Site icon Vistara News

TRAI Rules | ಮೊಬೈಲ್‌ನಲ್ಲಿನ್ನು ಕಾಣಿಸಲಿದೆ ಕರೆ ಮಾಡಿದ ಅಪರಿಚಿತರ ಹೆಸರು! ಟ್ರೂ ಕಾಲರ್ ಅಂತ್ಯ ಸಮೀಪಿಸಿತೇ?

TRAI and Smartphones

ನವದೆಹಲಿ: ದೂರವಾಣಿ ಕರೆ ಮಾಡಿ ವಂಚನೆ ಮಾಡುವವರು ಇನ್ನು ಮುಂದೆ ಹುಷಾರಾಗಿರಬೇಕಾಗುತ್ತದೆ. ಯಾಕೆಂದರೆ, ಭಾರತೀಯ ಟೆಲಿಕಾಮ್ ನಿಯಂತ್ರಣ ಪ್ರಾಧಿಕಾರ(ಟ್ರಾಯ್)ವು ಪ್ರಮುಖ ಉಪಕ್ರಮವೊಂದನ್ನು ಜಾರಿಗೆ ತರುತ್ತಿದೆ. ಟ್ರೂಕಾಲರ್ (Truecoller) ಆ್ಯಪ್ ಇರದಿದ್ದರೂ ನಿಮಗೆ ಕರೆ ಮಾಡಿದವರ ಹೆಸರು ನಿಮ್ಮ ಫೋನ್‌ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳಲಿದೆ. ಟೆಲಿಕಾಂ ಕಂಪನಿಗಳ ಬಳಿ ಇರುವ ಗ್ರಾಹಕರ ಕೆವೈಸಿ(Know your Customer) ಆಧರಿಸಿ, ಕರೆ ಮಾಡಿದವರ ಹೆಸರು ಪ್ರಕಟವಾಗಲಿದೆ. ಇದರಿಂದ ಯಾವುದೇ ಅಪರಿಚಿತ ಕರೆಯನ್ನು ಗುರುತಿಸಬಹುದಾಗಿದೆ. ಈವರೆಗೆ ಟ್ರೂ ಕಾಲರ್‌ ಆ್ಯಪ್ ಸಂಪರ್ಕಿತರಿಗೆ ಈ ಸೌಲಭ್ಯ ದೊರಕುತ್ತಿತ್ತು. ಇನ್ನು ಮುಂದೆ ಎಲ್ಲ ಗ್ರಾಹಕರಿಗೆ ಈ ಸೌಲಭ್ಯ ಸಿಗಲಿದೆ. ಹಾಗಾಗಿ, ಟ್ರೂಕಾಲರ್ ಜಮಾನಾ ಅಂತ್ಯವಾಗುವ ಸಾಧ್ಯತೆಯಿದೆ(TRAI Rules)!

ಟೆಲಿಕಾಂ ಕಂಪನಿಗಳೇ ಕಾಲರ್ ಬಗ್ಗೆ ಮಾಹಿತಿ ಒದಗಿಸುವುದರಿಂದ ಸಾಕಷ್ಟು ಲಾಭಗಳಾಗಲಿವೆ. ಅನಧಿಕೃತವಲ್ಲದ ಕಾಲರ್ಸ್, ಸ್ಪ್ಯಾಮರ್ಸ್ ಮತ್ತು ಇತರ ವಂಚಕರನ್ನು ಪತ್ತೆ ಹಚ್ಚಲು ಸಾಧ್ಯವಾಗಲಿದೆ. ಹಾಗಾಗಿ, ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರ ಕೈವೈಸಿ ಸಂಗ್ರಹಿಸುವುದು ಅತ್ಯಗತ್ಯವಾಗಿದೆ. ಮಲ್ಟಿಪಲ್ ಸಿಮ್ ಕಾರ್ಡ್ಸ್ ಬಳಸಿಕೊಂಡು ವಂಚನೆ ಮಾಡುವ ಸೈಬರ್ ಕ್ರೈಮ್‌ಗೆ ಇದರಿಂದ ಹೊಡೆತ ಬೀಳಲಿದೆ.

ಈವರೆಗೆ ಗ್ರಾಹಕರು ಟ್ರೂಕಾಲರ್‌ನಂಥ ಆ್ಯಪ್ ಬಳಸಿಕೊಂಡು ಅಪರಿಚಿತರ ಕರೆಗಳು ಯಾರವು ಎಂದು ಗುರುತಿಸಿಕೊಳ್ಳುತ್ತಿದ್ದರು. ಆದರೆ, ಟ್ರೂಕಾಲರ್ ಕ್ರೌಡ್ ಸೋರ್ಸ್ಡ್ ಡೇಟಾವನ್ನು ಅವಲಂಬಿಸಿದೆ. ಹಾಗಾಗಿ, ಕೆಲವೊಮ್ಮೆ ಈ ಮಾಹಿತಿಯು ಖಚಿತತೆಯನ್ನು ಹೊಂದಿರುವುದಿಲ್ಲ. ಈ ಕೊರತೆಯನ್ನು ಕೆವೈಸಿ ಸಂಪರ್ಕಿತ ಗುರುತಿಸುವಿಕೆಯಿಂದ ದೂರವಾಗಲಿದೆ.

ಇದನ್ನೂ ಓದಿ | ಭಾರತದಲ್ಲಿ 2030ರೊಳಗೆ 6ಜಿ ನೆಟ್‌ವರ್ಕ್‌ ಬರಲಿದೆ ಎಂದ ಪ್ರಧಾನಿ ನರೇಂದ್ರ ಮೋದಿ

Exit mobile version