ನವದೆಹಲಿ: ಈ ಮೊದಲೇ ಘೋಷಿಸಿದಂತೆ ಮೆಟಾ (Meta) ಒಡೆತನದ ವಾಟ್ಸ್ಆ್ಯಪ್ (WhatsApp), ‘ಮೆಸೇಜ್ ಯುವರ್‌ಸೆಲ್ಫ್’ (Message Yourself) ಫೀಚರ್ ಅನ್ನು ಎಲ್ಲ ಬಳಕೆದಾರರಿಗೆ ಬಿಡುಗಡೆ ಮಾಡಿದೆ. ಇದೊಂದು ವಿಶಿಷ್ಟವಾದ ಫೀಚರ್ ಆಗಿದ್ದು, ಬಳಕೆದಾರರು ಈ ಬಗ್ಗೆ ಬಹು ದಿನಗಳಿಂದಲೂ ಬೇಡಿಕೆ ಇಟ್ಟಿದರು. ಆ ಬೇಡಿಕೆ ಈಡೇರಿದೆ. ಮಂಗಳವಾರದಿಂದಲೇ ಜಗತ್ತಿನಾದ್ಯಂತ ಎಲ್ಲ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಈ ಫೀಚರ್ ಲಭ್ಯವಾಗಿದೆ.
ಏನು ಉಪಯೋಗ?
ಮೆಸೇಜ್ ಯುವರ್‌ಸೆಲ್ಫ್ ಫೀಚರ್‌ನಿಂದ ಸಾಕಷ್ಟು ಉಪಯೋಗಗಳಿವೆ. ನೋಟ್ಸ್, ರಿಮೈಂಡರ್ಸ್, ಶಾಪಿಂಗ್ ಲಿಸ್ಟ್, ಅಪ್‌ಡೇಟ್‌ಗಳನ್ನು ನಿಮ್ಮ ನಂಬರ್‌ಗೆ ಕಳುಹಿಸಿಕೊಳ್ಳಬಹುದು. ಈ ಮೊದಲು ಈ ರೀತಿ ಮಾಡಲು ಸಾಧ್ಯವಿರಲಿಲ್ಲ. ಜತೆಗೇ ಇವುಗಳನ್ನೆಲ್ಲ ಟ್ರ್ಯಾಕ್ ಮಾಡಲು ಇದರಿಂದ ಸಾಧ್ಯವಾಗಲಿದೆ. ಈ ತಿಂಗಳದ ಆರಂಭದಲ್ಲಿ ಮೆಸೇಜ್ ಯುವರ್‌ಸೆಲ್ಫ್ ಬೀಟಾ ಬಳಕೆದಾರರಿಗೆ ಮಾತ್ರವೇ ಲಭ್ಯವಾಗುತ್ತಿತ್ತು. ಈ ಎಲ್ಲರಿಗೂ ದೊರೆಯುತ್ತಿದೆ.
ಈ ಫೀಚರ್ ಹೇಗೆ ಬಳಸುವುದು?
ಮೊದಲಿಗೆ ನಿಮ್ಮ ವಾಟ್ಸ್ಆ್ಯಪ್ ಅಪ್ ಟು ಡೇಟ್ ಆಗಿದೆಯೇ ಚೆಕ್ ಮಾಡಿಕೊಳ್ಳಿ. ಆಗಿಲ್ಲವೆಂದಾದರೆ, ಪ್ಲೇ ಸ್ಟೋರ್‌ಗೆ ಹೋಗಿ ಅಪ್‌ಡೇಟ್ ಮಾಡಿಕೊಳ್ಳಿ. ಬಳಿಕ, ವಾಟ್ಸ್ಆ್ಯಪ್ ತೆರೆಯಿರಿ. ಮೊಬೈಲ್ ಸ್ಕ್ರೀನ್ ಮೇಲ್ಭಾಗದಲ್ಲಿ ಕಾಣಿಸುವ ಚಾಟ್ಸ್ ಟ್ಯಾಬ್ ಮೇಲೆ ಟ್ಯಾಪ್ ಮಾಡಿ. ಆಗ ಕೆಳ ಭಾಗದಲ್ಲಿ ಬಲಬದಿಗೆ ಸರ್ಕಲ್‌ನಲ್ಲಿ ಚಾಟ್ ಐಕಾನ್ ಕಾಣಿಸುತ್ತದೆ. ಅದನ್ನು ಟ್ಯಾಪ್ ಮಾಡಿ. ಆಗ ಸೆಲೆಕ್ಟ್ ಕಾಂಟಾಕ್ಟ್ ಕೆಳಗೆ ನ್ಯೂ ಗ್ರೂಪ್, ನ್ಯೂ ಕಾಂಟಾಕ್ಟ್ ಮತ್ತು ನ್ಯೂ ಕಮ್ಯುನಿಟಿ ಐಕಾನ್‌ಗಳ ಕೆಳಗೆ ನಿಮಗೆ ಕಾಂಟಾಕ್ಟ್ಸ್ ಆನ್ ವಾಟ್ಸ್ಆ್ಯಪ್ ಎಂಬ ಡಲ್ ಆಗಿರುವ ಅಕ್ಷರಗಳಿವೆ, ಗಮನಿಸಿ. ಅದರ ಕೆಳಗೆ ನಿಮ್ಮ ಹೆಸರು(You) ಕಾಣಿಸುತ್ತದೆ. ಅದನ್ನು ಟ್ಯಾಪ್ ಮಾಡಿ, ಆಗ ಮಾಮೂಲಿ ಚಾಟ್ ರೂಮ್ ಓಪನ್ ಆಗುತ್ತದೆ. ನೀವು ಸಂದೇಶಗಳನ್ನು ಕಳುಹಿಸಲು ಶುರು ಮಾಡಬಹುದು.
ಕೆಲವು ವರದಿಗಳ ಪ್ರಕಾರ, ಗ್ರೂಪ್‌ಗಳಲ್ಲಿ ಪ್ರೊಫೈಲ್ ಫೋಟೋಗಳನ್ನು ನೋಡುವುದು, ಶೀರ್ಷಿಕೆಯೊಂದಿಗೆ ಮೀಡಿಯಾ ಫೈಲ್ ಫಾರ್ವರ್ಡ್ ಮಾಡುವುದು ಇತ್ಯಾದಿಗಳಂತಹ ಇನ್ನಷ್ಟು ಮೋಜಿನ ಫೀಚರ್ಸ್‌ಗಳನ್ನು ಭವಿಷ್ಯದಲ್ಲಿ ನಿರೀಕ್ಷಿಸಬಹುದು. ಈ ಫೀಚರ್‌ಗಳನ್ನು ಕಂಪನಿಯು ಮೆಸೇಜ್ ಯುವರ್‌ಸೆಲ್ಫ್ ಬೀಟಾ ಟೆಸ್ಟಿಂಗ್‌ಗೆ ಕಳುಹಿಸಲಾಗಿದೆ. ಆದರೆ, ಯಾವಾಗ ಬಳಕೆಗೆ ದೊರೆಯಲಿವೆ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.
ಇದನ್ನೂ ಓದಿ | WhatsApp Hack | 50 ಕೋಟಿ ವಾಟ್ಸ್ಆ್ಯಪ್ ಸಕ್ರಿಯ ಬಳಕೆದಾರರ ಫೋನ್ ನಂಬರ್ಸ್‌ಗೆ ಕನ್ನ, ಡಾಲರ್ ಲೆಕ್ಕದಲ್ಲಿ ಮಾರಾಟ!