Temples of India: ಜೀವನದಲ್ಲೊಮ್ಮೆ ನೋಡಲೇಬೇಕಾದ ಭಾರತದ ಅತ್ಯಂತ ಸುಂದರ ಟಾಪ್‌ 10 ದೇವಾಲಯಗಳಿವು! - Vistara News

ಪ್ರವಾಸ

Temples of India: ಜೀವನದಲ್ಲೊಮ್ಮೆ ನೋಡಲೇಬೇಕಾದ ಭಾರತದ ಅತ್ಯಂತ ಸುಂದರ ಟಾಪ್‌ 10 ದೇವಾಲಯಗಳಿವು!

ಜೀವನದಲ್ಲಿ ಒಮ್ಮೆ ನೋಡಲೇಬೇಕಾದ ಸುಂದರ ದೇವಾಲಯಗಳು ಭಾರತದಲ್ಲಿ (Temples of India) ಇವೆ. ಅಂಥ ಕಡೆ ಒಮ್ಮೆ ಹೋಗಿಬರಲು ಪ್ಲಾನ್‌ ಮಾಡಿಕೊಳ್ಳಿ.

VISTARANEWS.COM


on

puri jagannath
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾರತದಲ್ಲಿ ದೇವಸ್ಥಾನಗಳಿಗೆ ಕಡಿಮೆಯಿಲ್ಲ. ಒಂದೊಂದು ಊರಿನಲ್ಲೂ ಆಯಾ ಊರಿಗೆ ವಿಶೇಷವೆನಿಸುವ ದೇವಸ್ಥಾನವಿದ್ದೇ ಇರುತ್ತದೆ. ಆದರೆ ಭಾರತದಲ್ಲಿ ಕೆಲವು ದೇವಸ್ಥಾನಗಳಿಗೆ ಅದರದ್ದೇ ಆದ ವಿಶೇಷ ಮಹತ್ವವಿದೆ. ಭಕ್ತಾದಿಗಳು, ತಪ್ಪದೇ, ಜೀವನದಲ್ಲೊಮ್ಮೆಯಾದರೂ ನೋಡಬೇಕು (Travel Tips) ಎಂದು ಕನಸು ಕಾಣಬಲ್ಲ ಅದ್ಭುತ ದೇವಸ್ಥಾನಗಳಿವೆ. ಭಾರತದಲ್ಲಿರುವ ಅಂಥ ಅತ್ಯಂತ ಸುಂದರ ಜೊತೆಗೆ ಅಷ್ಟೇ ಪ್ರಸಿದ್ಧವಾದ ದೇಗುಲಗಳ (Temples of India) ಪಟ್ಟಿ ಇಲ್ಲಿದೆ.

1. ಬದರಿನಾಥ ದೇವಾಲಯ, ಉತ್ತರಾಖಂಡ: ಉತ್ತರಾಖಂಡದ ಬದರಿನಾಥ ದೇವಾಲಯ ಭಕ್ತಾದಿಗಳು ಜೀವನದಲ್ಲೊಮ್ಮೆ ಭೇಟಿ ಕೊಡಬೇಕು ಎಂದುಕೊಳ್ಳುವ ದೇವಸ್ಥಾನಗಳ ಪೈಕಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ದೇವಾಲಯ ಸುಂದರ ಎನ್ನುವುದ್ಕಿಂತಲೂ, ಹಿಮಾಲಯದ ತಪ್ಪಲಲ್ಲಿ ಅದ್ಭುತವಾಗಿ ಕಾಣುವ ದೇವಾಲಯ ನಿಜವಾದ ದಿವ್ಯಾನುಭೂತಿ ನೀಡುವಲ್ಲಿ ಶಕ್ತವಾಗುತ್ತದೆ. ಚಾರ್‌ಧಾಮ್‌ಗಳಲ್ಲಿ ಒಂದಾದ ಬದರಿನಾಥ ಭಾರತದ ಪ್ರಮುಖ ಹಿಂದೂ ದೇವಾಲಯಗಳಲ್ಲಿ ಒಂದು.

badarinath

2. ವಿಶ್ವನಾಥ ದೇವಾಲಯ, ಕಾಶಿ: ವಿಶ್ವದ ಅತ್ಯಂತ ಪುರಾತನ ಪಟ್ಟಣ ಎಂದೇ ಹೆಸರಾಗಿರುವ, ಸ್ವತಃ ಶಿವನೇ ನಿರ್ಮಿಸಿದ ಪಟ್ಟಣ ಎಂಬ ನಂಬಿಕೆಯ ಕಾಶಿಯ ವಿಶ್ವನಾಥ ದೇವಾಲಯ ಅತ್ಯಂತ ಸುಂದರ ದೇವಾಲಯಗಳಲ್ಲಿ ಒಂದು. ಇತ್ತೀಚೆಗೆ ನಡೆದ ಪುನರುಜ್ಜೀವನ ಕಾರ್ಯಗಳಿಂದ ದೇವಾಲಯ ಸಮುಚ್ಛಯ ಇನ್ನಷ್ಟು ಸುಂದರವಾಗಿ ಕಾಣುತ್ತಿದೆ.

3. ಬೃಹದೀಶ್ವರ ದೇವಾಲಯ, ತಂಜಾವೂರು: ತಮಿಳುನಾಡಿನ ತಂಜಾವೂರಿನ ಬೃಹದೀಶ್ವರ ದೇವಲಾಯ ಕೇವಲ ತಮಿಳುನಾಡಷ್ಟೇ ಅಲ್ಲ, ಭಾರತದಲ್ಲಿಯೇ ಅತ್ಯಂತ ಸುಂದ ವಾಸ್ತುಶಿಲ್ಪ ಹೊಂದಿದ ಅಪೂರ್ವವಾದ ದೇವಾಲಯ. ಇದು ಐತಿಹಾಸಿಕವಾಗಿಯೂ ಅತ್ಯಂತ ಹಳೆಯ ದೇವಾಲಯಗಳಲ್ಲೊಂದು.

bruhadishwar temple

4. ದಿಲ್ವಾರಾ ದೇವಾಲಯಗಳು, ರಾಜಸ್ಥಾನ: ರಾಜಸ್ಥಾನದ ಮೌಂಟ್‌ ಅಬುವಿನಲ್ಲಿರುವ ದಿಲ್ವಾರಾ ಜೈನ ದೇವಾಲಯಗಳು ಅತ್ಯಂತ ಸುಂದರ ವಾಸ್ತುಶಿಲ್ಪ ಹೊಂದಿದ ಅಪರೂಪದ ದೇವಾಲಯಗಳಲ್ಲೊಂದು.

dilwara temple

5. ಗೋಲ್ಡನ್‌ ಟೆಂಪಲ್‌, ಪಂಜಾಬ್‌: ಅಮೃತಸರದಲ್ಲಿರುವ ಗೋಲ್ಡನ್‌ ಟೆಂಪಲ್‌ ವಿಶ್ವದಲ್ಲೇ ಪ್ರಸಿದ್ಧವಾದ ಸಿಖ್ಖರ ದೇವಾಲಯ. ಸಾವಿರಾರು ಮಂದಿ ನಿತ್ಯವೂ ಇಲ್ಲಿಗೆ ಬರುತ್ತಾರೆ. ನೋಡಲು ಅತ್ಯಂತ ಸುಂದರವಾಗಿ ಕಾಣುವ  ಚಿನ್ನದ ದೇಗುಲವನ್ನು ರಾತ್ರಯಲ್ಲಿ ನೋಡುವುದು ಇನ್ನೂ ಸೊಗಸು.

Explosion near Golden Temple In Punjab

6. ಜಗನ್ನಾಥ ದೇಗುಲ, ಪುರಿ: ಒಡಿಶಾದ ಪುರಿಯ ಜಗನ್ನಾಥ ದೇವಾಲಯವೂ ಅತ್ಯಂತ ಪ್ರಸಿದ್ಧವಾದ ಭಾರತದ ದೇಗುಲಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಇಲ್ಲಿನ ರಥಯಾತ್ರೆ ಜಗತ್ಪ್ರಸಿದ್ದ.

7. ಕೇದಾರನಾಥ ದೇವಾಲಯ, ಉತ್ತರಾಖಂಡ: ಹಿಮಾಲಯದ ಮಡಿಲಲ್ಲಿರುವ ಕೇದಾರನಾಥ ದೇವಾಲಯದ ದರ್ಶನಕ್ಕೆ ಭಕ್ತಾದಿಗಳು ಕಾಲ್ನಡಿಗೆಯಲ್ಲಿಯೇ ಸಾಗಬೇಕಾಗುತ್ತದೆ. ಕಷ್ಟಗಳನ್ನು ಸಹಿಸಿಕೊಂಡು ಕಡೆಗೆ ದೇವರ ದರ್ಶನ ನೀಡುವ ಈ ತಾಣ ಭಗವಂತನ ಚರಣ ಸ್ಪರ್ಶ ಮಾಡುವ ದಿವ್ಯಾನುಭೂತಿಯನ್ನೂ ನೀಡಬಲ್ಲುದು. ಅದ್ಭುತ ಪ್ರಾಕೃತಿಕ ಸೌದರ್ಯವಿರುವ ಈ ದೇವಾಲಯ ಕೇವಲ ಕೆಲವೇ ತಿಂಗಳುಗಳ ಕಾಲ ತೆರೆದಿರುತ್ತದೆ.

