Site icon Vistara News

WhatsApp New Feature: ವಾಟ್ಸ್‌ಆ್ಯಪ್ ಗ್ರೂಪ್‌ನೊಳಗೇ ಮತ್ತೆ ಗ್ರೂಪ್ಸ್ ಮಾಡಿ! ಶೀಘ್ರವೇ ಎಲ್ಲರಿಗೂ ಲಭ್ಯ

WhatsApp

ನವ ದೆಹಲಿ: ಬಳಕೆದಾರರ ಅಗತ್ಯಗಳಿಗೆ ತಕ್ಕಂತೆ ಹೊಸ ಫೀಚರ್ಸ್ ಮತ್ತು ಸೌಲಭ್ಯಗಳನ್ನು ಒದಗಿಸುವಲ್ಲಿ ಮೆಟಾ ಒಡೆತನದ ವಾಟ್ಸ್‌ಆ್ಯಪ್ ಯಾವಾಗಲೂ ಮುಂದಿರುತ್ತದೆ. ವಾಟ್ಸ್‌ಆ್ಯಪ್ ಮಾಲೀಕ ಮಾರ್ಕ್‌ ಜುಕರ್‌ಬರ್ಗ್ ಅವರು ಈ ವರ್ಷದ ಆರಂಭದಲ್ಲಿ ಘೋಷಣೆಯೊಂದನ್ನು ಮಾಡಿ, ವಾಟ್ಸ್‌ಆ್ಯಪ್ ಗ್ರೂಪ್‌ನೊಳಗೇ ಮತ್ತೆ ಚಿಕ್ಕ ಗ್ರೂಪ್‌ ಮಾಡಲು ಅನುಕೂಲವಾಗುವ ಫೀಚರ್ಸ್ ಅಭಿವೃದ್ಧಿಪಡಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಘೋಷಣೆ ಮಾಡಿ ಕೆಲವಾರು ತಿಂಗಳ ಬಳಿಕ ಅದೀಗ ನಿಜವಾಗುತ್ತಿದೆ. ಈ ಹೊಸ ವಾಟ್ಸ್‌ಆ್ಯಪ್ ಫೀಚರ್ (WhatsApp New Feature) ಇದೀಗ ಬೀಟಾ ಬಳಕೆದಾರರಿಗೆ ಲಭ್ಯವಾಗಿದ್ದು, ಶೀಘ್ರವೇ ಎಲ್ಲ ಬಳಕೆದಾರರಿಗೂ ಇದು ದೊರೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ವಾಟ್ಸ್‌ಆ್ಯಪ್‌ ಬೆಳವಣಿಗೆಗಳನ್ನು ನಿಖರವಾಗಿ ವರದಿ ಮಾಡುವ WABetaInfo, ಈ ಹೊಸ ಫೀಚರ್ ಬಗ್ಗೆಯೂ ವರದಿಯನ್ನು ಪ್ರಕಟಿಸಿದೆ. ಆಂಡ್ರಾಯ್ಡ್‌ನಲ್ಲಿ WhatsApp beta v2.22.193 ಹೊಸ ವರ್ಷನ್ ಅಪ್‌ಡೇಟ್ ಮಾಡಿಕೊಂಡಿರುವ ಬಳಕೆದಾರರ ವಾಟ್ಸ್‌ಆ್ಯಪ್‌ನಲ್ಲಿ ಕಮ್ಯುನಿಟಿಸ್ ಟ್ಯಾಬ್ ಕಾಣಿಸಿಕೊಂಡಿದೆ. ಈ ಫೀಚರ್ ಸದ್ಯಕ್ಕೆ ಎಲ್ಲರಿಗೂ ಸಿಗಲಿಕ್ಕಿಲ್ಲ. ಬೀಟಾ ಬಳಕೆದಾರರಿಗೆ ಮಾತ್ರವೇ ಹೊಸ ವರ್ಷನ್ ಅಪ್‌ಡೇಟ್ ಮಾಡಿಕೊಳ್ಳಲು ಸಾಧ್ಯವಾಗುತ್ತಿದೆ.

