Site icon Vistara News

WhatsApp: ‘ಸಂಚಾರ್ ಸಾಥಿ’ಯಲ್ಲಿ ರಿಪೋರ್ಟ್‌ ಮಾಡಲಾದ ಮೊಬೈಲ್ ನಂಬರ್ ತೆಗೆದು ಹಾಕಲಿದೆ ವಾಟ್ಸಾಪ್!

Whatsapp will remove number flagged in Sanchar Saathi portal

ನವದೆಹಲಿ: ಮೊಬೈಲ್ ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮೊನ್ನೆಯಷ್ಟೇ ಸಂಚಾರ್ ಸಾಥಿ (Sanchar Saathi) ಪೋರ್ಟಲ್ ಆರಂಭಿಸಿದೆ. ಈ ಪೋರ್ಟಲ್‌ನಲ್ಲಿ ಬಳಕೆದಾರರು ನಿರ್ದಿಷ್ಟ ನಂಬರ್‌ಗಳನ್ನು ಮೋಸದ ಅಥವಾ ನಂಕಲಿ ನಂಬರ್‌ಗಳೆಂದು ಗುರುತಿಸಿದರೆ, ಅಂಥ ಫೋನ್ ನಂಬರ್‌ಗಳನ್ನು ವಾಟ್ಸಾಪ್‌ (Wahtsapp) ತನ್ನ ವೇದಿಕೆಯಿಂದ ಕಿತ್ತು ಹಾಕಲಿದೆ. ಕೇಂದ್ರ ಸಂವಹನ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಮಂಗಳವಾರ ಸಂಚಾರ್ ಸಾಥಿ ಪೋರ್ಟಲ್‌ವನ್ನು ಲೋಕಾರ್ಪಣೆ ಮಾಡಿದ್ದರು.

ಈ ಮೊಬೈಲ್ ಸಂಖ್ಯೆಗಳನ್ನು ನಕಲಿ ದಾಖಲೆಗಳನ್ನು ಬಳಸಿ ನೋಂದಾಯಿಸಿದ್ದರೆ ಅಥವಾ ಯಾವುದಾದರೂ ರೂಪದಲ್ಲಿ ಸೈಬರ್ ಅಪರಾಧಕ್ಕಾಗಿ ಬಳಸಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ ಎಂದು ವೈಷ್ಣವ್ ಹೇಳಿದ್ದಾರೆ.

ಎಲ್ಲ ಒಟಿಟಿ ವೇದಿಕೆಗಳು ಸಹಕಾರ ನೀಡಿದ್ದು, ನಕಲಿ ನಂಬರ್‌ಗಳನ್ನು ಹೊಂದಿರುವ ಬಳಕೆದಾರರನ್ನು ಗುರುತಿಸಲು ಮತ್ತು ನೋಂದಣಿಯಿಂದ ತೆಗೆದು ಹಾಕಲು ಎಲ್ಲ ಒಟಿಟಿಗಳು ಸಂಪೂರ್ಣ ಸಹಕಾರ ನೀಡಲು ಬದ್ಧವಾಗಿವೆ. ಸರ್ಕಾರ ಕೂಡ ಇತರ ಮೆಸೇಜಿಂಗ್ ಮತ್ತು ಒಟಿಟಿ ಕಾಲಿಂಗ್ ‌ಆ್ಯಪ್‌ಗಳ ಜತೆ ಮಾತುಕತೆ ನಡೆಸಿದ್ದು, ವಂಚನೆಯ ಅಥವಾ ನಕಲಿ ಎಂದು ಗುರುತಿಸಲಾದ ನಂಬರ್‌ಗಳನ್ನು ನೋಂದಣಿಯಿಂದ ತೆಗೆದು ಹಾಕುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸಹಮತ ವ್ಯಕ್ತಪಡಿಸಿವೆ ಎಂದು ವೈಷ್ಣವ್ ಅವರು ಹೇಳಿದ್ದಾರೆ.

ಇದನ್ನೂ ಓದಿ: WhatsApp New Feature: ಈಗ ನಾಲ್ಕು ಫೋನ್‌ಗಳಲ್ಲಿ ಒಂದೇ ವಾಟ್ಸಾಪ್ ಖಾತೆ ಬಳಸಿ! ಈ ಫೀಚರ್‌ನಿಂದ ಏನು ಲಾಭ?