Kedarnath yatra begins on April 25

8. ಮೀನಾಕ್ಷಿ ದೇವಾಲಯ, ಮಧುರೈ: ದೇವಾಲಯಗಳ ತವರೂರು ತಮಿಳುನಾಡಿನ ಅತ್ಯಂತ ಸಂದರವಾದ ಮೀನಾಕ್ಷಿ ಅಮ್ಮನ ಈ ದೇಗುಲವೂ ಕೂಡಾ ಜಗತ್ಪ್ರಸಿದ್ಧ. ಅತ್ಯಂತ ವಿಶಾಲವಾದ ಈ ದೇಗುಲ ಕೇವಲ ಧಾರ್ಮಿಕವಾಗಿ ಅಷ್ಟೇ ಅಲ್ಲ, ವಾಸ್ತುಶಿಲ್ಪದಿಂದಲೂ ಅತ್ಯಂತ ಒಳ್ಳೆಯ ಅನುಭೂತಿ ನೀಡುವಂಥದ್ದು.

meenakshi temple madurai

9. ಶೋರ್‌ ಟೆಂಪಲ್‌, ಮಹಾಬಲಿಪುರಂ: ತಮಿಳುನಾಡಿನ ಮಹಾಬಲಿಪುರಂನ ಶೋರ್‌ ಟೆಂಪಲ್‌ ಸಮುದ್ರ ತೀರದಲ್ಲಿರುವ ಅತ್ಯಂತ ಸುಂದರ ದೇವಾಲಯಗಳಲ್ಲಿ ಒಂದು. ಸಮುದ್ರ ತೀರದಲ್ಲಿರುವುದರಿಂದಲೇ ವಿಶೇಷವಾಗಿ ಕಾಣುವ ಈ ದೇವಾಲಯ ತನ್ನ ವಾಸ್ತುಶಿಲ್ಪದಿಂದಲೂ ವಿಶೇಷವಾಗಿ ನಿಲ್ಲುತ್ತದೆ.

10. ಸೋಮನಾಥ ದೇವಾಲಯ, ಗುಜರಾತ್‌: ಗುಜರಾತಿನ ಸೋಮನಾಥ ದೇವಾಲಯ ತನ್ನದೇ ಆದ ವಿಶೇಷತೆಗಳಿಂದ ಗಮನ ಸೆಳೆಯುತ್ತದೆ. ತನ್ನ ರೋಚಕ ಐತಿಹಾಸಿಕ ಕಥೆಗಳಿಂದ ಸೋಮನಾಥ ಇಂದಿಗೂ ಭಕ್ತಾದಿಗಳನ್ನು ತನ್ನೆಡೆಗೆ ಕೈಬೀಸಿ ಕರೆಯುತ್ತಿದೆ.

ಇದನ್ನೂ ಓದಿ: Travel Tips: ಪ್ರವಾಸದ ಸಂದರ್ಭ ಸೌಂದರ್ಯ ರಕ್ಷಣೆಗೆ ಸುಲಭ ಸೂತ್ರಗಳು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಚಾಮರಾಜನಗರ

Tiger Attack : ಮರಿಯಾನೆ ಕೊಂದ ಹುಲಿ; ಶವ ಬಿಟ್ಟು ಕದಲದ ತಾಯಿ ಆನೆ ರೋಧನೆ

Tiger Attack : ಹುಲಿಯೊಂದು ಮರಿಯಾನೆ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಇತ್ತ ಮರಿಯಾನೆ ಬಿಟ್ಟು ಕದಲದ ತಾಯಿ ಆನೆಯು ರೋಧನೆ ಅನುಭವಿಸುತ್ತಿದ್ದು, ರಸ್ತೆಯಲ್ಲಿ ಬಿಡುಬಿಟ್ಟಿತ್ತು. ಇದರಿಂದಾಗಿ ವಾಹನ ಸವಾರರು ಕಿ.ಮೀ ಗಟ್ಟಲೇ ನಿಂತಲ್ಲೇ ನಿಲ್ಲುವಾಯಿತು.

VISTARANEWS.COM


on

By

tiger attack
Koo

ಚಾಮರಾಜನಗರ: ಮರಿಯಾನೆ ಮೇಲೆ ಹುಲಿಯೊಂದು ದಾಳಿ (Tiger Attack) ಮಾಡಿದೆ. ಹುಲಿಯ ದಾಳಿಗೆ ತುತ್ತಾದ ಮರಿ ಆನೆಯು (Elephant death) ಮೃತಪಟ್ಟ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದಲ್ಲಿ (Bandipura Road) ನಡೆದಿದೆ.

ರಸ್ತೆ ಪಕ್ಕದಲ್ಲೇ ಮರಿಯಾನೆ ಮೃತಪಟ್ಟ ಕಾರಣದಿಂದಾಗಿ ತಾಯಿ ಆನೆಯು ಮರಿಯನ್ನು ಬಿಟ್ಟು ಕದಲದೇ ನಿಂತಿತ್ತು. ಮರಿಯಾನೆಯ ಶವವನ್ನು ಮುಟ್ಟುತ್ತಾ ಎಬ್ಬಿಸಲು ಪ್ರಯತ್ನಿಸುತ್ತಿತ್ತು. ಮರಿಯಾನೆ ಮುಂದೆ ಆನೆ ರೋಧನೆಯು ಎಂತಹವರಿಗೂ ಕರುಳು ಚುರುಕ್‌ ಎನ್ನುವಂತೆ ಮಾಡಿತ್ತು.

ರಸ್ತೆ ಪಕ್ಕದಲ್ಲೇ ಆನೆ ನಿಂತಿದ್ದರಿಂದ ಕಿಲೋ ಮೀಟರ್ ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿತ್ತು. ಬಂಡೀಪುರ ಅರಣ್ಯ ವ್ಯಾಪ್ತಿಯ ಮೈಸೂರು- ಊಟಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಆನೆಯನ್ನು ದಾಟಿ ವಾಹನಗಳು ಮುಂದೆ ಹೋಗಲು ಆಗದೆ ನಿಂತಲ್ಲೇ ನಿಲ್ಲುವಂತಾಗಿತ್ತು.

ಇದನ್ನೂ ಓದಿ: Forest Bathing: ಬೆಂಗಳೂರಲ್ಲೂ ಶುರು ಫಾರೆಸ್ಟ್‌ ಬಾಥಿಂಗ್‌; ಕಬ್ಬನ್ ಪಾರ್ಕ್‌ನಲ್ಲಿ ಮರ ಅಪ್ಪಲು ಕೊಡಬೇಕು 1500 ರೂ.!

ನಿಟ್ಟೂರು ಗ್ರಾಮದಲ್ಲಿ ಹುಲಿ ದಾಳಿಗೆ ವ್ಯಕ್ತಿ ಬಲಿ; ಕನಕಗಿರಿಯಲ್ಲಿ ಕರಡಿ ದಾಳಿಗೆ ವೃದ್ಧ ಸಾವು

ಕೊಡಗು: ಹುಲಿ ದಾಳಿಗೆ (Wild Animals Attack) ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ. ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಿಟ್ಟೂರು ಗ್ರಾಮದ ರಾಜಪುರ ರಸ್ತೆ ಸಮೀಪ ಗುರುವಾರ ಸಂಜೆ ಈ ಘಟನೆ ನಡೆದಿದೆ.

ಅಸ್ಸಾಂ ಮೂಲದ ಮೊಹಿಸೂರು ರೆಹಮಾನ್ (51) ಹುಲಿ ದಾಳಿಗೆ ಬಲಿಯಾದ ವ್ಯಕ್ತಿ. ಹಸುವಿನ ಮೇಲೆ ದಾಳಿ ಮಾಡಲು ಬಂದಂತಹ ಹುಲಿ, ಅಲ್ಲೇ ಇದ್ದ ಅಸ್ಸಾಂ ಮೂಲದ ಕಾರ್ಮಿಕ ಮೊಹಿಸೂರು ರೆಹಮಾನ್ ಮೇಲೆ ಎಗರಿ ಬಲಿ ತೆಗೆದುಕೊಂಡಿದೆ.

ಇದನ್ನೂ ಓದಿ: DRDO Test: ದೇಶೀಯ ತಂತ್ರಜ್ಞಾನದ ಕ್ರೂಸ್‌ ಕ್ಷಿಪಣಿಯ ಯಶಸ್ವಿ ಪರೀಕ್ಷೆ

ಘಟನೆಯ ಕುರಿತು ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಹುಲಿಯನ್ನು ಸೆರೆಹಿಡಿಯುವಂತೆ ಒತ್ತಾಯಿಸಿದ್ದಾರೆ. ಈ ಹುಲಿ ದಾಳಿಯಿಂದ ದಕ್ಷಿಣ ಕೊಡಗಿನ ಜನತೆ ಭಯ ಭೀತರಾಗಿದ್ದು, ಒಬ್ಬೋಬ್ಬರೆ ಓಡಾಡಲು ಹಾಗೂ ಕಾಫಿ ತೋಟದಲ್ಲಿ ಕೆಲಸ ಮಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಪೊನ್ನಂಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕನಕಗಿರಿಯಲ್ಲಿ ಕರಡಿ ದಾಳಿಗೆ ವೃದ್ಧ ಬಲಿ

ಕರಡಿ ದಾಳಿಯಿಂದ ತೀವ್ರ ಗಾಯಗೊಂಡಿದ್ದ ವೃದ್ಧನೋರ್ವ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ರಾಂಪುರ ಗ್ರಾಮದಲ್ಲಿ ಗುರುವಾರ ನಡೆದಿದೆ.

