Site icon Vistara News

ಇಂಟರ್‌ನೆಟ್‌ ಲೋಕಕ್ಕೆ ಮಹಿಳೆಯರ ಬಿಗ್‌ ಎಂಟ್ರಿ

ಬೆಂಗಳೂರು: ನೆಟ್ ವರ್ಕ್‌ವಿಸ್ತರಣೆ, ಆನ್‌ಲೈನ್‌ಕ್ಲಾಸ್‌, ವರ್ಕ್‌ಫ್ರಂ ಹೋಮ್‌ಸೇರಿದಂತೆ ನಾನಾ ಕಾರಣಗಳಿಗಾಗಿ ದೇಶದ ಗ್ರಾಮೀಣ ಭಾಗದಲ್ಲಿ ಇಂಟರ್‌ನೆಟ್‌ಬಳಕೆದಾರರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆ ಕಂಡಿದೆ. 2019ರಿಂದ ಮೂರು ವರ್ಷಗಳ ಅವಧಿಯಲ್ಲಿ ಇಂಟರ್‌ನೆಟ್‌ಬಳಕೆದಾರರ ಸಂಖ್ಯೆ ಶೇಕಡಾ 45ರಷ್ಟು ಏರಿದೆ ಎಂದು ನೀಲ್ಸನ್‌ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.
ನಿಜವೆಂದರೆ ದೇಶದಲ್ಲಿ ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ಭಾಗದಲ್ಲೇ ಇಂಟರ್‌ನೆಟ್‌ಬಳಕೆದಾರರು ಜಾಸ್ತಿ. ಇದಕ್ಕೆ ಗ್ರಾಮೀಣ ಭಾಗವೇ ಅತಿ ಹೆಚ್ಚು ಇರುವುದು ಕೂಡಾ ಕಾರಣ. ದೇಶದ ನಗರ ಭಾಗದಲ್ಲಿ 29.4 ಕೋಟಿ ಇಂಟರ್‌ನೆಟ್‌ಬಳಕೆದಾರರಿದ್ದರೆ ಗ್ರಾಮೀಣ ಭಾಗದಲ್ಲಿ 35.4 ಕೋಟಿ ಮಂದಿ ಇಂಟರ್‌ನೆಟ್‌ಗ್ರಾಹಕರಿದ್ದಾರೆ. ಅಂದರೆ ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಶೇ. 20ರಷ್ಟು ಹೆಚ್ಚು ಬಳಕೆದಾರರು ಇದ್ದ ಹಾಗಾಯಿತು ಎನ್ನುತ್ತದೆ ʻಭಾರತ್‌2.0 ಇಂಟರ್‌ನೆಟ್‌ʼ ಅಧ್ಯಯನ.‌

ಗೂಗಲ್‌ನಿಂದ ನಿಮ್ಮ ಪರ್ಸನಲ್‌ ಮಾಹಿತಿ ತೆಗೆದುಹಾಕುವುದು ಹೇಗೆ?