ವೇದಿಕೆಯಿಂದ ಕೆಟ್ಟ ಬಳಕೆದಾರರನ್ನು ತೆಗೆದುಹಾಕುವುದು ಸೇರಿದಂತೆ ಭದ್ರತೆ ಮತ್ತು ಸುರಕ್ಷಿತ ಬಳಕೆದಾರರ ಅನುಭವವನ್ನು ಸ್ಥಿರವಾಗಿ ಖಚಿತಪಡಿಸಿಕೊಳ್ಳಲು ವಾಟ್ಸಾಪ್ ಸರ್ಕಾರದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ ವಾಟ್ಸಾಪ್ ವಕ್ತಾರರು ಹೇಳಿದ್ದಾರೆ. ಬಳಕೆದಾರರ ಸುರಕ್ಷತೆಯನ್ನು ರಕ್ಷಿಸುವಲ್ಲಿ ವಾಟ್ಸಾಪ್ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸೇವೆಗಳಲ್ಲಿ ಮುಂಚೂಣಿಯಲ್ಲಿದೆ. ಬಳಕೆದಾರರ ಸುರಕ್ಷತೆ ಶಿಕ್ಷಣ ಮತ್ತು ಜಾಗೃತಿಯನ್ನು ನಿಯಮಿತವಾಗಿ ಚಾಲ್ತಿಯಲ್ಲಿಡುವುದರ ಜೊತೆಗೆ ಬ್ಲಾಕ್ ಮತ್ತು ರಿಪೋರ್ಟ್, ಎರಡು-ಹಂತದ ಪರಿಶೀಲನೆ ಸೇರಿದಂತೆ ಇತರ ಅಂತರ್ನಿರ್ಮಿತ ಸುರಕ್ಷತಾ ಸಾಧನಗಳನ್ನು ನಾವು ಒದಗಿಸುವುದನ್ನು ಮುಂದುವರಿಸುತ್ತೇವೆ ವಾಟ್ಸಾಪ್ ವಕ್ತಾರರು ತಿಳಿಸಿದ್ದಾರೆ.

ಸಂಚಾರ್ ಸಾಥಿ ಪೋರ್ಟಲ್ ಆರಂಭ

ಗೂಗಲ್ ಮತ್ತು ಐಫೋನ್‌ನ ಫೈಂಡ್ ಮೈ ಡಿವೈಸ್ (Find My Device) ರೀತಿಯ ಫೀಚರ್ ಒಳಗೊಂಡಿರುವ ‘ಸಂಚಾರ್ ಸಾಥಿ’ (Sanchar Saathi) ಜಾಲತಾಣವನ್ನು ಕೇಂದ್ರ ಸರ್ಕಾರವು ಲಾಂಚ್. ಈ ಮೂಲಕ ಮೊಬೈಲ್ ಫೋನ್ ಸುರಕ್ಷತೆಗೆ ಮತ್ತೊಂದು ಹಂತವನ್ನು ಒದಗಿಸಿದಂತಾಗಿದೆ. ಕೇಂದ್ರ ರೈಲ್ವೆ, ಸಂಹವನ ಮತ್ತು ಎಲೆಕ್ಟ್ರಾನಿಕ್ಸ್, ಐಟಿ ಸಚಿವ ಅಶ್ವಿನ್ ವೈಷ್ಣವ್ (Ashwini Vaishnaw) ಅವರು ಈ ಜಾಲತಾಣಕ್ಕೆ ಚಾಲನೆ ನೀಡಿದರು.

ಸಾಧನಗಳ ಪತ್ತೆ ಮತ್ತು ಟ್ರ್ಯಾಕಿಂಗ್‌ಗಾಗಿ ಗೂಗಲ್ ಮತ್ತು ಆಪಲ್ ಒದಗಿಸುವ ಸೇವೆಗಳಿಗೆ ಪರ್ಯಾಯವಾಗಿ ಪೋರ್ಟಲ್ ಬಳಕೆಯಾಗಲಿದೆ. ಆಂಡ್ರಾಯ್ಡ್ ಫೋನ್‌ಗಳಿಗಾಗಿ, ಐಒಎಸ್ ಸಾಧನವನ್ನು ಪತ್ತೆಹಚ್ಚಲು ಗೂಗಲ್, ಫೈಂಡ್, ಲಾಕ್, ಅಥವಾ ಎರೇಜ್, ಕಳೆದು ಹೋದ ಸಾಧನದ ಆಯ್ಕೆಯನ್ನು ಒದಗಿಸುತ್ತದೆ. ಬಳಕೆದಾರರು ಐಒಎಸ್ ಸಾಧನ ಪತ್ತೆ ಹಚ್ಚಲು iCloud.com/find ಅಥವಾ ಫೈಂಡ್ ಮೈ ಆ್ಯಪ್ ಬಳಸಬೇಕಾಗುತ್ತದೆ.