ಕರಡಿ ದಾಳಿ ಹಿನ್ನಲೆ ಘಟನಾ ಸ್ಥಳಕ್ಕೆ ಆಗಮಿಸಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸ್ಥಳೀಯರು ತೀವ್ರ ತರಾಟೆಗೆ ತೆಗೆದುಕೊಂಡರು.

ಚೆನ್ನಪ್ಪ (74) ಮೃತಪಟ್ಟ ವೃದ್ಧ. ರಾಂಪುರ ಗ್ರಾಮದ ಹೊರವಲಯದ ಕೆರೆ ಬಳಿ ಇರುವ ಆಂಜನೇಯ ದೇವಸ್ಥಾನದ ಬಳಿ ದುರ್ಘಟನೆ ನಡೆದಿದೆ.

ಘಟನೆಯ ಹಿನ್ನೆಲೆ

ದೇವಸ್ಥಾನದಲ್ಲಿದ್ದ ಕರಡಿಯನ್ನು ಗಮನಿಸಿದ್ದ ಗ್ರಾಮಸ್ಥರು ಅದನ್ನು ಕೂಡಿಹಾಕಿದ್ದರು. ಆದರೆ ಅಲ್ಲಿಂದ ತಪ್ಪಿಸಿಕೊಂಡು ಹೊರ ಬಂದ ಕರಡಿಯು ವೃದ್ಧ ಚೆನ್ನಪ್ಪನ ಮೇಲೆ ದಾಳಿ ನಡೆಸಿದ್ದು, ತೀವ್ರ ಗಾಯಗೊಂಡಿದ್ದ ವೃದ್ಧನನ್ನು ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವೃದ್ಧ ಚೆನ್ನಪ್ಪ ಸಾವನ್ನಪ್ಪಿದ್ದಾನೆ.

ಘಟನೆಯ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸ್ಥಳೀಯರು ತೀವ್ರ ತರಾಟೆಗೆ ತೆಗೆದುಕೊಂಡರು. ಕರಡಿಯನ್ನು ಸೆರೆ ಹಿಡಿಯಲು ಬೇಕಾದ ಬೋನು ಮತ್ತು ಇತರೆ ಪರಿಕರಗಳನ್ನು ತರದೇ ಹಾಗೆ ಬರೀಗೈಯ್ಯಲ್ಲಿ ಬಂದಿದ್ದ ಅಧಿಕಾರಿ, ಸಿಬ್ಬಂದಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು, ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಕರಡಿ ಉಪಟಳವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಕನಕಗಿರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

Latest

Char Dham Yatra 2024: ಈ ಬೇಸಿಗೆಯಲ್ಲಿ ಚಾರ್ ಧಾಮ್ ಯಾತ್ರೆಗೆ ಸಿದ್ಧರಾಗಿ! ನೋಂದಣಿ ಮಾಹಿತಿ ಇಲ್ಲಿದೆ

Char Dham Yatra 2024: ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥ್ ಗೆ ನಡೆಸುವ ಯಾತ್ರೆಗೆ ಚಾರ್ ಧಾಮ್ ಯಾತ್ರೆ ಎಂದು ಕರೆಯಲಾಗುತ್ತದೆ. ಈ ಬಾರಿ ಅಕ್ಷಯ ತೃತೀಯದ ಬಳಿಕ ಈ ನಾಲ್ಕು ದೇವಾಲಯದ ಬಾಗಿಲುಗಳು ತೆರೆಯಲಿದ್ದು, ಆರು ತಿಂಗಳ ಕಾಲ ಭಕ್ತರ ಭೇಟಿಗೆ ಅವಕಾಶವಿದೆ. ಆದರೆ ಅಲ್ಲಿಗೆ ಹೋಗಲು ಮೊದಲೇ ನೋಂದಣಿ ಮಾಡಿಸಿಕೊಳ್ಳಬೇಕು. ಈ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.

VISTARANEWS.COM


on

By

Char Dham Yatra 2024
Koo

ಚಾರ್ ಧಾಮ್ ಯಾತ್ರೆ ಬಗ್ಗೆ ಸಾಕಷ್ಟು ಮಂದಿ ಕೇಳಿರುತ್ತಾರೆ. ಆದರೆ ಎಲ್ಲರಿಗೂ ಅಲ್ಲಿ ಹೋಗೋ ಅವಕಾಶ ಸಿಗುವುದಿಲ್ಲ. ಹಲವು ಬಾರಿ ಯೋಜನೆ ಮಾಡಿ ಯಾವುದೋ ಕಾರಣದಿಂದ ಅದನ್ನು ಮುಂದೂಡಿರುತ್ತಾರೆ. ಆದರೆ ಈ ಬಾರಿ ಬೇಸಿಗೆ ರಜೆಯಲ್ಲೇ (summer holidays) ಚಾರ್ ಧಾಮ್ ಯಾತ್ರೆ (Char Dham Yatra 2024) ಮಾಡಿ ಬರಬಹುದು.

ಚಾರ್ ಧಾಮ್ ಯಾತ್ರೆ ಎಂದೇ ಕರೆಯಲ್ಪಡುವ ಉತ್ತರಾಖಂಡದ (uttarakhand) ನಾಲ್ಕು ಪವಿತ್ರ ಕ್ಷೇತ್ರಗಳಾದ ಗಂಗೋತ್ರಿ (Gangotri), ಯಮುನೋತ್ರಿ (Yamunotri), ಕೇದಾರನಾಥ ( Kedarnath) ಮತ್ತು ಬದರಿನಾಥರ (Badrinath) ವಾರ್ಷಿಕ ತೀರ್ಥಯಾತ್ರೆಯ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಸೋಮವಾರ ಪ್ರಾರಂಭವಾಗಿದೆ.
ಯಾತ್ರೆಗೆ ಬರಲು ಇಚ್ಛಿಸುವವರು ಪ್ರವಾಸೋದ್ಯಮ ಇಲಾಖೆಯ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 10ರಂದು ಪ್ರಾರಂಭ

ವಾರ್ಷಿಕ ಚಾರ್ ಧಾಮ್ ಯಾತ್ರೆಯು ಮೇ 10ರಂದು ಅಕ್ಷಯ ತೃತೀಯ ಸಂದರ್ಭದಲ್ಲಿ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಈ ಮೂರು ದೇಗುಲಗಳಲ್ಲಿ ಬಾಗಿಲನ್ನು ಭಕ್ತರಿಗಾಗಿ ತೆರೆಯಲಾಗುತ್ತದೆ. ಬದರಿನಾಥ ದೇವಾಲಯದ ಬಾಗಿಲು ಮೇ 12 ರಂದು ಸಾರ್ವಜನಿಕರಿಗೆ ತೆರೆಯಲಾಗುವುದು.

ಇದನ್ನೂ ಓದಿ: Mantralaya Tour: ಮಂತ್ರಾಲಯಕ್ಕೆ ಒಂದೇ ದಿನದಲ್ಲಿ ಹೋಗಿ ಬರಬೇಕೆ? ಈ ರೈಲುಗಳಲ್ಲಿ ಹೊರಡಿ

ಆರು ತಿಂಗಳು ಬಂದ್

ಪ್ರತಿ ವರ್ಷ ಲಕ್ಷಾಂತರ ಭಕ್ತರು ಎತ್ತರದಲ್ಲಿರುವ ಈ ಪವಿತ್ರ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಪ್ರತಿ ವರ್ಷ ಚಳಿಗಾಲದ ತಿಂಗಳ ಆರಂಭದಿಂದ ಸುಮಾರು ಆರು ತಿಂಗಳ ಕಾಲ ಮುಚ್ಚಲಾಗುತ್ತದೆ. ಯಾತ್ರೆಯು ಸಾಮಾನ್ಯವಾಗಿ ಏಪ್ರಿಲ್- ಮೇ ತಿಂಗಳಿನಿಂದ ಅಕ್ಟೋಬರ್-ನವೆಂಬರ್ ವರೆಗೆ ನಡೆಯುತ್ತದೆ.

ಪ್ರದಕ್ಷಿಣಾಕಾರ ಪೂಜೆ

ಹಿಂದೂ ಧರ್ಮದಲ್ಲಿ ಈ ಪವಿತ್ರ ದೇವಾಲಯಗಳು ಆಳವಾದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿವೆ. ಇಲ್ಲಿ ಪ್ರದಕ್ಷಿಣಾಕಾರವಾಗಿ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಬೇಕು ಎಂದೇ ನಂಬಲಾಗಿದೆ. ಹೀಗಾಗಿ ಯಾತ್ರೆಯು ಯಮುನೋತ್ರಿಯಿಂದ ಪ್ರಾರಂಭವಾಗುತ್ತದೆ, ಗಂಗೋತ್ರಿ ಕಡೆಗೆ ಸಾಗುತ್ತದೆ, ಕೇದಾರನಾಥದ ಭೇಟಿ ಬಳಿಕ ಅಂತಿಮವಾಗಿ ಬದರಿನಾಥದಲ್ಲಿ ಕೊನೆಗೊಳ್ಳುತ್ತದೆ.