ಏರಿಕೆಗೆ ಏನು ಕಾರಣ?
ಇಂಟರ್‌ನೆಟ್‌ಬಳಕೆ ಏಕಾಏಕಿಯಾಗಿ ಹೆಚ್ಚಲು ಹಲವು ಕಾರಣಗಳಿವೆ. ಕೊರೊನಾ ಕಾಲಘಟ್ಟದಲ್ಲಿ ಮೊಬೈಲ್‌ಬಳಕೆ ತೀವ್ರವಾಗಿ ಹೆಚ್ಚಿತು. ಜನಸಾಮಾನ್ಯರು ಕೂಡಾ ಬಳಕೆದಾರರಾದರು. ಮಕ್ಕಳಿಗೆ ಆನ್‌ಲೈನ್‌ತರಗತಿ, ಹಿರಿಯರಿಗೆ ಮನೆಯಿಂದಲೇ ಕೆಲಸ, ಬ್ಯಾಂಕಿಂಗ್‌ವಹಿವಾಟುಗಳೂ ಸೇರಿ ಹಲವು ಕಾರಣಗಳು ಮೊಬೈಲ್‌ಮತ್ತು ಇಂಟರ್‌ನೆಟ್‌ಬದುಕಿನ ಅವಿಭಾಜ್ಯ ಅಂಗವಾಗಿ ಮಾಡಿದವು.
ಇದನ್ನೂ ಮೀರಿ ಅತಿ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಇಂಟರ್‌ನೆಟ್‌ಬಳಕೆ ಮಾಡುವ ಪ್ರಮಾಣ ಈ ಅವಧಿಯಲ್ಲಿ ಹೆಚ್ಚಿತು ಎನ್ನುತ್ತದೆ ಅಧ್ಯಯನ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಮೊದಲ ಬಾರಿ ಇಂಟರ್‌ನೆಟ್‌ಬಳಸುವ ಮಹಿಳೆಯರ ಸಂಖ್ಯೆ ತುಂಬಾ ಹೆಚ್ಚಾಗಿದೆ ಎಂದು ಸಮೀಕ್ಷೆಯನ್ನು ನಡೆಸಿರುವ ನೀಲ್ಸನ್‌ಇಂಡಿಯಾದ ಆಡಳಿತ ನಿರ್ದೇಶಕರಾದ ಡಾಲಿ ಝಾ ಹೇಳುತ್ತಾರೆ. ಇಂಟರ್‌ನೆಟ್‌ಬಳಸುವ ಮಹಿಳೆಯರ ಪ್ರಮಾಣ ಕಳೆದ ಮೂರೇ ವರ್ಷದಲ್ಲಿ ಶೇ. 61ರಷ್ಟು ಹೆಚ್ಚಿದೆ ಎಂದು ಝಾ ತಿಳಿಸಿದ್ದಾರೆ.
ಮಹಿಳೆಯರ ಪಾಲು ಅಧಿಕ
ಮಹಿಳೆಯರಲ್ಲಿ ಇಂಟರ್‌ನೆಟ್‌ಸಾಕ್ಷರತೆ ಹೆಚ್ಚುವಲ್ಲಿ ಕೊರೊನಾ ಕಾಲ ಒಂದು ವೇಗೋತ್ಕರ್ಷಕದಂತೆ ಕೆಲಸ ಮಾಡಿದೆ. ಗ್ರಾಮೀಣ ಭಾರತದ ಪ್ರತಿ ಮೂರರಲ್ಲಿ ಒಬ್ಬ ಮಹಿಳೆ ಸಕ್ರಿಯ ಇಂಟರ್‌ನೆಟ್‌ಬಳಕೆದಾರರಾಗಿದ್ದಾರೆ. ಈ ವಲಯದಲ್ಲಿ ಇಂಟರ್‌ನೆಟ್‌ಬಳಕೆ ಬಲು ವೇಗವಾಗಿ ಹೆಚ್ಚಿದ್ದು, ಬೆಳವಣಿಗೆಗೆ ಇನ್ನೂ ದೊಡ್ಡ ಅವಕಾಶಗಳಿವೆ ಎನ್ನುತ್ತಾರೆ ಝಾ.
ದೇಶದಲ್ಲಿ ಪ್ರಸಕ್ತ ಇಂಟರ್‌ನೆಟ್‌ಬಳಕೆಯಲ್ಲಿ ಪುರುಷ ಮತ್ತು ಮಹಿಳೆಯರ ಅನುಪಾತ ೬೦:೪೦. ಮಹಿಳೆಯರಲ್ಲಿ ಹೆಚ್ಚುತ್ತಿರುವ ಮೊಬೈಲ್‌ಬಳಕೆ ಆಸಕ್ತಿ, ಸ್ಮಾರ್ಟ್‌ಫೋನ್‌ಗಳು ಕಡಿಮೆ ಬೆಲೆಗೆ ದೊರೆಯುತ್ತಿರುವುದು, ಮೊಬೈಲ್‌ಡೇಟಾ ದರ ಕಡಿಮೆಯಾಗಿರುವುದು, ಕೇಂದ್ರ ಸರಕಾರ ಡಿಜಿಟಲ್‌ಇಂಡಿಯಾದಂಥ ಯೋಜನೆಗಳ ಮೂಲಕ ಇಂಟರ್‌ನೆಟ್‌ಬಳಕೆಯನ್ನು ಉತ್ತೇಜಿಸುತ್ತಿರುವುದರಿಂದ ಮಹಿಳೆಯರಲ್ಲೂ ಸಾಕ್ಷರತೆ ಹೆಚ್ಚಾಗಿದೆ ಎನ್ನುತ್ತಾರೆ ಝಾ.
ಇಂಟರ್‌ನೆಟ್‌ಬಳಕೆಗೆ ಡೆಸ್ಕ್‌ಟಾಪ್‌, ಟ್ಯಾಬ್‌, ಲ್ಯಾಪ್‌ಟಾಪ್‌ಸೇರಿದಂತೆ ನಾನಾ ಪರಿಕರಗಳು ಇವೆಯಾದರೂ ಅತಿ ಹೆಚ್ಚು ಜನರು ಬಳಸುತ್ತಿರುವುದು ಮಾತ್ರ ಮೊಬೈಲನ್ನು. ಒಟ್ಟಾರೆ ಬಳಕೆದಾರರ ಪೈಕಿ ಶೇಕಡಾ 90ಕ್ಕೂ ಅಧಿಕ ಮಂದಿ ಮೊಬೈಲ್‌ನಲ್ಲೇ ಬ್ರೌಸ್‌ ಮಾಡುತ್ತಾರೆ. ವಿಶೇಷವೆಂದರೆ ಐವತ್ತು ವರ್ಷ ಮೀರಿದವರಲ್ಲಿ ಶೇಕಡಾ 81ಕ್ಕಿಂತ ಹೆಚ್ಚು ಮಂದಿ ಇಂಟರ್‌ ನೆಟ್‌ ಬಳಸುತ್ತಿದ್ದಾರೆ.

