WhatsApp New Feature: ಫೋನ್ ನಂಬರ್ ಬದಲಿಗೆ ಯೂಸರ್ ನೇಮ್! ವಾಟ್ಸಾಪ್‌ನಿಂದ ಹೊಸ ಫೀಚರ್ Vistara News
Connect with us

ಗ್ಯಾಜೆಟ್ಸ್

WhatsApp New Feature: ಫೋನ್ ನಂಬರ್ ಬದಲಿಗೆ ಯೂಸರ್ ನೇಮ್! ವಾಟ್ಸಾಪ್‌ನಿಂದ ಹೊಸ ಫೀಚರ್

WhatsApp New Feature: ಜನಪ್ರಿಯ ಮೆಸೇಜಿಂಗ್ ಆ್ಯಪ್ ಮತ್ತೊಂದು ವೈಶಿಷ್ಟ್ಯ ಕುರಿತು ಕೆಲಸ ಮಾಡುತ್ತಿದ್ದು, ಶೀಘ್ರವೇ ಬಳಕೆದಾರರಿಗೆ ದೊರೆಯಲಿದೆ.

VISTARANEWS.COM


on

Username whatsapp
Koo

ನವದೆಹಲಿ: ಜಗತ್ತಿನ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್‌ ಹೊಸ ಫೀಚರ್ (WhatsApp New Feature) ಲಾಂಚ್ ಮಾಡುತ್ತಿದ್ದು, ಬಳಕೆದಾರರ ನಂಬರ್‌ (Phone Number) ಬದಲಿಗೆ ಯೂಸರ್‌ ನೇಮ್‌ಗೆ (Username) ಅವಕಾಶ ಕಲ್ಪಿಸಲಾಗುತ್ತದೆ. ಗೂಗಲ್ ಪ್ಲೇ ಬೀಟಾ ಪ್ರೋಗ್ರಾಮ್ ಮೂಲಕ ಈ ಹೊಸ ಅಪ್‌ಡೇಟ್ ಮಾಡಲಿದೆ ಕಂಪನಿಯು. ಸದ್ಯಕ್ಕೆ ಈ ಫೀಚರ್ ಪರೀಕ್ಷಾ ಹಂತದಲ್ಲಿದ್ದು ಶೀಘ್ರವೇ ಎಲ್ಲ ಬಳಕೆದಾರರಿಗೆ ದೊರೆಯಲಿದೆ.

ವಾಟ್ಸಾಪ್‌ ಅಭಿವೃದ್ಧಿಪಡಿಸುತ್ತಿರುವ ಹೊಸ ಫೀಚರ್‌ಗಳ ಬಗ್ಗೆ ನಾವು ಕಳೆದು ತಿಂಗಳ ಸಾಕಷ್ಟು ವರದಿ ಮಾಡಿದ್ದೇವೆ. ಈ ಎಲ್ಲ ಫೀಚರ್‌ಗಳು ಬಳಕೆದಾರರಿಗೆ ಉತ್ತಮ ಅನುಭವವನ್ನು ಒದಗಿಸುವ ಬದ್ಧತೆಯನ್ನು ಹೊಂದಿವೆ ಎಂಬುದನ್ನು ನಾವು ದೃಢೀಕರಿಸುತ್ತೇವೆ. ಆದರೆ, ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಇತ್ತೀಚಿನ ಆಂಡ್ರಾಯ್ಡ್ 2.23.11.15 ಅಪ್‌ಡೇಟ್‌ ಮಾಡಿದಾಗ, ತುಂಬ ಭಿನ್ನವಾದ ವೈಶಿಷ್ಟ್ಯವನ್ನು ನಾವು ಗುರುತಿಸಿದ್ದೇವೆ ಎಂದು ವಾಟ್ಸಾಪ್‌ ಬೆಳವಣಿಗೆಗಳ ಮೇಲೆ ನಿಗಾ ಇಡುವ WABetaInfo ತನ್ನ ಪುಟದಲ್ಲಿ ಬರೆದುಕೊಂಡಿದೆ.

ಸರಳವಾಗಿ ಹೇಳಬೇಕು ಎಂದರೆ, ವಾಟ್ಸಾಪ್‌ ಯೂಸರ್ ನೇಮ್ ಫೀಚರ್(username feature) ಕುರಿತು ಕೆಲಸ ಮಾಡುತ್ತಿದೆ. ತಮ್ಮ ಕಾಂಟಾಕ್ಟ್‌ಗಳಿಗಾಗಿ ಬಳಕೆದಾರರು ತಮಗೆ ಬೇಕಾದ ವಿಶಿಷ್ಟ ಯೂಸರ್‌ನೇಮ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಸದ್ಯಕ್ಕೆ ಈ ಫೀಚರ್ ಇನ್ನೂ ಪರೀಕ್ಷಾ ಹಂತದಲ್ಲಿದ್ದು, ಶೀಘ್ರವೇ ಎಲ್ಲ ಬಳಕೆದಾರರಿಗೆ ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿ:WhatsApp New Feature: ವಾಟ್ಸಾಪ್ ಬಳಕೆದಾರರಿಗೆ ಖುಷಿಯ ಸುದ್ದಿ, ನೀವಿನ್ನು ಮೆಸೇಜ್ ಎಡಿಟ್ ಮಾಡಬಹುದು!

WABetaInfo ಷೇರ್ ಮಾಡಿರುವ ಸ್ಕ್ರೀನ್‌ಶಾಟ್‌ಗಳ ಪ್ರಕಾರ, ಈ ಫೀಚರ್‌ ವಾಟ್ಸಾಪ್‌ನ ಸೆಟ್ಟಿಂಗ್ಸ್‌ನ ಪ್ರೊಫೈಲ್‌ನಲ್ಲಿ ಪ್ಲೇಸ್ ಮಾಡುವ ಸಾಧ್ಯತೆ ಇದೆ. ಬಳಕೆದಾರರ ಹೆಸರನ್ನು ಆಯ್ಕೆ ಮಾಡುವ ಸಾಮರ್ಥ್ಯದೊಂದಿಗೆ, ವಾಟ್ಸಾಪ್‌ ಬಳಕೆದಾರರು ತಮ್ಮ ಖಾತೆಗಳಿಗೆ ಗೌಪ್ಯತೆಯ ಮತ್ತೊಂದು ಪದರವನ್ನು ಸೇರಿಸಲು ಅವಕಾಶವನ್ನು ಹೊಂದಿರುತ್ತಾರೆ.