ನೋಂದಣಿ ಹೇಗೆ?

ಚಾರ್ ಧಾಮ್ ಯಾತ್ರೆಗೆ ಹೋಗಲು ಇಚ್ಛಿಸುವವರು ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆಯ ಚಾರ್ ಧಾಮ್ ಯಾತ್ರೆಗಾಗಿ ಗೊತ್ತುಪಡಿಸಿದ ಅಧಿಕೃತ ವೆಬ್‌ಸೈಟ್‌ನಲ್ಲಿ andtouristcare.uk.gov.in ಅಥವಾ registrationandtouristcare.uk.gov.in ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.

ಮೊದಲು ವೆಬ್ ಸೈಟ್ ಗೆ ಭೇಟಿ ನೀಡಿ ರಿಜಿಸ್ಟರ್ ಅಥವಾ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ.
ಹೆಸರು, ಸಂಪರ್ಕ ಸಂಖ್ಯೆ, ಇಮೇಲ್ ಐಡಿ, ಇತ್ಯಾದಿ ಸೇರಿದಂತೆ ಅಗತ್ಯವಿರುವ ವಿವರಗಳನ್ನು ನಮೂದಿಸಿ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಿದ ಒಟಿಪಿಯನ್ನು ನಮೂದಿಸುವ ಮೂಲಕ ನೋಂದಣಿಯನ್ನು ಪೂರ್ಣಗೊಳಿಸಿ.

ಬಳಿಕ ಹೊಸ ಡ್ಯಾಶ್‌ಬೋರ್ಡ್ ಕಾಣಿಸಿಕೊಳ್ಳುತ್ತದೆ. ಅಲ್ಲಿ ವ್ಯಕ್ತಿಯು ಪ್ರಯಾಣದ ದಿನಾಂಕಗಳು, ಪ್ರವಾಸಿಗರ ಸಂಖ್ಯೆ, ಭೇಟಿ ನೀಡಲು ದೇವಾಲಯಗಳು ಸೇರಿದಂತೆ ಹೆಚ್ಚಿನ ಪ್ರವಾಸದ ವಿವರಗಳನ್ನು ನೋಡಬಹುದು.
ನೋಂದಣಿ ಪೂರ್ಣಗೊಂಡ ಅನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೋಂದಣಿ ಸಂಖ್ಯೆಯನ್ನು ಕಳುಹಿಸಲಾಗುತ್ತದೆ ಮತ್ತು ಮುಂದೆ ಚಾರ್ ಧಾಮ್ ಯಾತ್ರೆಗಾಗಿ ನೋಂದಣಿ ಪತ್ರವನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಬೇಕು.

ನೋಂದಣಿಗೆ ಬೇರೆ ಅವಕಾಶವೂ ಇದೆ

ವೆಬ್‌ಸೈಟ್‌ನ ಹೊರತಾಗಿ ಪ್ರವಾಸಿಗರು ಟೂರಿಸ್ಟ್‌ಕೇರರ್ ತಾರಾಖಂಡ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮೂಲಕ ತಮ್ಮನ್ನು ನೋಂದಾಯಿಸಿಕೊಳ್ಳಬಹುದು. ನೋಂದಾಯಿಸಲು ಇನ್ನೊಂದು ಮಾರ್ಗವೆಂದರೆ WhatsApp ನಲ್ಲಿ 8394833833 ಗೆ ಸಂದೇಶ ಕಳುಹಿಸುವುದು. ಪ್ರವಾಸೋದ್ಯಮ ಇಲಾಖೆಯು ಟೋಲ್ ಫ್ರೀ ಸಂಖ್ಯೆ 0135-1364 ಅನ್ನು ಡಯಲ್ ಮಾಡುವ ಮೂಲಕ ನೋಂದಣಿ ಸೇವೆಯನ್ನು ಪೂರ್ಣಗೊಳಿಸಬಹುದು.

ಇದಲ್ಲದೇ ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆಯು ರಿಷಿಕೇಶ ಮತ್ತು ಹರಿದ್ವಾರದಲ್ಲಿ ನೋಂದಣಿ ಕೌಂಟರ್‌ಗಳನ್ನು ಸ್ಥಾಪಿಸಿದೆ. ಅಲ್ಲಿ ಯಾತ್ರಾರ್ಥಿಗಳು ಆಫ್‌ಲೈನ್ ನೋಂದಣಿ ನಡೆಸಬಹುದು. ಯಾತ್ರಿಕರು ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಪಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್‌ನಂತಹ ಅಗತ್ಯ ದಾಖಲೆಗಳನ್ನು ಇಲ್ಲಿ ತೋರಿಸಬೇಕಾಗುತ್ತದೆ.

ದೇಗುಲಗಳ ವಿಶೇಷತೆ


ಯಮುನೋತ್ರಿ ಧಾಮ್ ದೇವಾಲಯವು ಯಮುನಾ ನದಿಯ ಮೂಲಕ್ಕೆ ಸಮೀಪದಲ್ಲಿ 3,293 ಮೀಟರ್ ಎತ್ತರದಲ್ಲಿ ಕಿರಿದಾದ ಕಂದರದಲ್ಲಿದೆ. ದೇವಾಲಯವು ಅಕ್ಷಯ ತೃತೀಯದಂದು ತೆರೆಯುತ್ತದೆ. ಚಳಿಗಾಲಕ್ಕಾಗಿ ಮುಂಚಿತವಾಗಿ ಯಮ ದ್ವಿತೀಯ ಅಂದರೆ ದೀಪಾವಳಿಯ ಅನಂತರ ಎರಡನೇ ದಿನ ಮುಚ್ಚುತ್ತದೆ. ಯಮುನೆಯ ನಿಜವಾದ ಮೂಲವು ಸುಮಾರು 4,421 ಮೀಟರ್ ಎತ್ತರದಲ್ಲಿ ದೇವಸ್ಥಾನಕ್ಕಿಂತ ಸ್ವಲ್ಪ ಮುಂದಿದೆ.


ಗಂಗೋತ್ರಿ ಗಂಗಾ ನದಿಯ ಅಥವಾ ಗೌಮುಖ ನದಿಯ ಮೂಲವೆಂದು ಪರಿಗಣಿಸಲಾಗಿದೆ. ಗಂಗೋತ್ರಿ ಧಾಮವು ಭಾಗೀರಥಿಯ ಬಲದಂಡೆಯಲ್ಲಿ ಸಮುದ್ರ ಮಟ್ಟದಿಂದ 3,140 ಮೀಟರ್ ಎತ್ತರದಲ್ಲಿದೆ.


ಕೇದಾರನಾಥ ದೇವಾಲಯವು ಸಮುದ್ರ ಮಟ್ಟದಿಂದ ಸುಮಾರು 3,500 ಮೀಟರ್ ಎತ್ತರದಲ್ಲಿದೆ. ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥವು ರುದ್ರಪ್ರಯಾಗ ಜಿಲ್ಲೆಯ ಮಂದಾಕಿನಿ ನದಿಯ ಸಮೀಪದಲ್ಲಿದೆ.


ಭಗವಾನ್ ವಿಷ್ಣುವಿನ ಪವಿತ್ರ ಚಾರ್ ಧಾಮಗಳಲ್ಲಿ ಒಂದಾಗಿರುವ ಬದರಿನಾಥವನ್ನು ಭೂಮಿಯ ಮೇಲಿನ ವೈಕುಂಠ ಅಂದರೆ ಭಗವಾನ್ ವಿಷ್ಣುವಿನ ನಿವಾಸ ಎಂದು ಪರಿಗಣಿಸಲಾಗಿದೆ. ಸುಮಾರು 3,100 ಮೀ. ಎತ್ತರದಲ್ಲಿ ಗರ್ವಾಲ್ ಹಿಮಾಲಯದಲ್ಲಿ ಅಲಕನಂದಾ ನದಿಯ ದಡದಲ್ಲಿ ಈ ಪವಿತ್ರ ಪಟ್ಟಣವು ನಾರ್ ಮತ್ತು ನಾರಾಯಣ ಪರ್ವತ ಶ್ರೇಣಿಗಳ ನಡುವೆ ಇದೆ. ಈ ದೇವಾಲಯವನ್ನು 8 ನೇ ಶತಮಾನದಲ್ಲಿ ಋಷಿ ಆದಿ ಶಂಕರಾಚಾರ್ಯರು ಸ್ಥಾಪಿಸಿದರು ಎಂದು ನಂಬಲಾಗಿದೆ.