ಜನ ಏನು ಬ್ರೌಸ್‌ ಮಾಡ್ತಾರೆ?
ಇಂಟರ್‌ ನೆಟ್‌ ಬಳಸಿಕೊಂಡು ಜನರು ಏನೇನು ಬ್ರೌಸ್‌ ಮಾಡುತ್ತಾರೆ ಎನ್ನುವುದು ಕುತೂಹಲಕಾರಿ ಸಂಗತಿ. ಸಾಮಾಜಿಕ ಜಾಲತಾಣ ಬಳಕೆಗಾಗಿ ಇಂಟರ್‌ನೆಟ್‌ ಬಳಕೆ ಅತಿ ಜನಪ್ರಿಯ ವಿಧಾನವಾಗಿದೆ. ವಿಡಿಯೊಗಳನ್ನು ನೋಡುವುದು, ಸಂಗೀತ ಆಲಿಸುವುದು ಎರಡನೇ ಅತಿ ದೊಡ್ಡ ವಿಭಾಗ. ನಗರ ಮತ್ತು ಗ್ರಾಮೀಣ ಭಾಗ ಎನ್ನದೆ ಎಲ್ಲ ಕಡೆ ಪೋರ್ನ್‌ ಸೈಟ್‌ಗಳ ವೀಕ್ಷಣೆಗೆ ಇಂಟರ್‌ ನೆಟ್‌ ಬಳಕೆ ಆಗುತ್ತಿದೆ ಎನ್ನುವುದು ಆರೋಪ.
ದೇಶದಲ್ಲಿ 45 ಕೋಟಿ ಜನರು ವಿಡಿಯೊಗಳನ್ನು ನೋಡುತ್ತಾರೆ. ಅವರಲ್ಲಿ ಶೇಕಡಾ 54 ಮಂದಿ ಗ್ರಾಮೀಣ ಭಾಗದವರು. ಅದೇ ಹೊತ್ತಿಗೆ ಆನ್‌ಲೈನ್‌ ಶಾಪಿಂಗ್‌, ಡಿಜಿಟಲ್‌ ಪೇಮೆಂಟ್‌ನಲ್ಲಿ ನಗರ ಪ್ರದೇಶದ ಜನರು ಮುಂದಿದ್ದಾರೆ.
ಸಮೀಕ್ಷೆಯ ಗಾತ್ರ
2021ರ ಸೆಪ್ಟೆಂಬರ್‌ ಮತ್ತು ಡಿಸೆಂಬರ್‌ ನಡುವೆ ಈ ಸಮೀಕ್ಷೆಯನ್ನು ನಡೆಸಲಾಗಿದ್ದು, 27,900 ಮನೆಗಳಿಗೆ ಭೇಟಿ ನೀಡಿ, 1.1 ಲಕ್ಷ ಜನರನ್ನು ಮಾತನಾಡಿಸಲಾಗಿದೆ.

Exit mobile version