ವಾಟ್ಸಾಪ್‌ ಲಿಂಕ್ಸ್ ಸ್ಕ್ಯಾಮ್‌ನಿಂದ ತಪ್ಪಿಸಿಕೊಳ್ಳುವುದು ಹೇಗೆ? ಸುರಕ್ಷತೆಗೆ ಹೀಗೆ ಮಾಡಿ…

ವಾಟ್ಸಾಪ್‌ಗೆ ಬಂದ ಲಿಂಕ್ (WhatsApp Links Scam) ಮೇಲೆ ಕ್ಲಿಕ್ ಮಾಡಿದ ವ್ಯಕ್ತಿಯೊಬ್ಬ 22 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಗೋಮತಿನಗರ ಸೈಬರ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್ಐಆರ್ ದಾಖಲಾಗಿದೆ. ವಾಟ್ಸಾಪ್‌ನಲ್ಲಿ ಸಿಂಪಲ್ ಕೆಲಸ ಮಾಡುವುದರ ಮೂಲಕ ಹಣ ಗಳಿಸುವ ಆಮಿಷವನ್ನು ವಾಟ್ಸಾಪ್ ಮೂಲಕವೇ ಒಡ್ಡಲಾಗಿತ್ತು. ಲಿಂಕ್‌ಗಳನ್ನು ಮತ್ತು ವೆಬ್‌ಸೈಟ್‌ಗಳನ್ನು ಲೈಕ್ ಮಾಡುವ ಉದ್ಯೋಗದ ಆಮಿಷ ನೀಡಲಾಗಿತ್ತು. ಸಂತ್ರಸ್ತ ವ್ಯಕ್ತಿ ಈ ಆಫರ್ ನಿಜವೆಂದು ಭಾವಿಸಿದ್ದ. ಆರಂಭದಲ್ಲಿ ಸಂಬಳವಾಗಿ 48,450 ರೂ. ನೀಡಿದ್ದರು. ಬಳಿಕ ವಂಚನೆಗಾರರು, ಇನ್ನೂ ಹೆಚ್ಚಿನ ಹಣ ಗಳಿಸಲು 4.84 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡಿದ್ದರು. ಹೀಗೆ ಆತನಿಂದ 22 ಲಕ್ಷದವರೆಗೂ ಹಣ ಕಿತ್ತಿದ್ದಾರೆ. ಬಳಿಕ, ಸಂತ್ರಸ್ತ ವ್ಯಕ್ತಿಯ ಕರೆಗಳಿಗೆ ಉತ್ತರಿಸುವುದನ್ನು ನಿಲ್ಲಿಸಿದ್ದಾರೆ. ಆಗ ಆತನಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಗುರುಗಾಂವದಲ್ಲೂ ವ್ಯಕ್ತಿಯೊಬ್ಬ ಇಂಥದ್ದೇ ಜಾಲಕ್ಕೆ ಒಳಗಾಗಿ 45 ಲಕ್ಷ ರೂ. ಕಳೆದುಕೊಂಡಿದ್ದಾನೆ. ಈ ರೀತಿಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ(Cyber Fraud).

ಈ ವಾಟ್ಸಾಪ್‌ ಲಿಂಕ್‌ ವಂಚನೆಯಿಂದ ತಪ್ಪಿಸಿಕೊಳ್ಳಬೇಕಾದ ಅಗತ್ಯವಿದೆ. ವಾಟ್ಸಾಪ್‌ಗೆ ಬರುವ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮುಂಚೆ ಅದರ ಅಸಲಿಯತ್ತು ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಖಾಲಿಯಾಗುವುದು ತಪ್ಪಲ್ಲ. ಸೈಬರ್ ವಂಚನೆ ಮತ್ತು ವಾಟ್ಸಾಪ್ ವಂಚನೆಯಿಂದ ತಪ್ಪಿಸಿಕೊಳ್ಳಲು ಕೆಲವು ಟಿಪ್ಸ್‌ಗಳನ್ನು ಇಲ್ಲಿ ನೀಡಿದ್ದೇವೆ. ಓದಿ.

ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಲು ಹೋಗಬೇಡಿ. ವಾಟ್ಸಾಪ್ ಸ್ಕ್ಯಾಮ್‌ ಅಥವಾ ಯಾವುದೇ ರೀತಿಯ ಸೈಬರ್ ವಂಚನೆಯಿಂದ ತಪ್ಪಿಸಿಕೊಳ್ಳಬೇಕಿದ್ದರೆ, ಬಳಕೆದಾರರು ಎಚ್ಚರವಹಿಸಬೇಕಾದ ಮಹತ್ವದ ಸಂಗತಿ ಇದು. ಯಾವುದೇ ಕಾರಣಕ್ಕೂ ಅನುಮಾನಾಸ್ಪದ ಹಾಗೂ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಲು ಹೋಗಬಾರದು. ಯಾವುದೇ ಲಿಂಕ್ ಕ್ಲಿಕ್ ಮಾಡುವ ಮುಂಚೆ ಅದರ ಸಾಚಾತನ ತಿಳಿಯುವುದು ಅತ್ಯಗತ್ಯ. ಚೂರೇ ಚೂರು ಅನುಮಾನ ಬಂದರೂ ಕ್ಲಿಕ್ ಮಾಡಲು ಹೋಗಬಾರದು.

ಸೈಬರ್ ವಂಚನೆ ತಡೆಯಲು ಎರಡು ಹಂತದ ದೃಢೀಕರಣ ಅಗತ್ಯವಾಗಿ ಬೇಕು. ವಾಟ್ಸಾಪ್ ಲಿಂಕ್ ಸ್ಕ್ಯಾಮ್‌ನಿಂದ ತಪ್ಪಿಸಿಕೊಳ್ಳಬೇಕಿದ್ದರೆ, ವಾಟ್ಸಾಪ್‌ನ ಟು ಸ್ಟೆಪ್ಸ್ ವೆರಿಫೀಕೆಷನ್(ಎರಡು ಹಂತದ ದೃಢೀಕರಣ) ಫೀಚರ್ ಆನ್ ಮಾಡಿ. ಇದರಿಂದಾಗಿ, ನಿಮ್ಮ ಖಾತೆಯ ದೃಢೀಕರಣಕ್ಕೆ 6 ಅಂಕಿಗಳ ಪಿನ್ ನೀಡಬೇಕಾಗುತ್ತದೆ. ಇದರಿಂದ ನಿಮ್ಮನ್ನು ಫಿಶಿಂಗ್ ಅಟಾಕ್ಸ್ ಮತ್ತು ಸೈಬರ್ ವಂಚನೆಯಿಂದ ರಕ್ಷಿಸಿಕೊಳ್ಳಬಹುದಾಗಿದೆ.

ಬ್ಲಾಕ್ ಮಾಡುವುದು ಮತ್ತು ರಿಪೋರ್ಟ್ ಮಾಡುವುದು ಕೂಡ ಉತ್ತಮ ಸುರಕ್ಷತೆಯ ನಡೆಯಾಗಿದೆ. ವಾಟ್ಸಾಪ್‌ಗೆ ಬರುವ ಯಾವುದೇ ಅಪರಿಚಿತ ಮತ್ತು ಅನುಮಾನಾಸ್ಪದ ಕರೆಗಳ ಕುರಿತು ರಿಪೋರ್ಟ್ ಮಾಡಬೇಕು. ಅಲ್ಲದೇ ಬ್ಲಾಕ್ ಮಾಡುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯ ನಡೆಯಾಗುತ್ತದೆ. ಒಂದು ವೇಳೆ, ಯಾವುದೇ ಕಂಪನಿಯು ಹೆಸರಿನಲ್ಲಿ ಉದ್ಯೋಗ ಆಫರ್‌ ಮಾಡುವ ಸಂದೇಶಗಳಿದ್ದರೆ, ಮೂಲ ಕಂಪನಿಗಳ ಜತೆ ಮಾತುಕತೆ ನಡೆಸಿ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ.