Continue Reading

ಪ್ರವಾಸ

Summer Tour: ಹಚ್ಚ ಹಸುರಿನ ಪ್ರಶಾಂತ ನಗರ ಶಿಲ್ಲಾಂಗ್; ಬೇಸಿಗೆ ಪ್ರವಾಸಕ್ಕೆ ಸೂಕ್ತ

Summer Tour: ಭಾರತದ ಇತರೆ ರಾಜಧಾನಿಗಳಲ್ಲಿರುವಂತೆ ಹೆಚ್ಚಿನ ಜನದಟ್ಟಣೆಯಿಲ್ಲದ ಸುಂದರ ನಗರ ಶಿಲ್ಲಾಂಗ್. ಮೋಡಿ ಮಾಡುವ ಹಲವು ಸುಪ್ರಸಿದ್ದ ತಾಣಗಳನ್ನು ಹೊಂದಿರುವ ಶಿಲ್ಲಾಂಗ್ ದಟ್ಟ ಅರಣ್ಯದ ನಡುವೆ ಕುಳಿತಿದೆಯೇನೋ ಎಂಬಂತೆ ಭಾಸವಾಗುತ್ತದೆ.

VISTARANEWS.COM


on

By

summer trip
Koo

ಜಗತ್ತಿನಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಚಿರಾಪುಂಜಿಯಿಂದ (cherrapunji) 55 ಕಿ.ಮೀ ದೂರದಲ್ಲಿರುವ ಮೇಘಾಲಯದ (meghalaya) ರಾಜಧಾನಿ ಶಿಲ್ಲಾಂಗ್ (Shillong) ತನ್ನ ನೈಸರ್ಗಿಕ ಸೌಂದರ್ಯದಿಂದ ದೇಶ- ವಿದೇಶಗಳಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಈ ಬೇಸಗೆಯಲ್ಲಿ (Summer Tour) ಹಸುರು ಬೆಟ್ಟಗಳ ನಡುವೆ ಕೆಲ ಕಾಲ ವಿಶ್ರಾಂತಿ ಪಡೆಯಬೇಕಿದ್ದರೆ ಶಿಲ್ಲಾಂಗ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

ಶಿಲ್ಲಾಂಗ್ ಗೆ ಭೇಟಿ ನೀಡಿದರೆ ಇಲ್ಲಿ ತಪ್ಪಿಸಿಕೊಳ್ಳಬಾರದ 9 ಪ್ರಮುಖ ಪ್ರವಾಸಿ ಆಕರ್ಷಣೆಗಳಿವೆ. ಹಚ್ಚಹಸುರಿನ ಬೆಟ್ಟಗಳ ನಡುವೆ ನೆಲೆಯಾಗಿರುವ ಶಿಲ್ಲಾಂಗ್ ನೈಸರ್ಗಿಕ ಔದಾರ್ಯ ಮತ್ತು ರೋಮಾಂಚಕ ಸಂಸ್ಕೃತಿಯಿಂದ ಪ್ರವಾಸಿಗರನ್ನು ಮೋಡಿ ಮಾಡುತ್ತದೆ.

ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನಲ್ಲೇ ಜಲಪಾತ, ಸರೋವರ, ವಸ್ತುಸಂಗ್ರಹಾಲಯ, ಮಾರುಕಟ್ಟೆಗಳು ಸೇರಿದಂತೆ ಇನ್ನು ಹಲವು ಆಕರ್ಷಣಗಳನ್ನು ಹೊಂದಿದೆ. ಅವುಗಳಲ್ಲಿ ಈ ಒಂಬತ್ತು ಮುಖ್ಯ ಸ್ಥಳಗಳಿವೆ.

ಇದನ್ನೂ ಓದಿ: Summer Tour: ಬಿರು ಬೇಸಿಗೆಯಲ್ಲೂ ತಂಪಾದ ಅನುಭವ ನೀಡುವ ಕರ್ನಾಟಕದ ಪ್ರವಾಸಿ ತಾಣಗಳಿವು

ಶಿಲ್ಲಾಂಗ್ ಶಿಖರ

ಶಿಲ್ಲಾಂಗ್ ಶಿಖರದಿಂದ ಪನೋರಮಾಗಳು ರುದ್ರರಮಣೀಯ ಕಣಿವೆಯ ವೀಕ್ಷಣೆಗಾಗಿ ನಗರದ ಅತ್ಯುನ್ನತ ಕೇಂದ್ರ. ಇಲ್ಲಿಗೆ ಭೇಟಿ ನೀಡಿದ ವೇಳೆ ಮೊದಲು ಶಿಲ್ಲಾಂಗ್ ಪೀಕ್ ಗೆ ಭೇಟಿ ನೀಡಿ. 1965 ಮೀಟರ್ ಎತ್ತರದಲ್ಲಿರುವ ಇದು ಕೆಳಗಿನ ಹಸಿರು ಬೆಟ್ಟಗಳು ಮತ್ತು ಸರೋವರದ ದೃಶ್ಯದಿಂದ ಎಲ್ಲರನ್ನೂ ಬೆರಗುಗೊಳಿಸುತ್ತದೆ ಸಮೀಪದಲ್ಲೇ ಕೆಫೆಟೇರಿಯಾಗಲಿವೆ. ನಗರ ಕೇಂದ್ರದಿಂದ 12 ಕಿ.ಮೀ. ದೂರದಲ್ಲಿರುವ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ. ಹತ್ತಿರದಲ್ಲಿರುವ ಕೆಫೆಯಲ್ಲಿ ಶುಂಠಿ, ನಿಂಬೆ ಚಹಾ ಮತ್ತು ಜಿಲೇಬಿ ಅನ್ನು ಸವಿಯಬಹುದು.


ಉಮಿಯಂ ಸರೋವರ

ಶಿಲ್ಲಾಂಗ್‌ನಿಂದ ಉತ್ತರಕ್ಕೆ ಸುಮಾರು 15 ಕಿ.ಮೀ. ದೂರದಲ್ಲಿ ಹಸುರಿನಿಂದ ಕೂಡಿದ ಬೆಟ್ಟಗಳ ನಡುವೆ ನೆಲೆಸಿರುವ ಬಾರಾಪಾನಿ ಸರೋವರ ಎಂದೂ ಕರೆಯಲ್ಪಡುವ ಸಮ್ಮೋಹನಗೊಳಿಸುವ ಉಮಿಯಂ ಸರೋವರದಲ್ಲಿ ದೋಣಿ ವಿಹಾರವನ್ನು ಆನಂದಿಸಬಹುದು. ಮಂಜಿನಿಂದ ಆವೃತವಾದ ಬೆಟ್ಟದ ಸಿಲ್ಹೌಟ್‌ಗಳು ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುತ್ತದೆ. ದಡಗಳಲ್ಲಿ ಸಾಕಷ್ಟು ರೆಸಾರ್ಟ್ ಗಳು ಇರುವುದರಿಂದ ಸ್ಥಳೀಯ ಖಾದ್ಯಗಳನ್ನು ಸವಿಯಬಹುದು. ಇದಕ್ಕೆ ಹತ್ತಿರವಾಗಿ ಲುಮ್ ನೆಹರು ಪಾರ್ಕ್ ಇದೆ.


ಆನೆ ಜಲಪಾತ

ನೈಸರ್ಗಿಕ ಸೌಂದರ್ಯದ ನಡುವಿನ ಮೂರು-ಹಂತದ ಕ್ಯಾಸ್ಕೇಡಿಂಗ್ ಎಲಿಫೆಂಟ್ ಫಾಲ್ಸ್‌ ಅತ್ಯಾಕರ್ಷಕವಾಗಿದೆ. ಹಸಿರು ಬಂಡೆಗಳ ಕೆಳಗೆ ನೈಸರ್ಗಿಕ ಕೊಳಕ್ಕೆ ಧುಮುಕುತ್ತವೆ. ಆನೆಯ ಸೊಂಡಿಲನ್ನು ಹೋಲುವ ಹರಿವು ಅದಕ್ಕೆ ವಿಶಿಷ್ಟವಾದ ಹೆಸರನ್ನು ನೀಡಿದೆ. ಸೊಂಪಾದ ಅರಣ್ಯದ ನಡುವೆ ಪ್ರಾಚೀನ ನೋಟಗಳು ಮೋಡಿಮಾಡುತ್ತವೆ. 49 ಅಡಿ ಎತ್ತರವಿರುವ ಈ ಜಲಪಾತ ಶಿಲ್ಲಾಂಗ್‌ನಿಂದ 12 ಕಿ.ಮೀ. ದೂರದಲ್ಲಿದೆ.


ಡಾನ್ ಬಾಸ್ಕೋ ಮ್ಯೂಸಿಯಂ

ಅಸ್ಸಾಂ ಟ್ರಿಬ್ಯೂನ್ ಪ್ರೆಸ್ ಬಳಿಯ ಡಾನ್ ಬಾಸ್ಕೋ ಮ್ಯೂಸಿಯಂನಲ್ಲಿರುವ ಈಶಾನ್ಯ ಭಾರತದ ಬುಡಕಟ್ಟು ಸಂಸ್ಕೃತಿಯ ಅನನ್ಯ ಕಲಾಕೃತಿಗಳು, ವೇಷಭೂಷಣಗಳು, ಆಯುಧಗಳು, ಸಂಗೀತ ವಾದ್ಯಗಳನ್ನು ಛಾಯಾಚಿತ್ರಗಳು ಮತ್ತು ಖಾಸಿ, ಗಾರೋ ಮತ್ತು ಜೈನ್ತಿಯಂತಹ ಜನಾಂಗೀಯ ಸಮುದಾಯಗಳ ಬಗ್ಗೆ ಆಳವಾದ ಒಳನೋಟಗಳನ್ನು ನೀಡುತ್ತದೆ. ಇಲ್ಲಿಗೆ ಬೆಳಗ್ಗೆ 9 ರಿಂದ 5.30 ರವರೆಗೆ ಭೇಟಿ ನೀಡಬಹುದು. ಭಾನುವಾರದಂದು ಇದನ್ನು ಮುಚ್ಚಲಾಗುತ್ತದೆ.

