Site icon Vistara News

WhatsApp New Feature: ಶೀಘ್ರವೇ ವಾಟ್ಸಾಪ್ ಬಳಕೆದಾರರ ವೈಯಕ್ತಿಕ ಚಾಟ್‌ಗೆ ಲಾಕ್ ಫೀಚರ್!

Secret code for WhatsApp chat lock on desktops

ನವದೆಹಲಿ: ಜಗತ್ತಿನ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp) ತನ್ನ ಬಳಕೆದಾರರಿಗೆ ಸಾಕಷ್ಟು ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಆ ಮೂಲಕ ಬಳಕೆದಾರರ ಅನುಭವವನ್ನು ಹೆಚ್ಚಿಸುತ್ತದೆ. ಜತೆಗೆ, ಬಳಕೆದಾರರ ಬೇಡಿಕೆ ಮತ್ತು ಅನುಕೂಲತೆಗೆ ತಕ್ಕಂತೆ ಹೊಸ ವೈಶಿಷ್ಟ್ಯಗಳ್ನು ಜಾರಿ ಮಾಡುತ್ತದೆ. ಅದೇ ರೀತಿ, ವಾಟ್ಸಾಪ್ ಈಗ ಮತ್ತೊಂದು ಹೊಸ ಫೀಚರ್ ಲಾಂಚ್ ಮಾಡಲಿದೆ. ಈ ಹೊಸ ಫೀಚರ್ ಲಭ್ಯವಾದರೆ, ಬಳಕೆದಾರರು ತಮ್ಮ ಚಾಟ್‌ಗಳನ್ನು ಲಾಕ್ (Chat Lock) ಮಾಡಬಹುದು! ವಾಟ್ಸಾಪ್ ಈ ಫೀಚರ್ ಅಭಿವೃದ್ದಿ ಮಾಡುತ್ತಿದ್ದು, ಶೀಘ್ರವೇ ಬಳಕೆದಾರರಿಗೆ ದೊರೆಯಲಿದೆ ಎಂದು ಹೇಳಲಾಗುತ್ತಿದೆ(WhatsApp New Feature).

ಸದ್ಯ ವಾಟ್ಸಾಪ್‌ನಲ್ಲಿ ಬಳಕೆದಾರರಿಗೆ ಅಪ್ಲಿಕೇಶನ್ ಅನ್ನು ಲಾಕ್ ಮಾಡಲು ಸಾಧ್ಯವಿದೆ. ಆದರೆ, ಅದರಿಂದ ವೈಯಕ್ತಿಕ ಚಾಟ್‌ಗಳನ್ನು ಲಾಕ್ ಮಾಡಲು ಸಾಧ್ಯವಿಲ್ಲ. ಹಾಗಾಗಿ, ವಾಟ್ಸಾಪ್ ಹೊಸ ಫೀಚರ್ ಲಾಂಚ್ ಮಾಡುತ್ತಿದೆ. ಫೇಸ್‌ಬುಕ್ ಒಡೆತನ ಹೊಂದಿರುವ ಮೆಟಾ ಕಂಪನಿ ಮಾಲೀಕತ್ವದಲ್ಲೇ ಈ ವಾಟ್ಸಾಪ್ ಕೂಡ ಇದೆ.

ವಾಟ್ಸಾಪ್ ಬೆಳವಣಿಗೆ ಮೇಲೆ ಸದಾ ನಿಗಾವಹಿಸುವ WABetaInfo ಮಾಡಿರುವ ವರದಿಯ ಪ್ರಕಾರ, ವಾಟ್ಸಾಪ್ ಡೆವಲಪರ್ಸ್ ಹೊಸ ಫೀಚರ್ ಅಭಿವೃದ್ಧಿಗೊಳಿಸುತ್ತಿದ್ದು, ಅದು ಬಳಕೆದಾರರಿಗೆ ಫಿಂಗರ್ ಪ್ರಿಂಟ್ ಅಥವಾ ಪಾಸ್‌ಕೋಡ್ ಮೂಲಕ ವೈಯಕ್ತಿಕ ಚಾಟ್ ಲಾಕ್ ಮಾಡಲು ಅನುವು ಮಾಡಿಕೊಡಲಿದೆ. ಈ ಫೀಚರ್ ಅನೇಬಲ್ ಮಾಡಿಕೊಂಡರೆ, ಬಳಕೆದಾರರು ಈ ಚಾಟ್ ಅನ್ನು ಪ್ರತ್ಯೇಕವಾಗಿ ನೋಡಲು ಅನುಮತಿಸಲಾಗುತ್ತದೆ. ಬೇರೆಯವರು ಪಾಸ್ ಕೋಡ್ ಇಲ್ಲದೇ ನೋಡಲು ಸಾಧ್ಯವಾಗುವುದಿಲ್ಲ.

