ನವದೆಹಲಿ: ಹೊಸ ಹೊಸ ಫೀಚರ್‌ಗಳೊಂದಿಗೆ ಬಳಕೆದಾರರಿಗೆ ನವನವೀನ ಅನುಭವ, ಸೌಲಭ್ಯ ನೀಡುತ್ತದೆ. ಇತ್ತೀಚೆಗಷ್ಟೇ, ಮೆಸೇಜ್ ಎಡಿಟಿಂಗ್ (ಇದುವರೆಗೆ ಎಲ್ಲರಿಗೂ ಈ ಆಪ್ಶನ್ ಲಭ್ಯವಿಲ್ಲ) ಸೌಲಭ್ಯ ನೀಡಿದ್ದ ವಾಟ್ಸ್ಆ್ಯಪ್ ಈಗ ಹೊಸ ಫೀಚರ್ (WhatsApp New Feature) ನೀಡಲು ಮುಂದಾಗಿದೆ. ವಾಟ್ಸ್ಆ್ಯಪ್‌ನಲ್ಲಿ ಶೀಘ್ರದಲ್ಲೇ ಸ್ಕ್ರೀನ್ ಶೇರಿಂಗ್ ಸೌಲಭ್ಯ ಬರಲಿದೆ. ಅಂದರೆ, ಇನ್ನು ಮುಂದೆ ವಾಟ್ಸ್ಆ್ಯಪ್ಅನ್ನು ಟಿವಿ, ಡೆಸ್ಕ್‌ಟಾಪ್, ಲ್ಯಾಪ್‌ಟಾಪ್‌ಗೂ ವಾಟ್ಸ್ಆ್ಯಪ್ ಸ್ಕ್ರೀನ್ ಶೇರ್ ಮಾಡಬಹುದಾಗಿದೆ.
ಏನು ಉಪಯೋಗ?
ವಾಟ್ಸ್ಆ್ಯಪ್ ಸ್ಕ್ರೀನ್ ಶೇರಿಂಗ್‌ನಿಂದ ಹತ್ತಾರು ಉಪಯೋಗಗಳು ಬಳಕೆದಾರರಿಗೆ ಲಭ್ಯವಾಗಲಿವೆ. ಅದರಲ್ಲೂ, ಮೈಕ್ರೋಸಾಫ್ಟ್ ಟೀಮ್ಸ್, ಜೂಮ್ ಸೇರಿ ಹಲವು ಅಪ್ಲಿಕೇಶನ್‌ಗಳ ರೀತಿ ವಿಡಿಯೊ ಕಾನ್ಫರೆನ್ಸ್ ಮಾಡುವ ಜತೆಗೆ ಸ್ಕ್ರೀನ್ ಶೇರ್ ಮಾಡಬಹುದಾಗಿದೆ. ಮೆಟಾ ಮಾತೃಸಂಸ್ಥೆಯ ವಾಟ್ಸ್ಆ್ಯಪ್ ಈಗ ಫೀಚರ್‌ಅನ್ನು ಬೆಟಾ ಟೆಸ್ಟಿಂಗ್ ಹಂತದಲ್ಲಿ ನಿಯಮಿತ ಜನರ ಬಳಕೆಗೆ ನೀಡಿದೆ. ಬಳಕೆದಾರರ ಅಭಿಪ್ರಾಯ ಸಂಗ್ರಹಿಸಿ, ಇನ್ನಷ್ಟು ಮಾರ್ಪಾಡುಗಳಿದ್ದರೆ ಮಾಡಿ, ಎಲ್ಲರಿಗೂ ನೀಡಲಿದೆ ಎಂದು ವಾಬೆಟಾಇನ್ಫೋ ಸಂಸ್ಥೆ ವರದಿ ತಿಳಿಸಿದೆ.
📝 WhatsApp beta for Android 2.23.11.19: what's new?
— WABetaInfo (@WABetaInfo) May 27, 2023
• WhatsApp is releasing a screen-sharing feature!
• A new placement for tabs within the bottom navigation bar is available.https://t.co/qXkMrWFZfM pic.twitter.com/ktowYuslIz
ಸ್ಕ್ರೀನ್ ಶೇರ್ ಮಾಡುವುದು ಹೇಗೆ?
ವಾಟ್ಸ್ಆ್ಯಪ್ ಸ್ಕ್ರೀನ್ ಶೇರ್ ಮಾಡಲು ಮೊದಲು ಕರೆ ಮಾಡಬೇಕು. ಕರೆ ಮಾಡಿದಾಗ ಲೆಫ್ಟ್ ಕಾರ್ನರ್‌ನಲ್ಲಿ ಸ್ಕ್ರೀನ್ ಶೇರ್ ಆಪ್ಶನ್ ಸಿಗಲಿದೆ. ಇದರಿಂದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಡಿಸ್‌ಪ್ಲೇ ಪೂರ್ತಿ ಕಾಣಲಿದೆ. ವಾಟ್ಸ್ಆ್ಯಪ್‌ನಲ್ಲಿ ಈ ಆಪ್ಶನ್ ಎನೇಬಲ್ ಆಗಲು ಪಾಸ್‌ವರ್ಡ್, ಮೆಸೇಜ್, ಫೋನ್ ನಂಬರ್ ಸೇರಿ ವಿವಿಧ ಮಾಹಿತಿ ಕೇಳುತ್ತದೆ. ಹಾಗೆಯೇ, ಸ್ಕ್ರೀನ್‌ಅನ್ನು ರೆಕಾರ್ಡ್ ಕೂಡ ಮಾಡಬಹುದು, ಅದನ್ನು ಶೇರ್ ಕೂಡ ಮಾಡಬಹುದಾಗಿದೆ.
ಇದನ್ನೂ ಓದಿ: WhatsApp New Feature: ಫೋನ್ ನಂಬರ್ ಬದಲಿಗೆ ಯೂಸರ್ ನೇಮ್! ವಾಟ್ಸಾಪ್‌ನಿಂದ ಹೊಸ ಫೀಚರ್
ಈಗಾಗಲೇ ಮೆಸೇಜ್ ಎಡಿಟಿಂಗ್ ಸೌಲಭ್ಯವನ್ನು ಸಂಸ್ಥೆಯು ಜನರಿಗೆ ನೀಡಲಾಗಿದೆ. ಆ್ಯಂಡ್ರಾಯ್ಡ್, ಐಒಎಸ್ (iOS) ಹಾಗೂ ವೆಬ್‌ನಲ್ಲಿ ಹೊಸ ಫೀಚರ್ ಸಿಗುತ್ತಿದೆ. ಸದ್ಯ ಬೀಟಾ ವರ್ಷನ್ ಬಳಸುವವರು ವಾಟ್ಸ್‌ಆ್ಯಪ್‌ನಲ್ಲಿ ಮೂರು ಡಾಟ್‌ಗಳ ಮೇಲೆ ಕ್ಲಿಕ್ ಮಾಡಿದರೆ Edit Message ಆಪ್ಶನ್ ಸಿಗುತ್ತದೆ. ಇದನ್ನು ಬಳಸುವ ಮೂಲಕ ನಾವು ಯಾರಿಗಾದರೂ ಕಳುಹಿಸಿದ ಮೆಸೇಜ್‌ಅನ್ನು ಎಡಿಟ್ ಮಾಡಬಹುದಾಗಿದೆ.