ನವದೆಹಲಿ: ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp) ಮತ್ತೊಂದು ಹೊಸ ಫೀಚರ್ ಪರಿಚಯಿಸಿದೆ (WhatsApp New Feature). ಬಳಕೆದಾರರು ವಾಟ್ಸಾಪ್ ಮೂಲಕ ಇನ್ನು ಹೈ ಡೆಫಿನಿಷನ್ (high definition -HD) ಫೋಟೋಗಳನ್ನು ಕಳಿಸಬಹುದು. ”ವಾಟ್ಸಾಪ್‌ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಪ್ರಕ್ರಿಯೆಯನ್ನು ಅಪ್‌ಗ್ರೇಡ್ ಮಾಡಲಾಗಿದ. ಈಗ ನೀವು ಎಚ್‌ಡಿ ಫೋಟೋಗಳನ್ನು ಕಳುಹಿಸಬಹುದು ಮೆಟಾ ಸಿಇಒ (Meta CEO) ಎಂದು ಮಾರ್ಕ್ ಜುಕರ್‌ಬರ್ಗ್ (Mark Zuckerberg) ಫೇಸ್‌ಬುಕ್ ಪೋಸ್ಟ್‌ನಲ್ಲಿ (Facebook post) ವಿಡಿಯೊದೊಂದಿಗೆ ಹಂಚಿಕೊಂಡಿದ್ದಾರೆ.
ಫೋಟೋ ಸೆಂಡ್ ಮಾಡಲು ಸ್ಟ್ಯಾಂಡರ್ಡ್ ಗುಣಮಟ್ಟವು ಡೀಫಾಲ್ಟ್ ಆಯ್ಕೆಯಾಗಿದ್ದು, ಇದರಲ್ಲಿ ಫೋಟೋಗಳನ್ನು ಅಪ್ಲಿಕೇಶನ್‌ನಲ್ಲಿ ಕಳುಹಿಸಲಾಗುತ್ತದೆ ಎಂದು ವಾಟ್ಸಾಪ್ ಹೇಳಿದೆ. ಬಳಕೆದಾರರು ಕಡಿಮೆ ಬ್ಯಾಂಡ್‌ವಿಡ್ತ್ ಸಂಪರ್ಕದಲ್ಲಿ ವಾಟ್ಸಾಪ್‌ನಲ್ಲಿ ಚಿತ್ರವನ್ನು ಸ್ವೀಕರಿಸಿದರೆ, ಅವನು/ಅವಳು ಪ್ರಮಾಣಿತ ಆವೃತ್ತಿಯನ್ನು ಇಟ್ಟುಕೊಳ್ಳಬೇಕೆ ಅಥವಾ ಅದನ್ನು ಎಚ್‌ಡಿಗೆ ಅಪ್‌ಗ್ರೇಡ್ ಮಾಡಬೇಕೇ ಎಂಬುದನ್ನು ಫೋಟೋ-ಬೈ-ಫೋಟೋ ಆಧಾರದ ಮೇಲೆ ಆಯ್ಕೆ ಮಾಡಬಹುದಾಗಿದೆ.
ಎಚ್‌ಡಿ ಫೋಟೋಗಳ ಫೀಚರ್ ಮುಂದಿನ ಕೆಲವು ವಾರಗಳಲ್ಲಿ ಜಾಗತಿಕವಾಗಿ ಬಳಕೆಗೆ ಸಿಗಲಿದೆ. ಇದಾದ ಬಳಿಕ ಶೀಘ್ರವೇ ಎಚ್‌ಡಿ ವಿಡಿಯೋಗಳನ್ನು ಕಳುಹಿಸಲು ವಾಟ್ಸಾಪ್ ಅವಕಾಶ ಕಲ್ಪಿಸಲಿದೆ ಎಂದು ಹೇಳಲಾಗುತ್ತಿದೆ.
ಇದಕ್ಕೂ ಮೊದಲು, ವಾಟ್ಸಾಪ್ ಬಳಕೆದಾರರು ತಮ್ಮ ವಾಟ್ಸಾಪ್ ವಿಡಿಯೋ ಕಾಲ್ ವೇಳೆ ವಿಡಿಯೋ ಷೇರಿಂಗ್ ಫೀಚರ್ ಪರಿಚಯಸಲಾಗುತ್ತಿದೆ ಎಂದು ಮಾರ್ಕ್ ಜುಕರ್‌ಬರ್ಗ್ ಅವರು ಘೋಷಿಸಿದ್ದರು. ಈ ವೈಶಿಷ್ಟ್ಯವು ಬಳಕೆದಾರರಿಗೆ ಕಾಲ್ ಸಮಯದಲ್ಲಿ ಸ್ಕ್ರೀನ್ ಲೈವ್ ವೀಕ್ಷಣೆಯನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ. ಅಂದರೆ, ಕಾಲ್ ಮಧ್ಯೆಯೇ, ನೀವು ಡಾಕ್ಯುಮೆಂಟ್‌ಗಳನ್ನು ಹಂಚಿಕೊಳ್ಳುವುದು, ಕುಟುಂಬದೊಂದಿಗೆ ಫೋಟೋಗಳನ್ನು ಬ್ರೌಸ್ ಮಾಡುವುದು, ರಜೆಯ ಯೋಜನೆ ಅಥವಾ ಸ್ನೇಹಿತರೊಂದಿಗೆ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವುದನ್ನು ಒಳಗೊಂಡಿರಬಹುದು.