ಪ್ರೈವಸಿ ಸೆಟ್ಟಿಂಗ್‍ ಕೂಡ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ವಾಟ್ಸಾಪ್ ಗ್ರೂಪ್‌ ಪ್ರೈವಸಿ ಸೆಟ್ಟಿಂಗ್ಸ್ ಖಚಿತಪಡಿಸಿಕೊಳ್ಳಬೇಕು. ನಿಮ್ಮ ಪ್ರೊಫೈಲ್ ಫೋಟೋ ಮತ್ತು ಆನ್‌ಲೈನ್ ಸ್ಟೇಟಸ್ ಯಾರು ನೋಡಬಹುದು ಎಂಬುದರ ಕುರಿತು ನೀವು ಪ್ರೈವಸಿ ಸೆಟ್ಟಿಂಗ್ ಮಾಡಬಹುದು. ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀವು ನಂಬಬಹುದಾದ ಜನರೊಂದಿಗೆ ಮಾತ್ರ ಹಂಚಿಕೊಳ್ಳುವುದು ಉತ್ತಮ.

ವಾಟ್ಸಾಪ್‌ ಲಿಂಕ್ಡ್ ಡಿವೈಸ್ಡ್‌ಗಳನ್ನು ಚೆಕ್ ಮಾಡಿಕೊಳ್ಳಿ. ಯಾವುದಾದರೂ ಅನುಮಾನಾಸ್ಪದ ಡಿವೈಸ್ ಲಾಗಿನ್ ಆಗಿದ್ದರೂ ಕೂಡಲೇ ಲಾಗ್ ಔಟ್ ಮಾಡಿ. ಇದರಿಂದ ಸಂಭಾವ್ಯ ಅಪಾಯವನ್ನು ತಪ್ಪಿಸಬಹುದಾಗಿದೆ.

ತಂತ್ರಜ್ಞಾನ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ಗ್ಯಾಜೆಟ್ಸ್

Super Computer: ವಿಶ್ವದಲ್ಲೇ 75ನೇ ಸ್ಥಾನ ಪಡೆದುಕೊಂಡ ಭಾರತದ ಸೂಪರ್ ಕಂಪ್ಯೂಟರ್ ‘ಐರಾವತ್’!

Super Computer: ಜರ್ಮನಿಯಲ್ಲಿ ನಡೆಯುತ್ತಿರುವ ಐಎಸ್‌ಸಿ 2023 ಸಮಾವೇಶದಲ್ಲಿ ವಿಶ್ವದ 500 ಸೂಪರ್‌ ಕಂಪ್ಯೂಟರ್‌ಗಳ ಪಟ್ಟಿ ಮಾಡಲಾಗಿದ್ದು, ಇದರಲ್ಲಿ ಭಾರತದ ಐರಾವತ್ (AIRAWAT) ಸೂಪರ್ ಕಂಪ್ಯೂಟರ್ 75ನೇ ಸ್ಥಾನ ಪಡೆದುಕೊಂಡಿದೆ.

VISTARANEWS.COM


on

Edited by

Indian Super computer has been ranked at no 75 in ISC 2023
Koo

ನವದೆಹಲಿ: ಜರ್ಮನಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸೂಪರ್‌ಕಂಪ್ಯೂಟಿಂಗ್ ಸಮ್ಮೇಳನದಲ್ಲಿ (ISC 2023) ಭಾರತದ (India) ಕೃತಕ ಬುದ್ಧಿಮತ್ತೆ ಸೂಪರ್‌ ಕಂಪ್ಯೂಟರ್ ಐರಾವತ್ (AIRAWAT Super Computer) ಜಗತ್ತಿನಲ್ಲೇ 75ನೇ ಸ್ಥಾನದಲ್ಲಿದೆ. ಮಹಾರಾಷ್ಟ್ರದ ಪುಣೆಯ ಸಿ-ಡಾಕ್‌ನಲ್ಲಿ ಈ ಐರಾವತ್ ಸೂಪರ್ ಕಂಪ್ಯೂಟರ್ ಸ್ಥಾಪಿಸಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಟಾಪ್ 500 ಗ್ಲೋಬಲ್ ಸೂಪರ್‌ ಕಂಪ್ಯೂಟಿಂಗ್ ಪಟ್ಟಿಯ 61ನೇ ಆವೃತ್ತಿಯಲ್ಲಿ ಭಾರತದ ಸೂಪರ್‌ಕಂಪ್ಯೂಟರ್ ಸ್ಥಾನವನ್ನು ಪಡೆದುಕೊಂಡಿದೆ. ಐರಾವತ್ ಪಿಎಸ್ಎಐ, 3,170 ಟೆರಾಫ್ಲಾಪ್‌ಗಳ (Rpeak) ಗಮನಾರ್ಹ ವೇಗದೊಂದಿಗೆ ಭಾರತದ ಅತಿದೊಡ್ಡ ಮತ್ತು ವೇಗವಾದ ಕೃತಕ ಬುದ್ಧಿಮತ್ತೆಯಾಧರಿತ ಸೂಪರ್‌ಕಂಪ್ಯೂಟಿಂಗ್ ವ್ಯವಸ್ಥೆಯಾಗಿದೆ.

ಐರಾವತ್ ಸೂಪರ್ ಕಂಪ್ಯೂಟರ್‌ವನ್ನು ನೆಟ್‌ವೆಬ್ ಟೆಕ್ನಾಲಜಿಸ್ (Netweb Technologies) ಸಿದ್ಧಪಡಿಸಿದೆ. ಇದು Ubuntu 20.04.2 LTS ಆಪರೇಟಿಂಗ್ ಸಿಸ್ಟಮ್ ಹೊಂದಿದ್ದು, 81,344 ಕೋರ್ಸ್‌ನೊಂದಿಗೆ AMD EPYC 7742 64C 2.25GHz ಪ್ರೊಸೆಸರ್ ಚಾಲಿತವಾಗಿದೆ. ಪ್ರಸಕ್ತ ವರ್ಷವೇ ಈ ಐರಾವ್ ಸೂಪರ್ ಕಂಪ್ಯೂಟರ್ ಸ್ಥಾಪಿಸಲಾಗಿದೆ.

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಇನ್ಫಾರ್ಮೇಶನ್ ಟೆಕ್ನಾಲಜಿ (MeitY) ಇಲಾಖೆಯ ಕಾರ್ಯದರ್ಶಿ ಅಲ್ಕೇಶ್ ಶರ್ಮಾ ಅವರು, ಈ ಡಿಜಿಟಲ್ ಯುಗದಲ್ಲಿ ಕೃತಕ ಬುದ್ಧಿಮತ್ತೆಯು ಅತ್ಯಂತ ಭರವಸೆಯ ತಂತ್ರಜ್ಞಾನವಾಗಿದೆ. ಅಗಾಧ ಡೇಟಾ ಲಭ್ಯತೆ, ಬಲಶಾಲಿ ಡಿಜಿಟಲ್ ಆರ್ಥಿಕತೆ ಹಾಗೂ ಕೌಶಲಯುಕ್ತ ಕೆಲಸಪಡೆಯಿಂದಾಗಿ ಕೃತಕ ಬುದ್ಧಿಮತ್ತೆಗೆ ಭಾರತವು ಸ್ಟ್ರಾಂಗ್ ಇಕೋಸಿಸ್ಟಮ್ ಮತ್ತು ಸ್ಪರ್ಧಾತ್ಮಕ ಪ್ರಯೋಜನಗಳನ್ನು ಹೊಂದಿದೆ ಎಂದು ಹೇಳಿದರು.