ಪ್ರೆಟಿ ವಾರ್ಡ್‌ನ ಸರೋವರ

ಪೆಡಲ್ ಬೋಟಿಂಗ್ ಇಷ್ಟಪಡುವವರಿಗೆ ಮೇಘಾಲಯದ ಬೊಟಾನಿಕಲ್ ಗಾರ್ಡನ್ಸ್‌ನ ಮಧ್ಯ ಇರುವ ವಾರ್ಡ್‌ನ ಸರೋವರ ಮೋಡಿ ಮಾಡುತ್ತದೆ. ಅರಳುತ್ತಿರುವ ನೈದಿಲೆಗಳು, ಸುತ್ತಮುತ್ತಲಿನ ಆರ್ಕಿಡ್‌ಗಳು ಮತ್ತು ಪೈನ್ ಮರಗಳು ಸುಂದರ ಪ್ರಶಾಂತ ವಾತಾವರಣದ ಸವಿ ಉಣಿಸುವುದು. 1891 ರಲ್ಲಿ ಬ್ರಿಟಿಷರು ನಿರ್ಮಿಸಿದ್ದು, ಸುಂದರವಾದ ಉದ್ಯಾನ, ಕೆಫೆಗಳು ಇಲ್ಲಿನ ಆಕರ್ಷಣೆಯಾಗಿದೆ.

ಸೇಕ್ರೆಡ್ ಮಾವ್‌ಫ್ಲಾಂಗ್ ವುಡ್

ಶಿಲ್ಲಾಂಗ್‌ನಿಂದ 25 ಕಿ.ಮೀ. ದೂರದಲ್ಲಿರುವ ಮಾವ್‌ಫ್ಲಾಂಗ್ ಹಳ್ಳಿಯಲ್ಲಿ ದಟ್ಟವಾದ ತೋಪುಗಳ ನಡುವೆ ನಡೆದಾಡುವ ಸುಂದರ ಅನುಭೂತಿಯನ್ನು ನೀಡುತ್ತದೆ. ಇದು ಸ್ಥಳೀಯ ಖಾಸಿ ದೇವತೆಗಳಿಂದ ರಕ್ಷಿಸಲ್ಪಟ್ಟಿದೆ ಎಂದು ನಂಬಲಾಗಿದೆ. ಇಲ್ಲಿ ಪುರಾತನ ಮರಗಳು, ಅಪರೂಪದ ಸಸ್ಯಗಳನ್ನು ಕಾಣಬಹುದು. ಶಿಲ್ಲಾಂಗ್‌ನಿಂದ 25 ಕಿ.ಮೀ. ದೂರದಲ್ಲಿದ್ದು, ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ ಅಕ್ಟೋಬರ್ ನಿಂದ ಏಪ್ರಿಲ್ ವರೆಗೆ.

ಪೊಲೀಸ್ ಬಜಾರ್‌

ಶಾಪಿಂಗ್ ಪ್ರಿಯರಿಗಾಗಿ ಇಲ್ಲಿರುವ ಫಂಕಿ ಕೆಫೆಗಳು, ರೆಸ್ಟೋರೆಂಟ್‌ಗಳು ಮತ್ತು ಸ್ಥಳೀಯ ಕರಕುಶಲ ಮಳಿಗೆಳು ಅತ್ಯಾಕರ್ಷಕವಾಗಿದೆ. ಹಂದಿಮಾಂಸದ ಮೊಮೊಗಳು, ದೋಸೆಗಳು ಮತ್ತು ಬಬಲ್ ಚಹಾದೊಂದಿಗೆ ಜನಾಂಗೀಯ ಬುಡಕಟ್ಟು ಆಭರಣಗಳು, ಬಿದಿರಿನ ಕರಕುಶಲ ವಸ್ತುಗಳು ಮತ್ತು ಟ್ರೆಂಡಿ ಜಾಕೆಟ್‌ಗಳನ್ನು ಖರೀದಿ ಮಾಡಬಹುದು. ಇಲ್ಲಿ ಸಾಂಪ್ರದಾಯಿಕ ಉಡುಪುಗಳು, ಕರಕುಶಲ ವಸ್ತುಗಳು ಸಿಗುತ್ತವೆ.


ಶಿಲ್ಲಾಂಗ್ ಕೋರ್ಸ್‌

ಸುಂದರವಾದ ಶಿಲ್ಲಾಂಗ್ ಗಾಲ್ಫ್ ಕೋರ್ಸ್‌ನಲ್ಲಿ ಒಂದು ದಿನ ಸ್ವಿಂಗ್ ಅಭ್ಯಾಸ ಮಾಡಬಹುದು. ನೀಲಿ ಆಕಾಶದ ಕೆಳಗೆ ಪೈನ್ ಮರಗಳಿಂದ ಸುತ್ತುವರೆದಿರುವ ಇದು 1898 ರಲ್ಲಿ ಟಿಷ್ ನಾಗರಿಕ ಸೇವಕರಿಂದ ಸ್ಥಾಪಿಸಲಾದ ಭಾರತದ ಅತ್ಯಂತ ಹಳೆಯ ಗಾಲ್ಫ್ ಕೋರ್ಸ್ ಎನ್ನಲಾಗುತ್ತದೆ.


ಕ್ಯಾಥೆಡ್ರಲ್

ಶಿಲ್ಲಾಂಗ್ ನಲ್ಲಿ ಡಾನ್ ಬಾಸ್ಕೊ ಸ್ಕ್ವೇರ್ ಬಳಿಯ ಭವ್ಯವಾದ ಮತ್ತು ಸಾಂಪ್ರದಾಯಿಕ ಹಿನ್ನೆಲೆಯನ್ನು ಹೊಂದಿರುವ ಮೇರಿ ಹೆಲ್ಪ್ ಆಫ್ ಕ್ರಿಶ್ಚಿಯನ್ಸ್ ಕ್ಯಾಥೆಡ್ರಲ್‌ ಈಶಾನ್ಯದಲ್ಲಿರುವ ಅತ್ಯಂತ ಹಳೆಯ ಕ್ಯಾಥೋಲಿಕ್ ಚರ್ಚ್‌ಗಳಲ್ಲಿ ಒಂದಾಗಿದೆ. 1936ರಲ್ಲಿ ಇದನ್ನು ನಿರ್ಮಿಸಲಾಗಿದ್ದು, 1951 ರಲ್ಲಿ ವ್ಯಾಟಿಕನ್‌ನಿಂದ ಪವಿತ್ರಗೊಳಿಸಲಾಯಿತು. ಬಣ್ಣದ ಗಾಜಿನ ಫಲಕಗಳು, ಅವಳಿ ಗಂಟೆ ಗೋಪುರಗಳು ಇಲ್ಲಿನ ಆಕರ್ಷಣೆ.

Continue Reading

ಪ್ರವಾಸ

Summer Tour: ಪಾಂಡಿಚೇರಿಯಲ್ಲಿ ಸುತ್ತು ಹಾಕುವಾಗ ಇವುಗಳನ್ನು ಮಿಸ್ ಮಾಡಿಕೊಳ್ಳಬೇಡಿ!

Summer Tour: ಸುಂದರ ತಾಣಗಳಲ್ಲಿ ಈ ಬೇಸಿಗೆಯನ್ನು ಕಳೆಯಬೇಕು ಎನ್ನುವ ಯೋಚನೆ ಮಾಡುತ್ತಿದ್ದರೆ ಪಾಂಡಿಚೇರಿಯಲ್ಲಿ ಸುತ್ತಬಹುದು. ಈ ಪುಟ್ಟ ಪ್ರವಾಸಿ ತಾಣವು ರಜೆಯನ್ನು ಸ್ಮರಣೀಯವಾಗಿಸಲು ಸಾಕಷ್ಟು ಅವಕಾಶಗಳನ್ನು ಹೊಂದಿದೆ.

VISTARANEWS.COM


on

By

Summer tour
Koo

ಮನಸ್ಸಿಗೆ ಶಾಂತಿ ನೆಮ್ಮದಿ ನೀಡುವ ತಾಣಕ್ಕೆ ಈ ಬಾರಿ ಬೇಸಿಗೆಯಲ್ಲಿ ಪ್ರವಾಸ (Summer tour) ಹೋಗಬೇಕು ಎನ್ನುವ ಯೋಜನೆ ಇದ್ದರೆ ಭಾರತದ (india) ‘ಫ್ರೆಂಚ್ ರಾಜಧಾನಿ’ ಪಾಂಡಿಚೇರಿಗೆ (Pondicherry) ಪ್ರವಾಸ ಹೊರಡುವ ಪ್ಲಾನ್ ಮಾಡಿಕೊಳ್ಳಬಹುದು. ಅತ್ಯಂತ ಶಾಂತಿಯುತ ನಗರವಾದ ಪಾಂಡಿಚೇರಿ ಫ್ರೆಂಚ್ (french) ಪ್ರೇರಿತ ನಗರ ವಿನ್ಯಾಸದಿಂದಾಗಿ ವಿಶ್ವದಾದ್ಯಂತದಿಂದ ಪ್ರವಾಸಿಗರನ್ನು ಸೆಳೆಯುತ್ತದೆ.

