Site icon Vistara News

WhatsApp New Feature: ಐಫೋನ್ ಬಳಕೆದಾರರಿಗೆ ವಾಟ್ಸಾಪ್ ಗ್ರೂಪ್ ನಿರ್ವಹಣೆ ಇನ್ನು ಸುಲಭ!

WhatsApp

ಬೆಂಗಳೂರು: ಐಫೋನ್ ಬಳಕೆದಾರರಿಗೆ ವಾಟ್ಸಾಪ್ ಹೊಸ ಫೀಚರ್‌ಗಳನ್ನು (WhatsApp New Feature) ಲಾಂಚ್ ಮಾಡಲಿದೆ. ಗ್ರೂಪ್‌ ಅಡ್ಮಿನ್‌ಗಳಿಗೆ ಹೊಸ ಶಾರ್ಟ್‌ಕಟ್‌ಗಳನ್ನು ಪರಿಚಯಿಸುತ್ತಿದೆ. ಈ ಹೊಸ ಫೀಚರ್ಸ್‌ಗೆ ಸಂಬಂಧಿಸಿದಂತೆ ಲೆಟೆಸ್ಟ್ 23.1.75 ನವೀಕರಣವನ್ನು ವಾಟ್ಸಾಪ್ ಆ್ಯಪಲ್ ಆ್ಯಪ್ ಸ್ಟೋರ್‌ಗೆ ಸಬ್‌ಮಿಟ್ ಮಾಡಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ವರದಿ ಮಾಡಿರುವ WaBetaInfo, ಕೆಲವು ನಿಶ್ಚಿತ ಭಾಗಿದಾರರಿಗೆ ಸಂಬಂಧಿಸಿದ ಕಾರ್ಯಗಳನ್ನು ತ್ವರಿತವಾಗಿ ನೆರವೇರಿಸಲು ಸಾಧ್ಯವಾಗುವಂತೆ ಮಾಡಲು ಈ ಶಾರ್ಟ್‌ಕಟ್‌ಗಳನ್ನು ವಾಟ್ಸಾಪ್ ಐಫೋನ್ ಬಳಕೆದಾರರಿಗೆ ಒದಗಿಸುತ್ತಿದೆ. ವಾಟ್ಸಾಪ್‌ ಗ್ರೂಪ್‌ ಚಾಟ್‌ನಲ್ಲಿ 1024 ಜನರು ಭಾಗವಹಿಸಬಹುದು. ಹಾಗಾಗಿ, ಗ್ರೂಪ್ ಅಡ್ಮಿನ್‌ಗಳು ಪ್ರತಿಯೊಬ್ಬ ಭಾಗವಹಿಸುವವರೊಂದಿಗೆ ಸಂವಹನ ಮಾಡುವುದು ಕಷ್ಟಕರವಾಗಿರುತ್ತದೆ. ಹೊಸ ಶಾರ್ಟ್‌ಕಟ್ ವೈಶಿಷ್ಟ್ಯವು ಅಡ್ಮಿನ್‌ಗಳ ಕಾರ್ಯವನ್ನು ಸರಳಗೊಳಿಸುತ್ತದೆ ಮತ್ತು ಸಂವಹನವನ್ನು ಸುಲಭಗೊಳಿಸುತ್ತದೆ.

ಒರಿಜಿನಲ್ ಸೈಜಿನಲ್ಲಿ ಇಮೇಜ್ ಕಳುಹಿಸಿ

ವಾಟ್ಸಾಪ್ ಮತ್ತೊಂದು ಹೊಸ ಫೀಚರ್ (New Feature) ಲಾಂಚ್ ಮಾಡಲಿದೆ. ಒರಿಜಿನಲ್ ಸೈಜಿನಲ್ಲಿ ಅಥವಾ ಹೈ ಕ್ವಾಲಿಟಿ ಚಿತ್ರಗಳನ್ನು ಕಳುಹಿಸಲು ಸಾಧ್ಯವಾಗುವ ಫೀಚರ್ ಅನ್ನು ವಾಟ್ಸಾಪ್ ಶೀಘ್ರವೇ ಬಿಡುಗಡೆ ಮಾಡಲಿದೆ. ಈ ಹೊಸ ಫೀಚರ್‌ನಿಂದ ಬಳಕೆದಾರರಿಗೆ ಸಾಕಷ್ಟು ಅನುಕೂಲವಾಗಲಿದೆ.

WaBetaInfo ವರದಿಯ ಪ್ರಕಾರ, ಬೀಟಾ ಟೆಸ್ಟಿಂಗ್ ಆವೃತ್ತಿ 2.23.2.11 ನವೀಕರಣವನ್ನು ಪ್ರಾರಂಭಿಸಿದೆ. ಇದು ವಾಟ್ಸಾಪ್‌ನಲ್ಲಿ ಯಾರಿಗಾದರೂ ಫೋಟೋಗಳನ್ನು ಅವುಗಳ ಮೂಲ ಗುಣಮಟ್ಟದಲ್ಲಿ ಕಳುಹಿಸಲು ಹೊಸ ಮಾರ್ಗವನ್ನು ತರುತ್ತದೆ. ಎಲ್ಲಾ ಬಳಕೆದಾರರಿಗೆ ಭವಿಷ್ಯದ ನವೀಕರಣದಲ್ಲಿ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲಾಗುವುದು ಮತ್ತು ಸದ್ಯಕ್ಕೆ, ಬಳಕೆದಾರರು ಪರಿಹಾರಗಳನ್ನು ಬಳಸುವುದನ್ನು ಮುಂದುವರಿಸಬೇಕಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: WhatsApp New Feature | ಆ್ಯಕ್ಸಿಡೆಂಟಲ್ ಡಿಲೀಟ್ ಹೊಸ ಫೀಚರ್ ಪರಿಚಯಿಸಿದ ವಾಟ್ಸ್ಆ್ಯಪ್!

ವರದಿಗಳ ಪ್ರಕಾರ, ವಾಟ್ಸಾಪ್, ಇಮೇಜ್ ಪ್ರಿವ್ಯೂ(image preview) ಹೊಸ ಸೆಕ್ಷನ್ ಅನ್ನು ಆರಂಭಿಸಲಿದೆ. ಈ ಆಪ್ಷನ್ ಬಳಸಿಕೊಂಡು ಬಳಕೆದಾರರು ಫೋಟೋವನ್ನು ಕಳುಹಿಸವಾಗ, ಯಾವ ಕ್ವಾಲಿಟಿಯಲ್ಲಿ ಫೋಟೋವನ್ನು ಕಳುಹಿಸಬೇಕು ಎಂಬುದನ್ನು ನಿರ್ಧರಿಸಲು ಸುಲಭವಾಗಲಿದೆ. ಫೋಟೋಗಳನ್ನು ಕಳುಹಿಸುವಾಗ ಅವುಗಳ ಕ್ವಾಲಿಟಿಯ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಲು ಈ ಹೊಸ ಫೀಚರ್ ಬಳಕೆದಾರರಿಗೆ ಅವಕಾಶವನ್ನು ಕಲ್ಪಿಸಲಿದೆ. ಓರಿಜಿನಲ್ ಸೈಜಿನಲ್ಲಿ ಫೋಟೋ ಕಳುಹಿಸುವ ಈ ಹೊಸ ಫೀಚರ್ ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ.

Exit mobile version