Site icon Vistara News

WhatsApp New Feature: ಈಗ ನಾಲ್ಕು ಫೋನ್‌ಗಳಲ್ಲಿ ಒಂದೇ ವಾಟ್ಸಾಪ್ ಖಾತೆ ಬಳಸಿ! ಈ ಫೀಚರ್‌ನಿಂದ ಏನು ಲಾಭ?

WhatsApp New Feature, Now use one WhatsApp account on four phones

ಬೆಂಗಳೂರು, ಕರ್ನಾಟಕ: ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಮತ್ತೊಂದು ಹೊಸ ಫೀಚರ್ ಲಾಂಚ್ ಮಾಡಿದೆ. ಈ ಹೊಸ ಫೀಚರ್ ಅನ್ವಯ ಬಳಕೆದಾರರು ಒಂದೇ ವಾಟ್ಸಾಪ್ ಖಾತೆಯನ್ನು ಬಹುಸಾಧನಗಳಲ್ಲಿ ಏಕಕಾಲಕ್ಕೆ ಬಳಸಬಹುದಾಗಿದೆ. ಬಳಕೆದಾರರಿಂದ ಈ ಬೇಡಿಕೆ ಬಹುದಿನಗಳಿಂದಲೂ ಇತ್ತು. ವಾಟ್ಸಾಪ್ ಅದನ್ನೀಗ ಈಡೇರಿಸಿದೆ. ಮೆಟಾ-ಮಾಲೀಕತ್ವದ ವಾಟ್ಸಾಪ್, ಬಳಕೆದಾರರಿಗೆ ಬಹು ಫೋನ್‌ಗಳಿಂದ ವಾಟ್ಸಾಪ್ ಖಾತೆಗೆ ಲಾಗ್ ಇನ್ ಮಾಡಲು ಅನುಮತಿಸಲಾಗುವುದು ಎಂದು ಮಂಗಳವಾರ ಪ್ರಕಟಿಸಿದೆ(WhatsApp New Feature).

ಈ ಮೊದಲು, ಸ್ಮಾರ್ಟ್‌ಫೋನ್‌ ಮಾತ್ರವಲ್ಲದೇ ಕಂಪ್ಯೂಟರ್ ಮತ್ತು ಆ್ಯಂಡ್ರಾಯ್ಡ್ ಟ್ಯಾಬ್ಲೆಟ್‌ಗಳಲ್ಲಿ ಲಾಗ್ ಇನ್ ಮಾಡಲು ಅವಕಾಶ ಕಲ್ಪಿಸಿತ್ತು. ಈಗ ಬಳಕೆದಾರರು ಒಂದೇ ವಾಟ್ಸಾಪ್‌ ಖಾತೆಯನ್ನು ಏಕಕಾಲಕ್ಕೆ ನಾಲ್ಕು ಫೋನ್‌ಗಳಲ್ಲಿ ಲಾಗಿನ್ ಆಗಲು ಅವಕಾಶ ಕಲ್ಪಿಸಿದೆ. ವೆಬ್ ಬ್ರೌಸರ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಡೆಸ್ಕ್‌ಟಾಪ್‌ಗಳಲ್ಲಿ ನೀವು ವಾಟ್ಸಾಪ್ ಲಿಂಕ್ ಮಾಡಿದ ರೀತಿಯಲ್ಲೇ ನಾಲ್ಕು ಹೆಚ್ಚುವರಿ ಫೋನ್‌ಗಳಲ್ಲಿ ವಾಟ್ಸಾಪ್ ಲಿಂಕ್ ಮಾಡಬಹುದು. ಬೇರೆ ಬೇರೆ ಫೋನುಗಳಲ್ಲಿ ಒಂದೇ ವಾಟ್ಸಾಪ್ ಖಾತೆಯನ್ನು ಬಳಸಬಹುದಾಗಿದೆ. ಪ್ರತಿ ಲಿಂಕ್ ಮಾಡಲಾದ ಫೋನ್ ಸ್ವತಂತ್ರವಾಗಿ ವಾಟ್ಸಾಪ್‌ಗೆ ಸಂಪರ್ಕಗೊಂಡಿರುತ್ತದೆ. ನಿಮ್ಮ ವೈಯಕ್ತಿಕ ಸಂದೇಶಗಳು, ಮಾಧ್ಯಮ ಕಡತ ಮತ್ತು ಕರೆಗಳು ಅಂತ್ಯದಿಂದ ಅಂತ್ಯದವರೆಗೆ ಎನ್‌ಕ್ರಿಪ್ಟ್ ಆಗಿರುವುದನ್ನು ಖಚಿತಪಡಿಸುತ್ತದೆ. ನಿಮ್ಮ ಪ್ರಾಥಮಿಕ ಸಾಧನವು ದೀರ್ಘಕಾಲದವರೆಗೆ ನಿಷ್ಕ್ರಿಯವಾಗಿದ್ದರೆ, ಉಳಿದ ಎಲ್ಲ ಸಾಧನಗಳಿಂದಲೂ ಸ್ವಯಂ ಆಗಿ ಲಾಗೌಟ್ ಆಗಿರುತ್ತದೆ.

WhatsApp New Feature: ಈ ಹೊಸ ಫೀಚರ್‌ನಿಂದ ಏನು ಲಾಭ?

