ಬೆಂಗಳೂರು: ವಾಟ್ಸಾಪ್ ಮತ್ತೊಂದು ಹೊಸ ಫೀಚರ್ (WhatsApp New Feature) ಲಾಂಚ್ ಮಾಡಲು ಹೊರಟಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ವಾಟ್ಸಾಪ್ ಫೀಚರ್ ಲಾಂಚ್ ಮಾಡುತ್ತದೆ. ಜನಪ್ರಿಯ ಮೆಸೇಜಿಂಗ್ ಆ್ಯಪ್ (Messaging App) ಆಗಿರುವ ವಾಟ್ಸಾಪ್ ಈಗ, ವಿಂಡೋಸ್‌ನಲ್ಲಿ ಟೆಕ್ಸ್ಟ್ ಗಾತ್ರವನ್ನು ಅಡ್ಜಸ್ಟ್ ಮಾಡುವ (Adjust Text Size On Windows)ಫೀಚರ್ ಲಾಂಚ್ ಮಾಡಲಿದೆ. ವಾಟ್ಸಾಪ್ ಬೆಳವಣಿಗೆ ಮೇಲೆ ನಿಗಾವಹಿಸುವ WABetaInfo ಈ ಕುರಿತು ವರದಿ ಮಾಡಿದ್ದು, ಹೊಸ ಫೀಚರ್ ಬಳಕೆದಾರರಿಗೆ ತಮ್ಮ ಡೆಸ್ಕ್‌ಟಾಪ್ ಪರದೆಗಳಲ್ಲಿ ಪ್ರದರ್ಶಿಸಲಾದ ಟೆಕ್ಸ್ಟ್ ಗಾತ್ರವನ್ನು ಕಸ್ಟಮೈಸ್ ಮಾಡಲು ಅನುಮತಿಸುವ ಮೂಲಕ ಒಟ್ಟಾರೆ ಬಳಕೆದಾರರ ಅನುಭವವನ್ನು ಹೆಚ್ಚಿಸುತ್ತದೆ.
ವಾಟ್ಸಾಪ್ ಸೆಟ್ಟಿಂಗ್‌ಗಳಲ್ಲಿ ವೈಯಕ್ತೀಕರಣ (Personalization) ಮೆನು ಅಡಿಯಲ್ಲಿ ಹೊಸ ಆಯ್ಕೆ ಲಭ್ಯವಿದೆ. ಈ ಹೊಸ ಆಯ್ಕೆಯೊಂದಿಗೆ, ವಿಂಡೋಸ್ ಅಪ್ಲಿಕೇಶನ್‌ಗಾಗಿ ಪಠ್ಯ ಗಾತ್ರವನ್ನು ಸರಿಹೊಂದಿಸಲು ಬಳಕೆದಾರರಿಗೆ ವಾಟ್ಸಾಪ್ ನೆರವು ಒದಗಿಸುತ್ತದೆ. ಈ ಹೊಸ ಫೀಚರ್‌ನೊಂದಿಗೆ, ಟೆಕ್ಸ್ಟ್ ಗಾತ್ರವನ್ನು ಸರಿ ಹೊಂದಿಸಲು ಕೆಲವು ಮಹತ್ವದ ಶಾರ್ಟ್‌ಕಟ್‌ಗಳನ್ನು ಕೂಡ ವಾಟ್ಸಾಪ್ ನೀಡಿದೆ. ನೀವು CTRL + 0 ಮೂಲಕ ಟೆಕ್ಸ್ಟ್ ಗಾತ್ರವನ್ನು ರಿಸೆಟ್ ಮಾಡಬಹುದು.
ಫಾಂಟ್ ಗಾತ್ರವನ್ನು ಹೆಚ್ಚಿಸುವ ಮೂಲಕ, ಬಳಕೆದಾರರು ಅಂತಿಮವಾಗಿ ಸಂದೇಶಗಳನ್ನು ಹೆಚ್ಚು ಸುಲಭವಾಗಿ ಓದಲು ದೊಡ್ಡ ಪಠ್ಯವನ್ನು ಆಯ್ಕೆ ಮಾಡಬಹುದು. ಕಾಂಪಾಕ್ಟ್ ಲೇ ಔಟ್ ಇಷ್ಟಪಡುವರಿಗೆ ಪಠ್ಯದ ಗಾತ್ರವನ್ನು ಕಡಿಮೆ ಮಾಡುವ ಆಯ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಸೀಮಿತ ಪರದೆಯ ಜಾಗದಲ್ಲಿ ಹೆಚ್ಚಿನ ವಿಷಯವನ್ನು ವೀಕ್ಷಿಸಲು ಅವರಿಗೆ ಈ ಫೀಚರ್ ಅನುವು ಮಾಡಿಕೊಡುತ್ತದೆ. ಈ ಹೊಸ ಫೀಚರ್ ಓದುವಿಕೆಯನ್ನು ಹೆಚ್ಚಿಸುತ್ತದೆ, ಕಣ್ಣು ಮೇಲೆ ಬೀಳುವ ಒತ್ತಡವನ್ನು ಕಡಿಮೆ ಮಾಡಲಿದೆ. ಒಟ್ಟಾರೆಯಾಗಿ ಡೆಸ್ಕ್ ಟಾಪ್ ಮೇಲೆ ವಾಟ್ಸಾಪ್ ಬಳಕೆಯ ಅನುಭವವನ್ನು ಹೆಚ್ಚಿಸಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸದ್ಯ ಈ ಟೆಕ್ಸ್ಟ್ ಗಾತ್ರವನ್ನು ಸರಿಹೊಂದಿಸುವ ಫೀಚರ್ ಬೀಟಾ ವರ್ಷನ್‌ನಲ್ಲಿ ಮಾತ್ರವೇ ಲಭ್ಯವಿದೆ. ಶೀಘ್ರವೇ ಎಲ್ಲ ಬಳಕೆದಾರರಿಗೆ ಈ ಫೀಚರ್ ದೊರೆಯಲಿದೆ. ಫೀಚರ್ ಇನ್ನೂ ಪರೀಕ್ಷಾ ಹಂತದಲ್ಲಿದೆ ಎಂದು ಹೇಳಬಹುದು.
