Site icon Vistara News

WWDC 2023: 15 ಇಂಚಿನ ಮ್ಯಾಕ್‌ಬುಕ್ ಏರ್ ಅನಾವರಣಗೊಳಿಸಿದ ಆಪಲ್, ಬೆಲೆ ಎಷ್ಟು?

macbook air

ನ್ಯೂಯಾರ್ಕ್‌: ಆಪಲ್ ಸಂಸ್ಥೆ (Apple) ಸೋಮವಾರ 15 ಇಂಚಿನ ಮ್ಯಾಕ್‌ಬುಕ್ ಏರ್ (MacBook Air) ಅನ್ನು ವರ್ಲ್ಡ್‌ವೈಡ್ ಡೆವಲಪರ್‌ಗಳ ಸಮ್ಮೇಳನದಲ್ಲಿ (WWDC 2023) ಅನಾವರಣಗೊಳಿಸಿದೆ. ಈ ಲ್ಯಾಪ್‌ಟಾಪ್‌ನ ಬೆಲೆ $1299 (₹ 1.07 ಲಕ್ಷ).

ಹೊಸ ಮ್ಯಾಕ್‌ಬುಕ್‌ ಏರ್‌ ತೆಳುವಾದ ಮತ್ತು ಹಗುರವಾದ ವಿನ್ಯಾಸವನ್ನು ಹೊಂದಿದೆ. 11.5 ಮಿಮೀ ದಪ್ಪವಿದೆ. 3 ಪೌಂಡ್‌ ತೂಕವಿದೆ. MagSafe, ಎರಡು TB ಪೋರ್ಟ್‌ಗಳನ್ನು ಹೊಂದಿದೆ. ಸ್ಟ್ಯಾಂಡರ್ಡ್ ಮ್ಯಾಕ್‌ಬುಕ್ ಏರ್‌ನಂತೆ ನಾಲ್ಕು ಬಣ್ಣಗಳಲ್ಲಿದ್ದು, ಮ್ಯಾಕ್‌ಬುಕ್ ಪ್ರೊ M2 ಅಲ್ಟ್ರಾ ಚಿಪ್‌ನಿಂದ ಚಾಲಿತವಾಗಿದೆ.

ಆಪಲ್‌ನ ಮ್ಯಾಕ್ ತಂಡವು 2020ರಲ್ಲಿ ತನ್ನದೇ ಆದ ಚಿಪ್‌ಗಳನ್ನು ಬಳಸಲು ಪ್ರಾರಂಭಿಸಿತು. ಆಗಿನಿಂದ ಅದರ ಲ್ಯಾಪ್‌ಟಾಪ್‌ ಮಾರುಕಟ್ಟೆ ಸುಧಾರಿಸಿದೆ. ಹೊಸ ಉತ್ಪನ್ನದಲ್ಲಿ ಅದು ತನ್ನ ಮ್ಯಾಕ್ ಸ್ಟುಡಿಯೋ ಡೆಸ್ಕ್‌ಟಾಪ್ ಯಂತ್ರವನ್ನು ನವೀಕರಿಸಿದೆ. ಇದರ ಹೊಸ M2 ಅಲ್ಟ್ರಾ ಚಿಪ್, ಕೃತಕ ಬುದ್ಧಿಮತ್ತೆಯ ಕೆಲಸವನ್ನು ವೇಗಗೊಳಿಸಿದೆ. ಇದರ ಪ್ರತಿಸ್ಪರ್ಧಿ ಸಂಸ್ಥೆಗಳ ಚಿಪ್‌ಗಳು ಈ ಕೆಲಸ ನಿರ್ವಹಿಸಲು ಬೇಕಾದ ಮೆಮೊರಿ ಹೊಂದಿಲ್ಲ ಎನ್ನಲಾಗಿದೆ.