ಇದನ್ನೂ ಓದಿ: 86,500 ಸರ್ಕಾರಿ ನೌಕರರು ಕಂಪ್ಯೂಟರ್‌ ಪರೀಕ್ಷೆಯಲ್ಲಿ ಫೇಲ್‌ !

ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್, ಇಮೇಜ್ ಪ್ರೊಸೆಷನ್, ಪ್ಯಾಟರ್ನ್ ರೆಕಗ್ನಿಷನ್, ಅಗ್ರಿಕಲ್ಚರ್, ಮೆಡಿಕಲ್ ಇಮೇಜಿಂಗ್, ಎಜುಕೇಶನ್, ಹೆಲ್ತ್ ಕೇರ್, ಆಡಿಯೋ ಅಸಿಸ್ಟೆನ್ಸ್, ರೋಬೋಟಿಕ್ಸ್ ಮತ್ತು ಆಯಕಟ್ಟಿನ ವಲಯಗಳಿಗೆ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಭಾರತವು ಅನ್ವಯಿಕ ಕೃತಕ ಬುದ್ದಿಮತ್ತೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ. ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಸಮಾಜ ಮತ್ತು ಆರ್ಥಿಕತೆಯ ಅತ್ಯಂತ ಒತ್ತುವ ಸಮಸ್ಯೆಗಳನ್ನು ಪರಿಹರಿಸಲು ನಾಗರಿಕರು ಮತ್ತು ಸಂಸ್ಥೆಗಳಿಗೆ ಅಧಿಕಾರ ನೀಡಲು ಭಾರತವು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅನುಸರಿಸುತ್ತದೆ ಎಂದು ಅವರು ಹೇಳಿದರು.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ಗ್ಯಾಜೆಟ್ಸ್

Adobe Photoshop: ಫೋಟೋಶಾಪ್‌ಗೆ ಕೃತಕ ಬುದ್ಧಿಮತ್ತೆ ಪರಿಚಯಿಸಿದ ಅಡೋಬ್, ಏನಿದು ಜನರೇಟಿವ್ ಫಿಲ್?

Adobe Photoshop: ಅಡೋಬ್ ಫೋಟೋಶಾಪ್ ಈಗ ತನ್ನ ಬಳಕೆದಾರರಿಗೆ ಮತ್ತಷ್ಟು ವಿಶಿಷ್ಟ ಅನುಭವ ಹಾಗೂ ಲಾಭವನ್ನು ನೀಡಲು ಮುಂದಾಗಿದೆ. ಇದಕ್ಕಾಗಿ ಫೋಟೋಶಾಪ್‌ಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಳವಡಿಸಿದೆ.

VISTARANEWS.COM


on

Edited by

Adobe Introduces Generative Fill AI In Photoshop
Koo

ನವದೆಹಲಿ: ಗೂಗಲ್ ಮತ್ತು ಮೈಕ್ರೋಸಾಫ್ಟ್ ಬಳಿಕ ಈಗ ಅಡೋಬ್ ಕೂಡ ತನ್ನ ಫೋಟೋಶಾಪ್ (Adobe Photoshop) ಪ್ರಾಡಕ್ಟ್‌ಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಲು ಮುಂದಾಗಿದೆ. ತನ್ನ ಈ ತಂತ್ರಜ್ಞಾನಕ್ಕೆ ಅಡೋಬ್ ಜನರೇಟಿವ್ ಫಿಲ್ (Generative Fill) ಎಂದು ಹೆಸರಿಟ್ಟಿದೆ. ಇದು ಓಪನ್‌ ಎಐನ DALL-E 2ನಂಥ ಟೆಕ್ಸ್ಟ್‌ ಪ್ರಾಂಪ್ಟ್‌ಗಳನ್ನು ಬಳಸಿಕೊಂಡು ಚಿತ್ರಗಳನ್ನು ರಚಿಸಲು ಅಥವಾ ಮಾರ್ಪಡಿಸಲು ಬಳಕೆದಾರರಿಗೆ ನೆರವು ಒದಗಿಸುತ್ತದೆ. ಈ ಫೀಚರ್ ಅನ್ನು ನೇರವಾಗಿ ಅಡೋಬ್ ಫೋಟೋಶಾಪ್‌ಗೆ ಸಂಯೋಜಿಸಲಾಗಿರುತ್ತದೆ.

ಅಡೋಬ್‌ನ ಜನರೇಟಿವ್ ಫಿಲ್ ತಂತ್ರಜ್ಞಾನವು ಅಡೋಬ್ ಫೈರ್‌ಫ್ಲೈನಿಂದ ಚಾಲಿತವಾಗಿದೆ. ಇದು ಅಡೋಬ್‌ನ ಆಂತರಿಕ ಉತ್ಪಾದಕ ಕೃತಕ ಬುದ್ಧಿಮತ್ತೆಯ ಮಾದರಿಯಾಗಿದೆ. ಈ ತಂತ್ರಜ್ಞಾನವನ್ನು ನೀವು ಚಾಟ್‌ಜಿಪಿಟಿ, ಗೂಗಲ್‌ನ ಬಾರ್ಡ್ ಅಥವಾ ಪಾಮ್‌ 2ಗೆ ಹೋಲಿಸಬಹುದು. ಫೈರ್‌ಫ್ಲೈ ಎಐ ಅಡೋಬ್ ಸ್ಟಾಕ್ ಇಮೇಜಸ್‌ನಲ್ಲಿ ತರಬೇತಿ ಪಡೆದಿದೆ. ಹಕ್ಕುಸ್ವಾಮ್ಯಗಳು, ಬ್ರ್ಯಾಂಡ್‌ಗಳು ಮತ್ತು ಬೌದ್ಧಿಕ ಆಸ್ತಿ ಹಕ್ಕನ್ನು ಮೀರದೇ, ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ವಿಷಯವನ್ನು ರಚಿಸಬಹುದು ಎಂದು ಅಡೋಬ್ ಹೇಳುತ್ತದೆ.

ಜನರೇಟಿವ್ ಫಿಲ್‌ನಿಂದಾಗಿ ಫೋಟೋಶಾಪ್ ಮತ್ತು ಜನರೇಟಿವ್ ಎಐ ಎಂಬ ಎರಡು ಇಮೇಜಿಂಗ್ ಪವರ್‌ಹೌಸ್‌ಗಳು ಒಟ್ಟಿಗೆ ಬಳಕೆದಾರರಿಗೆ ಸರಳ ಪಠ್ಯ ಪ್ರಾಂಪ್ಟ್‌ನೊಂದಿಗೆ ಫೋಟೋಶಾಪ್‌ನಲ್ಲಿಯೇ ಕಂಟೆಂಟ್ ಕ್ರಿಯೇಟ್ ಮಾಡಲು ಮತ್ತು ನಂತರ ಫೋಟೋಶಾಪ್ ಹೊಂದಿರುವ ಹೆಚ್ಚಿನ ಸಾಧನಗಳನ್ನು ಬಳಸಿಕೊಂಡು ಅದನ್ನು ಸಂಪಾದಿಸಲು ಅನುವು ಮಾಡಿಕೊಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ: Bill Gates: ಸರ್ಚ್ ಎಂಜಿನ್, ಶಾಪಿಂಗ್ ವೆಬ್‌ಸೈಟ್‌ಗಳನ್ನು ಕೃತಕ ಬುದ್ಧಿಮತ್ತೆ ಬದಲಿಸಲಿದೆ ಎಂದ ಬಿಲ್ ಗೇಟ್ಸ್

