Site icon Vistara News

WhatsApp New Feature | ವಾಟ್ಸ್ಆ್ಯಪ್‌ನಿಂದ ಶೀಘ್ರ ಡು ನಾಟ್ ಡಿಸ್ಟರ್ಬ್ ಫೀಚರ್!

WhatsApp New Feature

ನವದೆಹಲಿ: ಜನಪ್ರಿಯ ಮೆಸೇಜ್ ಆ್ಯಪ್ ವಾಟ್ಸ್ಆ್ಯಪ್ (WhatsApp) ಮತ್ತೊಂದು ಫೀಚರ್ ಆ್ಯಡ್ ಮಾಡುತ್ತಿದೆ. ಈಗಾಗಲೇ ಸೆಲ್ಫ್ ಚಾಟ್ ಫೀಚರ್, ಬೀಟಾ ಬಳಕೆದಾರರಿಗೆ ದೊರೆಯುತ್ತಿದೆ. ಇದರ ಬೆನ್ನಲ್ಲೇ ವಾಟ್ಸ್ಆ್ಯಪ್ ಡು ನಾಟ್ ಡಿಸ್ಟರ್ಬ್ (Do Not Disturb) ಮೋಡ್ ಪರಿಚಯಿಸಲು ಸಿದ್ಧವಾಗಿದೆ.

ಈ ಫೀಚರ್ ಜಾರಿಗೆ ಬಂದ ಬಳಿಕ, ಬಳಕೆದಾರರ ಕಾಲ್ ಲಿಸ್ಟ್‌ನಲ್ಲಿ ಸೈಲೆನ್ಸ್ಡ್ ಬೈ ಡು ನಾಟ್ ಡಿಸ್ಟರ್ಬ್(Silenced by Do Not Disturb) ಎಂಬ ಲೇಬಲ್ ಕಾಣಿಸಿಕೊಳ್ಳುತ್ತದೆ. ಈ ಮಾಹಿತಿಯು ರಿಸೀವರ್‌ಗೆ ಮಾತ್ರವೇ ಕಾಣಿಸುತ್ತದೆ. ಈ ಫೀಚರ್ ಸಕ್ರಿಯ ಮಾಡಿಕೊಂಡಿದ್ದರಿಂದ ಕಾಲರ್‌ಗೆ ಯಾವ ಕರೆ ಬಂದಿದೆ ಎಂಬುದು ತಿಳಿಯುವುದಿಲ್ಲ ಎಂದು ಸೋರಿಕೆಯಾದ ಮಾಹಿತಿಯಲ್ಲಿ ತಿಳಿಸಲಾಗಿದೆ. ಇದೇ ವೇಳೆ, ವಾಟ್ಸ್ಆ್ಯಪ್ ಬೃಹತ್ ಗುಂಪುಗಳ ಚಾಟ್ ಅನ್ನು ಆಟೋಮೆಟಿಕ್ ಆಗಿ ಮ್ಯೂಟ್ ಆಗುವ ಫೀಚರ್ ಅಭಿವೃದ್ಧಿಪಡಿಸುತ್ತಿದೆ.

ಈ ಹಿಂದೆ ಘೋಷಣೆ ಮಾಡಿದಂತೆ ವಾಟ್ಸ್ಆ್ಯಪ್ ಸೆಲ್ಫ್ ಚಾಟ್ (WhatsApp Self Chat) ಫೀಚರ್ ಪರಿಚಯಿಸಿದ್ದು, ಸದ್ಯಕ್ಕೆ ಬೀಟಾ ವರ್ಷನ್‌ನಲ್ಲಿ ಮಾತ್ರ ದೊರೆಯುತ್ತಿದೆ. ಪರೀಕ್ಷೆ ಮುಗಿದ ಬಳಿಕ ಸೆಲ್ಫ್ ಚಾಟ್ ಫೀಚರ್ ಎಲ್ಲ ಬಳಕೆದಾರರಿಗೂ ಶೀಘ್ರವೇ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ನಾಲ್ಕೈದು ಫೀಚರ್‌ಗಳನ್ನು ವಾಟ್ಸ್ಆ್ಯಪ್ ಆ್ಯಡ್ ಮಾಡಿತ್ತು.

ಸೆಲ್ಫ್ ಚಾಟ್ ಫೀಚರ್ ಮೂಲಕ ಬಳಕೆದಾರರು ತಮ್ಮ ನಂಬರ್‌ಗೆ ತಾವೇ ವಾಟ್ಸ್ಆ್ಯಪ್ ಮಾಡಿಕೊಳ್ಳಬಹುದಾಗಿದೆ. ಸದ್ಯಕ್ಕೆ ಈ ರೀತಿಯ ವಾಟ್ಸ್ಆ್ಯಪ್ ಮಾಡಲು ಅವಕಾಶವಿಲ್ಲ. ಈ ಫೀಚರ್ ಬಳಸಿಕೊಂಡು ಬಳಕೆದಾರರು ಸಿಂಗಲ್ ಚಾಟ್ ವಿಂಡೋ ಕ್ರಿಯೇಟ್ ಮಾಡಿಕೊಂಡು, ತಮಗೆ ಬೇಕಾದ ಮೆಸೇಜ್‌ಗಳು, ಫೈಲ್ಸ್‌ಗಳನ್ನು ಸೇವ್ ಮಾಡಿಕೊಳ್ಳಬಹುದು. ಇದರಿಂದ ಚಾಟ್‌ಗಳಲ್ಲಿ ಹುದುಗಿ ಹೋಗಿರುವ ಮಹತ್ವದ ಸಂದೇಶಗಳನ್ನು ಹುಡುಕುವುದು ತಪ್ಪಲಿದೆ.

ಇದನ್ನೂ ಓದಿ | WhatsApp Self Chat | ವಾಟ್ಸ್ಆ್ಯಪ್ ಸೆಲ್ಫ್ ಚಾಟ್ ಫೀಚರ್ ಶುರು, ಶೀಘ್ರ ಎಲ್ಲರಿಗೂ ಲಭ್ಯ

Exit mobile version