಲಿ: ಈ ಹಿಂದೆ ಘೋಷಣೆ ಮಾಡಿದಂತೆ ವಾಟ್ಸ್ಆ್ಯಪ್ ಹೊಸ ಫೀಚರ್‌ಗಳನ್ನು ಗುರುವಾರ ಲಾಂಚ್ ಮಾಡಿದೆ. ಕಮ್ಯುನಿಟಿ (Community), ಇನ್-ಚಾಟ್ ಪೋಲ್ಸ್ (in-Chat polls), 32 ಜನರ ಗ್ರೂಪ್ ವಿಡಿಯೋ ಕಾಲಿಂಗ್, ಗ್ರೂಪ್ ಸದಸ್ಯರ ಸಂಖ್ಯೆ ಹೆಚ್ಚಳ ಸೇರಿ ಕೆಲವು ಹೊಸ ಫೀಚರ್‌ಗಳನ್ನು (WhatsApp New Feature) ವಾಟ್ಸ್ಆ್ಯಪ್ ಪರಿಚಯಿಸಿದೆ. ಈ ವರ್ಷದ ಆರಂಭದಲ್ಲಿ ವಾಟ್ಸ್ಆ್ಯಪ್ ಒಡೆತನ ಹೊಂದಿರುವ ಮೆಟಾ ಕಂಪನಿಯ ಸಿಇಒ ಮಾರ್ಕ್ ಜುಕರ್‌ಬರ್ಗ್ (Mark Zuckerberg) ಅವರು, ಈ ಎಲ್ಲ ಫೀಚರ್‌ಗಳನ್ನು ಶೀಘ್ರವೇ ಪರಿಚಯಿಸಲಾಗುವುದು ಎಂದು ಘೋಷಿಸಿದ್ದರು.
ಆಂಡ್ರಾಯ್ಡ್ ಫೋನುಗಳಲ್ಲಿ ಕಮ್ಯುನಿಟಿ ಫೀಚರ್ ಅನ್ನು ಬಳಸಲು ಬಳಕೆದಾರರು ತಮ್ಮ ಚಾಟ್ಸ್‌ನ ಮೇಲ್ಭಾಗದಲ್ಲಿ ಕಾಣುವ ನ್ಯೂ ಕಮ್ಯುನಿಟಿಸ್ ಟ್ಯಾಬ್ ಮೇಲೆ ಟ್ಯಾಪ್ ಮಾಡಬೇಕು. ಅದೇ ರೀತಿ, ಐಒಎಸ್‌ನಲ್ಲಿ ಚಾಟ್‌ನ ಬಾಟಮ್‌ನಲ್ಲಿರುವ ಆಪ್ಷನ್ ಮೇಲೆ ಟ್ಯಾಪ್ ಮಾಡಬೇಕು. ಒಮ್ಮೆ ನೀವು, ವಾಟ್ಸ್ಆ್ಯಪ್‌ನಲ್ಲಿ ಕಮ್ಯುನಿಟಿ ಸೇರಿಕೊಂಡ ಬಳಿಕ, ಲಭ್ಯವಿರುವ ಗ್ರೂಪ್‌ಗಳಿಂದ ನಿಮಗೆ ಬೇಕಿರುವ ಮಾಹಿತಿಯನ್ನು ಪಡೆದುಕೊಳ್ಳಬಹುದು. ಜತೆಗೇ, ಅಡ್ಮಿನ್‌ಗಳು ಕಮ್ಯುನಿಟಿಯಲ್ಲಿರುವ ಪ್ರತಿಯೊಬ್ಬರಿಗೆ ಪ್ರಮುಖ ಅಪ್‌ಡೇಟ್ಸ್ ಕಳುಹಿಸಬಹುದು.
ಅದೇ ರೀತಿ, ಇನ್-ಚಾಟ್ ಪೋಲ್ಸ್ ಫೀಚರ್ ಕೂಡ ಲಾಂಚ್ ಮಾಡಿದೆ. ಈ ಫೀಚರ್ ಬಳಸಿಕೊಂಡು ಬಳಕೆದಾರರು ಸಮೀಕ್ಷೆ ಕೈಗೊಳ್ಳಬಹುದು. 12 ಪ್ರಶ್ನೆಗಳನ್ನು ಕೇಳಲು ಅವಕಾಶವಿರುತ್ತದೆ. ಇದಕ್ಕಾಗಿ ಆ್ಯಪ್‌ನೊಳಗೇ ಪ್ರತ್ಯೇಕ ಸ್ಕ್ರೀನ್ ಕೂಡ ಲಭ್ಯವಾಗುತ್ತದೆ. ಈ ಎಲ್ಲ ಫೀಚರ್ಸ್ ಪಡೆಯಲು ಬಳಕೆದಾರರು ತಮ್ಮ ವಾಟ್ಸ್ಆ್ಯಪ್ ಅನ್ನು ಅಪ್‌ಡೇಟ್ ಮಾಡಿಕೊಳ್ಳಬೇಕಾಗುತ್ತದೆ.
ಗ್ರೂಪ್ ವಿಡಿಯೋ ಕಾಲ್ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಈಗ ವಾಟ್ಸ್ಆ್ಯಪ್‌ನಲ್ಲಿ 32 ಮಂದಿಗೆ ಗ್ರೂಪ್ ವಿಡಿಯೋ ಕಾಲ್ ಮಾಡಬಹುದು. ಜತೆಗೆ ಗ್ರೂಪ್ ಸದಸ್ಯರ ಸಂಖ್ಯೆಯನ್ನು 1024ಕ್ಕೆ ಹೆಚ್ಚಿಸಲಾಗಿದೆ. ಮೊದಲು 512 ಜನರ ಗ್ರೂಪ್ ಮಾತ್ರ ಸಾಧ್ಯವಿತ್ತು. ಈ ಫೀಚರ್ಸ್ ಹೊರತಾಗಿ, ವಾಟ್ಸ್ಆ್ಯಪ್ ಲಾರ್ಜ್ ಫೈಲ್ ಷೇರಿಂಗ್, ಎಮೋಜಿ ರಿಯಾಕ್ಷನ್ಸ್, ಅಡ್ಮಿನ್ ಡಿಲಿಟ್ ಫೀಚರ್ಸ್ ಕೂಡ ಪರಿಚಯಿಸಲಾಗಿದೆ.
ಇದನ್ನೂ ಓದಿ | WhatsApp New Feature | ಇನ್ನು ಬಳಕೆದಾರರು ತಮಗೆ ತಾವೇ ವಾಟ್ಸ್ಆ್ಯಪ್ ಮೆಸೇಜ್ ಕಳುಹಿಸಬಹುದು!