Site icon Vistara News

Temples of India: ಜೀವನದಲ್ಲೊಮ್ಮೆ ನೋಡಲೇಬೇಕಾದ ಭಾರತದ ಅತ್ಯಂತ ಸುಂದರ ಟಾಪ್‌ 10 ದೇವಾಲಯಗಳಿವು!

puri jagannath

#image_title

ಭಾರತದಲ್ಲಿ ದೇವಸ್ಥಾನಗಳಿಗೆ ಕಡಿಮೆಯಿಲ್ಲ. ಒಂದೊಂದು ಊರಿನಲ್ಲೂ ಆಯಾ ಊರಿಗೆ ವಿಶೇಷವೆನಿಸುವ ದೇವಸ್ಥಾನವಿದ್ದೇ ಇರುತ್ತದೆ. ಆದರೆ ಭಾರತದಲ್ಲಿ ಕೆಲವು ದೇವಸ್ಥಾನಗಳಿಗೆ ಅದರದ್ದೇ ಆದ ವಿಶೇಷ ಮಹತ್ವವಿದೆ. ಭಕ್ತಾದಿಗಳು, ತಪ್ಪದೇ, ಜೀವನದಲ್ಲೊಮ್ಮೆಯಾದರೂ ನೋಡಬೇಕು (Travel Tips) ಎಂದು ಕನಸು ಕಾಣಬಲ್ಲ ಅದ್ಭುತ ದೇವಸ್ಥಾನಗಳಿವೆ. ಭಾರತದಲ್ಲಿರುವ ಅಂಥ ಅತ್ಯಂತ ಸುಂದರ ಜೊತೆಗೆ ಅಷ್ಟೇ ಪ್ರಸಿದ್ಧವಾದ ದೇಗುಲಗಳ (Temples of India) ಪಟ್ಟಿ ಇಲ್ಲಿದೆ.

1. ಬದರಿನಾಥ ದೇವಾಲಯ, ಉತ್ತರಾಖಂಡ: ಉತ್ತರಾಖಂಡದ ಬದರಿನಾಥ ದೇವಾಲಯ ಭಕ್ತಾದಿಗಳು ಜೀವನದಲ್ಲೊಮ್ಮೆ ಭೇಟಿ ಕೊಡಬೇಕು ಎಂದುಕೊಳ್ಳುವ ದೇವಸ್ಥಾನಗಳ ಪೈಕಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ದೇವಾಲಯ ಸುಂದರ ಎನ್ನುವುದ್ಕಿಂತಲೂ, ಹಿಮಾಲಯದ ತಪ್ಪಲಲ್ಲಿ ಅದ್ಭುತವಾಗಿ ಕಾಣುವ ದೇವಾಲಯ ನಿಜವಾದ ದಿವ್ಯಾನುಭೂತಿ ನೀಡುವಲ್ಲಿ ಶಕ್ತವಾಗುತ್ತದೆ. ಚಾರ್‌ಧಾಮ್‌ಗಳಲ್ಲಿ ಒಂದಾದ ಬದರಿನಾಥ ಭಾರತದ ಪ್ರಮುಖ ಹಿಂದೂ ದೇವಾಲಯಗಳಲ್ಲಿ ಒಂದು.

2. ವಿಶ್ವನಾಥ ದೇವಾಲಯ, ಕಾಶಿ: ವಿಶ್ವದ ಅತ್ಯಂತ ಪುರಾತನ ಪಟ್ಟಣ ಎಂದೇ ಹೆಸರಾಗಿರುವ, ಸ್ವತಃ ಶಿವನೇ ನಿರ್ಮಿಸಿದ ಪಟ್ಟಣ ಎಂಬ ನಂಬಿಕೆಯ ಕಾಶಿಯ ವಿಶ್ವನಾಥ ದೇವಾಲಯ ಅತ್ಯಂತ ಸುಂದರ ದೇವಾಲಯಗಳಲ್ಲಿ ಒಂದು. ಇತ್ತೀಚೆಗೆ ನಡೆದ ಪುನರುಜ್ಜೀವನ ಕಾರ್ಯಗಳಿಂದ ದೇವಾಲಯ ಸಮುಚ್ಛಯ ಇನ್ನಷ್ಟು ಸುಂದರವಾಗಿ ಕಾಣುತ್ತಿದೆ.