ಇನ್ನು ವಾಟ್ಸಾಪ್ ಗ್ರೂಪ್‌ಗಳಲ್ಲಿ ಫೋನ್ ನಂಬರ್ ಯಾರಿಗೂ ಕಾಣಿಸದಂತೆ ಮಾಡಬಹುದು!
ತನ್ನ ಬಳಕೆದಾರರಿಗೆ ನೆರವು ಒದಗಿಸಲು ವಾಟ್ಸಾಪ್ ಹೊಸ ಅಪ್‌ಡೇಟ್‌ಗಳನ್ನು (WhatsApp New Feature) ನೀಡುತ್ತದೆ. ಹೊಸ ಫೀಚರ್‌ಗಳನ್ನು ಲಾಂಚ್ ಮಾಡುವ ಮೂಲಕ ವಾಟ್ಸಾಪ್ ಬಳಕೆಯ ಅನುಭವವನ್ನು ಹೆಚ್ಚಿಸುತ್ತದೆ. ಈಗ ವಾಟ್ಸಾಪ್ ಗ್ರೂಪ್‌ಗಳಲ್ಲಿ (WhatsApp Groups) ಸದಸ್ಯರು ತಮ್ಮ ನಂಬರ್‌ಗಳನ್ನು ಅಡಗಿಸಿಡುವ ಅವಕಾಶವನ್ನು ಕಲ್ಪಿಸುತ್ತಿದೆ. ಅಂದರೆ, ಯಾವುದೇ ವಾಟ್ಸಾಪ್ ಗ್ರೂಪ್‌ಗಳಿಗೆ ಸೇರಿಕೊಂಡಾಗ ಇತರ ಸದಸ್ಯರಿಗೆ ನಿಮ್ಮ ಫೋನ್ ನಂಬರ್ ಕಾಣದಂತೆ ಮಾಡಬಹುದು. ಈ ಫೀಚರ್‌ಗೆ ವಾಟ್ಸಾಪ್ ಫೋನ್ ನಂಬರ್ ಪ್ರೈವೇಸಿ (phone number privacy) ಎಂದು ಹೆಸರಿಟ್ಟಿದೆ. ಈ ಹೊಸ ಫೀಚರ್ ಎಲ್ಲ ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಿಗೆ ದೊರೆಯಲಿದೆ.
ಈ ಸುದ್ದಿಯನ್ನೂ ಓದಿ: WhatsApp Chat: ನಂಬರ್ ಸೇವ್ ಮಾಡದೇ ವಾಟ್ಸಾಪ್ ಚಾಟ್ ಮಾಡುವುದು ಹೇಗೆ? ಇಲ್ಲಿದೆ ಡೀಟೆಲ್ಸ್…
ಈ ಫೀಚರ್ ಮೂಲಕ ಬಳಕೆದಾರರು ಸಂಭಾಷಣೆಗಳಲ್ಲಿ ಭಾಗವಹಿಸಬಹುದು ಮತ್ತು ಗ್ರೂಪ್‌ಗಳ ಇತರ ಸದಸ್ಯರಿಂದ ತಮ್ಮ ಹೆಸರುಗಳು ಮತ್ತು ಫೋನ್ ಸಂಖ್ಯೆಗಳನ್ನು ಮರೆಮಾಡುವ ಮೂಲಕ ಸಂದೇಶಗಳಿಗೆ ತಮ್ಮ ಪ್ರತಿಕ್ರಿಯೆಗಳನ್ನು ಮಾಡಬಹುದು. ಎಲ್ಲ ಬಳಕೆದಾರರಿಗೆ ಈ ಫೀಚರ್ ಯಾವಾಗ ಲಭ್ಯವಾಗಲಿದೆ ಎಂಬುದನ್ನು ವಾಟ್ಸಾಪ್ ಇನ್ನೂ ಬಹಿರಂಗೊಳಿಸಿಲ್ಲ. WABetainfo ವರದಿಯ ಪ್ರಕಾರ, ವಾಟ್ಸಾಪ್ ಎಲ್ಲಾ ಆಂಡ್ರಾಯ್ಡ್ ಮತ್ತು ಐಒಎಸ್ ಬೀಟಾ ಪರೀಕ್ಷಕರಿಗೆ ಈ ಫೀಚರ್ ಲಾಂಚ್ ಮಾಡಿದೆ. ಆಂಡ್ರಾಯ್ಡ್ ಆವೃತ್ತಿ 2.23.14.19ಗಾಗಿ ವಾಟ್ಸಾಪ್ ಬೀಟಾ ಮತ್ತು ಐಒಎಸ್‌ಗಾಗಿ 23.14.0.70 ಬೀಟಾ ಆವೃತ್ತಿಯೊಂದಿಗೆ ಅನುಕ್ರಮವಾಗಿ ಎಲ್ಲಾ ಆಂಡ್ರಾಯ್ಡ್ ಮತ್ತು ಐಒಎಸ್ ಟೆಸ್ಟರ್‌ಗಳಿಗೆ ಈ ಫೀಚರ್ ದೊರೆಯುತ್ತಿದೆ. ಆದರೆ, ಎಲ್ಲ ಸಾಮಾನ್ಯ ಬಳಕೆದಾರರಿಗೆ ಈ ಫೀಚರ್ ಯಾವಾಗ ದೊರೆಯಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.