ಕ್ಯುಪರ್ಟಿನೊ ಮೂಲದ ತಂತ್ರಜ್ಞಾನ ದೈತ್ಯ ಸಂಸ್ಥೆ ಆಪಲ್‌, ಹೊಸ ಮ್ಯಾಕ್ ಪ್ರೊ ಅನ್ನು ಕೂಡ ಡೆವಲಪರ್‌ಗಳ ಸಮ್ಮೇಳನದಲ್ಲಿ ಅನಾವರಣಗೊಳಿಸಿದೆ. ಇದರ ಬೆಲೆ 6,999 ಡಾಲರ್.‌ ಮ್ಯಾಕ್‌ ಪ್ರೊದಲ್ಲಿ ಆರು ತೆರೆದ ವಿಸ್ತರಣೆ ಸ್ಲಾಟ್‌ಗಳಿವೆ, ಆಡಿಯೋ, ನೆಟ್‌ವರ್ಕಿಂಗ್, ವೀಡಿಯೊ ಮತ್ತು ಸ್ಟೋರೇಜ್ ಕಾರ್ಡ್‌ಗಳೊಂದಿಗೆ ಸಂಪೂರ್ಣವಾಗಿ ಸಜ್ಜಾಗಿದೆ. ಇಂಟೆಲ್-ಚಾಲಿತ ಮ್ಯಾಕ್‌ಗಳಿಗಿಂತ ಮೂರು ಪಟ್ಟು ವೇಗವಾಗಿ ಕಾರ್ಯನಿರ್ವಹಿಸುತ್ತದೆ.

ಆಪಲ್ ಮಿಶ್ರ-ರಿಯಾಲಿಟಿ ಹೆಡ್‌ಸೆಟ್ ಅನ್ನು ಅನಾವರಣಗೊಳಿಸಲಿದೆ. ಒಂಬತ್ತು ವರ್ಷಗಳ ಹಿಂದೆ ಆಪಲ್ ವಾಚ್ ಅನ್ನು ಪರಿಚಯಿಸಿದ ನಂತರ ಹೊಸ ಬಗೆಯ ಉತ್ಪನ್ನಗಳ ವರ್ಗಕ್ಕೆ ಇದು ಇನ್ನೊಂದು ಸೇರ್ಪಡೆ. ಇದರೊಂದಿಗೆ ಆಪಲ್ ಗ್ರಾಹಕರೊಂದಿಗೆ ಇನ್ನಷ್ಟು ಉತ್ಪನ್ನಗಳ ಸಂಬಂಧ ಸಾಧಿಸಿದೆ. ಫೇಸ್‌ಬುಕ್ ಮಾಲೀಕರಾದ ಮೆಟಾ ಪ್ಲಾಟ್‌ಫಾರ್ಮ್‌ನೊಂದಿಗೆ ಈಗ ಇದು ನೇರ ಸ್ಪರ್ಧೆಯಲ್ಲಿದೆ.

ಮೆಟಾದಿಂದ ಕಳೆದ ವರ್ಷ ಬಂದಿರುವ ಕ್ವೆಸ್ಟ್ ಪ್ರೊ ಮತ್ತು ಕಳೆದ ವಾರ ಬಂದ ಕ್ವೆಸ್ಟ್ 3 ಸಾಧನಗಳಂತೆ ಆಪಲ್‌ನ ಈ ಸಾಧನವೂ ಹೆಡ್‌ಸೆಟ್‌ನೊಳಗಿನ ಪರದೆಯ ಮೇಲೆ ಪ್ರದರ್ಶಿಸಲಾದ ವರ್ಚುವಲ್ ಪ್ರಪಂಚದೊಂದಿಗೆ ಹೊರಗಿನ ಪ್ರಪಂಚದ ವೀಡಿಯೊ ಫೀಡ್ ಅನ್ನು ಸಂಯೋಜಿಸುವ ಕೆಲಸ ಮಾಡುತ್ತದೆ.

ಇದನ್ನೂ ಓದಿ: ಗ್ಲೋಕಲ್‌ ಲೋಕ ಅಂಕಣ | ಮೆಟಾವರ್ಸ್ ಮುಂದಿರುವ ಸವಾಲುಗಳು

Exit mobile version