ಬೆಂಗಳೂರು: ವಾಟ್ಸಾಪ್‌ನಲ್ಲೂ ಅಪರಿಚಿತ ಕರೆಗಳ ತೊಂದರೆಯನ್ನು ತಪ್ಪಿಸಲು ಹೊಸ ಫೀಚರ್ ಶೀಘ್ರವೇ ಬಳಕೆದಾರರಿಗೆ ಸಿಗಲಿದೆ. ವಾಟ್ಸಾಪ್ ಸೈಲೆನ್ಸ್ ಅನ್‌ನೋನ್ ಕಾಲರ್ಸ್ (silence unknown callers) ಎಂಬ ಹೊಸ ಫೀಚರ್ ಅಭಿವೃದ್ಧಿಪಡಿಸುತ್ತಿದೆ. ಕಾಂಟಾಕ್ಟ್ ಲಿಸ್ಟ್‌ನಿಂದ ಹೊರತಾದ ಇಲ್ಲವೇ ಅಪರಿಚಿತ ನಂಬರ್‌ಗಳಿಂದ ಕರೆ ಬಂದರೆ ಅಂಥ ಕರೆಯನ್ನು ಮ್ಯೂಟ್ ಮಾಡಲು ಈ ಫೀಚರ್ ಹೆಲ್ಪ್ ಮಾಡುತ್ತದೆ(WhatsApp New Feature:).
Wabetainfo ಪ್ರಕಾರ, ಹೊಸ ಫೀಚರ್ ಬಳಕೆದಾರರಿಗೆ ಸೇವ್ ಮಾಡದ ಸಂಪರ್ಕಗಳಿಂದ ಯಾವುದೇ ಕರೆಯನ್ನು ಮ್ಯೂಟ್ ಮಾಡಲು ಅನುಮತಿಸುತ್ತದೆ. ಈ ಫೀಚರ್ ಪ್ರಸ್ತುತ ಆ್ಯಂಡ್ರಾಯ್ಡ್ ಸಾಧನಗಳಿಗಾಗಿ ಅಭಿವೃದ್ಧಿಪಡಿಸಲಾಗತ್ತಿದೆ. ಆದಾಗ್ಯೂ, ಇದು ಶೀಘ್ರದಲ್ಲೇ ಪರೀಕ್ಷೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಈ ಫೀಚರ್ ಬಿಡುಗಡೆಯಾದ ಮೇಲೆ, ವಾಟ್ಸಾಪ್‌ನ ಸೆಟ್ಟಿಂಗ್ಸ್‌ಗೆ ಹೋಗಿ silence unknown callers ಫೀಚರ್ ಸಕ್ರಿಯಗೊಳಿಸಬಹುದು. ಇಷ್ಟಾದ ಮೇಲೆ ನಿಮ್ಮ ವಾಟ್ಸಾಪ್‌ಗೆ ಬರುವ ಎಲ್ಲ ಅನ್‌ನೋನ್ ಕಾಲ್‍ಗಳು ಸ್ವಯಂ ಆಗಿ ಮ್ಯೂಟ್ ಆಗುತ್ತವೆ. ಹಾಗಿದ್ದೂ, ಬಳಕೆದಾರರಿಗೆ ಈ ಕಾಲ್‌ಗಳ ಬಂದ ನೋಟಿಫಿಕೇಷನ್ ಸಿಕ್ಕೇ ಸಿಗುತ್ತದೆ. ಈ ರೀತಿಯಾಗಿ, ಸ್ಪ್ಯಾಮ್ ಕರೆಗಳನ್ನು ತಪ್ಪಿಸಲು ವಾಟ್ಸಾಪ್‌ನಲ್ಲಿ ಎಲ್ಲಾ ಅಧಿಸೂಚನೆಗಳು ಅಥವಾ ಕರೆಗಳನ್ನು ಮ್ಯೂಟ್ ಮಾಡಬೇಕಾಗಿಲ್ಲ.