3. ಬೃಹದೀಶ್ವರ ದೇವಾಲಯ, ತಂಜಾವೂರು: ತಮಿಳುನಾಡಿನ ತಂಜಾವೂರಿನ ಬೃಹದೀಶ್ವರ ದೇವಲಾಯ ಕೇವಲ ತಮಿಳುನಾಡಷ್ಟೇ ಅಲ್ಲ, ಭಾರತದಲ್ಲಿಯೇ ಅತ್ಯಂತ ಸುಂದ ವಾಸ್ತುಶಿಲ್ಪ ಹೊಂದಿದ ಅಪೂರ್ವವಾದ ದೇವಾಲಯ. ಇದು ಐತಿಹಾಸಿಕವಾಗಿಯೂ ಅತ್ಯಂತ ಹಳೆಯ ದೇವಾಲಯಗಳಲ್ಲೊಂದು.

meenakshi temple madurai

4. ದಿಲ್ವಾರಾ ದೇವಾಲಯಗಳು, ರಾಜಸ್ಥಾನ: ರಾಜಸ್ಥಾನದ ಮೌಂಟ್‌ ಅಬುವಿನಲ್ಲಿರುವ ದಿಲ್ವಾರಾ ಜೈನ ದೇವಾಲಯಗಳು ಅತ್ಯಂತ ಸುಂದರ ವಾಸ್ತುಶಿಲ್ಪ ಹೊಂದಿದ ಅಪರೂಪದ ದೇವಾಲಯಗಳಲ್ಲೊಂದು.

meenakshi temple madurai

5. ಗೋಲ್ಡನ್‌ ಟೆಂಪಲ್‌, ಪಂಜಾಬ್‌: ಅಮೃತಸರದಲ್ಲಿರುವ ಗೋಲ್ಡನ್‌ ಟೆಂಪಲ್‌ ವಿಶ್ವದಲ್ಲೇ ಪ್ರಸಿದ್ಧವಾದ ಸಿಖ್ಖರ ದೇವಾಲಯ. ಸಾವಿರಾರು ಮಂದಿ ನಿತ್ಯವೂ ಇಲ್ಲಿಗೆ ಬರುತ್ತಾರೆ. ನೋಡಲು ಅತ್ಯಂತ ಸುಂದರವಾಗಿ ಕಾಣುವ  ಚಿನ್ನದ ದೇಗುಲವನ್ನು ರಾತ್ರಯಲ್ಲಿ ನೋಡುವುದು ಇನ್ನೂ ಸೊಗಸು.

meenakshi temple madurai

6. ಜಗನ್ನಾಥ ದೇಗುಲ, ಪುರಿ: ಒಡಿಶಾದ ಪುರಿಯ ಜಗನ್ನಾಥ ದೇವಾಲಯವೂ ಅತ್ಯಂತ ಪ್ರಸಿದ್ಧವಾದ ಭಾರತದ ದೇಗುಲಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಇಲ್ಲಿನ ರಥಯಾತ್ರೆ ಜಗತ್ಪ್ರಸಿದ್ದ.