ಯಾವ ಬಳಕೆದಾರರಿಗೆ ಹೊಸ ಫೀಚರ್ ಅಕ್ಸೆಸ್ ಮಾಡಲು ಸಾಧ್ಯವಾಗುತ್ತಿದೆಯೋ ಅಂಥವರ ವಾಟ್ಸ್‌ಆ್ಯಪ್‌‌ನ ಮೇನ್ ಸ್ಕ್ರೀನ್ ಮೇಲೆ ಕಮ್ಯುನಿಟಿಸ್ ಟ್ಯಾಬ್ ಕಾಣಿಸಿಕೊಂಡಿದೆ. ಇದು, ಸ್ಕ್ರೀನ್ ಎಡ ಭಾಗದಲ್ಲಿ ಈ ಮೊದಲಿದ್ದ ಕ್ಯಾಮೆರಾ ಟ್ಯಾಬ್ ಜಾಗವನ್ನು ಆಕ್ರಮಿಸಿಕೊಂಡಿದೆ. ಯಾರ ವಾಟ್ಸ್‌ಆ್ಯಪ್‌ನಲ್ಲಿ ಈ ಫೀಚರ್ ಲಭ್ಯವಾಗಿದೆಯೋ ಅಂಥವರು ಹತ್ತು ಗ್ರೂಪ್‌ಗಳ ಕಮ್ಯುನಿಟಿಯನ್ನು ರಚಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಬಳಕೆದಾರರು ಪ್ರತಿ ಗ್ರೂಪ್‌ನಲ್ಲಿ ಗರಿಷ್ಠ 512 ಜನರನ್ನು ಸೇರಿಸಬಹುದಾಗಿದೆ.

ಈ ಹೊಸ ಫೀಚರ್ಸ್‌ನಿಂದ ವಾಟ್ಸ್‌ಆ್ಯಪ್ ಗ್ರೂಪ್ ಬಳಕೆದಾರರಿಗೆ ಸಾಕಷ್ಟು ಉಪಯೋಗಳಿವೆ, ಅವು;

ವಾಟ್ಸ್‌ಆ್ಯಪ್ ಗ್ರೂಪ್‌ನೊಳಗೇ ಮತ್ತೆ ಪ್ರತ್ಯೇಕ ಗ್ರೂಪ್‌ಗಳನ್ನು ರಚಿಸಲು ಅವಕಾಶ ಕಲ್ಪಿಸುವ ಫೀಚರ್ಸ್ ಬಗ್ಗೆ ಮೊದಲಿನಿಂದಲೂ ಸುದ್ದಿಯಲ್ಲಿತ್ತು. ಸ್ವತಃ ಮೆಟಾ ಮಾಲೀಕ ಮಾರ್ಕ್ ಜುಕರ್‌ಬುರ್ಗ್ ಕೂಡ ಈ ಬಗ್ಗೆ ಘೋಷಣೆ ಮಾಡಿದ್ದರೆ. ಆದರೆ, ಇಷ್ಟು ಬೇಗ ಬೀಟಾ ವರ್ಷನ್‌ಗೆ ಬಳಕೆಗೆ ಸಿಗಲಿದೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಶೀಘ್ರವೇ ಸಾಮಾನ್ಯ ಬಳಕೆದಾರರಿಗೂ ಈ ಹೊಸ ಫೀಚರ್ ಸಿಗಬಹುದು.

ಇದನ್ನೂ ಓದಿ | WhatsAppನಲ್ಲಿ ಹೊಸ ಫೀಚರ್‌:‌ ಸ್ಟೇಟಸ್‌, ಫೋಟೊ ಬೇಕಾದವರು ಮಾತ್ರ ನೋಡುವಂತೆ ಮಾಡಬಹುದು!

Exit mobile version