ಹೆಚ್ಚುವರಿಯಾಗಿ, ಬಳೆಕದಾರರು ಜನರೇಟಿವ್ ಫಿಲ್‌ ಬಳಸಿಕೊಂಡು ಚಿತ್ರಗಳನ್ನು ಮತ್ತು ಬ್ಯಾಕ್‍‌ಗ್ರೌಂಡ್ ರಚಿಸಬಹುದು. ಆಬ್ಜೆಕ್ಟ್‌ಗಳನ್ನು ರಿಮೂವ್ ಮಾಡಬಹುದು. ಅಷ್ಟೇ ಯಾಕೆ ಇಮೇಜ್ ಕೂಡ ವಿಸ್ತರಿಸಬಹುದು ಎಂದು ಕಂಪನಿಯು ಹೇಳಿಕೊಂಡಿದೆ. ಕಂಪನಿಯು ಫೋಟೋ‌ಶಾಪ್‌ನಲ್ಲಿ Contextual Task Bar ಸೇರಿಸಿದೆ. ಈ ಮೂಲಕ ಬಳಕೆದಾರರು ಯಾವುದೇ ತ್ರಾಸ್ ಇಲ್ಲದೇ ಕಂಟೆಂಟ್ ಸೃಷ್ಟಿಸಬಹುದಾಗಿದೆ.

ತಂತ್ರಜ್ಞಾನದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ಗ್ಯಾಜೆಟ್ಸ್

Twitter: ಡಿಲಿಟ್ ಮಾಡಿದ ಟ್ವೀಟ್ಸ್ ಮತ್ತೆ ಪ್ರತ್ಯಕ್ಷ! ಬೆಚ್ಚಿ ಬಿದ್ದ ಬಳಕೆದಾರರು

Twitter: ಅಮೆರಿಕದ ಕೆಲವು ಟ್ವಿಟರ್ ಬಳಕೆದಾರರು ವಿಚಿತ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಬಳಕೆದಾರರು ಡಿಲಿಟ್ ಮಾಡಿದ ಟ್ವೀಟ್ಸ್ ಮತ್ತೆ ಕಾಣಿಸಿಕೊಂಡಿವೆ.

VISTARANEWS.COM


on

Edited by

Deleted tweets appears on twitter bug problem
Koo

ನವದೆಹಲಿ: ಎಲಾನ್ ಮಸ್ಕ್ (Elon Musk) ಒಡೆತನದ ಮೈಕ್ರೋಬ್ಲಾಗಿಂಗ್‌ ಟ್ವಿಟರ್‌ನಲ್ಲಿ (Twitter) ಮತ್ತೊಂದು ಸಮಸ್ಯೆ ಕಾಣಿಸಿಕೊಂಡಿದೆ. ಬಳಕೆದಾರರು ಡಿಲಿಟ್ ಮಾಡಿದ ಟ್ವೀಟ್‌ಗಳು ಮತ್ತೆ ರಿಪೋಸ್ಟ್ ಆಗುತ್ತಿವೆ! ಹೌದು, ಅಮೆರಿಕದ ಪತ್ರಕರ್ತರೊಬ್ಬರಿಗೆ ಮೊದಲಿಗೆ ಈ ರೀತಿಯ ಅನುಭವವಾಗಿದ್ದು, ಆ ಬಳಿಕ ಬಹಳಷ್ಟು ಬಳಕೆದಾರರು ಕೂಡ ತಾವು ಈ ಹಿಂದೆ ಡಿಲಿಟ್ ಮಾಡಿದ ಪೋಸ್ಟ್‌ಗಳು ಮತ್ತೆ ಕಾಣಿಸಿಕೊಳ್ಳುತ್ತಿವೆ ಎಂದು ಹೇಳಿಕೊಂಡಿದ್ದಾರೆ. ಟ್ವಿಟರ್‌ನಲ್ಲಿನ ತಾಂತ್ರಿಕ ಸಮಸ್ಯೆಯೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ದಿ ವರ್ಜ್ ಪತ್ರಕರ್ತ ಜೇಮ್ಸ್ ವಿನ್ಸೆಂಟ್ ಅವರು ಮೊದಲಿಗೆ ಈ ಬಗ್ಗೆ ರಿಪೋರ್ಟ್ ಮಾಡಿದ್ದರು. ಎರಡು ವಾರಗಳ ಹಿಂದೆ ತಮ್ಮೆಲ್ಲ ಟ್ವೀಟ್‌ಗಳನ್ನು ಅವರು ಡಿಲಿಟ್ ಮಾಡಿದ್ದರು. ಆದರೆ, ಅವರಿಗೆ ಸೋಮವಾರ ಆಶ್ಚರ್ಯ ಕಾದಿತ್ತು. ಡಿಲಿಟ್ ಮಾಡಿದ್ದ ಎಲ್ಲ ಟ್ವೀಟ್‌ಗಳು ಮತ್ತೆ ಕಾಣಿಸಿಕೊಂಡಿವೆ. 2020ರಲ್ಲಿ ಸಂವಹನ ನಡೆಸಿದ ಟ್ವೀಟ್‌ಗಳೂ ಕೂಡ ಮತ್ತೆ ಪೋಸ್ಟ್ ಆಗಿವೆ ಎಂದು ಅವರು ಹೇಳಿಕೊಂಡಿದ್ದಾರೆ. ಆದರೆ, ಈ ರೀತಿಯ ಸಮಸ್ಯೆ ಎದುರಾಗಿದ್ದು ಅವರಿಗೊಬ್ಬರಿಗೆ ಮಾತ್ರ ಅಲ್ಲ. ಇನ್ನೂ ಹಲವರು ಇದೇ ರೀತಿಯ ಸಮಸ್ಯೆಗೆ ಸಿಲುಕಿದ್ದರು. ಬಹಳಷ್ಟು ಜನರು ತಾವು ಡಿಲಿಟ್ ಮಾಡಿದ ಟ್ವೀಟ್‌ಗಳು ಮತ್ತೆ ಪೋಸ್ಟ್ ಆಗುತ್ತಿವೆ ಎಂದು ರಿಪೋರ್ಟ್ ಮಾಡುತ್ತಿದ್ದರು.

