ನವದೆಹಲಿ: ಬಳಕೆದಾರರ ಅನುಕೂಲಕ್ಕಾಗಿ ವಾಟ್ಸಾಪ್ ಮತ್ತೆ ಹೊಸ ಫೀಚರ್‌ಗಳನ್ನು (WhatsApp New Feature) ಪರಿಚಯಿಸಿದೆ. ಈಗ ಬಳಕೆದಾರರು, ಡಾಕ್ಯುಮೆಂಟ್ ಕ್ಯಾಪ್ಷನ್ಸ್, ದೀರ್ಘ ಗ್ರೂಪ್ ವಿಷಯ ಮತ್ತು ವಿವರಣೆಗಳು ಹಾಗೂ ಸುಮಾರು 100 ಮೀಡಿಯಾ ಫೈಲ್‌ಗಳನ್ನು ಷೇರ್ ಮಾಡಬಹುದು. ಈ ಮೂರೂ ಫೀಚರ್‌ಗಳು ಎಲ್ಲ ಬಳಕೆದಾರರಿಗೆ ಲಭ್ಯ ಇದ್ದು, ಬಳಸಿಕೊಳ್ಳಬಹುದು. ಈ ಹೊಸ ಫೀಚರ್ಸ್‌ಗಾಗಿ ಬಳಕೆದಾರರು ತಮ್ಮ ವಾಟ್ಸಾಪ್ ಆ್ಯಪ್ ಅಪ್‌ಡೇಟ್ ಮಾಡಿಕೊಳ್ಳಬೇಕಾಗುತ್ತದೆ.
ಇತ್ತೀಚೆಗಷ್ಟೇ ವಾಟ್ಸಾಪ್, 100 ಮೀಡಿಯಾ ಫೈಲ್ ಷೇರ್ ಮಾಡುವ ಫೀಚರ್ ಅನ್ನು ಬೀಟಾ ಆವೃತ್ತಿ ಬಳಕೆದಾರರಿಗೆ ರಿಲೀಸ್ ಮಾಡಿತ್ತು. ಈ ಹಿಂದೆ ಬಳಕೆದಾರರು 30 ಫೈಲ್‌ಗಳನ್ನು ಮಾತ್ರವೇ ಕಳುಹಿಸಲು ಅವಕಾಶ ನೀಡಲಾಗಿತ್ತು. ಈಗ ಮಿತಿಯನ್ನು ತೆಗೆದು ಹಾಕಲಾಗಿದ್ದು, 100 ಮೀಡಿಯಾ ಫೈಲ್‌ಗಳನ್ನು ಷೇರ್ ಮಾಡಬಹುದಾಗಿದೆ. ಮೀಡಿಯಾ ಫೈಲ್ ಷೇರ್ ಮಾಡುವುದು ಮಾತ್ರವಲ್ಲದೇ ಬಳಕೆದಾರರು, ಡಾಕ್ಯುಮೆಂಟ್‌ಗಳಿಗೆ ಕ್ಯಾಪ್ಷನ್ ಸೇರಿಸಬಹುದು, ಗ್ರೂಪ್‌ಗಳಿಗೆ ದೀರ್ಘ ನಾಮಕರಣ ಮಾಡಬಹುದು ಮತ್ತು ವಿವರಣೆಯನ್ನೂ ನೀಡಬಹುದು.
ಇದನ್ನೂ ಓದಿ: WhatsApp New Feature: ಶೀಘ್ರವೇ ವಾಟ್ಸಾಪ್ ಚಾಟ್, ಗ್ರೂಪ್‌ಗಳಲ್ಲಿ ಮೆಸೇಜ್ ಪಿನ್ ಮಾಡಬಹುದು!
ಡಾಕ್ಯುಮೆಂಟ್ ಷೇರ್ ಮಾಡುವಾಗ, ಬಳಕೆದಾರರು ಆ ಡಾಕ್ಯುಮೆಂಟ್ ವಿವರಿಸುವ ಕ್ಯಾಪ್ಷನ್ ನೀಡಬಹುದು. ಹಾಗೆಯೇ ಬಳಕೆದಾರರು, ಗ್ರೂಪ್‌ಗಳ ವಿಷಯಕ್ಕೆ ಸಂಬಂಧಸಿದಂತೆ ದೀರ್ಘ ಹೆಸರು ನೀಡಬಹುದು, ಅಷ್ಟೇ ದೀರ್ಘವಾಗಿ ವಿವರಣೆಯನ್ನೂ ಬರೆಯಬಹುದು. ಈಗ ಬಳೆಕದಾರರು 100 ಫೋಟೋ ಮತ್ತು ವಿಡಿಯೋಗಳನ್ನು ಚಾಟ್‌ನಲ್ಲಿ ಕಳುಹಿಸಬಹುದು.