ಹೊಸದಿಲ್ಲಿ: ಸೋಶಿಯಲ್ ಮೀಡಿಯಾ (Social media) ಪ್ಲಾಟ್‌ಫಾರ್ಮ್ ಎಕ್ಸ್ ಮತ್ತು ಎಕ್ಸ್ ಪ್ರೊ ಗುರುವಾರ ಜಾಗತಿಕವಾಗಿ ಸ್ಥಗಿತದ (X Outage, X down) ಸಮಸ್ಯೆ ಅನುಭವಿಸಿದೆ. ಸಾವಿರಾರು X (ಹಿಂದಿನ Twitter) ಬಳಕೆದಾರರು ತಮ್ಮ ಖಾತೆಗಳು ಸ್ಥಗಿತಗೊಂಡಿವೆ ಎಂದು ರಿಪೋರ್ಟ್ ಮಾಡಿದರು.
ಔಟ್ಟೇಜ್ ಟ್ರ್ಯಾಕಿಂಗ್ ವೆಬ್‌ಸೈಟ್ Downdetector.com ಪ್ರಕಾರ ಎಕ್ಸ್ ಸ್ಥಗಿತ ವರದಿಗಳಲ್ಲಿ ಹಠಾತ್ ಏರಿಕೆ ಕಂಡುಬಂದಿದೆ. ಎಕ್ಸ್‌ನಲ್ಲಿ ಪೋಸ್ಟ್ ಫೀಡ್ ಮಾಡಿದಾಗ ಬಳಕೆದಾರರಿಗೆ ವೆಲ್‌ಕಮ್ ಮೆಸೇಜ್ ಮಾತ್ರ ಕಂಡುಬಂತು. “Xಗೆ ಸುಸ್ವಾಗತ! ನಿಮ್ಮ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಲು ಇದು ಅತ್ಯುತ್ತಮ ಸ್ಥಳವಾಗಿದೆ. ಫಾಲೋ ಮಾಡಲು ವ್ಯಕ್ತಿಗಳು ಮತ್ತು ವಿಷಯಗಳನ್ನು ಹುಡುಕಿ” ಎಂಬ ಸಂದೇಶ ಅದಾಗಿದೆ.
X Proನಲ್ಲಿ ಬಳಕೆದಾರರು, “ಪೋಸ್ಟ್‌ಗಳಿಗಾಗಿ ನಿರೀಕ್ಷಿಸಲಾಗುತ್ತಿದೆ” ಎಂದು ಹೇಳುವ ಸಂದೇಶದ ಉತ್ತರದೊಂದಿಗೆ, ಪೋಸ್ಟ್ ಲೋಡ್ ಮಾಡುವ ಸಮಸ್ಯೆಗಳನ್ನು ಎದುರಿಸಿದರು. ಡೌನ್‌ಡೆಕ್ಟರ್ ಪ್ರಕಾರ, 47,000ಕ್ಕೂ ಹೆಚ್ಚು ಅಮೆರಿಕದ ಬಳಕೆದಾರರು X ಮತ್ತು X Proನ ಪ್ರವೇಶ ಸಮಸ್ಯೆಗಳನ್ನು ಎದುರಿಸಿದರು. ಈ ವೆಬ್‌ಸೈಟ್ ಬಳಕೆದಾರರು ಸೇರಿದಂತೆ ಹಲವಾರು ಮೂಲಗಳಿಂದ ಸೋಶಿಯಲ್ ಮೀಡಿಯಾಗಳ ಸ್ಥಿತಿಗತಿ ವರದಿಗಳನ್ನು ಟ್ರ್ಯಾಕ್ ಮಾಡುತ್ತದೆ.
“Twitterನಲ್ಲಿ ಸಮಸ್ಯೆಗಳಿವೆಯೇ? ನಿಮ್ಮ ಸ್ವಂತ ಟ್ವೀಟ್‌ಗಳು ಮತ್ತು ಇತರರ ಟ್ವೀಟ್‌ಗಳು ಕಾಣಿಸುತ್ತಿಲ್ಲವೇ? ನಾನು ನೂರಾರು ಲೇಖನಗಳನ್ನು ನಂತರ ಓದಲು ಬುಕ್‌ಮಾರ್ಕ್ ಮಾಡಿದ್ದೇನೆ. ಎಲ್ಲವೂ ಕಣ್ಮರೆಯಾದವು” ಎಂದು ಕೆಲವು ಬಳಕೆದಾರರು ದೂರಿದ್ದಾರೆ.
ಎಲಾನ್ ಮಸ್ಕ್ (Elon Musk) ಸ್ವಾಧೀನಪಡಿಸಿಕೊಂಡ ಬಳಿಕ, ಮತ್ತು ನಂತರದ ಉದ್ಯೋಗಿಗಳ ಸಾಮೂಹಿಕ ವಜಾಗೊಳಿಸುವಿಕೆಯ ಬೆಳವಣಿಗಗಳ ನಂತರ X ಅನೇಕ ಸ್ಥಗಿತಗಳಿಗೆ ಸಾಕ್ಷಿಯಾಗಿದೆ. ಮಸ್ಕ್ ಟ್ವಿಟರ್ ಅನ್ನು X ಎಂದು ಮರುನಾಮಕರಣ ಮಾಡಿದ್ದಲ್ಲದೆ ಅದರ ಕೆಲವು ನಿಯಮಗಳನ್ನು ಬದಲಾಯಿಸಿದ್ದ. ಆದರೆ ಅದರ ಜಾಹೀರಾತು ಆದಾಯದ ಅರ್ಧಕ್ಕಿಂತ ಹೆಚ್ಚಿನದನ್ನು ಕಳೆದುಕೊಂಡಿದ್ದಾರೆ.
ಜಾಹೀರಾತಿನಿಂದ ದೂರ ಸರಿಯುವ ಹಾಗೂ ಪೇಯ್ಡ್ ಚಂದಾದಾರಿಕೆ ಪಡೆಯುವ ಮಸ್ಕ್ ಯೋಜನೆ ಫಲಪ್ರದವಾಗಿಲ್ಲ. 1%ಕ್ಕಿಂತ ಕಡಿಮೆ ಬಳಕೆದಾರರು ಮಾತ್ರ ಅದರ ಮಾಸಿಕ ಪ್ರೀಮಿಯಂ ಸೇವೆಗೆ ಸೈನ್ ಅಪ್ ಮಾಡಿದ್ದಾರೆ. ಬ್ಲೂಮ್‌ಬರ್ಗ್ ಪ್ರಕಾರ ವಾರ್ಷಿಕವಾಗಿ ಇದು $120 ಮಿಲಿಯನ್‌ಗಿಂತಲೂ ಕಡಿಮೆ.
ಇದನ್ನೂ ಓದಿ: Elon Musk: ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಪುತ್ರನ ಹೆಸರಿಗೂ, ಭಾರತಕ್ಕೂ ಇದೆ ನಂಟು