7. ಕೇದಾರನಾಥ ದೇವಾಲಯ, ಉತ್ತರಾಖಂಡ: ಹಿಮಾಲಯದ ಮಡಿಲಲ್ಲಿರುವ ಕೇದಾರನಾಥ ದೇವಾಲಯದ ದರ್ಶನಕ್ಕೆ ಭಕ್ತಾದಿಗಳು ಕಾಲ್ನಡಿಗೆಯಲ್ಲಿಯೇ ಸಾಗಬೇಕಾಗುತ್ತದೆ. ಕಷ್ಟಗಳನ್ನು ಸಹಿಸಿಕೊಂಡು ಕಡೆಗೆ ದೇವರ ದರ್ಶನ ನೀಡುವ ಈ ತಾಣ ಭಗವಂತನ ಚರಣ ಸ್ಪರ್ಶ ಮಾಡುವ ದಿವ್ಯಾನುಭೂತಿಯನ್ನೂ ನೀಡಬಲ್ಲುದು. ಅದ್ಭುತ ಪ್ರಾಕೃತಿಕ ಸೌದರ್ಯವಿರುವ ಈ ದೇವಾಲಯ ಕೇವಲ ಕೆಲವೇ ತಿಂಗಳುಗಳ ಕಾಲ ತೆರೆದಿರುತ್ತದೆ.

8. ಮೀನಾಕ್ಷಿ ದೇವಾಲಯ, ಮಧುರೈ: ದೇವಾಲಯಗಳ ತವರೂರು ತಮಿಳುನಾಡಿನ ಅತ್ಯಂತ ಸಂದರವಾದ ಮೀನಾಕ್ಷಿ ಅಮ್ಮನ ಈ ದೇಗುಲವೂ ಕೂಡಾ ಜಗತ್ಪ್ರಸಿದ್ಧ. ಅತ್ಯಂತ ವಿಶಾಲವಾದ ಈ ದೇಗುಲ ಕೇವಲ ಧಾರ್ಮಿಕವಾಗಿ ಅಷ್ಟೇ ಅಲ್ಲ, ವಾಸ್ತುಶಿಲ್ಪದಿಂದಲೂ ಅತ್ಯಂತ ಒಳ್ಳೆಯ ಅನುಭೂತಿ ನೀಡುವಂಥದ್ದು.

9. ಶೋರ್‌ ಟೆಂಪಲ್‌, ಮಹಾಬಲಿಪುರಂ: ತಮಿಳುನಾಡಿನ ಮಹಾಬಲಿಪುರಂನ ಶೋರ್‌ ಟೆಂಪಲ್‌ ಸಮುದ್ರ ತೀರದಲ್ಲಿರುವ ಅತ್ಯಂತ ಸುಂದರ ದೇವಾಲಯಗಳಲ್ಲಿ ಒಂದು. ಸಮುದ್ರ ತೀರದಲ್ಲಿರುವುದರಿಂದಲೇ ವಿಶೇಷವಾಗಿ ಕಾಣುವ ಈ ದೇವಾಲಯ ತನ್ನ ವಾಸ್ತುಶಿಲ್ಪದಿಂದಲೂ ವಿಶೇಷವಾಗಿ ನಿಲ್ಲುತ್ತದೆ.

10. ಸೋಮನಾಥ ದೇವಾಲಯ, ಗುಜರಾತ್‌: ಗುಜರಾತಿನ ಸೋಮನಾಥ ದೇವಾಲಯ ತನ್ನದೇ ಆದ ವಿಶೇಷತೆಗಳಿಂದ ಗಮನ ಸೆಳೆಯುತ್ತದೆ. ತನ್ನ ರೋಚಕ ಐತಿಹಾಸಿಕ ಕಥೆಗಳಿಂದ ಸೋಮನಾಥ ಇಂದಿಗೂ ಭಕ್ತಾದಿಗಳನ್ನು ತನ್ನೆಡೆಗೆ ಕೈಬೀಸಿ ಕರೆಯುತ್ತಿದೆ.

ಇದನ್ನೂ ಓದಿ: Travel Tips: ಪ್ರವಾಸದ ಸಂದರ್ಭ ಸೌಂದರ್ಯ ರಕ್ಷಣೆಗೆ ಸುಲಭ ಸೂತ್ರಗಳು!

Exit mobile version