ಸಂಚಾರ್ ಸಾಥಿ ಪೋರ್ಟಲ್ ನಾಗರಿಕ ಕೇಂದ್ರಿತ ಪ್ರಾಜೆಕ್ಟ್ ಆಗಿದ್ದು, ಟೆಲಿಕಮ್ಯುನಿಕೇಷನ್ ಇಲಾಖೆಯ ನೇತೃತ್ವದಲ್ಲಿ ಕೈಗೊಳ್ಳಲಾಗಿದೆ. ಮೊಬೈಲ್ ಗ್ರಾಹಕರು ಮತ್ತು ಅವರು ಭದ್ರತೆಯನ್ನು ಹೆಚ್ಚಿಸುವುದಕ್ಕಾಗಿ ಕೈಗೊಳ್ಳಲಾಗಿದೆ. ಜನರು ತಮ್ಮ ಹೆಸರಿನಲ್ಲಿ ನೀಡಲಾದ ಮೊಬೈಲ್ ಸಂಪರ್ಕಗಳನ್ನು ನೋಡಲು, ಅಗತ್ಯವಿಲ್ಲದ ಸಂಪರ್ಕ ಕಡಿತಗೊಳಿಸಲು, ಕಾಣೆಯಾದ ಮೊಬೈಲ್ ಫೋನ್‌ಗಳನ್ನು ನಿರ್ಬಂಧಿಸಲು ಅಥವಾ ಪತ್ತೆಹಚ್ಚಲು ಮತ್ತು ಹೊಸ ಅಥವಾ ಬಳಸಿದ ಮೊಬೈಲ್ ಫೋನ್ ಖರೀದಿಸುವಾಗ ಸಾಧನಗಳ ದೃಢೀಕರಣವನ್ನು ಪರಿಶೀಲಿಸಲು ಸಂಚಾರ್ ಸಾಥಿ ನೆರವು ಒದಗಿಸಲಿದೆ.

ಸಂಚಾರ್ ಸಾಥಿ ಪೋರ್ಟಲ್‌ ಸಿಇಐಆರ್(ಸೆಂಟ್ರಲ್ ಇಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್), ನೋ ಇವರ್ ಮೊಬೈಲ್(ಕೆವೈಎಂ) ಮತ್ತು ಎಎಸ್‌ಟಿಆರ್‌ಗಳನ್ನು ಒಳಗೊಂಡಿದೆ. ಸಿಇಐಆರ್ ಆರಂಭಿಕ ಪ್ರಾಜೆಕ್ಟ್ ಆಗಿದ್ದು, ಟೆಲಿಕಾಂ ಸಚಿವಾಲಯವು ದೇಶದ ಕೆಲವು ಟೆಲಿಕಾಂ ಸರ್ಕಲ್‌ಗಳಲ್ಲಿ ಆರಂಭಿಸಿದೆ. ಈ ಪೋರ್ಟಲ್, ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್ಮೆಂಟ್ ಆ್ಯಂಡ್ ಕಂನ್ಸೂಮರ್ ಪ್ರೊಟೆಕ್ಷನ್(ಟಿಎಎಫ್‍‌ಸಿಒಪಿ) ಮತ್ತೊಂದು ಮಾದರಿಯನ್ನು ಒಳಗೊಂಡಿದೆ.

ಕಳೆದ ಹೋದ ಅಥವಾ ಕಳ್ಳತನವಾದ ಮೊಬೈಲ್‌ ಫೋನ್‌ಗಳನ್ನು ಮರಳಿ ಪಡೆಯಲು ಸಿಇಐಆರ್ ನೆರವು ಒದಗಿಸಲಿದೆ. ಕಳೆದ ಹೋದ ಅಥವಾ ಕಳ್ಳತನ ಮಾಡಲಾದ ಮೊಬೈಲ್‌ ಫೋನ್‌ಗಳ ಬಳಕೆಯನ್ನು ದೇಶದ ಎಲ್ಲೆಡೆ ಬಳಸಲು ನಿರ್ಬಂಧಿಸಲು ಅವಕಾಶ ಕಲ್ಪಿಸಿ ಕೊಡುತ್ತದೆ. ನಿರ್ಬಂಧಿಸಲ್ಪಟ್ಟ ಮೊಬೈಲ್‌ನ್ನು ಬಳಸಲು ಮುಂದಾದರೆ, ಅಂಥ ಮೊಬೈಲ್ ‍‌ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಲು ಸುಲಭವಾಗಲಿದೆ.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Exit mobile version