ಸುಂದರ ತಾಣಗಳಲ್ಲಿ ಸುತ್ತಬೇಕು ಎನ್ನುವ ಯೋಚನೆ ಇದ್ದರೆ ಪಾಂಡಿಚೇರಿಯಲ್ಲಿ ಹರಸಾಹಸ ಮಾಡಬೇಕಾಗಿಲ್ಲ. ಯಾಕೆಂದರೆ ಈ ಪುಟ್ಟ ಪ್ರವಾಸಿ ತಾಣವು ರಜೆಯನ್ನು ಸ್ಮರಣೀಯವಾಗಿಸಲು ಸಾಕಷ್ಟು ಅವಕಾಶಗಳನ್ನು ಹೊಂದಿದೆ. ಇಲ್ಲಿನ ಅನುಭವಗಳ ಶ್ರೇಣಿಯು ಪ್ರವಾಸಿಗರನ್ನು ಆಶ್ಚರ್ಯಗೊಳಿಸುತ್ತದೆ. ಇಲ್ಲಿಗೆ ಪ್ರವಾಸ ಯೋಜನೆ ಮಾಡಿಕೊಂಡರೆ ಖಂಡಿತಾ ಯಾರಿಗೂ ನಿರಾಸೆಯಂತೂ ಆಗೋದಿಲ್ಲ.

ಫೆಂಚರ ನೆನಪುಗಳನ್ನು ಹೇಳುವ ಮರಗಳಿಂದ ಕೂಡಿದ ಬೌಲೆವಾರ್ಡ್‌ಗಳು, ಚಿನ್ನದ ಕಡಲತೀರಗಳು ಮತ್ತು ಕಲಾತ್ಮಕವಾಗಿ ಪುನಃಸ್ಥಾಪಿಸಿದ ವಸಾಹತುಶಾಹಿ ವಾಸ್ತುಶಿಲ್ಪಗಳು ಆಧುನಿಕತೆಯೊಂದಿಗೆ ಬೆರೆತು ತನ್ನ ಹಿಂದಿನ ನೆನಪುಗಳ ಕಥೆ ಹೇಳುತ್ತದೆ.

ಇದನ್ನೂ ಓದಿ: Mantralaya Tour: ಮಂತ್ರಾಲಯಕ್ಕೆ ಒಂದೇ ದಿನದಲ್ಲಿ ಹೋಗಿ ಬರಬೇಕೆ? ಈ ರೈಲುಗಳಲ್ಲಿ ಹೊರಡಿ

ಇತಿಹಾಸದ ಹೆಗ್ಗುರುತು

ಫ್ರೆಂಚ್ ವಸಾಹತುಶಾಹಿ ಟ್ರಯಲ್ ನಲ್ಲಿ ವಾಲ್ಕ್ ಡೌನ್ ಹಿಸ್ಟರಿಯನ್ನು ಕಾಣಬಹುದು. 28 ವಿಕ್ಟೋರಿಯನ್ ಸೈಟ್‌ಗಳಲ್ಲಿ 300 ವರ್ಷಗಳ ಇತಿಹಾಸವನ್ನು ಹೇಳುವಂತಿದೆ. ಮೈರಿ, ರಾಜ್ ನಿವಾಸ್ ಮತ್ತು ಹಳೆಯ ಲೈಟ್‌ಹೌಸ್‌ನಂತಹ ಹೆಗ್ಗುರುತುಗಳು ಬಂದರು ಚಟುವಟಿಗೆಳ ಬಗ್ಗೆ ವರ್ಣಿಸುತ್ತದೆ. ಫ್ರೆಂಚ್ ರಾಜಮನೆತನದ ಹಳದಿ ಬಣ್ಣವನ್ನು ಬಳಸಿ ಸೊಗಸಾದ ಟೌನ್‌ಹೌಸ್‌ಗಳಿಂದ ಲೇಪನ ಮಾಡಿ ನಿರ್ಮಿಸಲಾಗಿರುವ ಲ್ಯಾಟಿನ್ ಕ್ವಾರ್ಟರ್‌ಗಳನ್ನು ಇಲ್ಲಿ ನೋಡಲು ಮರೆಯದಿರಿ. ಇಲ್ಲಿನ ಲೆ ಕೆಫೆಯ ಪ್ಯಾಕೆಟ್ ಊಟದ ಪಾಕಪದ್ಧತಿಯು ರೋಮಾಂಚಕ ಅನುಭವ ಕೊಡುವುದು. ಇದು ಫ್ರಾಂಕೋ-ತಮಿಳು ಸಂಸ್ಕೃತಿಯನ್ನು ಸಾರುತ್ತದೆ.


ಸೆರೆನಿಟಿ ಬೀಚ್‌

ಬೆರಗುಗೊಳಿಸುವ ಸೂರ್ಯೋದಯವನ್ನು ಕಾಣಬೇಕಾದರೆ ಸೆರೆನಿಟಿ ಬೀಚ್ ಗೆ ಹೋಗಬಹುದು. ಸೂರ್ಯೋದಯವನ್ನು ನೋಡುತ್ತಾ ಸಮುದ್ರಕ್ಕೆ ಹೊರಟಿರುವ ಮೀನುಗಾರರನ್ನು ಮುಂಜಾನೆ ಇಲ್ಲಿಗೆ ಭೇಟಿ ಕೊಡಬಹುದು. ಹಸಿರು ಅಲೆಗಳು ಕಿತ್ತಳೆ ಆಕಾಶದಲ್ಲಿ ಕರಗುವಂತೆ ಕಾಣುವ ದೋಣಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಇಲ್ಲಿ ಸಾಹಸಮಯ ಜಲಕ್ರೀಡೆಯಲ್ಲೂ ಪಾಲ್ಗೊಳ್ಳಬಹುದು. ಮೀನುಗಾರರ ಬದುಕಿನ ಅನುಭವದೊಂದಿಗೆ ಫ್ರೆಶ್ ಸಮುದ್ರಾಹಾರವನ್ನು ಇಲ್ಲಿ ಸವಿಯಬಹುದು.


ಪ್ರೊಮೆನೇಡ್ ಬೀಚ್ ರಸ್ತೆ

ಪಾಂಡಿಚೇರಿಯ ಪ್ರತಿಯೊಂದು ಬೀಚ್ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಅದರಲ್ಲಿ ಪ್ರೊಮೆನೇಡ್ ಬೀಚ್ ರಸ್ತೆಯಲ್ಲಿ ಸೈಕ್ಲಿಂಗ್ ಮಾಡುವುದು ಒಂದು ಸುಂದರ ಅನುಭವ. ಬೀಸುವ ತಂಗಾಳಿಯೊಂದಿಗೆ ಜಲಾಭಿಮುಖವನ್ನು ಹೆಲ್ಮೆಟ್ ಧರಿಸಿ ಬೈಸಿಕಲ್ ಓಡಿಸಲು ಅವಕಾಶವಿದೆ. ಇದರೊಂದಿದೆ ಚಿತ್ತಾಕರ್ಷಕ ಬ್ರಿಟಿಷ್ ವಿಲ್ಲಾಗಳು, ತಮಿಳು ದೇವಾಲಯಗಳನ್ನು ಕಾಣಬಹುದು. ಇಲ್ಲಿ ಕ್ಯಾಂಡಲ್-ಲೈಟ್ ಕೆಫೆಗಳು ಮತ್ತು ಜೆಲಾಟೊ ಜಾಯಿಂಟ್‌ಗಳು ಅದ್ಬುತ ಅನುಭವ ಕೊಡುವುದು.

ಅರಬಿಂದೋ ಆಶ್ರಮ

ಪ್ರಶಾಂತವಾದ ತಾಣದ ಹುಡುಕಾಟದಲ್ಲಿದ್ದಾರೆ ಧ್ಯಾನ ಮಾಡಲು ಸೂಕ್ತವಾದ ಸ್ಥಳ ಮಾತೃಮಂದಿರ ಉದ್ಯಾನವನದಲ್ಲಿರುವ ಅರಬಿಂದೋ ಆಶ್ರಮ. ಮಿರ್ರಾ ಅಲ್ಫಾಸ್ಸಾ ಅವರ ಮಾರ್ಗದರ್ಶನದಲ್ಲಿ ರಚಿಸಲಾದ ಇಲ್ಲಿನ ಸುಂದರವಾದ ಹಳ್ಳಿಗಾಡಿನ ಸೊಂಪಾದ ವಿಹಂಗಮ ನೋಟಗಳು ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಸೊಂಪಾದ ಹುಲ್ಲುಹಾಸುಗಳ ಮೇಲೆ ನಡೆಯುವುದು ಹೆಚ್ಚು ಖುಷಿ ಕೊಡುತ್ತದೆ.