ಒಂದೇ ವಾಟ್ಸಾಪ್ ಖಾತೆಯನ್ನು ನಾಲ್ಕು ಫೋನುಗಳಲ್ಲಿ ಬಳಸಲು ಅವಕಾಶ ಕಲ್ಪಿಸುವ ಈ ಫೀಚರ್‌ನಿಂದ ಸಾಕಷ್ಟು ಲಾಭಗಳಿವೆ. ವಿಶೇಷವಾಗಿ ಸಣ್ಣ ವ್ಯಾಪಾರಸ್ಥರಿಗೆ ಹೆಚ್ಚು ಉಪಯೋಗವಾಗಲಿದೆ. ಒಂದೇ ಖಾತೆಯನ್ನು ಅನೇಕ ಉದ್ಯೋಗಿಗಳು ಬಳಸುತ್ತಿದ್ದರೆ ಅಂಥವರಿಗೆ ಇದರಿಂದ ನೆರವು ದೊರೆಯಲಿದೆ. ಹಾಗೆಯೇ, ನಾಲ್ಕೈದು ಫೋನ್ ಬಳಸುವ ಬಳಕೆದಾರರಿಗೂ ಇದರಿಂದ ಲಾಭವಾಗಲಿದೆ. ಪ್ರತಿ ಫೋನಿಗೂ ಪ್ರತ್ಯೇಕ ಖಾತೆಯನ್ನು ತೆರೆಯದೇ ಒಂದೇ ಖಾತೆಯನ್ನು ನಾಲ್ಕೂ ಫೋನ್‌ಗಳಲ್ಲಿ ಬಳಸಲು ಸಾಧ್ಯವಾಗಲಿದೆ.

ವಾಟ್ಸಾಪ್‌ನಿಂದ ಕೀಪ್ ಇನ್ ಚಾಟ್ ಹೊಸ ಫೀಚರ್

ಜಗತ್ತಿನ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp) ಹೊಸ ಫೀಚರ್ ಜಾರಿಗೆ ತಂದಿದೆ. ಡಿಸ್‌ಅಪಿಯರಿಂಗ್ ಮೆಸೇಜ್‌ಗಳನ್ನು (disappearing messages) ಉಳಿಸಿಕೊಳ್ಳಲು ಬಳಕೆದಾರರಿಗೆ ಈ ಹೊಸ ಫೀಚರ್ ಕೀಪ್ ಇನ್ ಚಾಟ್ (Keep in Chat) ಅನುವು ಮಾಡಿಕೊಡಲಿದೆ. ಆದರೆ, ಇದಕ್ಕಾಗಿ ಸಂದೇಶಗಳನ್ನು ಕಳುಹಿಸಿದವರು ಯಾವ ಸಂದೇಶಗಳನ್ನು ಇಟ್ಟುಕೊಳ್ಳಬೇಕೆಂಬುದನ್ನು ನಿರ್ಧರಿಸಬೇಕಾಗುತ್ತದೆ.

ಇದನ್ನೂ ಓದಿ: WhatsApp New Feature: ನಿಮ್ಮ ಖಾತೆ ಸುರಕ್ಷತೆಯನ್ನು ಖಾತ್ರಿಪಡಿಸುವ ಮೂರು ಫೀಚರ್ ಲಾಂಚ್ ಮಾಡಿದ ವಾಟ್ಸಾಪ್

ಹೆಚ್ಚುವರಿಯಾಗಿ, ಮೆಸೇಜಿಂಗ್ ಪ್ಲಾಟ್‌ಫಾರ್ಮ್ iOS ಸಾಧನಗಳಿಗಾಗಿ ಹೊಸ ಸ್ಥಿರವಾದ ನವೀಕರಣವನ್ನು ಸಹ ಹೊರತಂದಿದೆ. ಆ್ಯಪಲ್‌ನ ಆಪರೇಟಿಂಗ್ ಸಿಸ್ಟಮ್‌ನ ಇತ್ತೀಚಿನ ಆವೃತ್ತಿಯನ್ನು ಚಾಲನೆ ಮಾಡುವ ಬಳಕೆದಾರರಿಗೆ ಹೊಸ ಸ್ಟಿಕ್ಕರ್ ತಯಾರಕ ಸಾಧನವನ್ನು ಒದಗಿಸುತ್ತದೆ.

ತನ್ನ ಈ ಹೊಸ ಸೇವೆಗಳ ಕುರಿತು ಮೆಟಾ ಒಡೆತನದ ವಾಟ್ಸಾಪ್, ಬ್ಲಾಗ್‌ನಲ್ಲಿ ಬರೆದುಕೊಂಡಿದ್ದು, ಡಿಸ್‌ಅಪಿಯರಿಂಗ್ ಮೆಸೇಜ್‌ಗಳು‌ ಚಾಟ್‌ನಲ್ಲಿ ಉಳಿಯುವುದಿಲ್ಲ. ಆದರೆ, ಬಳಕೆದಾರರು ಕೀಪ್ ಇನ್ ಚಾಟ್(Keep in Chat) ಫೀಚರ್‌ನೊಂದೆಗ ತಮಗೆ ಬೇಕಾದ ಉಪಯುಕ್ತ ಸಂದೇಶಗಳನ್ನು ಹಾಗೆಯೇ ಉಳಿಸಿಕೊಳ್ಳಬಹುದು. ಹಾಗಿದ್ದಾಗ್ಯೂ, ಚಾಟ್‌ನಲ್ಲಿ ಯಾವ ಸಂದೇಶವನ್ನು ಉಳಿಸಿಕೊಳ್ಳಬೇಕೆಂಬುದನ್ನು ಮೆಸೇಜ್‌ ಕಳುಹಿಸಿದವರು ನಿರ್ಧರಿಸಬೇಕಾಗುತ್ತದೆ. ಯಾರಾದರೂ ಚಾಟ್ ಉಳಿಸಿಕೊಂಡರೆ ಆ ಬಗೆಗಿನ ಮಾಹಿತಿಯನ್ನು ಸೆಂಡರ್‌ಗೆ ರವಾನೆಯಾಗುತ್ತದೆ ಎನ್ನುತ್ತದೆ ವಾಟ್ಸಾಪ್.

Exit mobile version