Site icon Vistara News

Nokia 5710 | 4,999 ರೂ.ಗೆ ನೋಕಿಯಾ 5710 ಫೋನ್! ಜತೆಗೇ ಇಯರ್‌ಬಡ್ಸ್ ಫ್ರೀ!

Nokia 5719

ನವ ದೆಹಲಿ: ಫೀಚರ್ ಫೋನ್‌ಗಳ ಮೂಲಕವೇ ಹೆಚ್ಚು ಸದ್ದು ಮಾಡುವ ನೋಕಿಯಾ, ಭಾರತದಲ್ಲಿ ಮತ್ತೊಂದು ಹೊಸ ಮೊಬೈಲ್ ಫೋನ್ ಬಿಡುಗಡೆ ಮಾಡಿದೆ. ನೋಕಿಯಾ 5710 ಎಕ್ಸ್‌ಪ್ರೆಸ್ಆಡಿಯೋ 4ಜಿ (Nokia 5710 XpressAudio) ಲಾಂಚ್ ಆದ ಹೊಸ ಫೋನ್. ಇನ್ನೊಂದು ವಿಶೇಷವಿದೆ. ಏನೆಂದರೆ, ಈ ಫೋನ್ ಜತೆಗೇ ಇನ್‌ಬಿಲ್ಟ್ ಆಗಿ ವೈರ್‌ಲೆಸ್ ಏರ್‌ಬಡ್ಸ್ ದೊರೆಯುತ್ತವೆ. ಅಂದರೆ ಫೋನ್‍ನೊಳಗೇ ಇಯರ್‌ಬಡ್ಸ್ ಇರಲಿವೆ. ವೈರ್ ಲೆಸ್ ಎಫ್ಎಂ, ಇನ್‌ಬಿಲ್ಟ್ ಎಂಪಿ3 ಪ್ಲೇಯರ್, ಮ್ಯೂಸಿಕ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ಗಮನ ಸೆಳೆಯುತ್ತವೆ.

ಹೆಸರೇ ಹೇಳುವಂತೆ ನೋಕಿಯಾ 5710 ಎಕ್ಸ್‌ಪ್ರೆಸ್ಆಡಿಯೋ ಫೋನ್ ಹೆಚ್ಚು ಆಡಿಯೋ ಕೇಂದ್ರೀತ ಫೋನ್ ಆಗಿದೆ. ವಿಶಿಷ್ಟ ಆಡಿಯೋ ಫೀಚರ್ಸ್ ಹೊಂದಿರುವ ಈ ಫೋನ್ ಬೆಲೆ ಕೇವಲ 4,999 ರೂ. ಮಾತ್ರ. ಸೆಪ್ಟೆಂಬರ್ 19ರಿಂದ ಮಾರಾಟಕ್ಕೆ ಸಿಗಲಿದೆ. ನೋಕಿಯಾ ಆನ್‌ಲೈನ್ ಸ್ಟೋರ್ ಸೇರಿದಂತೆ ಆಫ್‌ಲೈನ್ ಸ್ಟೋರ್‌ಗಳಲ್ಲೂ ಈ ಫೋನ್ ದೊರೆಯಲಿದೆ.

ಈ ಫೋನ್ 2.4 ಇಂಚ್ QVGA ಡಿಸ್‌ಪ್ಲೇಯನ್ನು ಹೊಂದಿದೆ. Unisoc T107 ಪ್ರೊಸೆಸರ್ ಇದೆ. S30+ ಆಪರೇಟಿಂಗ್ ಸಿಸ್ಟಮ್ ಮೂಲಕ ಈ ಫೋನ್ ರನ್ ಆಗತ್ತದೆ. ಬ್ಯಾಟರಿ ಕೂಡ ಅತ್ಯುತ್ತಮವಾಗಿದೆ. ಕಂಪನಿಯು ಹೇಳುವ ಪ್ರಕಾರ ಒಮ್ಮೆ ಬ್ಯಾಟರಿಯನ್ನು ಚಾರ್ಜ್ ಮಾಡಿದರೆ, ವಾರಗಳ ಕಾಲ ಸ್ಟ್ಯಾಂಡ್‌ಬೈ ಹಾಗೂ ಗಂಟೆಗಳ ಕಾಲ ಟಾಕ್‌ಟೈಮ್‌ವರೆಗೂ ಬಾಳಿಕೆ ಬರಲಿದೆ.

ಎನ್ವಿರಾನ್ಮೆಂಟಲ್ ನಾಯಿಸ್ ಕ್ಯಾನ್ಸಲೇಷನ್ ಸೌಲಭ್ಯವನ್ನು ಹೊಂದಿರುವ ಈ ಫೋನ್ VoLTE 4G ಕನೆಕ್ಟಿವಿಟಿಗೆ ಸಪೋರ್ಟ್ ಮಾಡುತ್ತದೆ. ಈಗಾಗಲೇ ಹೇಳಿದಂತೆ, ಈ ಫೋನ್ ಜತೆಯೇ ಇಯರ್‌ಬಡ್ಸ್ ಕೂಡ ದೊರೆಯಲಿದೆ. ನಯವಾದ ಮತ್ತು ಗಟ್ಟಿಯಾದ ಸ್ಲೈಡರ್‌ನ ಕೆಳಗೆ ಪ್ಲೇಸ್ ಮಾಡಲಾಗಿರುವ ಇನ್-ಬಿಲ್ಟ್ ವೈರ್‌ಲೆಸ್ ಇಯರ್‌ಬಡ್ಸ್ ಸಾಧನದ ಪ್ರಮುಖ ಹೈಲೈಟ್ ಆಗಿದೆ.

ಸಂಗೀತವನ್ನು ಕೇಳಬೇಕೆಂದರೆ ಬಳಕೆದಾರರು ಇಯರ್‌ಬಡ್ಸ್ ಸ್ಲೈಡರ್‌ನಿಂದ ಹೊರ ತೆಗೆಯಬೇಕು. ಬಳಿಕ ಮತ್ತೆ ಅದೇ ಸ್ಲೈಡರ್‌ನ‌ಲ್ಲಿಟ್ಟರೆ ಚಾರ್ಜ್ ಆಗುತ್ತದೆ. ಫೋನ್‌ನಲ್ಲಿಯೇ ಇಯರ್‌ಬಡ್‌ಗಳನ್ನು ಇರಿಸಲಾಗಿರುವುದರಿಂದ, ಬಳಕೆದಾರರಿಗೆ ಅವು ಎಲ್ಲಿವೆ ಎಂದು ಯಾವಾಗಲೂ ತಿಳಿದಿರುತ್ತದೆ. ವೈರ್‌ಲೆಸ್ ಇಯರ್‌ಬಡ್‌ಗಳು ಇತರ ಸಾಧನಗಳೊಂದಿಗೆ ಸಹ ಕಾರ್ಯನಿರ್ವಹಿಸುತ್ತವೆ. ಇದು ಬಳಕೆದಾರರಿಗೆ ಹೆಚ್ಚಿನ ಅನುಕೂಲ ತಂದುಕೊಡಲಿದೆ.

ಇದನ್ನೂ ಓದಿ | nokia 8210 | ಒಂದು ಬಾರಿ ಚಾರ್ಜ್‌ ಮಾಡಿದರೆ 27 ದಿನ ನೋ ಟೆನ್ಷನ್‌!

Exit mobile version