ನವದೆಹಲಿ: ಮೆಟಾ (Meta) ಒಡೆತನದ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಮತ್ತೊಂದು ಹೊಸ ಫೀಚರ್ ಟೆಸ್ಟ್ ಮಾಡುತ್ತಿದೆ. ಈ ಹೊಸ ಫೀಚರ್ ಈಗಾಗಲೇ ಕೆಲವು ಬೀಟಾ ಬಳಕೆದಾರರಿಗೆ ದೊರೆಯುತ್ತಿದೆ. ಈ ಹೊಸ ವೈಶಿಷ್ಟ್ಯವು, ಬಳಕೆದಾರರಿಗೆ ಚಾಟ್‌ನೊಳಗೇ 10 ಮೀಡಿಯಾ ಫೈಲ್ ಷೇರ್ ಮಾಡಲು ಅವಕಾಶ ಕಲ್ಪಿಸಲಿದೆ(WhatsApp New Feature).
ವಾಟ್ಸಾಪ್ ಇತ್ತೀಚಿನ ಆಂಡ್ರಾಯ್ಡ್ 2.23.4.3 ಅಪ್‌ಡೇಟ್ ಮಾಡಿದೆ. ಕೆಲವು ಬೀಟಾ ಪರೀಕ್ಷಕರು ಈಗ 100 ಮೀಡಿಯಾಗಳನ್ನು ಹಂಚಿಕೊಳ್ಳಲು ಸಮರ್ಥರಾಗಿದ್ದಾರೆ ಎಂದು ವಾಟ್ಸಾಪ್ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುವ WABetaInfo ವರದಿ ಮಾಡಿದೆ.
ಒಂದು ವೇಳೆ ನಿಮ್ಮ ವಾಟ್ಸಾಪ್ ಖಾತೆಯಲ್ಲಿ ಮೀಡಿಯಾ ಹಂಚಿಕೆ ಸಾಮರ್ಥ್ಯ ಹೆಚ್ಚಾಗಿದೆ ಎಂಬುದನ್ನು ಪರೀಕ್ಷಿಸಬೇಕಿದ್ದರೆ, ಆ್ಯಪ್‌ನೊಳಗೇ ಮೀಡಿಯಾ ಪಿಕರ್‌ನಲ್ಲಿ 30 ಮೀಡಿಯಾ ಸೆಲೆಕ್ಟ್ ಮಾಡಲು ಪ್ರಯತ್ನಿಸಿ. ಒಂದು ವೇಳೆ ಹೊಸ ಫೀಚರ್ ನಿಮ್ಮ ಖಾತೆಗೆ ಲಭ್ಯವಾಗಿದ್ದರೆ, ಅಂತಿಮವಾಗಿ ನೀವು 100 ಮೀಡಿಯಾ ಹಂಚಿಕೆ ಮಾಡಲು ಯಶಸ್ವಿಯಾಗುವಿರಿ. ಇಲ್ಲದಿದ್ದರೆ, ವಾಟ್ಸಾಪ್ ಈ ಬಗ್ಗೆ ಅಪ್‌ಡೇಟ್ ಒದಗಿಸುವ ತನಕ ವೇಟ್ ಮಾಡಬೇಕಾಗುತ್ತದೆ.
ಇದನ್ನೂ ಓದಿ: WhatsApp New Feature: ಶೀಘ್ರವೇ ವಾಟ್ಸಾಪ್ ಚಾಟ್, ಗ್ರೂಪ್‌ಗಳಲ್ಲಿ ಮೆಸೇಜ್ ಪಿನ್ ಮಾಡಬಹುದು!
ವಾಟ್ಸಾಪ್‌ನ ಈ ಹೊಸ ಫೀಚರ್‌ನಿಂದ ಬಳಕೆದಾರರಿಗೆ ಸಾಕಷ್ಟು ಲಾಭವಾಗಲಿದೆ. ನಿಮ್ಮ ಫ್ರೆಂಡ್ಸ್ ಅಥವಾ ಕುಟುಂಬದ ಸದಸ್ಯರೊಂದಿಗೆ ಪೂರ್ಣ ಪ್ರಮಾಣದ ಮೀಡಿಯಾ ಅಲ್ಬಮ್ ಷೇರ್ ಮಾಡಬಹುದು. ಹೆಚ್ಚುವರಿಯಾಗಿ, ಹೊಸ ಮಿತಿಯು ಬಳಕೆದಾರರು ಬಹಳಷ್ಟು ಮಿಡಿಯಾ ಫೈಲ್‌ಗಳನ್ನು ಕಳುಹಿಸಬೇಕಾದರೆ ಒಂದೇ ಫೋಟೋ ಅಥವಾ ವೀಡಿಯೊವನ್ನು ಒಂದಕ್ಕಿಂತ ಹೆಚ್ಚು ಬಾರಿ ಆಯ್ಕೆ ಮಾಡುವುದನ್ನು ತಡೆಯಲು ಸಹಾಯ ಮಾಡುತ್ತದೆ. ಸದ್ಯಕ್ಕೆ ಈ ಫೀಚರ್ ಬೀಟಾ ವರ್ಷನ್‌ನಲ್ಲಿದ್ದು ಶೀಘ್ರವೇ ಎಲ್ಲ ಬಳಕೆದಾರರಿಗೆ ದೊರೆಯಲಿದೆ.