ಸಾಮಾಜಿಕ ಮಾಧ್ಯಮ ವೇದಿಕೆ ಮಾಸ್ಟೋಡಾನ್ ಬಳಸುವ ಡಿಕ್ ಮೊರೆಲ್ ಎಂಬುವವರು ಕಳೆದ ನವೆಂಬರ್‌ನಲ್ಲಿ, ರೆಡಾಕ್ಟ್ ಎಂಬ ಸಾಧನವನ್ನು ಬಳಸಿಕೊಂಡು ತಮ್ಮ ಎಲ್ಲಾ ಟ್ವೀಟ್‌ಗಳು, ಲೈಕ್ಸ್, ಮೀಡಿಯಾ ಫೈಲ್‌ಗಳು ಮತ್ತು ರಿಟ್ವೀಟ್‌ಗಳನ್ನು ಡಿಲಿಟ್ ಮಾಡಿದ್ದರು. ಅವರು ತಮ್ಮ ಪ್ರೊಫೈಲ್‌ನಿಂದ 38,000 ಟ್ವೀಟ್‌ಗಳನ್ನು ಯಶಸ್ವಿಯಾಗಿ ಅಳಿಸಿ ಹಾಕಿದ್ದರು. ಆದರೆ, ಟ್ವಿಟರ್‌ನಲ್ಲಿ ಕಾಣಿಸಿಕೊಂಡ ಬಗ್ ಪರಿಣಾಮ, ಅವರು ಅಳಿಸಿ ಹಾಕಿದ್ದ ಅಷ್ಟೂ ಟ್ವೀಟ್‌ಗಳು ಮತ್ತೆ ಮರುಸ್ತಾಪನೆಯಾಗಿದ್ದನ್ನು ಕಂಡು ಆಘಾತಕ್ಕೊಳಗಾದರು. ಇದೇ ರೀತಿಯ ಅನುಭವ ಅನೇಕ ಬಳಕೆದಾರರಿಗೆ ಆಗಿದೆ.

ಟ್ವಿಟರ್‌ನಲ್ಲಿ ಕಾಣಿಸಿಕೊಂಡಿರುವ ಸಮಸ್ಯೆಗೆ ಮೂಲ ಕಾರಣ ಏನೆಂದು ಇನ್ನೂ ತಿಳಿದು ಬಂದಿಲ್ಲ. ಆದರೆ, ಈ ಸಮಸ್ಯೆ ಎಲ್ಲ ಬಳಕೆದಾರರಿಗೆ ಆಗಿಲ್ಲ. ಕೆಲವರಿಗೆ ಮಾತ್ರವೇ ಈ ಅನುಭವ ಆಗಿದೆ. ಆದರೆ, ಮೊರೆಲ್ ಅವರು ಹೇಳುವ ಪ್ರಕಾರ, ಸುಮಾರು 400 ಜನರು ಈ ಸಮಸ್ಯೆಯನ್ನು ಗಮನಕ್ಕೆ ತಂದಿದ್ದಾರೆ. ಈ ಕುರಿತು ಮಾಹಿತಿ ಪಡೆಯಲು ದಿ ವರ್ಜ್ ಪತ್ರಕರ್ತ ವಿನ್ಸೆಂಟ್ ಅವರು ಟ್ವಿಟರ್ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಅವರಿಗೆ ಕೇವಲ ಆಟೋಮೆಟೆಡ್ ಪ್ರತಿಕ್ರಿಯೆ ಮಾತ್ರವೇ ದೊರೆತಿದೆ ಹೊರತು ಯಾವುದೇ ಪರಿಹಾರ ಸಿಕ್ಕಿಲ್ಲ.

ಇದನ್ನೂ ಓದಿ: Instagram: ಟ್ವಿಟರ್​ಗೆ ಪೈಪೋಟಿ ಕೊಡಲು ಮುಂದಾದ ಇನ್​ಸ್ಟಾಗ್ರಾಂ; ಶೀಘ್ರವೇ​ ಹೊಸ ಆ್ಯಪ್ ಬಿಡುಗಡೆ?!

ಇದು ಟ್ವಿಟ್ಟರ್ ಬಳಕೆದಾರರಿಗೆ ಟ್ವೀಟ್‌ಗಳನ್ನು ಅಳಿಸಲು ಅನುವು ಮಾಡಿಕೊಡುವ ಮೂರನೇ ವ್ಯಕ್ತಿಯ ಪರಿಕರಗಳಲ್ಲಿನ ದೋಷದಿಂದ ಉಂಟಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಅಲ್ಲದೇ ಟ್ವಿಟರ್‌ನ ಸರ್ವರ್-ಸಂಬಂಧಿತ ಸಮಸ್ಯೆ ಕೂಡ ಆಗಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ತಂತ್ರಜ್ಞಾನ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ಗ್ಯಾಜೆಟ್ಸ್

Bill Gates: ಸರ್ಚ್ ಎಂಜಿನ್, ಶಾಪಿಂಗ್ ವೆಬ್‌ಸೈಟ್‌ಗಳನ್ನು ಕೃತಕ ಬುದ್ಧಿಮತ್ತೆ ಬದಲಿಸಲಿದೆ ಎಂದ ಬಿಲ್ ಗೇಟ್ಸ್

ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೈಕ್ರೋಸಾಫ್ಟ್‌ನ ಸಹ ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) ಅವರು ಮುಂಬರುವ ದಿನಗಳಲ್ಲಿ ಕೃತಕ ಬುದ್ದಿಮತ್ತೆ ಹೇಗೆಲ್ಲ ಜೀವನ ಎಲ್ಲ ಭಾಗಗಳನ್ನು ಆವರಿಸಲಿದೆ ಎಂಬುದನ್ನು ಹೇಳಿದ್ದಾರೆ.

VISTARANEWS.COM


on

Edited by

Search engine Shopping sites will replaced by AI Says Bill Gates
Koo

ನವದೆಹಲಿ: ಕೃತಕ ಬುದ್ದಿಮತ್ತೆ (artificial intelligence) ಸ್ಪರ್ಧೆಯಲ್ಲಿ ಎಲ್ಲ ಕಂಪನಿಗಳು ಇಳಿದಿವೆ. ಈ ಕೃತಕ ಬುದ್ಧಿಮತ್ತೆಯ ಓಟವು ಸರ್ಚ್ ಎಂಜಿನ್, ಉತ್ಪಾದಕತೆ ಮತ್ತು ಆನ್‌ಲೈನ್ ಶಾಪಿಂಗ್ ಜಾಲತಾಣಗಳ ಮೂಲ ಕಾರ್ಯವೈಖರಿಯನ್ನು ಬದಲಿಸಲಿದೆ ಎಂದು ಮೈಕ್ರೋಸಾಫ್ಟ್ ಕಾರ್ಪ್‌ನ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) ಅವರು ಅಭಿಪ್ರಾಯಪಟ್ಟಿದ್ದಾರೆ.

ಕೃತಕ ಬುದ್ಧಿಮತ್ತೆ ಎಷ್ಟರಮಟ್ಟಿಗೆ ನಮ್ಮ ಜೀವನದ ಮೇಲೆ ಪರಿಣಾಮ ಬೀರಲಿದೆ ಎಂದರೆ, ಭವಿಷ್ಯದಲ್ಲಿ ನೀವು ಸರ್ಚ್ ಎಂಜಿನ್ ಸೈಟ್‌ಗೆ ಹೋಗಲಾರರಿ ಮತ್ತು ಅಮೆಜಾನ್ ಜಾಲತಾಣಕ್ಕೆ ಭೇಟಿ ಕೊಡಲಾರರಿ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ.