ಯಾರಾದರೂ ನಿಮ್ಮ ಫೋನ್ ಅಕ್ಸೆಸ್ ಮಾಡಲು ಮುಂದಾದರೆ ಮತ್ತು ದೃಢೀಕರಣ ಪ್ರಕ್ರಿಯೆಯಲ್ಲಿ ಹಲವು ಬಾರಿ ವಿಫಲವಾದರೆ, ಅವರು ಅದನ್ನು ತೆರೆಯಲು ಬಯಸಿದರೆ ಅವರು ಚಾಟ್ ಅನ್ನು ತೆರವುಗೊಳಿಸಬೇಕಾಗುತ್ತದೆ. ಬಳಕೆದಾರರ ಗೌಪ್ಯತೆಯನ್ನು ಹೆಚ್ಚಿಸುವುದರ ಹೊರತಾಗಿ, ಸಾಧನ ಗ್ಯಾಲರಿಗೆ ಸ್ವಯಂಚಾಲಿತವಾಗಿ ಉಳಿಸದೆ ಖಾಸಗಿ ಚಾಟ್‌ಗಳೊಂದಿಗೆ ಹಂಚಿಕೊಳ್ಳಲಾದ ಮಾಧ್ಯಮವನ್ನು ಮರೆಮಾಡಲು ಹೊಸ ವೈಶಿಷ್ಟ್ಯವು ಸಹಾಯ ಮಾಡುತ್ತದೆ.

ಇದನ್ನೂ ಓದಿ: WhatsApp New Feature: ‘ಕಾಲ್ ಲಿಂಕ್ಸ್’ ಎಂಬ ಹೊಸ ವಾಟ್ಸಾಪ್ ಫೀಚರ್, ಇದರಿಂದ ಏನು ಲಾಭ?

ಆಂಡ್ರಾಯ್ಡ್ ಸಾಧನಗಳಿಗಾಗಿ ವಾಟ್ಸಾಪ್‌ನ ಇತ್ತೀಚಿನ ಆವೃತ್ತಿ(v2.23.8.2) ಕಾಣಿಸಿಕೊಂಡಿದ್ದು, ಈ ಅಪ್‌ಡೇಟ್ ವಾಟ್ಸಾಪ್‌ನ ಭವಿಷ್ಯದ ಆವೃತ್ತಿಯಲ್ಲಿ ಲಭ್ಯವಾಗುವ ಸಾಧ್ಯತೆಗಳಿವೆ. ಕಳೆದ ತಿಂಗಳು ವಾಟ್ಸಾಪ್ ವಿಂಡೋಸ್ ಆವೃತ್ತಿಯ ಅಪ್ಲಿಕೇಶನ್‌ಗಾಗಿ ಕರೆ ಲಿಂಕ್, ಆಂಡ್ರಾಯ್ಡ್ ಟ್ಯಾಬ್ಲೆಟ್‌ಗಳಿಗಾಗಿ ಸ್ಪ್ಲಿಟ್ ವ್ಯೂ ಇಂಟರ್‌ಫೇಸ್, ಹೊಸ ಗುಂಪಿನ ಭಾಗವಹಿಸುವವರನ್ನು ಅನುಮೋದಿಸುವ ಸಾಮರ್ಥ್ಯ, ಸ್ಥಿತಿ ನವೀಕರಣಗಳಾಗಿ ಧ್ವನಿ ಟಿಪ್ಪಣಿಗಳನ್ನು ಪೋಸ್ಟ್ ಮಾಡುವಂತಹ ಹಲವಾರು ಹೊಸ ವೈಶಿಷ್ಟ್ಯಗಳನ್ನು ಹೊರತಂದಿದೆ. ಮೆಟಾ ಒಡೆತನದ ವಾಟ್ಸಾಪ್, ತನ್ನ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಹೊಸ ಫೀಚರ್ಸ್ ಆಗಾಗ ಅಪ್‌ಡೇಟ್ ಮಾಡುತ್ತಲೇ ಇರುತ್ತದೆ.

Exit mobile version