ವೈಬ್ರೆಂಟ್ ಬಜಾರ್

ಕಲಾತ್ಮಕ ಸಮುದಾಯದಿಂದ ನಿರ್ವಹಿಸಲ್ಪಡುವ ವೈಬ್ರೆಂಟ್ ಬಜಾರ್ ವಿಶಿಷ್ಟವಾದ ಸ್ಥಳೀಯ ಸಾಮಗ್ರಿಗಳನ್ನು ಒಳಗೊಂಡಿದೆ. ಕೇರಳದ ಸಾಂಪ್ರದಾಯಿಕ ಬ್ಲಾಕ್ ಪ್ರಿಂಟಿಂಗ್ ವಿಧಾನಗಳನ್ನು ಬಳಸಿಕೊಂಡು ಮುದ್ರಿಸಲಾದ ಬಿಳಿ ಕಾಟನ್ ಶರ್ಟ್‌ಗಳು, ಕೈಯಿಂದ ಮಾಡಿದ ಸಾವಯವ ಸಾಬೂನುಗಳು, ಸಾಂಪ್ರದಾಯಿಕವಾಗಿ ಹೊರತೆಗೆಯಲಾದ ಸುಗಂಧ ದ್ರವ್ಯಗಳು ಮತ್ತು ಜೇನುತುಪ್ಪ ಇಲ್ಲಿ ಹೆಚ್ಚು ಬೇಡಿಕೆಯುಳ್ಳ ವಸ್ತುಗಳು.


ಟೆಂಪಲ್ ರೀಫ್‌ನಲ್ಲಿ ಸ್ಕೂಬಾ

ಉಷ್ಣವಲಯದ ನೀರಿನಲ್ಲಿ ಸ್ಕೂಬಾ ಮಾಡಿ ಸುಂದರ ಅನುಭವವನ್ನು ತಮ್ಮದಾಗಿಸಿಕೊಳ್ಳಬಹುದು. ಸ್ತಬ್ಧ ಬೀಚ್ ಕರಾವಳಿಯಲ್ಲಿ ವರ್ಣರಂಜಿತ ಹವಳದ ಬಂಡೆಗಳಿಂದ ಬೀಸುತ್ತಿರುವ ಸ್ಪಾಟ್ ಏಂಜೆಲ್ ಮೀನುಗಳು, ಬೆರಗುಗೊಳಿಸುವ ನೀರೊಳಗಿನ ಜೀವವೈವಿಧ್ಯವನ್ನು ಹತ್ತಿರದಿಂದ ನೋಡಬಹುದು. ಇದಕ್ಕಾಗಿ ಪರಿಣಿತರು ಮೊದಲ ಬಾರಿಗೆ ಸ್ಕೂಬಾ ಮಾಡುವವರಿಗೆ ತರಬೇತಿ ನೀಡುತ್ತಾರೆ.

ತಮಿಳು- ಫ್ರೆಂಚ್ ಪಾಕಶಾಲೆ

ಪಾಂಡಿಚೇರಿಗೆ ಭೇಟಿ ನೀಡಿದರೆ ತಮಿಳು- ಫ್ರೆಂಚ್ ಪಾಕಶಾಲೆಗೆ ಭೇಟಿಯಾಗುವುದನ್ನು ತಪ್ಪಿಸಬೇಡಿ. ವಿಶ್ವ ಮಟ್ಟದ ಸುಪ್ರಸಿದ್ದ ಖಾದ್ಯಗಳೊಂದಿಗೆ ಸ್ಥಳೀಯ ಮಸಾಲೆಗಳನ್ನು ಬೆಸೆಯುವ ಇನ್ವೆಂಟಿವ್ ಈಸ್ಟ್-ಮೀಟ್ಸ್-ವೆಸ್ಟ್ ಪಾಕಪದ್ಧತಿ ಎಲ್ಲರನ್ನೂ ಸೆಳೆಯುತ್ತದೆ. ಇಲ್ಲಿನ ಸುಪ್ರಸಿದ್ದ ಸಹಿ ಭಕ್ಷ್ಯಗಳೆಂದರೆ ಕ್ರಿಯೋಲ್ ಥಾಲಿ, ಮಸಾಲಾ ಆಮ್ಲೆಟ್, ಕರಿ ಎಲೆಯ ಐಸ್ ಕ್ರೀಮ್, ಸಮುದ್ರಾಹಾರಗಳಲ್ಲಿ ಸ್ಟ್ಯೂ, ತರಕಾರಿ ಕಟ್ಲೆಟ್‌ಗಳು, ಚಿಕ್ ಹೆರಿಟೇಜ್ ಕೆಫೆಗಳಲ್ಲಿ ಕ್ರೋಸೆಂಟ್‌ಗಳು, ಆಕರ್ಷಕ ಬಿಸ್ಟ್ರೋಗಳಲ್ಲಿ ಪಾಂಡಿಯ ಪ್ರಸಿದ್ಧ ಕಾಫಿ, ವೈನ್, ಚೀಸ್ ನ ರುಚಿ ನೋಡಬಹುದು.

Continue Reading
Advertisement
Farmers Protest
ದೇಶ47 seconds ago

Farmers Protest: ರೈತರ ಪ್ರತಿಭಟನೆ; ಅಂಬಾಲಾ-ಅಮೃತಸರ 54 ರೈಲು ಸಂಚಾರ ರದ್ದು

Vinesh Phogat
ಕ್ರೀಡೆ12 mins ago

Vinesh Phogat: ಖೇಲ್ ರತ್ನ ಪ್ರಶಸ್ತಿಯನ್ನು ಪಾದಚಾರಿ ಮಾರ್ಗದಲ್ಲಿ ತೊರೆದಿದ್ದ ವಿನೇಶ್ ಫೋಗಟ್​ಗೆ ಒಲಿದ ಒಲಿಂಪಿಕ್ಸ್​ ಟಿಕೆಟ್​

Dalit Student
ದೇಶ13 mins ago

Dalit Student: ದೇಶ, ರಾಮನ ವಿರೋಧ; ದಲಿತ ಪಿಎಚ್‌.ಡಿ ವಿದ್ಯಾರ್ಥಿಯ ಅಮಾನತು!

Apricot Benefits
ಆರೋಗ್ಯ27 mins ago

Apricot Benefits: ನಿಮಗೆ ಇಂತಹ ಸಮಸ್ಯೆಗಳಿವೆಯೇ?: ಹಾಗಾದರೆ ನಿತ್ಯವೂ ಆಪ್ರಿಕಾಟ್‌ ತಿನ್ನಿ!

Family health insurance
ಮನಿ ಗೈಡ್27 mins ago

Money Guide: ಕುಟುಂಬಕ್ಕಾಗಿ ಆರೋಗ್ಯ ವಿಮೆ; ಖರೀದಿ ಮುನ್ನ ತಿಳಿದಿರಲಿ ಕೆಲವು ವಿಚಾರ

Modi in Karnataka
ಪ್ರಮುಖ ಸುದ್ದಿ32 mins ago

Modi in Karnataka: ಪ್ರಧಾನಿ ಮೋದಿ ತೆರಳುವಾಗ ಚೆಂಬು ಪ್ರದರ್ಶನ; ನಲಪಾಡ್‌ ಸೇರಿ ಹಲವರು ವಶಕ್ಕೆ

Modi in Karnataka Govt turns tax city Bengaluru into tanker city and attacks girls too PM Narendra Modi
ಕರ್ನಾಟಕ1 hour ago

Modi in Karnataka: ಟ್ಯಾಕ್ಸ್ ಸಿಟಿ ಬೆಂಗಳೂರನ್ನು ಟ್ಯಾಂಕರ್ ಸಿಟಿ ಮಾಡಿದ ಸರ್ಕಾರ, ಹೆಣ್ಣು ಮಕ್ಕಳ ಮೇಲೂ ಹಲ್ಲೆ: ಮೋದಿ ವಾಗ್ದಾಳಿ

Kalki 2898 AD
ಸಿನಿಮಾ1 hour ago

Kalki 2898 AD: ನಾಳೆ ಮಹತ್ವದ  ಅಪ್‌ಡೇಟ್‌ ನೀಡಲಿದೆ ಪ್ರಭಾಸ್‌ ಅಭಿನಯದ ʼಕಲ್ಕಿ 2898 ಎಡಿʼ ಚಿತ್ರತಂಡ; ಹೊಸ ರಿಲೀಸ್‌ ದಿನಾಂಕ ಘೋಷಣೆ?

Lok Sabha Election
ದೇಶ1 hour ago

Lok Sabha Election: ನಿನ್ನೆ ಈ ಗ್ರಾಮದ ಒಬ್ಬರೂ ಮತ ಹಾಕಲಿಲ್ಲ; ಇದ್ದಿದ್ದು ಯಾರ ಭಯ?

Ashutosh Sharma
ಕ್ರೀಡೆ1 hour ago

Ashutosh Sharma: ಖಿನ್ನತೆಗೆ ಒಳಗಾಗಿದ್ದ ಬಿಗ್​ ಹಿಟ್ಟರ್​ ಅಶುತೋಷ್‌ ಶರ್ಮ; ಕ್ರಿಕೆಟ್​ ಜರ್ನಿಯೇ ರೋಚಕ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 hours ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 hours ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20245 hours ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ7 hours ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ8 hours ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ14 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ1 day ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ2 days ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ4 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ5 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

ಟ್ರೆಂಡಿಂಗ್‌