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಗೋಲ್ಡ್‌ಮನ್ ಸ್ಯಾಚ್ಸ್ ಗ್ರೂಪ್ ಇಂಕ್ ಮತ್ತು ಎಸ್‌ವಿ ಏಂಜೆಲ್ ಆಯೋಜಿಸಿದ್ದ ಎಐ ಫಾರ್ವರ್ಡ್ ಕಾರ್ಯಕ್ರಮದಲ್ಲಿ ಮಾತನಾಡಿದ ಗೇಟ್ಸ್, ಈ ರೇಸ್‌ನಲ್ಲಿ ಮೈಕ್ರೋಸಾಫ್ಟ್ ಚಾಲನೆಯಲ್ಲಿಲ್ಲದಿದ್ದರೆ ಅದು ಅವರನ್ನು ನಿರಾಶೆಗೊಳಿಸುತ್ತದೆ ಎಂದು ಹೇಳಿದರು. ಉದ್ಯಮಿ ರೀಡ್ ಹಾಫ್‌ಮನ್ ಸಹ ಸಂಸ್ಥಾಪನೆಯ ಇನ್‌ಫ್ಲೆಕ್ಷನ್ ಎಐ ತಮ್ಮನ್ನು ಸಮ್ಮೋಹನಗೊಳಿಸಿದೆ ಎಂದು ಅವರು ಹೇಳಿದರು.

ಇಟ್ಟು ಮರೆತು ಹೋದ ವಸ್ತುಗಳನ್ನು ಹುಡುಕಲು ‘ಕೃತಕ ಜ್ಞಾಪಕ ಶಕ್ತಿ’ ಅಭಿವೃದ್ಧಿ!

ಇಟ್ಟಿರುವ ಸಾಮಾನು ಟೈಮ್‌ಗೆ ಸರಿಯಾಗಿ ಕೈಗೆ ಸಿಗುವುದಿಲ್ಲ ಎಂದು ಮನೆಯಲ್ಲಿ ಆಗಾಗ ಹಿರಿಯರು ಮಾತನಾಡಿಕೊಳ್ಳವುದನ್ನು ಕೇಳಿದ್ದೇವೆ. ಇನ್ನು ಆ ಚಿಂತೆ ಇಲ್ಲ ಬಿಡಿ. ಯಾಕೆಂದರೆ, ಸಂಶೋಧಕರು ಕೃತಕ ಬುದ್ಧಿಮತ್ತೆ (Artificial Intelligence) ಆಧಾರಿತ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು ರೋಬಾಟ್‌ಗಳು, ವಿಶೇಷವಾಗಿ ಮರೆವಿನ ಕಾಯಿಲೆಯಿಂದ ಬಳಲುತ್ತಿರುವವರಿಗೆ, ಔಷಧಗಳು, ಕನ್ನಡಕ, ಫೋನ್‌ಗಳು ಮತ್ತಿತರ ವಸ್ತುಗಳನ್ನು ಹುಡುಕಿಕೊಡಲು ನೆರವು ನೀಡಲಿವೆ.

ಕೆನಡಾದ ಯುನಿರ್ವಸಿಟಿ ಆಫ್ ವಾಟರ್ಲೂ ಸಂಸೋಧನಾ ವಿದ್ಯಾರ್ಥಿ ಅಲಿ ಅಯೂಬ್ ಅವರು ಈ ಬಗ್ಗ ಮಾಹಿತಿ ನೀಡಿದ್ದು, ದೀರ್ಘಾವಧಿಯಲ್ಲಿ ಈ ತಂತ್ರಜ್ಞಾನ ಪರಿಣಾಮವು ಸಾಕಷ್ಟು ರೋಮಾಂಚನಕಾರಿಯಾಗಿರಲಿದೆ ಎಂದು ಹೇಳಿದ್ದಾರೆ. ಬಳಕೆದಾರರ ಕೇವಲ ರೋಬಾಟ್‌‌ವನ್ನು ಸಂಗಾತಿಯಂತೆ ಬಳಸುವುದು ಮಾತ್ರವಲ್ಲದೇ, ಅದನ್ನು ಇನ್ನಷ್ಟು ವೈಯಕ್ತಿಕರಿಸಿ, ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಬಹುದಾಗಿದೆ. ಇದರಿಂದ ಸಾಕಷ್ಟು ಹೊಸ ಸಾಧ್ಯತೆಗಳು ಲಭ್ಯವಾಗಲಿವೆ ಎದು ಅಯೂಬ್ ಅವರು ಹೇಳಿದರು.

ಇದನ್ನೂ ಓದಿ: Indian Military: ಭಾರತೀಯ ಸೇನೆಗೆ ಕೃತಕ ಬುದ್ಧಿಮತ್ತೆ ನೆರವು, ಎಲ್ಲೆಲ್ಲಿ ಬಳಕೆ?

ಮೆರೆವು ಕಾಯಿಲೆಯು, ಮೆದುಳಿನ ಕಾರ್ಯನಿರ್ವಹಣೆಯನ್ನು ನಿರ್ಬಂಧಿಸುತ್ತದೆ. ಇದರಿಂದಾಗಿ ಗೊಂದಲ, ನೆನಪು ನಷ್ಟ ಮತ್ತು ಅಂಗವೈಕಲ್ಯವನ್ನು ಉಂಟುಮಾಡುತ್ತದೆ. ಈ ಸ್ಥಿತಿಯನ್ನು ಹೊಂದಿರುವ ಅನೇಕ ಜನರು ದಿನನಿತ್ಯದ ವಸ್ತುಗಳ ಸ್ಥಳವನ್ನು ಪದೇ ಪದೇ ಮರೆತುಬಿಡುತ್ತಾರೆ. ಇದು ಅವರ ಜೀವನದ ಗುಣಮಟ್ಟವನ್ನು ಕುಗ್ಗಿಸುತ್ತದೆ. ಹಾಗಾಗಿ ಆರೈಕೆ ಮಾಡುವವರ ಮೇಲೆ ಹೆಚ್ಚುವರಿ ಹೊರೆಯಾಗುತ್ತದೆ. ಈ ಹೊರೆಯನ್ನು ಕಡಿಮೆ ಮಾಡಲು ಈ ತಂತ್ರಜ್ಞಾನವು ನೆರವು ಒದಗಿಸಲಿದೆ.

ತಂತ್ರಜ್ಞಾನದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading
Advertisement
Shivamogga MP B Y Raghavendra meeting
ಕರ್ನಾಟಕ8 mins ago

Shivamogga News: ಶಿವಮೊಗ್ಗ ಕ್ಷೇತ್ರಕ್ಕೆ 4ಜಿ ಆಧಾರಿತ 225 ಮೊಬೈಲ್ ಟವರ್ ಸ್ಥಾಪನೆಗೆ ಅನುಮತಿ: ಸಂಸದ ಬಿ.ವೈ. ರಾಘವೇಂದ್ರ

bus stand in dilapidated condition at challakere taluk
ಕರ್ನಾಟಕ12 mins ago

Challakere News: ಶಿಥಿಲಾವಸ್ಥೆಯಲ್ಲಿ ದೊಡ್ಡೇರಿ ಗ್ರಾಮದ ಬಸ್ ತಂಗುದಾಣ; ದುರಸ್ತಿಗೆ ಬೇಕಿದೆ ಅನುದಾನ

ಬಾಲಿವುಡ್12 mins ago

Aahana Kumra: ಐಫಾ ಕಾರ್ಯಕ್ರಮದಲ್ಲಿ ಡ್ರೆಸ್‌ ಜಾರದಂತೆ ಹಿಡಿದುಕೊಂಡ ನಟಿ ಅಹಾನಾ ಕುಮ್ರಾ; ವಿಡಿಯೊ ವೈರಲ್​