ವಾಟ್ಸಾಪ್ ಸ್ಪ್ಲಿಟ್ ವ್ಯೂ ಫೀಚರ್!
ಇನ್‌ಸ್ಟಂಟ್ ಮೆಸೇಜಿಂಗ್ ಸೌಲಭ್ಯ ಒದಗಿಸುವ ವಾಟ್ಸ್‌ಆ್ಯಪ್ ನಿಯಮಿತವಾಗಿ ಹೊಸ ಹೊಸ ಫೀಚರ್‌ಗಳನ್ನು ಬಳಕೆದಾರರಿಗೆ ನೀಡುತ್ತಿದೆ. ಈಗ ಆ್ಯಂಡ್ರಾಯ್ಡ್ ಟ್ಯಾಬ್ಲೆಟ್ ಬಳಕೆದಾರರಿಗೆ ಹೊಸ ಫೀಚರ್ ನೀಡಲು ಮುಂದಾಗಿದೆ. ಟ್ಯಾಬ್ ಬಳಕೆದಾರರಿಗೆ ಶೀಘ್ರದಲ್ಲೇ ಸ್ಪ್ಲಿಟ್ ವ್ಯೂ (WhatsApp Split View) ಇಂಟರ್‌ಫೇಸ್ (ಟ್ಯಾಬ್‌ನ ಸ್ಕ್ರೀನ್ ಎರಡು ವಿಭಾಗಗಳಾಗಿ ವಿಂಗಡಣೆಯಾಗುವುದು) ಸೌಲಭ್ಯ ಸಿಗಲಿದೆ.
ಇದನ್ನೂ ಓದಿ: WhatsApp New Feature: ‘ಕಾಲ್ ಲಿಂಕ್ಸ್’ ಎಂಬ ಹೊಸ ವಾಟ್ಸಾಪ್ ಫೀಚರ್, ಇದರಿಂದ ಏನು ಲಾಭ?
ಆರಂಭಿಕ ಹಂತದಲ್ಲಿ ಕೇವಲ ಆ್ಯಂಡ್ರಾಯ್ಡ್ ಟ್ಯಾಬ್ಲೆಟ್ ಬಳಕೆದಾರರಿಗೆ ಮಾತ್ರ ಸ್ಪ್ಲಿಟ್ ವ್ಯೂ ಸೌಲಭ್ಯ ಸಿಗಲಿದೆ. ಟ್ಯಾಬ್ ದೊಡ್ಡ ಸ್ಕ್ರೀನ್ ಹೊಂದಿರುವುದರಿಂದ ಬಳಕೆದಾರರು ಸ್ಪ್ಲಿಟ್ ವ್ಯೂ ಮೂಲಕ ಏಕಕಾಲಕ್ಕೆ ಇಬ್ಬರ ಜತೆ ಚಾಟ್ ಮಾಡುವುದು, ವಿಡಿಯೊ ಕಾಲ್ ಮಾಡುವುದು ಸೇರಿ ಹಲವು ಸೌಲಭ್ಯ ಪಡೆಯಲಿದ್ದಾರೆ. ಇದುವರೆಗೆ ಒಬ್ಬರೊಂದಿಗೆ ಚಾಟ್ ಮಾಡುವಾಗ ಇನ್ನೊಬ್ಬರಿಗೆ ಮೆಸೇಜ್ ಮಾಡಲು ‘ಬ್ಯಾಕ್’ ಬರಬೇಕಿತ್ತು. ಆದರೆ, ಸ್ಪ್ಲಿಟ್ ವ್ಯೂ ಮೂಲಕ ಏಕಕಾಲಕ್ಕೆ ಇಬ್ಬರ ಜತೆ ಏಕಕಾಲಕ್ಕೆ ಚಾಟ್ ಮಾಡಬಹುದಾಗಿದೆ.