WhatsApp New Feature: ವಾಟ್ಸಾಪ್‌ನಲ್ಲಿ 32 ಜನರೊಂದಿಗೆ ವಿಡಿಯೋ ಕಾಲ್
ಮೇಲಿಂದ ಮೇಲೆ ಅಪ್‌ಡೇಟ್‌ಗಳನ್ನು (WhatsApp Updates) ನೀಡುತ್ತಿರುವ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಈಗ ಮತ್ತೊಂದು ಫೀಚರ್ (New Feature) ಲಾಂಚ್ ಮಾಡಿದೆ. ಈ ಹೊಸ ಫೀಚರ್ ವಿಡಿಯೋ ಕಾಲಿಂಗ್ ಅನುಭವನ್ನು ಮತ್ತಷ್ಟು ವಿಶಿಷ್ಟಗೊಳಿಸಲಿದೆ. ವಾಟ್ಸಾಪ್ ಈಗ ಬಿಡುಗಡೆ ಮಾಡಿರುವ ಫೀಚರ್ (WhatsApp New Feature) ಮೂಲಕ ಬಳಕೆದಾರರು 32 ಜನರವರೆಗೂ ವಿಡಿಯೋ ಕಾಲಿಂಗ್ ಮಾಡಬಹುದು. ಈ ಹೊಸ ವೈಶಿಷ್ಟ್ಯವು ಆಡಿಯೊ ಕರೆಗಳ ಹಿಂದಿನ ಮಿತಿಯ ಮುಂದಿನ ಆವೃತ್ತಿಯಾಗಿದೆ. ಆಗಲೂ ಗರಿಷ್ಠ 32 ಜನರ ವಿಡಿಯೋ ಕಾಲಿಂಗ್‌ಗೆ ಬೆಂಬಲಿಸುತ್ತಿತ್ತು. WABetaInfo ವರದಿಯ ಪ್ರಕಾರ, ವಿಂಡೋಸ್ ಪಿಸಿಗಳಲ್ಲಿ ಬಳಕೆದಾರರಿಗೆ ಈ ಫೀಚರ್ ಲಭ್ಯವಾಗುತ್ತಿದೆ. ಸದ್ಯ ಇದು ಬೀಟಾ ವರ್ಷನ್‌ನಲ್ಲಿದ್ದು, ಶೀಘ್ರವೇ ಎಲ್ಲ ಬಳಕೆದಾರರಿಗೆ ದೊರೆಯಲಿದೆ.
ಬಹು ಪಾಲ್ಗೊಂಡವರಿಗೆ ಈ ಹಿಂದೆ ವಾಟ್ಸಾಪ್‌ನಲ್ಲಿ ಆಡಿಯೋ ಕಾಲ್ ಮಾಡಲು ಅವಕಾಶವಿತ್ತು. ಆದರೆ, ಈಗ ಹೊಸ ಅಪ್‌ಡೇಟ್ ಮೂಲಕ, ದೂಡ್ಡ ಗ್ರೂಪ್‌ಗಳೊಂದಿಗೆ ವಿಡಿಯೋ ಕಾಲ್ ಕೂಡ ಮಾಡಬಹುದು. ಆರಂಭದಲ್ಲಿ, ವಿಂಡೋಸ್ ಅಪ್‌ಡೇಟ್‌ಗಾಗಿ ಆಯ್ದ ಬೀಟಾ ಪರೀಕ್ಷಕರಿಗೆ ಈ ಕಾರ್ಯವನ್ನು ಲಭ್ಯವಾಗುವಂತೆ ಮಾಡಲಾಗುತ್ತಿದೆ. ಆದಾಗ್ಯೂ, ಮುಂಬರುವ ದಿನಗಳಲ್ಲಿ ಇದನ್ನು ಕ್ರಮೇಣ ಎಲ್ಲ ಬಳಕೆದಾರರಿಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಈ ಸುದ್ದಿಯನ್ನೂ ಓದಿ: WhatsApp New Feature: ವಾಟ್ಸಾಪ್‌ನಲ್ಲಿ ನಿಮಗೆ ಬೇಕಾದಷ್ಟು ಸಮಯದವರೆಗೆ ಮೆಸೇಜ್ ಪಿನ್ ಮಾಡಬಹುದು!
ವಾಟ್ಸಾಪ್ ಕಂಪನಿಯ ಒಡೆತನವನ್ನು ಹೊಂದಿರುವ ಮೆಟಾ ಸಿಇಒ ಮಾರ್ಕ್‌ಜುಕರ್‌ಬರ್ಗ್ ಅವರು ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಆಂಡ್ರಾಯ್ಡ್ ಮತ್ತು ಐಒಸ್ ಬಳಕೆದಾರರಿಗೆ ವಿಡಿಯೋ ಕಾಲಿಂಗ್ ಸೇವೆಯನ್ನು ಲಾಂಚ್ ಮಾಡುವ ಘೋಷಣೆ ಮಾಡುತ್ತಿದ್ದರು. ಈಗ ಆ ಘೋಷಣೆಯನ್ನು ವಾಟ್ಸಾಪ್ ಪೂರೈಸುತ್ತಿದೆ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.