Snake Found In Mid Day Meal
ವೈರಲ್ ನ್ಯೂಸ್24 mins ago

Viral News : ಸರ್ಕಾರಿ ಶಾಲೆಯ ಬಿಸಿಯೂಟದಲ್ಲಿ ಸಿಕ್ಕಿತು ಹಾವು! ಹಲವು ಮಕ್ಕಳು ಅಸ್ವಸ್ಥ

G-20 Summit Preparatory Meeting at Vijayanagara district
ಕರ್ನಾಟಕ25 mins ago

Vijayanagara News: ಜಿ-20 ಶೃಂಗಸಭೆಯ ಪೂರ್ವಸಿದ್ಧತಾ ಸಭೆ; ಸಂಸ್ಕೃತಿಯ ಅನಾವರಣಕ್ಕೆ ತೀರ್ಮಾನ

Declare Diwali As Federal Holiday In US Lawmaker Introduces Bill
ವಿದೇಶ30 mins ago

ದೀಪಾವಳಿಗೆ ಯುಎಸ್​​ನಲ್ಲಿ ಸಾರ್ವತ್ರಿಕ ರಜೆ ಕೊಡಬೇಕು; ಮಸೂದೆ ಮಂಡನೆ ಮಾಡಿದ ಅಮೆರಿಕ ಜನಪ್ರತಿನಿಧಿ

congress workers celebration
ಕರ್ನಾಟಕ32 mins ago

Karnataka Cabinet Expansion: ಸಚಿವರ ಪ್ರಮಾಣ ವಚನ; ರಾಜ್ಯದ ವಿವಿಧೆಡೆ ಸಂಭ್ರಮಾಚರಣೆ

BK Hariprasad expresses displeasure over not including his name in karnataka cabinet expansion
ಕರ್ನಾಟಕ35 mins ago

Karnataka Cabinet: ಕಾಂಗ್ರೆಸ್‌ನಲ್ಲಿ ಮತ್ತೆ ಶುರುವಾಯಿತು ಮೂಲ-ವಲಸಿಗ ಜಗಳ: ಸಿಎಂ ವಿರುದ್ಧ ಹರಿಪ್ರಸಾದ್‌ ಪ್ರಹಾರ

karwali rain
ಉಡುಪಿ40 mins ago

Weather Report: ಈ ವಾರ ಕರಾವಳಿಯಲ್ಲಿ ಮಳೆ ಅಬ್ಬರ; ಉಳಿದೆಡೆ ಬಿಸಿಲಿಗೆ ಜನ ತತ್ತರ

Kidwai Hospital
ಆರೋಗ್ಯ54 mins ago

Oxygen Shortage: ಕಿದ್ವಾಯಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆಯಿಂದ ಕ್ಯಾನ್ಸರ್‌ ರೋಗಿ ಸಾವು

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ14 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ3 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ5 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್7 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

Laxmi Hebbalkar oath taking as a minister
ಕರ್ನಾಟಕ1 hour ago

Laxmi Hebbalkar: ಸಚಿವೆಯಾಗುವುದರ ಜತೆಗೆ ಅಜ್ಜಿಯೂ ಆದ ಲಕ್ಷ್ಮಿ ಹೆಬ್ಬಾಳ್ಕರ್‌; ಒಂದೇ ದಿನ 2 ಸಿಹಿ ಸುದ್ದಿ!

HD Kumaraswamy in JDS Meeting
ಕರ್ನಾಟಕ23 hours ago

H.D. Kumaraswamy: ಜೆಡಿಎಸ್‌ ವಿಸರ್ಜನೆ ಹೇಳಿಕೆಗೆ ಬದ್ಧ ಎಂದ ಎಚ್‌.ಡಿ. ಕುಮಾರಸ್ವಾಮಿ!

induction stoves
ಕರ್ನಾಟಕ24 hours ago

Congress Guarantee: ಬಿಪಿಎಲ್ ಕಾರ್ಡ್‌ಗೆ ಮುಗಿಬಿದ್ದ ಜನ; ಇಂಡಕ್ಷನ್‌ ಸ್ಟವ್‌ಗೆ ಹೆಚ್ಚಿದ ಬೇಡಿಕೆ

Viral Video, Teacher and Principal are quarrel in front of School children
ದೇಶ1 day ago

Viral Video: ಶಾಲಾ ಮಕ್ಕಳ ಎದುರೇ ಹೊಡೆದಾಡಿಕೊಂಡ ಪ್ರಿನ್ಸಿಪಾಲ್, ಟೀಚರ್! ಇಲ್ಲಿದೆ ನೋಡಿ ವಿಡಿಯೋ

Horoscope Today
ಪ್ರಮುಖ ಸುದ್ದಿ2 days ago

Horoscope Today : ಮಕರ ರಾಶಿಯವರಿಗೆ ಕೌಟುಂಬಿಕವಾಗಿ ಶುಭ ಫಲ; ಇಂದಿನ ಭವಿಷ್ಯ ಇಲ್ಲಿದೆ

HD Kumaraswamy said he will take up the issue of congress guarantee
ಕರ್ನಾಟಕ2 days ago

Congress Guarantee: ನಾವು ಕಡುಬು ತಿನ್ನೋಕ ರಾಜಕಾರಣ ಮಾಡ್ತಿರೋದು?: ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ

Beware if the Congress Guarantee card is conditioned and Pratap Simha says he will fight from June 1
ಕರ್ನಾಟಕ2 days ago

Congress Guarantee: ಗ್ಯಾರಂಟಿ ಕಾರ್ಡ್‌ಗೆ ಕಂಡೀಷನ್ ಹಾಕಿದ್ರೆ ಹುಷಾರ್‌; ಜೂನ್‌ 1ರಿಂದ ಹೋರಾಟವೆಂದ ಪ್ರತಾಪ್‌ ಸಿಂಹ

Electricity bill man hit bescom staff
ಕರ್ನಾಟಕ3 days ago

Electricity Bill: ಕರೆಂಟ್‌ ಬಿಲ್‌ ಕಿರಿಕ್‌; ಬಾಕಿ ಬಿಲ್‌ ಕಟ್ಟು ಎಂದಿದ್ದಕ್ಕೆ ಚಪ್ಪಲಿಯಿಂದಲೇ ಹೊಡೆದವ ಅರೆಸ್ಟ್‌

karnataka politics it takes time to implement guarantee schemes says minister priyank kharge
ಕರ್ನಾಟಕ3 days ago

Saffronisation issue : ಬಿಜೆಪಿಯವರಿಗೆ ತೊಂದರೆ ಇದ್ರೆ ಪಾಕಿಸ್ತಾನಕ್ಕೆ ಹೋಗಲಿ; ಪ್ರಿಯಾಂಕ್‌ ಖರ್ಗೆ ವಿವಾದಿತ ಹೇಳಿಕೆ

horoscope today
ಪ್ರಮುಖ ಸುದ್ದಿ4 days ago

Horoscope Today : ಪಂಚಮಿಯ ದಿನ ಪಂಚ ರಾಶಿಯವರಿಗೆ ಶುಭ ಫಲ; ಇಲ್ಲಿದೆ ಇಂದಿನ ದಿನ ಭವಿಷ್ಯ

ಟ್ರೆಂಡಿಂಗ್‌

error: Content is protected !!